Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
Chanakya Niti: ಶ್ರೀಮಂತರಾಗಬೇಕಾ? ದುಡ್ಡು ಗಳಿಸಬೇಕು ಎಂದ್ರೆ ಚಾಣಕ್ಯನ ಈ ನೀತಿ ಪಾಲಿಸಿ ಸಾಕು
ಪ್ರತಿಯೊಬ್ಬರಿಗೂ ಜೀವನದಲ್ಲಿ ಶ್ರೀಮಂತರಾಗಬೇಕು ಎಂಬ ಆಸೆ ಇರುತ್ತದೆ. ಐಷಾರಾಮಿ ಜೀವನ ನಡೆಸಬೇಕು, ತುಂಬಾ ಸಿರಿವಂತಿಕೆ ಬರಬೇಕು ಎಂಬ ಆಸೆ ಖಂಡಿತ ಇರುತ್ತೆ. ಆದ್ರೆ ಕೆಲವೊಂದು ಬಾರಿ ನಾವೆಷ್ಟೇ ಕಷ್ಟ ಪಟ್ಟು ದುಡಿದರೂ ಕೂಡ ತಿಂಗಳ ಕೊನೆಯಲ್ಲಿ ಬಿಡಿಗಾಸು ಉಳಿಯೋದಿಲ್ಲ. ಇನ್ನೂ ಸೇವಿಂಗ್ಸ್ ಅನ್ನೋದು ದೂರದ ಮಾತು ಬಿಡಿ.
ಆಚಾರ್ಯ ಚಾಣಕ್ಯರು ಒಬ್ಬ ಮನುಷ್ಯ ಜೀವನದಲ್ಲಿ ಹಣ ಗಳಿಸಲು, ಯಶಸ್ಸು ಕಾಣಲು ಏನು ಮಾಡಬೇಕು ಎಂಬುದಕ್ಕೆ ಕೆಲವೊಂದು ನೀತಿಗಳನ್ನು ರೂಪಿಸಿದ್ದಾರೆ. ಚಾಣಕ್ಯ ಹೇಳಿರುವ ಪ್ರತಿಯೊಂದು ಮಾತುಗಳು ಇಂದಿಗೂ ನಮಗೆ ಸೂಕ್ತವೆನಿಸುವುದು, ಆದ್ದರಿಂದಲೇ ಚಾಣಕ್ಯ ನೀತಿಗೆ ಇಂದಿಗೂ ಷ್ಟೊಂದು ಮಹತ್ವವಿದೆ. ಹಣದ ಉಳಿತಾಯ ಮಾಡಲು ಚಾಣಕ್ಯ ಹೇಳಿರುವ ಸಲಹೆಗಳೇನು ಎಂದು ನೋಡೋಣ ಬನ್ನಿ:

1. ಆತ್ಮವಿಶ್ವಾಸ
ನಾವೇನೆ ಕೆಲಸ ಮಾಡಬೇಕೆಂದರೂ ಇಲ್ಲಿ ಆತ್ಮವಿಶ್ವಾಸ ತುಂಬಾನೇ ಮುಖ್ಯವಾಗುತ್ತದೆ. ಯಾಕೆಂದರೆ ಯಾರೊಳಗೆ ಈ ಛಲ, ಆತ್ಮ ವಿಶ್ವಾಸ ಇರುತ್ತದೆಯೋ ಅವರು ಮಾತ್ರ ಮುಂದೆ ಏನನ್ನಾದರೂ ಸಾಧಿದೋಕೆ ಸಾಧ್ಯ. ಚಾಣಕ್ಯನ ಪ್ರಕಾರ ನಮ್ಮ ಬಳಿ ದುಡ್ಡು, ಯಶಸ್ಸು ಇಲ್ಲದಿದ್ದರೂ ಕೂಡ ಮುಂದೊಂದು ದಿನ ಅದನ್ನ ನಾವು ಪಡೆಯಬೇಕಾದರೆ ಇಂದು ನಮ್ಮಲ್ಲಿ ಆತ್ಮವಿಶ್ವಾಸ ಇರಬೇಕು. ಹೌದು, ಆತ್ಮ ವಿಶ್ವಾಸ ಎಂಬ ಒಂದು ಅಸ್ತ್ರ ಜಗತ್ತಿನಲ್ಲಿ ನಾವು ಎಲ್ಲವನ್ನೂ ಗೆಲ್ಲೋದಕ್ಕೆ ಸಹಾಯ ಮಾಡುತ್ತದೆ.

2. ನಿರ್ಧಾರಕ್ಕೆ ಬದ್ಧರಾಗಿರಬೇಕು
ಕೆಲವೊಂದು ಬಾರಿ ಆ ಕ್ಷಣದ ಆಲೋಚನೆಗೆ ಕಟ್ಟಿಬಿದ್ದು ನಮ್ಮ ಒಳಗಿನ ಛಲ ನಮ್ಮನ್ನು ಪುಟಿದೆಬ್ಬಿಸುತ್ತೆ. ಏನಂದ್ರು ಆಗಲಿ ನಾನು ಎಲ್ಲರಂತೆ ಐಷಾರಾಮಿ ಜೀವನ ನಡೆಸಲೇಬೇಕು ಎಂಬ ಹಠಕ್ಕೆ ಬಿದ್ದು ಏನನ್ನಾದರೂ ಸಾಧಿಸಲು ಹೊರಡುತ್ತೇವೆ. ಆದರೆ ಕೆಲವರು ಇದನ್ನು ಅರ್ಧದಲ್ಲೇ ಕೈ ಬಿಡುತ್ತಾರೆ. ಆದ್ರೆ ಇದು ಸರಿಯಾದ ಮಾರ್ಗವಲ್ಲ, ದುಡ್ಡು ಮಾಡಬೇಕು ಅಂತ ದಾರಿ ಹುಡುಕಲು ಹೊರಟವನು ಸಪ್ತ ಸಾಗರಗಳನ್ನು ದಾಟಿಯಾದರೂ ಮುಂದೆ ಸಾಗುತ್ತೇನೆ ಎಂಬ ನಿರ್ಧಾರ ಮನದಲ್ಲಿ ಅಚಲವಾಗಿರಬೇಕು. ಆ ಮಾತ್ರ ನಾವು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ.

3. ರಿಸ್ಕ್ ತೆಗೆದುಕೊಳ್ಳಲ್ಲು ಸಿದ್ಧರಾಗಿರಿ
ಚಾಣಕ್ಯರ ಪ್ರಕಾರ ಸಾಧನೆ, ಯಶಸ್ಸು, ಶ್ರೀಮಂತಿಕೆ ಎಂಬುದು ಸುಖಾಸುಮ್ಮನೆ ಒಲಿಯೋದಿಲ್ಲ. ಪರಿಶ್ರಮವು ಇಲ್ಲಿ ಅತ್ಯಗತ್ಯ. ಕೆಲವೊದು ಬಾರಿ ಎಷ್ಟೇ ಕಷ್ಟಪಟ್ಟು ದುಡಿದ್ರೂ ಕೂಡ ಅಂದುಕೊಂಡ ಗುರಿ ಸಾಧಿಸಲು ಸಾಧ್ಯವಾಗೋದಿಲ್ಲ. ನಾವು ಯಾವತ್ತಿಗೂ ಸವಾಲುಗಳನ್ನು ಚಾಲೆಂಜ್ ಆಗಿ ತೊಗೋಬೇಕು. ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲೇಬೇಕು. ಅಯ್ಯೋ ಮುಂದೇನಾದ್ರೂ ಅಪಾಯವಾಗುತ್ತೋ ಅನ್ನೋ ಭಯ ಇರಬಾರದು. ಎಂತಹದ್ದೇ ಕಠಿಣ ಪರಿಸ್ಥಿತಿ ಎದುರಾದ್ರು ಎದೆಗುಂದಬಾರದು.

4. ಉಳಿತಾಯ ಮಾಡುವತ್ತ ಗಮನ ಕೊಡಿ
ಸಂಪಾದನೆ ಮಾಡೋದು ಮುಖ್ಯವಲ್ಲ ಇದರ ಜೊತೆಗೆ ಸೇವಿಂಗ್ಸ್ ಕೂಡ ತುಂಬಾನೇ ಮುಖ್ಯವಾಗುತ್ತೆ. ದುಡಿದ ದುಡ್ಡನ್ನೆಲ್ಲಾ ಬೇಕಾಬಿಟ್ಟಿ ಖರ್ಚು ಮಾಡಿದರೆ ಪ್ರಯೋಜನವಿಲ್ಲ. ಬದಲಾಗಿ ನಮ್ಮ ಖರ್ಚು ಕಳೆದು ಇಂತಿಷ್ಟು ಅಂತ ಎತ್ತಿಡಬೇಕು. ಹಾಗೆಂದ ಮಾತ್ರಕ್ಕೆ ಸ್ವಲ್ಪ ಸ್ವಲ್ಪ ಹಣ ಕುಡಿಡುತ್ತಾ ಹೋದರೆ ಸಾವಿನವರೆಗೂ ನಾವು ಶ್ರೀಮಂತರರಾಗಲು ಸಾಧ್ಯವೇ ಇಲ್ಲ. ಬದಲಾಗಿ ಉಳಿತಾಯದಿಂದ ಬಂದ ದುಡ್ಡನ್ನು ಬೇರೊಂದು ಕಡೆ ಇನ್ವೆಸ್ಟ್ ಮಾಡಿ. ನಿಧಾನವಾಗಿ ನಿಮ್ಮ ಜೀವನದಲ್ಲಿ ಎಲ್ಲವೂ ಬದಲಾಗುತ್ತಾ ಹೋಗುತ್ತದೆ.

5. ಭವಿಷ್ಯದ ದೃಷ್ಟಿಕೋನವಿರಲಿ
ಲಕ್ಷ್ಮೀ ಒಂದೇ ಕಡೆ ನೆಲೆ ನಿಲ್ಲೋದಿಲ್ಲ. ಬಡವನು ಶ್ರೀಮಂತನಾಗಬಹುದು, ಶ್ರೀಮಂತನು ಬಡವನಾಗಲೂಬಹುದು. ಇದೇ ಕಾರಣಕ್ಕೆ ನಮಗೆ ಭವಿಷ್ಯದ ಬಗ್ಗೆ ಆಲೋಚನೆ ಇರಬೇಕು. ಐಶ್ವರ್ಯ ಒಲಿಯಿತು ಅಂತ ಅರ್ಧರಾತ್ರಿಯಲ್ಲಿ ಕೊಡೆ ಹಿಡಿಬಾರದು. ಬೇಕಾಬಿಟ್ಟಿಯಾಗಿ ದುಡ್ಡು ವ್ಯರ್ಥಮಾಡಬಾರದು. ಬದಲಾಗಿ ಆ ಹಣವನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಆಲೋಚಿಸಬೇಕು.

6. ದಾನ ಮಾಡುವಾಗ ಎಚ್ಚರ
ಚಾಣಕ್ಯನ ಪ್ರಕಾರ ದೇವಾಲಯಕ್ಕೆ ಭೇಟಿ ನೀಡಿ ದಕ್ಷಿಣೆ ನೀಡುವುದರಿಂದ ದೇವರ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಹಾಗೆಂದ ಮಾತ್ರಕ್ಕೆ ಸಿಕ್ಕಾಪಟ್ಟೆ ದಾನ,ಧರ್ಮ ಮಾಡೋದಕ್ಕೆ ಹೋದರೆ ಮುಂದೊಂದು ನಿಮ್ಮ ಕೈ ಖಾಲಿಯಾಗಿ ಬೇರೆಯವರ ಮುಂದೆ ಅಂಗಲಾಚಬೇಕಾದಿತು. ಆದ್ದರಿಂದ ದಾನ ಮಾಡುವಾಗ ಎಚ್ಚರದಿಂದಿರಿ.

7. ಇಂಥವರ ಸಂಘ ಬೆಳೆಸಿ..!
ಚಾಣಕ್ಯರ ಪ್ರಕಾರ ನಾವು ಜೀವನದಲ್ಲಿ ಮುಂದೆ ಬರೋದಕ್ಕೆ ಯಾರ ಸಂಘ ಬೆಳೆಸುತ್ತಿದ್ದೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಶ್ರೀಮಂತ ಉದ್ಯಮಿಗಳು, ವಿದ್ಯಾವಂತ ಬ್ರಾಹ್ಮಣರು, ಹೋರಾಟಗಾರರ ಸಂಘ ಬೆಳೆಸಬೇಕಂತೆ. ಇದರಿಂದ ನಮ್ಮ ಜೀವನದಲ್ಲಿ ಬದಲಾವಣೆಗಳು ಆಗುವ ಸಾದ್ಯತೆಗಳು ಹೆಚ್ಚಾಗಿರುತ್ತದೆ.

8. ಉದ್ಯಮ ಶುರು ಮಾಡುವ ಮೊದಲು ಈ ವಿಚಾರ ತಲೆಯಲ್ಲಿರಲಿ..!
ಆಚಾರ್ಯ ಚಾಣಕ್ಯ ಹೇಳುವುದೇನೆಂದರೆ ಹೊಸ ಉದ್ಯಮ ಶುರು ಮಾಡುವಾಗ ಕೆಲವೊಂದು ವಿಚಾರಗಳು ಮುಖ್ಯವಾಗುತ್ತದೆ. ಮೊದಲನೇಯದ್ದಾಗಿ ಆ ಉದ್ಯಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಪಡೆದುಕೊಳ್ಳಿ. ಎರಡನೇಯದ್ದು ಉದ್ಯಮದಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳಿ. ಮೂರನೇಯದ್ದು ಉತ್ತಮ ಜ್ಞಾನ ಪಡೆಯೋದು. ಈ ವಿಚಾರಗಳ ಬಗ್ಗೆ ಸ್ಪಷ್ಟವಾಗಿದ್ದರೆ ಖಂಡಿತ ಹಣ, ಯಶಸ್ಸು ಗಳಿಸಬಹುದು.

9. ಅಭಿವೃದ್ಧಿಯತ್ತ ಗಮನಹರಿಸಿ
ಚಾಣಕ್ಯನ ಪ್ರಕಾರ ಯಾವತ್ತಿಗೂ ನಿಂತಲ್ಲೇ ನಿಲ್ಲಬಾರದು ಮನುಷ್ಯ ನಿರಂತರವಾಗಿ ಓಡುತ್ತಿರಬೇಕು ಆಗ ಮಾತ್ರ ಅಭಿವೃದ್ಧಿ ಸಾಧ್ಯ. ಅಭಿವೃದ್ಧಿಯಾದಾಗಲಷ್ಟೇ ಜೇಬು ತುಂಬಾ ಹಣ ಗಳಿಸಬಹುದು.
ಅನೇಕ ಬಾರಿ ಬೇರೆಯವರ ಜೀವನಶೈಲಿ ನೋಡಿ ನಾವು ನೊಂದುಕೊಳ್ಳುತ್ತೇವೆ. ನಾನ್ಯಾಕೆ ಹೀಗಿದ್ದೀನಿ, ನನ್ನ ಬಳಿ ದುಡ್ಡು ಇರ್ತಿದ್ರೆ ಎಲ್ಲರಂತೆ ನಾನು ಐಷಾರಾಮಿ ಜೀವನ ನಡೆಸ್ಬಹುದಿತ್ತು ಅಂತ ಅಂದುಕೊಳ್ಳುತ್ತಿರುತ್ತೇವೆ. ಚಾಣಕ್ಯ ಈ ನೀತಿಗಳನ್ನು ಪಾಲಿಸಿದ್ರೆ ನಿಮ್ಮ ಜೀವನದಲ್ಲೂ ಹಣ, ಯಶಸ್ಸು ಒಲಿಯೋದು ಖಂಡಿತ.



Click it and Unblock the Notifications
