ವ್ಯಾಪಾರದಲ್ಲಿ ಸಿಕ್ಕಾಪಟ್ಟೆ ದುಡ್ಡು ಗಳಿಸ್ಬೇಕಾ? ಚಾಣಕ್ಯನ ಸೂತ್ರ ಪಾಲಿಸಿ

ಯಶಸ್ಸು ಯಾರಿಗೆ ತಾನೇ ಬೇಡ ಹೇಳಿ ಪ್ರತಿಯೊಬ್ಬರು ಯಶಸ್ಸಿನ ಹಿಂದೆ ಬಿದ್ದವರೇ. ಹೇಗಾದ್ರು ಮಾಡಿ ಯಶಸ್ಸನ್ನು ಒಲಿಸಿಕೊಳ್ಳಲೇಬೇಕು ಅಂತ ನಾನಾ ಪ್ರಯತ್ನಗಳನ್ನು ಮಾಡುವರು ಇದ್ದಾರೆ. ಬ್ಯುಸಿನೆಸ್‌ ಅಂದರೆ ರಿಸ್ಕ್‌ ಅಂತ ಎಲ್ಲರಿಗೂ ಗೊತ್ತು. ಅದ್ರಲ್ಲೂ ಹೊಸ ಬ್ಯೂಸಿನೆಸ್‌ ಅಥವಾ ವ್ಯಾಪಾರ ಶುರು ಮಾಡುವುದೆಂದರೆ ಸುಲಭದ ಮಾತು ಅಲ್ಲ. ಸಾಕಷ್ಟು ದುಡ್ಡು, ಜನ, ಕೌಶಲ್ಯ, ಯೋಜನೆಗಳು ಇಲ್ಲಿ ತುಂಬಾನೇ ಮುಖ್ಯವಾಗುತ್ತದೆ.

Chanakya Niti Says That a Successfull Entrepreneur Must Have These Qualities In Kannada

ಕೆಲವೊಂದು ಸಾರಿ ಗ್ರಹಚಾರ ಸರಿ ಇಲ್ಲ ಅಂದ್ರೆ ವ್ಯಾಪಾರದಲ್ಲಿ ಸಿಕ್ಕಾಪಟ್ಟೆ ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾದ್ರೆ ವ್ಯಾಪಾರದಲ್ಲಿ ಯಶಸ್ವಿಯಾಗಲು ಏನು ಮಾಡಬೇಕು? ಒಬ್ಬ ವ್ಯಾಪಾರಿಯಾದವನಿಗೆ ಏನೆಲ್ಲಾ ಗುಣಗಳು ಇರಬೇಕು? ಅನ್ನೋದನ್ನ ತಿಳಿಸಿಕೊಡ್ತೀವಿ.

1. ಗುರಿಯನ್ನು ಅಥೈಸಿಕೊಳ್ಳಿ

1. ಗುರಿಯನ್ನು ಅಥೈಸಿಕೊಳ್ಳಿ

ಚಾಣಕ್ಯನ ಪ್ರಕಾರ ಒರ್ವ ವ್ಯಕ್ತಿ ಪ್ರತಿಯೊಂದು ಕೆಲಸದಲ್ಲೂ ಯಶಸ್ವಿಯಾಗುತ್ತಿದ್ದಾನೆ ಅದರೆ ಖಂಡಿತ ಅವನು ಗುರಿಯನ್ನು ಅರ್ಥ ಮಾಡಿಕೊಂಡಿರುತ್ತಾನೆ. ಗುರಿಯನ್ನು ಗೆಲ್ಲಲು ಯೋಜನೆಗಳನ್ನು ರೂಪಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಯಾವುದೇ ಕೆಲಸವಾದ್ರೂ ಅದನ್ನು ಅಂದುಕೊಂಡ ಸಮಯದಲ್ಲಿ ಮುಗಿಸಲು ಪ್ರಯತ್ನಿಸಿ ಆಗ ಎಲ್ಲವೂ ಸುಲಭವಾಗುತ್ತದೆ. ಮುಖ್ಯವಾದ ವಿಚಾರ ಅಂದ್ರೆ ನಾವು ನಮ್ಮ ಗುರಿಯ ಬಗ್ಗೆ ಜಾಗೃತರಾಗಿರಬೇಕು ಆಗ ಯಶಸ್ಸು ನಿಶ್ವಿತ.

 2. ಕೆಲಸದಲ್ಲಿ ಪ್ರಾಮಾಣಿಕತೆಯಿರಲಿ

2. ಕೆಲಸದಲ್ಲಿ ಪ್ರಾಮಾಣಿಕತೆಯಿರಲಿ

ಚಾಣಕ್ಯನ ಪ್ರಕಾರ ಎಲ್ಲರೂ ತಮ್ಮ ಕೆಲಸದಲ್ಲಿ ಪ್ರಮಾಣಿಕತೆಯನ್ನು ತೋರುವುದಿಲ್ಲ. ನೀವೇನಾದ್ರು ಕೆಲಸವನ್ನು ಬೇಜವಾಬ್ದಾರಿಯಿಂದ ನಿರ್ವಹಿಸಿದರೆ ನಾಗಾಲೋಟದಲ್ಲಿ ಸಾಗುತ್ತಿರುವ ವ್ಯಾಪಾರವು ಕೂಡ ಒಮ್ಮಿಂದೊಮ್ಮೆಲೆ ಕೆಳಗೆ ಬೀಳಬಹುದು. ವ್ಯಾಪಾರದಲ್ಲಿ ಲಾಭಗಳಿಸಲು ನೀವೇನಾದರೂ ಇಚ್ಛಿಸಿದ್ದಾದ್ರೆ ಖಂಡಿತ ಅಲ್ಲಿ ಪ್ರಾಮಾಣಿಕತೆ ಇರಲೇಬೇಕು. ಪ್ರಾಮಾಣಿಕತೆಯಿಂದ ನಡೆದವನಿಗೆ ಎಂದಿಗೂ ಸೋಲಿಲ್ಲ. ಆತ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುತ್ತಾನೆ.

3. ರಿಸ್ಕ್‌ ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ

3. ರಿಸ್ಕ್‌ ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ

ಅನೇಕ ಜನರಿಗೆ ರಿಸ್ಕ್‌ ತೆಗೆದುಕೊಳ್ಳೋದಕ್ಕೆ ಇಷ್ಟವಿಲ್ಲ. ಅವರು ತಮ್ಮ Comfort zone ನಲ್ಲಿ ಇರಲು ಇಷ್ಟಪಡುತ್ತಾರೆ. ರಿಸ್ಕ್‌ಗೆ ತಲೆಯೊಡ್ಡಿದ್ರೆ ಮುಂದೇನಾಗುತ್ತೋ? ನನ್ನ ಜೀವನ ದಿಕ್ಕಾಪಾಲಾಗಿ ಬಿಡುತ್ತಾ ಎಂಬ ಅಲೋಚನೆ ಕಾಡೋದಕ್ಕೆ ಶುರುವಾಗುತ್ತೆ. ಯಾರು ಕೆಲಸ ಮಾಡುವುದಕ್ಕು ಮೊದಲು ಸಿಕ್ಕಾಪಟ್ಟೆ ಆಲೋಚನೆ ಮಾಡುತ್ತಾರೋ ಅವರು ಜೀವನದಲ್ಲಿ ಮುಂದೆ ಬರಲು ಸಾಧ್ಯವೇ ಇಲ್ಲ. ಬದಲಾಗಿ ಆಗಿದ್ದಾಗಲಿ ಒಂದು ಕೈ ನೋಡೇ ಬಿಡೋಣ ಅಂತ ರಿಸ್ಕ್‌ ತೆಗೆದುಕೊಂಡು ಬಿಡಿ. ಯಾರಿಗ್‌ ಗೊತ್ತು ಒಂದಲ್ಲ ಒಂದು ದಿನ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ರೂ ಕೂಡ ಅಚ್ಚರಿಪಡಬೇಕಾಗಿಲ್ಲ.

4. ಜೀವನೋಲ್ಲಾಸ ಮತ್ತು ಪ್ರೇರಣೆಯಿಂದಿರಿ

4. ಜೀವನೋಲ್ಲಾಸ ಮತ್ತು ಪ್ರೇರಣೆಯಿಂದಿರಿ

ಚಾಣಕ್ಯ ಪ್ರಕಾರ ವ್ಯಾಪಾರಿಯಾದವನಿಗೆ ಪ್ರತಿ ದಿನವನ್ನು ಜೀವನೋಲ್ಲಾಸ ಹಾಗೂ ಪ್ರೇರಣೆ ಇರಬೇಕು. ಆತನಲ್ಲಿರುವ ಪ್ರೇರಣೆಯೇ ಹೊಸತನ್ನುಸಾಧಿಸಲು ಉತ್ತೇಜಿಸುತ್ತದೆ. ಜೊತೆಗೆ ನಿಮ್ಮನ್ನು ಹಿಂದಕ್ಕೆ ಎಳೆಯುವವರ ಸಂಘ ಮಾಡಬೇಡಿ. ಅಂತವರಿಂದ ನಿಮಗೆ ನಷ್ಟವೇ ಹೊರತು ಖಂಡಿತ ಲಾಭವಾಗೋದಿಲ್ಲ. ಅಂತವರ ಸಂಘದಿಂದ ನೀವು ಒಂದು ಹೆಜ್ಜೆ ಹಿಂದೆಯೇ ಉಳಿದು ಬಿಡುತ್ತೀರಿ.

5. ಯೋಜನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ

5. ಯೋಜನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ

ಚಾಣಕ್ಯನ ಪುಸ್ತಕದಲ್ಲಿ ವ್ಯಾಪಾರಿಗಳ ಕುರಿತು ಇದೊಂದು ಮುಖ್ಯವಾದ ಮಾತನ್ನು ಹೇಳಿದ್ದಾನೆ. ನಿಮ್ಮ ವ್ಯಾಪಾರದ ಗೌಪ್ಯ ಮಾಹಿತಿ ಹಾಗೂ ಯೋಜನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ. ಯಾಕಂದ್ರೆ ನಿಮ್ಮದೇ ಯೋಜನೆಗಳನ್ನ ಇಟ್ಟುಕೊಂಡು ಶತ್ರುಗಳು ಮುಂದೆ ಬರಬಹುದು. ಅದಕ್ಕಾಗಿ ನಿಮ್ಮವರು ಯಾರು ಎಂದು ತಿಳಿದು ಅಂತವರೊಂದಿಗೆ ಮಾತ್ರ ಗೌಪ್ಯ ವಿಚಾರವನ್ನು ಮಾತನಾಡಿ. ಇಲ್ಲವಾದಲ್ಲಿ ಮುಂದೊಂದು ದಿನ ನಿಮ್ಮ ಭವಿಷ್ಯವೇ ನಾಶವಾಗಿಬಿಡಬಹುದು.

6. ದುರ್ಬಲನಾಗಲು ಅವಕಾಶ ಕೊಡಬೇಡಿ

6. ದುರ್ಬಲನಾಗಲು ಅವಕಾಶ ಕೊಡಬೇಡಿ

ಚಾಣಕ್ಯನ ಪ್ರಕಾರ ದೌರ್ಬಲ್ಯವೇ ನಮ್ಮ ದೊಡ್ಡ ಶತ್ರು. ಪರಿಸ್ಥಿತಿ ಹೇಗೆ ಇರಲಿ ನೀವು ದುರ್ಬಲನಾಗಿದ್ದೀರಿ ಎಂದು ಯಾರ ಮುಂದೆಯೂ ತೋರಿಸಿಕೊಳ್ಳಬೇಡಿ. ಆ ಕ್ಷಣಕ್ಕೆ ಸೋತು ನೀವೇನಾದ್ರು ಕುಗ್ಗಿ ಹೋದ್ರೆ ನಿಮ್ಮ ಸೋಲು ಖಂಡಿತ. ಹಾಗಾಗಿ ಮನಸ್ಸಿನಲ್ಲಿ ಅಳುಕಿದ್ದರೂ ಮುಂದೆ ತೋರ್ಪಡಿಸಬೇಡಿ. ಯಾವಾಗ ಸಂಕಷ್ಟವನ್ನು ದೈರ್ಯದಿಂದ ಎದುರಿಸುತ್ತಿರೋ ಆಗ ನೀವು ಗೆದ್ದಂತೆ.

7. ಜ್ಞಾನ ಬೆಳೆಸಿಕೊಳ್ಳಿ

7. ಜ್ಞಾನ ಬೆಳೆಸಿಕೊಳ್ಳಿ

ಚಾಣಕ್ಯನ ಪ್ರಕಾರ ದಿನಾಲೂ ಏನಾದರೂ ಹೊಸತನ್ನು ಕಲಿಯಬೇಕು. ಕಾಲಕ್ಕೆ ತಕ್ಕ ಹಾಗೇ ನಮ್ಮ ಆಲೋಚನೆಗಳು ಬದಲಾಗಬೇಕು. ಎಲ್ಲಾ ಕಡೆಗಳಿಂದ ಆದಷ್ಟು ಜ್ಞಾನವನ್ನು ಬೆಳೆಸಿಕೊಳ್ಳಿ. ಅದನ್ನು ನಿಮ್ಮ ವ್ಯಾಪಾರಕ್ಕೆ ಅಳವಡಿಸಿ, ನಿಧಾನವಾಗಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದಿಷ್ಟೇ ಅಲ್ಲ, ನಿಮ್ಮಲ್ಲಿ ಕೆಲಸ ಮಾಡುವವರನ್ನು ಕೆಲಸಗಾರರಂತೆ ಕಾಣುವ ಬದಲು ಸ್ನೇಹಿತರಂತೆ ವರ್ತಿಸಿ. ಒರ್ವ ಸಮರ್ಥ ನಾಯಕ ಹೇಗಿರಬೇಕೆಂದು ತೋರಿಸಿ. ಆಗ ಎಲ್ಲವೂ ನೀವು ಅಂದು ಕೊಂಡಂತೆ ನಡೆಯುತ್ತದೆ.

ಕನಸು ಕಾಣೋದು ಸುಲಭ ಆದ್ರೆ ಅದನ್ನು ನನಸು ಮಾಡೋದು ನಾವಂದುಕೊಂಡಷ್ಡು ಸುಲಭವಲ್ಲ. ಅಂಬಾನಿ, ಅದಾನಿಯ ಹಾಗೇ ಯಶಸ್ವಿ ಉದ್ಯಮಿಯಾಗುವ ಆಸೆ ನಮ್ಮಲ್ಲೇ ಅನೇಕರಿಗೆ ಇರಬಹುದು ಆದ್ರೆ ಅದಕ್ಕಾಗಿ ಕಠಿಣ ಪರಿಶ್ರಮಬೇಕು. ಗೆಲುವಿನ ಕಡೆಗೆ ಇಂದೇ ನಿಮ್ಮ ಪ್ರಯತ್ನ ಶುರುವಾಗಲಿ.

English summary

Chanakya Niti Says That a Successfull Entrepreneur Must Have These Qualities In Kannada

what are the qualities that Successfull Entrepreneur Must Have says Chanakya niti. Read on.
X
Desktop Bottom Promotion