Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಾಣಕ್ಯ ನೀತಿ: ಈ 4 ವಿಚಾರಗಳು ಗಂಡ-ಹೆಂಡತಿ ನಡುವೆ ಬಂದರೆ ಸಂಸಾರ ಮುರಿದು ಬೀಳುತ್ತೆ!
ದಾಂಪತ್ಯದಲ್ಲಿ ನಾವು ಯಾವಾಗಲೂ ಸುಖವನ್ನೇ ಬಯಸೋದಕ್ಕೆ ಆಗೋದಿಲ್ಲ. ಸಂಸಾರದಲ್ಲಿ ಸುಖ, ದುಃಖ, ನೋವು, ನಲಿವುಗಳು ಇದ್ದದೇ. ಇಷ್ಟೊಂದು ಸಮಸ್ಯೆಗಳ ಮಧ್ಯೆ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವವರಿದ್ದಾರೆ. ಆದರೆ ಆ ನಾಲ್ಕು ವಿಚಾರಗಳು ಸಂಸಾರದಲ್ಲಿ ಬಂದರೆ ಸಂಸಾರದಲ್ಲಿ ಸುಖ ಕಾಣೋದಕ್ಕೆ ಸಾಧ್ಯವಿಲ್ಲ.

ಚಾಣಕ್ಯನ ಪ್ರಕಾರ ಗಂಡ-ಹೆಂಡತಿ ಸಂಸಾರ ಚೆನ್ನಾಗಿರಬೇಕಾದರೆ ಈ 4 ವಿಚಾರಗಳನ್ನು ಸಂಸಾರದ ಒಳಗೆ ಬಿಡಲೇಬಾರದು. ಒಂದು ವೇಳೆ ಆ ನಾಲ್ಕು ಸಂಗತಿಗಳು ನಿಮ್ಮ ಸಂಸಾರದ ಒಳಗೆ ಬಂದರೆ ಖಂಡಿತ ಸುಖವಾಗಿರಲು ಸಾಧ್ಯವೇ ಇಲ್ಲ. ಆ ನಾಲ್ಕು ವಿಚಾರಗಳೇ ನಿಮ್ಮ ಸಂಸಾರದಲ್ಲಿ ಹುಳಿ ಹಿಂಡಿ ಬಿಡುತ್ತೆ ಅಂತಾರೆ ಚಾಣಕ್ಯ. ಅಷ್ಟಕ್ಕು ಚಾಣಕ್ಯ ಹೇಳುತ್ತಿರುವ ಆ ನಾಲ್ಕು ಸಂಗತಿಗಳು ಯಾವುದು ಅನ್ನೋದನ್ನ ನೋಡೋಣ.

1. ಅನುಮಾನ
ಚಾಣಕ್ಯನ ಪ್ರಕಾರ ಸಂಸಾರದಲ್ಲಿ ಅನುಮಾನ ಎಂಬ ಹುಳವನ್ನು ಒಳಬರಲು ಬಿಡಲೇಬಾರದು. ಗಂಡ-ಹೆಂಡತಿಯ ಮೇಲೆ ಅಥವಾ ಹೆಂಡತಿ-ಗಂಡನ ಮೇಲೆ ಅನುಮಾನ ಪಡಲೇಬಾರದು. ಅನುಮಾನ ನಿಮ್ಮ ಸಂಸಾರವನ್ನು ಹಾಳು ಮಾಡಿ ಬಿಡಬಹುದು. ನಿಮ್ಮ ಸಂಗಾತಿಯ ಮೇಲೆ ಅನುಮಾನವಿದ್ದರೆ ಮಾತನಾಡಿ ಬಗೆಹರಿಸಿಕೊಳ್ಳಿ. ಇಲ್ಲವಾದಲ್ಲಿ ಆ ಅನುಮಾನದ ಕಿಚ್ಚು ನಿಮ್ಮ ಸಂಸಾರವನ್ನೇ ಸುಟ್ಟು ಬಿಡಬಹುದು. ಅಷ್ಟೇ ಅಲ್ಲ, ಸಂಸಾರದಲ್ಲಿ ಪ್ರಬುದ್ಧತೆ ಅನ್ನುವುದು ತುಂಬಾನೇ ಮುಖ್ಯ. ಗಂಡ-ಹೆಂಡತಿ ಇಬ್ಬರಲ್ಲಿ ಒಬ್ಬರು ಪ್ರಬುದ್ಧತೆಯಿಂದ ನಡೆದುಕೊಳ್ಳಬೇಕು. ಆಗ ಮಾತ್ರ ಸಂಸಾರ ಚೆನ್ನಾಗಿರಲು ಸಾಧ್ಯ.

2. ಅಹಂಕಾರ
ಚಾಣಕ್ಯನ ಪ್ರಕಾರ ಸಂಸಾರವನ್ನು ಹಾಳು ಮಾಡುವ ಎರಡನೇ ವಿಚಾರ ಅಂದರೆ ಅಹಂಕಾರ. ಸಂಸಾರದಲ್ಲಿ ಹೆಣ್ಣಾಗಲಿ, ಗಂಡಾಗಲಿ ಇಬ್ಬರಿಗೂ ಅಹಂಕಾರ ಎಂಬುವುದು ಇರಲೇಬಾರದು. ಮನುಷ್ಯನಿಗೆ ಅಹಂಕಾರ ತಲೆಗೆ ಹತ್ತಿದಾಗ ಜಗತ್ತು ಕಾಣುವುದಿಲ್ಲವಂತೆ. ಹಾಗಿದ್ದಾಗ ಅವರು ತಮ್ಮ ಸಂಗಾತಿಯನ್ನ ಲೆಕ್ಕಕ್ಕೇ ತೆಗೆದುಕೊಳ್ಳುತ್ತಾರೆಯೇ? ಖಂಡಿತ ಇಲ್ಲ. ನಾನೇ, ನನ್ನಿಂದಲೇ ಎಂಬ ಅಹಂಕಾರ ತಲೆಗೇರಿಸಿಕೊಂಡರೆ ಸುಖ ಸಂಸಾರ ನಡೆಸಲು ಸಾಧ್ಯವಾಗೋದಿಲ್ಲ. ಸುಖ ಸಂಸಾರ ನಡೆಸಬೇಕೆಂದಿದ್ದವರು ಅಹಂಕಾರವನ್ನು ಒಳಬರಲು ಬಿಡಲೇಬೇಡಿ.

3. ಸುಳ್ಳು
ಸುಳ್ಳು ಕೇಳೋದಕ್ಕೆ ಸಿಹಿಯಾಗಿರುತ್ತದೆ ಆದರೆ ಸತ್ಯ ಕೇಳೋದಕ್ಕೆ ಕಹಿಯಾಗಿರುತ್ತದೆ. ಆದ್ರೆ ಸುಳ್ಳು ಮರೆಯಾಗಿ ಸತ್ಯ ಒಂದಲ್ಲ ಒಂದು ದಿನ ಹೊರಬರಲೇಬೇಕು. ಚಾಣಕ್ಯನ ಪ್ರಕಾರ ನಿಮ್ಮ ಸಂಗಾತಿಯ ಬಳಿ ಯಾವತ್ತಿಗೂ ಸುಳ್ಳು ಹೇಳಲೇಬೇಡಿ. ಸುಳ್ಳುನಿಂದ ಕಟ್ಟಿದ ಸಂಸಾರ ಕಡೆವರೆಗೂ ಉಳಿಯೋದಿಲ್ಲ. ಹೀಗಾಗಿ ಸಂಸಾರ ಸಾಗರದಲ್ಲಿ ಸುಳ್ಳಿಗೆ ಜಾಗ ಕೊಡಲೇಬೇಡಿ. ಗಂಡ-ಹೆಂಡತಿ ಸಂಸಾರ ಎನ್ನುವುದು ತುಂಬಾನೇ ಪವಿತ್ರವಾದ ಸಂಬಂಧ. ಏನೇ ವಿಚಾರವಿದ್ದರೂ ನಿಮ್ಮ ಸಂಗಾತಿಯಲ್ಲಿ ಮಾತನಾಡಿ ಬಗೆಹರಿಸಿಕೊಳ್ಳಿ ಅದನ್ನು ಬಿಟ್ಟು ಅವರ ಬಳಿ ಸುಳ್ಳು ಹೇಳಿದರೆ ಪ್ರತಿ ಸಲ ಒಂದು ಸುಳ್ಳನ್ನು ಮುಚ್ಚಲು ನಿರಂತರವಾಗಿ ಸುಳ್ಳು ಹೇಳಲೇಬೇಕಾಗುತ್ತದೆ. ಆಗ ಸಂಸಾರ ಉಳಿಯುವುದಿಲ್ಲ.

4. ಗೌರವ
ಚಾಣಕ್ಯ ಪ್ರಕಾರ ಸಂಸಾರದಲ್ಲಿ ಮೇಲು-ಕೀಳು, ದುರ್ಬಲ-ಪ್ರಬಲ ಎಂಬುವುದು ಇರಲೇಬಾರದು. ಹೆಣ್ಣು ಎಂಬ ಕಾರಣಕ್ಕೆ ಆಕೆಯನ್ನು ತುಚ್ಚವಾಗಿ ಕಾಣಬಾರದು. ಆಕೆಗೂ ಸಮಾನ ಅವಕಾಶವನ್ನು ನೀಡಬೇಕು. ಆಕೆಯನ್ನು ಮನೆಯಲ್ಲಿ ಗೌರವದಿಂದ ಕಾಣಬೇಕು. ಇನ್ನೂ ಗಂಡ ದುಡಿಯುವುದಿಲ್ಲ ಅಥವಾ ಆತನ ಸಂಭಳ ಕಡಿಮೆ ಎಂದು ಆತನಿಗೆ ಗೌರವ ಕೊಡದಿರಬೇಡಿ. ಸಂಭಳ ಅಥವಾ ಆತನ ಕೆಲಸದಿಂದ ಗೌರವ ನಿರ್ಧಾರವಾಗುವುದಿಲ್ಲ. ಸಂಸಾರದಲ್ಲಿ ಈ ವಿಚಾರಗಳಿಗೆ ಆಸ್ಪದ ಕೊಡಲೇಬಾರದು. ಗಂಡ-ಹೆಂಡತಿಯು ಪರಸ್ಪರ ಗೌರವ ಕೊಟ್ಟು ಯಾವಾಗ ನಡೆದುಕೊಳ್ಳುತ್ತಾರೋ ಆಗ ಮಾತ್ರ ಸುಖ ಸಂಸಾರ ಸಾಧ್ಯ.
ಮದುವೆ ಅನ್ನುವುದು ಒಂದು ಸುಂದರವಾದ ಅನುಬಂಧ. ಸಪ್ತಪದಿ ತುಳಿಯುವಾಗ ಏಳೇಳು ಜನ್ಮದಲ್ಲಿ ಜೊತೆಯಾಗಿ ಇರುತ್ತೇವೆ ಎಂದು ಏಳು ಹೆಜ್ಜೆಗಳನ್ನು ಒಟ್ಟಾಗಿ ಇಡಲಾಗುತ್ತದೆ. ಏಳು ಜನ್ಮದಲ್ಲಿ ಒಟ್ಟಾಗಿ ಬದುಕುತ್ತೇವೋ ಇಲ್ಲವೋ ಗೊತ್ತಿಲ್ಲ ಆದರೆ ಸಿಕ್ಕ ಒಂದು ಜನ್ಮವನ್ನು ಅರ್ಥಪೂರ್ಣವಾಗಿ ಬಾಳಿ.



Click it and Unblock the Notifications


