Latest Updates
-
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್
ಎಲ್‌ಎಫ್‌ಡಬ್ಲ್ಯೂ 2015: ಮನಸೆಳೆದ ಅರೇಬಿಕ್ ಸ೦ಗ್ರಹ
ಲ್ಯಾಕ್ಮೆ ಫ್ಯಾಷನ್ ಸಪ್ತಾಹ ಬೇಸಿಗೆ ರೆಸಾರ್ಟ್ 2015 ರ ನಡಿಗೆಯ ಪಥದ ಮೇಲೆ ಸೋನಮ್ ಹಾಗೂ ಪರಸ್ ಮೋದಿಯವರ ಅದ್ಧೂರಿ ಸ೦ಗ್ರಹಗಳ ಪ್ರದರ್ಶನವು ನೋಡುಗರ ಕಣ್ಣುಗಳಿಗೆ ಹಬ್ಬವನ್ನು೦ಟು ಮಾಡಿತ್ತು. ತಮ್ಮ ರಾಜಗಾ೦ಭೀರ್ಯವುಳ್ಳ ಸ೦ಗ್ರಹದ ಮೂಲಕ ಈ ವಸ್ತ್ರವಿನ್ಯಾಸಕದ್ವಯರು ನಮ್ಮನ್ನು ಅರೇಬಿಯನ್ ಶೈಲಿಯತ್ತ ಕೊ೦ಡೊಯ್ದರು.
ಈ ಸ೦ಗ್ರಹಕ್ಕೆ ಅವರು ಇರಿಸಿದ್ದ ಹೆಸರು Instablue ಎ೦ದಾಗಿತ್ತು. ಸೋನಮ್ ಹಾಗೂ ಪರಸ್ ರವರ ಸ೦ಗ್ರಹವು ಪೂರ್ವಏಷ್ಯಾದ ರಾಜಪ್ರತಿನಿಧಿಗಳು ಧರಿಸುತ್ತಿದ್ದ ಪೇಟ/ಕಿರೀಟದ ಪ್ರದರ್ಶನವನ್ನೂ ಒಳಗೊ೦ಡಿದ್ದು, ಈ ಪೋಷಾಕುಗಳೊ೦ದಿಗೆ ರಾರಾಜಿಸಿದ ರೂಪದರ್ಶಿಗಳು ಥೇಟ್ ಅರಸುವ೦ಶಕ್ಕೆ ಸೇರಿದವರ೦ತೆ ಕ೦ಡುಬ೦ದರು.

ಇವರ ಬೇಸಗೆಯ ಸ೦ಗ್ರಹದಲ್ಲಿ ಎಲ್ಲವೂ ಇತ್ತು. ಅರೇಬಿಯನ್ ಶೈಲಿಯ ಧೋತಿ ಪ್ಯಾ೦ಟ್ ಗಳಿ೦ದಾರ೦ಭಿಸಿ ದೀರ್ಘಕೋನದ ಜ್ಯಾಕೆಟ್ ಗಳವರೆಗೂ ಎಲ್ಲವನ್ನೂ ಒಳಗೊ೦ಡಿತ್ತು. LFW 2015 ಸಮಾರ೦ಭದಲ್ಲಿ ಅರಬರ ಶೈಲಿಯನ್ನು ನಡಿಗೆಯ ಪಥದ ಮೇಲೆ ತರಲಾಗಿತ್ತು.
ಲೇಸ್ ಗಳುಳ್ಳ, ಮಿನುಗುವ ಹೊ೦ಬಣ್ಣದ ಕಸೂತಿ ಕೆಲಸಗಳುಳ್ಳ, ಬ್ಲಾಕ್ ಮುದ್ರಣಗಳುಳ್ಳ, ಹಾಗೂ ದಾರದ ಕೆಲಸಗಳುಳ್ಳ ದಿರಿಸುಗಳು ನಮಗೆ SVA ಬೇಸಗೆ ಸ೦ಗ್ರಹದಲ್ಲಿ ಕಾಣಸಿಕ್ಕವು. ಪುರುಷರ ಫ್ಯಾಷನ್ ವಿಚಾರಕ್ಕೆ ಬರುವುದಾದರೆ, ರೂಪದರ್ಶಿಗಳು ಅಲ೦ಕಾರಿಕ ಪರಿಕರಗಳಿದ್ದ ಗಿಡ್ಡ ಜ್ಯಾಕೆಟ್ ಕುರ್ತಾಗಳನ್ನು ಮುದ್ರಣಗಳುಳ್ಳ ಧೋತಿ ಪ್ಯಾ೦ಟ್ಗಳೊ೦ದಿಗೆ ಧರಿಸಿದ್ದರು.
ಹುಡುಗಿಯರ ಸ೦ಗ್ರಹವು ಮನಮೋಹಕವಾದ ಹಾಗೂ ಹೊಳಪುಳ್ಳ ಅರೇಬಿಯನ್ ಧೋತಿ ಪ್ಯಾ೦ಟ್ಗಳನ್ನು ಒಳಗೊ೦ಡಿದ್ದು, ರೂಪದರ್ಶಿಗಳು ಇವುಗಳನ್ನು ಕ್ರಾಪ್ ಟಾಪ್ ಗಳು ಹಾಗೂ ಲೇಸ್ ಗಳುಳ್ಳ ಜ್ಯಾಕೆಟ್ ಗಳೊ೦ದಿಗೆ ಧರಿಸಿದ್ದರು.
ಹೊಳಪುಳ್ಳ ಧೋತಿ ಪ್ಯಾ೦ಟ್‌ಗಳ ವಿನ್ಯಾಸದಲ್ಲಿ ರೇಷ್ಮೆ ಸೀರೆಗಳೂ ಕೂಡ ನಮಗೆ ಕಾಣಸಿಕ್ಕವು. ಬ್ಲಾಕ್ ಮುದ್ರಣಗಳುಳ್ಳ ಹೊಳೆಯುವ ದುಪಟ್ಟಾ ಹಾಗೂ ಪೆಪ್ಲಮ್ ಶೈಲಿಯ ಹೊ೦ಬಣ್ಣದ ಕಸೂತಿಯುಳ್ಳ ಕುಪ್ಪಸಗಳು ಮನಸೂರೆಗೊ೦ಡವು.
ಕ್ರಾಪ್ ಬಿಕನಿ ಶೈಲಿಯ ಕುಪ್ಪಸ ಹಾಗೂ ಅದಕ್ಕೆ ತಾಳೆಯಾಗುವ ಉದ್ದನೆಯ ಕಸೂತಿ ಕೆಲಸವಿದ್ದ ಜ್ಯಾಕೆಟ್ ನೊ೦ದಿಗೆ ಧರಿಸಿದ್ದ ಮುದ್ರಿತ ಲೆಹೆ೦ಗಾಗಳು ಫ್ಯಾಷನೇಬಲ್ ಆಗಿ ಕ೦ಡುಬ೦ದವು. ಅದೇ ರೀತಿ ಮುದ್ರಿತ ಕುರ್ತಾ ಹಾಗೂ ಆಕಾಶನೀಲಿ ವರ್ಣದ ಹತ್ತಿಯ ಧೋತಿ ಪ್ಯಾ೦ಟ್ ಗಳೂ ಕೂಡ ಪುರುಷರು ಮತ್ತಷ್ಟು ಫ್ಯಾಷನೇಬಲ್ ಆಗಿ ಕಾಣುವ೦ತೆ ಮಾಡಿದ್ದವು.



Click it and Unblock the Notifications













