Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಚಾಣಕ್ಯ ನೀತಿ: ಈ ಚಿಕ್ಕ ತಪ್ಪುಗಳು ಸಂಸಾರ ಮುರಿಯುತ್ತೆ ಜಾಗ್ರತೆ
ಚಾಣಕ್ಯನು ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಪ್ರಖ್ಯಾತ ರಾಜಕಾರಣಿಯೂ ಹೌದು. ಇವರು ಜೀವನಕ್ಕೆ ಬೇಕಾದ ಎಲ್ಲಾ ನೀತಿಗಳನ್ನು ರೂಪಿಸಿದ್ದಾರೆ. ದಾಂಪತ್ಯ ಅನ್ನೋದು ಪವಿತ್ರವಾದ ಬಂಧ. ಒಂದು ಬಾರಿ ಒರ್ವ ವ್ಯಕ್ತಿಯನ್ನು ಮದುವೆಯಾದರೆ ಸಾಯುವವರೆಗೂ ಅವರ ಜೊತೆಯಲ್ಲೇ ಬಾಳಬೇಕು. ಹೀಗಾಗಿ ಬಾಳ ಸಂಗಾತಿಯನ್ನು ಆರಿಸುವಾಗ ಮುಂಜಾಗೃತೆ ತುಂಬಾನೇ ಮುಖ್ಯ.

ಸಂಸಾರದಲ್ಲಿ ಎರಡು ಬಂಡಿಗಳು ಸರಿಯಾಗಿ ಸಾಗಲು ಗಂಡ-ಹೆಂಡತಿಯ ಸಹಕಾರ ತುಂಬನೇ ಮುಖ್ಯವಾಗುತ್ತದೆ. ಒಂದು ಬಂಡಿ ಕಿತ್ತು ಹೋದರೂ ಸಂಸಾರ ಅಲ್ಲೋಲ ಕಲ್ಲೋಲವಾಗುತ್ತದೆ. ಹೀಗಾಗಿ ಪತಿ-ಪತ್ನಿಯಾದವರು ಕೆಲವೊಂದು ವಿಚಾರದ ಬಗ್ಗೆ ಮುಂಜಾಗೃತೆಯಿಂದ ಇರಬೇಕು. ಇಲ್ಲವಾದರೆ ಅಂತಹ ಸಂಸಾರವೇ ನಾಶವಾಗಬಹುದು ಎಂದು ಚಾಣಕ್ಯ ಕಿವಿ ಮಾತು ಹೇಳಿದ್ದಾರೆ.
ಸಂಸಾರವೆಂದ ಮೇಲೆ ಅಲ್ಲಿ ಸುಖ-ದುಃಖ ಬಂದೊದಗೋದು ಸಾಮಾನ್ಯ. ಹಾಗಂತ ಪತಿ-ಪತ್ನಿ ಒಬ್ಬರ ಮೇಲೆ ಒಬ್ಬರು ದೂರು ಹಾಕೋದು ಸರಿಯಲ್ಲ. ಆಚಾರ್ಯ ಚಾಣಕ್ಯ ಎಲ್ಲಾ ಸಮಸ್ಯೆಗಳಿಗೂ ನಾವೇ ಕಾರಣ ಅಂತಾರೆ. ಜೀವನದಲ್ಲಿ ಎದುರಾಗೋ ಚಿಕ್ಕ ಚಿಕ್ಕ ಸಮಸ್ಯೆಗಳುನ್ನು ದೊಡ್ಡದು ಮಾಡೋದ್ರ ಬದಲು ಅಂತಹ ಸಮಸ್ಯೆಗಳನ್ನು ಕಡೆಗಣಿಸಿ ಅಂತಾರೆ ಚಾಣಕ್ಯ. ಅಷ್ಟಕ್ಕು ಚಾಣಕ್ಯನ ಪ್ರಕಾರ ಸಂಸಾರ ಹಾಳಾಗಲು ಕಾರಣಗಳ್ಯಾವುದು ಅನ್ನೋದನ್ನ ಹೇಳ್ತೀವಿ.
1. ಪ್ರತಿ ಕೆಲಸದಲ್ಲೂ ಒಬ್ಬರಿಗೊಬ್ಬರು ಸಹಕರಿಸದಿರುವುದು
ಚಾಣಕ್ಯನ ಪ್ರಕಾರ ಕೆಲಸ ಚಿಕ್ಕದಾಗಲಿ ಅಥವಾ ದೊಡ್ಡದಾಗಲಿ ಪತಿ-ಪತ್ನಿ ಒಬ್ಬರಿಗೊಬ್ಬರು ಸಹಕರಿಸಲೇಬೇಕು. ಅನೇಕ ಪುರುಷರು ಮನೆ ಕೆಲಸಕ್ಕೆ ಹೋಗೋದೇ ಇಲ್ಲ. ಅದು ಹೆಂಗಸರ ಕೆಲಸವೆಂದು ಪತ್ನಿಯ ಬಳಿ ಎಲ್ಲಾ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ. ಮೊದ ಮೊದಲು ಪತ್ನಿ ಸುಮ್ಮನಿರುತ್ತಾಳೆ ಆದರೆ ನಂತರ ಆಕೆಯು ಸೋತು ಹೋಗುತ್ತಾಳೆ. ಮನೆ-ಮಕ್ಕಳು ಎಲ್ಲವನ್ನೂ ಒಬ್ಬಳಿಂದಲೇ ನಿಭಾಯಿಸಲು ಆಗುವುದಿಲ್ಲ. ಸಮಯ ಕಳೆದಂತೆ ಇದೇ ವಿಚಾರಕ್ಕೆ ಜಗಳ ಶುರುವಾಗುತ್ತದೆ. ಹೀಗಾಗಿ ಪ್ರತಿ ಕೆಲಸದಲ್ಲೂ ಪತಿ ಪತ್ನಿ ಪಾಲು ಇರಲೇಬೇಕು.
2. ಪತಿ-ಪತ್ನಿ ಮಾತು ನಿಲ್ಲಿಸುವುದು
ಚಾಣಕ್ಯನ ಪ್ರಕಾರ ಸಂಸಾರದಲ್ಲಿ ಜಗಳದಲ್ಲಿ ಆಗೋದು ಕಾಮನ್. ಹಾಗಂತ ಸಣ್ಣ-ಪುಟ್ಟ ವಿಷಯಕ್ಕೆ ಮಾತು ಬಿಡೋದು ಸರಿಯಲ್ಲ. ಒಂದು ಸಾರಿ ನಿಮ್ಮ ಪತಿ ಅಥವಾ ಪತ್ನಿ ಬಳಿ ಮಾತನಾಡೋದನ್ನ ನಿಲ್ಲಿಸಿದರೆ ಪ್ರತಿ ಸಾರಿ ಜಗಳವಾಗುವಾಗಲು ಅದೇ ರೀತಿ ಮುಂದುವರಿಯುತ್ತದೆ. ನಂತರ ಇದು ತೀವ್ರ ಸ್ವರೂಪಕ್ಕೆ ತಿರುಗಬಹುದು. ಒಂದು ವೇಳೆ ನಿಮಗೆ ನಿಮ್ಮ ಸಂಗಾತಿಯ ಬಳಿ ಮಾತನಾಡಲು ಇಷ್ಟವಾಗದೇ ಹೋದರೆ ಆಗ ನಿಜವಾದ ಸಮಸ್ಯೆ ಎದುರಾಗುತ್ತದೆ. ಅವರ ಜೊತೆ ಬಾಳೋದೇ ಬೇಡ ಎಂದಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಪತಿಯ ಬಳಿ ಮಾತು ನಿಲ್ಲಿಸಬೇಡಿ ಅಂತಾರೆ
3. ಮೂರನೇ ವ್ಯಕ್ತಿಯನ್ನು ಸಂಸಾರದಲ್ಲಿ ಮೂಗು ತೂರಿಸಲು ಬಿಡುವುದು
ಸಂಸಾರದಲ್ಲಿ ಪತಿ-ಪತ್ನಿ ಹಾಗೂ ಮಕ್ಕಳು ಬಿಟ್ಟರೆ ಬೇರ್ಯಾರಿಗೂ ಒಳಬರಲು ಅವಕಾಶ ಕೊಡಬೇಡಿ. ಮೂರನೇಯವರು ಸಂಸಾರದಲ್ಲಿ ಹುಳಿ ಹಿಂಡುವ ಸಾಧ್ಯತೆ ಇರುತ್ತದೆ. ನಿಮ್ಮ ಸಂಗಾತಿಗಿಂತ ಚೆನ್ನಾಗಿ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಹೀಗಿದ್ದಾಗ ಮೂರನೇಯವರು ನಿಮ್ಮ ಸಂಸಾರದ ಬಗ್ಗೆ ಏನು ಗೊತ್ತಿರುತ್ತದೆ. ಯಾವುದೇ ಕಾರಣಕ್ಕೂ ಅಂತವರ ಮಾತು ಕೇಳಿ ನಿಮ್ಮ ಸಂಗಾತಿಯನ್ನು ನಿಂದಿಸಲು ಅಥವಾ ಅವರ ಬಳಿ ಜಗಳವಾಡಲು ಹೋಗಲೇಬೇಡಿ. ಚಾಣಕ್ಯನ ಪ್ರಕಾರ ಪತಿ-ಪತ್ನಿಯ ಖಾಸಗಿ ವಿಚಾರದಲ್ಲಿ ಮೂರನೇಯವರಿಗೆ ಅವಕಾಶ ಕೊಡಬೇಡಿ ಅಂತಾರೆ.
ನಾವು ಕಷ್ಟ ಪಟ್ಟು ದುಡಿಯೋದು ನಮಗಾಗಿ ಹಾಗೂ ನಮ್ಮನ್ನು ನಂಬಿಕೊಂಡಿರೋರಿಗಾಗಿ. ನಮ್ಮ ಮನೆ ಅಂದ ಮೇಲೆ ಅಲ್ಲಿ ನೆಮ್ಮದಿ ಎಂಬುವುದು ತುಂಬಾನೇ ಮುಖ್ಯವಾಗುತ್ತದೆ. ನೆಮ್ಮದಿ ಕಾಣಲು ಪತಿ-ಪತ್ನಿಯಲ್ಲಿ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವ ಗುಣ ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications


