ಎಐಎಫ್‌ಡಬ್ಲ್ಯು: ಸಂಜಯ್‌ರವರ ಕೈಚಳಕಕ್ಕೆ ಭೇಷ್‌ ಎನ್ನಲೇಬೇಕು

By manu

ಅಕ್ಟೋಬರ್ ಏಳರಿಂದ ಹನ್ನೊಂದರವರೆಗೆ ದೆಹಲಿಯ ಎನ್ ಎಸ್ ಐ ಸಿ ಮೈದಾನದಲ್ಲಿ ನಡೆಯಲಿರುವ ಐದು ದಿನಗಳ ಅಮೆಜಾನ್ ಇಂಡಿಯಾ ಫ್ಯಾಷನ್ ವೀಕ್ ಸಂಭ್ರಮದ ಪ್ರಾರಂಭ ದೊರಕಿದೆ. ವೇದಿಕೆಯಲ್ಲಿ ಮಂದ ಬೆಳಕು, ಮಂದ್ರಸ್ತರದ ಸಂಗೀತದ ನಡುವೆ ಪ್ರಖರ ಕಿರಣದ ಕಂಭದಲ್ಲಿ ಪ್ರಮುಖರಾಗಿ ಕಂಡು ಬಂದ ಖ್ಯಾತ ವಸ್ತ್ರ ವಿನ್ಯಾಸಕ ಸಂಜಯ್ ಗರ್ಗ್ ಕಾರ್ಯಕ್ರಮದಲ್ಲಿ ಭವ್ಯವಾಗಿ ಮೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು " ರಾ ಮ್ಯಾಂಗೋ ಸಂಸ್ಥೆಯಿಂದ ಈ ವರ್ಷವೂ ವಿನೂತನ ವಸ್ತ್ರ ವಿನ್ಯಾಸಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ಎಲ್‌ಎಫ್‌ಡಬ್ಲ್ಯೂ 2015: ಮನಸೆಳೆದ ಅರೇಬಿಕ್ ಸ೦ಗ್ರಹ

ಪ್ರಮುಖವಾಗಿ ಕರಕುಶಲ ಕಲೆಯ, ಕೈಮಗ್ಗದ ಬಟ್ಟೆಗಳಿಂದ ತಯಾರಾದ ಸೀರೆಗಳು, ಬಟ್ಟೆಗಳು ಮತ್ತು ಕಂಠವಸ್ತ್ರಗಳು ಇಂದು ಪ್ರದರ್ಶನಗೊಳ್ಳಲಿದ್ದು ಶೀಘ್ರದಲ್ಲಿಯೇ ಆನ್‌ಲೈನ್ ಮೂಲಕ ದೇಶವಿದೇಶಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ ಎಂದು ತಿಳಿಸಿದರು. ಆನ್‌ಲೈನ್ ಮೂಲಕ ಹಲವಾರು ಪ್ರಸಿದ್ಧ ಮತ್ತು ವಿನೂತನ ವಸ್ತ್ರ ಮತ್ತು ಉಡುಗೆಗಳನ್ನು ಮಾರಾಟ ಮಾಡುತ್ತಾ ಬಂದಿರುವ ಅಮೆಜಾನ್ ಇಂದಿನ ಪ್ರದರ್ಶನದಲ್ಲಿಯೂ ಹಲವು ಹೊಸತುಗಳನ್ನು ನೀಡುವ ಸೂಚನೆ ನೀಡಿದೆ. ಈ ಕಾರ್ಯಕ್ರಮದ ಮೂಲಕ ಸಂಜಯ್ ಗರ್ಗ್ ರಿಗೆ ವಿಶ್ವವಿಖ್ಯಾತಿ ದೊರಕಿದೆ ಎಂದರೆ ತಪ್ಪಾಗಲಾರದು. ಎಐಎಫ್‌ಡಬ್ಲ್ಯು: ನೋಡುಗರನ್ನು ರಂಜಿಸಿದ ಪಾಂಡೆಯವರ ವಸ್ತ್ರ ವಿನ್ಯಾಸ

ಭಾರತದ ನಗರಗಳಲ್ಲಿರುವ ಆಧುನಿಕ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ವಸ್ತ್ರಗಳಲ್ಲಿ ಹರಳುಗಳನ್ನು ಪ್ರಮುಖವಾಗಿ ಬಳಸಲಾಗಿದೆ. ಆದರೆ ಇದಕ್ಕೆ ಬಳಸಲಾದ ಬಟ್ಟೆ ಮಾತ್ರ ಅಪ್ಪಟವಾದ ಕೈಮಗ್ಗದ ಬಟ್ಟೆಯಾಗಿದ್ದು ದೇಶೀ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಇಂದಿನ ವಸ್ತ್ರ ಪ್ರದರ್ಶನದಲ್ಲಿ ನೇಕಾರನ ಕೌಶಲ್ಯವನ್ನು ಧರಿಸುವಾತನ ಉಡುಗೆಯಲ್ಲಿ ಕಾಣುವ ಸಂಜಯ್ ಗರ್ಗ್ ರವರ ಕಲಾತ್ಮಕತೆ ಎದ್ದು ಕಾಣುತ್ತಿತ್ತು.

ಅಲ್ಲದೇ ಇಂದು ಬಂದಿರುವ ಅತಿಥಿಗಳು ಸಹಾ ಮಲ್ಲಿಗೆಯನ್ನು ಮುಡಿದು ಬಂದಿದ್ದು ಅದರ ನಸುವಾದ ಪರಿಮಳ ಈ ವೇದಿಕೆಯಲ್ಲಿ ಅಪ್ಪಟ ದೇಸೀ ವಾತಾವರಣ ಸೃಷ್ಟಿಯಾಗಿದೆ ಎಂದು ಅವರು ಉದ್ಗರಿಸಿದರು. ಬನ್ನಿ ಈ ಕಾರ್ಯಕ್ರಮದ ಬಗ್ಗೆ ಇನ್ನೂ ಹಲವು ಮಾಹಿತಿಗಳನ್ನು ನೋಡೋಣ.

ದೊಗಲೆ ಬಟ್ಟೆ

ದೊಗಲೆ ಬಟ್ಟೆ

ಈ ದೊಗಲೆ ಬಟ್ಟೆಯನ್ನು ತೊಡಲು ಎಲ್ಲಾ ಮಹಿಳೆಯರೂ ಇಚ್ಛಿಸುತ್ತಾರೆ. ಏಕೆಂದರೆ ಈ ವಸ್ತ್ರದ ಪ್ರಖರ ಬಣ್ಣ ಮತ್ತು ಅದರಲ್ಲಿರುವ ಅತಿ ಸೂಕ್ಷ್ಮ ಕುಸುರಿಯ ವಿನ್ಯಾಸ ನೋಡುಗರನ್ನು ನಿಬ್ಬೆರಗಾಗಿಸುವುದು ಖಂಡಿತ. ಅದರಲ್ಲೂ ಬಳಕುವ ಸೊಂಟದ ಲಲನೆಯರು ಸೊಂಟಕ್ಕೊಂದು ಕೆಂಪು ಬಣ್ಣದ ಬೆಲ್ಟ್ ತೊಟ್ಟುಕೊಂಡರಾಯಿತು, ಮೈಮಾಟ ಸೊಗಸಾಗಿ ಕಂಡುಬರುತ್ತದೆ. ಹಗಲಿನ ಮತ್ತು ರಾತ್ರಿಯ ಯಾವುದೇ ಕಾರ್ಯಕ್ರಮಕ್ಕೆ ಅಥವಾ ಕಚೇರಿಗೆ ತೊಟ್ಟುಕೊಂಡು ಹೋಗಬಹುದಾದ ಈ ವಸ್ತ್ರಕ್ಕೆ ಕೆಂಪು ಬಣ್ಣದ ಸಾದಾ ದಾವಣಿಯೂ ಉತ್ತಮವಾದ ಜೊತೆ ನೀಡುತ್ತದೆ.

ಗಾಢಹಸಿರು ಬಣ್ಣದ ಕುರ್ತಾ

ಗಾಢಹಸಿರು ಬಣ್ಣದ ಕುರ್ತಾ

ಈ ಅಪ್ಪಟ ಗಾಢಹಸಿರು ಬಣ್ಣದ ಮತ್ತು ಕಪ್ಪು ದಾವಣಿಯ ಉಡುಗೆ ಧರಿಸಿದ ರೂಪದರ್ಶಿ ವೇದಿಕೆಗೆ ಆಗಮಿಸಿದಾಕ್ಷಣ ನಿಸರ್ಗವೇ ಹೃಸ್ವರೂಪ ಪಡೆದು ಬಂದಂತಾಗಿತ್ತು. ನೀಳವಾದ ಕುರ್ತಾ ಮತ್ತು ಅದಕ್ಕೆ ಸರಿಸಮಾನವಾದ ಲೆಹೆಂಗಾವನ್ನು ಒಂದೇ ಬಣ್ಣದಲ್ಲಿರುವಂತೆ ವಿನ್ಯಾಸಗೊಳಿಸಿದ ಗರ್ಗ್ ರವರ ಜಾಣ್ಮೆ ನಿಜಕ್ಕೂ ಮೆಚ್ಚುವಂತಹದ್ದು. ಅದರಲ್ಲೂ ಗಾಢ ಹಸಿರು ಮತ್ತು ಕಪ್ಪು ಬಣ್ಣದ ವಿನ್ಯಾಸದ ದುಪಟ್ಟಾ ರೂಪದರ್ಶಿಯ ಮುಂಭಾಗವನ್ನು ಬಹುವಾಗಿ ಮುಚ್ಚಿದ್ದು ಇದರಲ್ಲಿ ಕರಕುಶಲದ ಕುಸುರಿಯೂ ಕಂಡುಬರುತ್ತಿತ್ತು. ಈ ವಸ್ತ್ರ ವಿಶೇಷ ಕಾರ್ಯಕ್ರಮಗಳಿಗೆ ತೊಡಲು ಅತ್ಯಂತ ಸೂಕ್ತವಾಗಿದ್ದು ನೆರೆದವರ ಗಮನ ನಿಮ್ಮ ಮೇಲೆ ಬೀಳಲು ಅತ್ಯಂತ ಸೂಕ್ತವಾಗಿದೆ.

ನೇರಳೆ ಬಣ್ಣದ ನಿಲುವಂಗಿ

ನೇರಳೆ ಬಣ್ಣದ ನಿಲುವಂಗಿ

ಅಪ್ಪಟ ನೇರಳೆ ಬಣ್ಣದ ನಿಲುವಂಗಿ ಧರಿಸಿ ಬರುತ್ತಿರುವ ಈ ರೂಪದರ್ಶಿಯನ್ನು ನೋಡಿದಾಕ್ಷಣ ಗರ್ಗ್ ರಿಗೆ ಹಳೆಯ ಕಾಲದ ನೀಳ ನಿಲುವಂಗಿಗಳ ಮೋಹವಿದೆಯೇ ಎಂಬ ಅನುಮಾನ ಮೂಡುವುದು ಸಹಜ. ಏಕೆಂದರೆ ಬಹುಕಾಲ ಫ್ಯಾಷನ್ ಲೋಕದಿಂದ ದೂರವಾಗಿದ್ದ ನಿಲುವಂಗಿಯ ಬಳಕೆ ಈಗ ಮತ್ತೊಮ್ಮೆ ಪ್ರಾರಂಭವಾಗುವ ಸ್ಪಷ್ಟ ಸೂಚನೆಯಾಗಿದೆ. ಈ ಉಡುಗೆ ನೀಳವಾಗಿದ್ದರೂ ಶರಾಯಿ ಮಾತ್ರ ಪಾದಕ್ಕಿಂತ ಕೊಂಚ ಮೇಲುಗಡೆಯಿರುವುದು ಮತ್ತು ಹೊಟ್ಟೆಯಭಾಗದಿಂದಲೇ ಪ್ರಾರಂಭವಾಗುವ ನೆರಿಗೆಗಳು ಮೊಣಕಾಲಿಗಿಂತಲೂ ಕೆಳಗೆ ವ್ಯಾಪಿಸಿದ್ದು ನಿಲುವಂಗಿಯ ಹೊರಭಾಗದಲ್ಲಿ ಬಿಳಿಯ ವೃತ್ತಾಕಾರದ ಪೋಲ್ಕಾ ಚುಕ್ಕೆಗಳು ಈ ಉಡುಗೆಗೆ ಹೆಚ್ಚಿನ ಮೆರುಗು ನೀಡುತ್ತವೆ. ಭುಜದಿಂದ ಎದೆಯವರೆಗೆ ಕೇವಲ ಕಪ್ಪುಬಣ್ಣದ ಬಟ್ಟೆಯನ್ನು ಬಳಸಿರುವುದು ಈ ಚುಕ್ಕೆಗಳೇ ಹೆಚ್ಚು ಆಕರ್ಷಣೀಯವಾಗುವಂತೆ ವಿನ್ಯಾಸಗೊಳಿಸಿದ ಗರ್ಗ್ ರ ಜಾಣ್ಮೆಗೆ ತಲೆದೂಗಲೇ ಬೇಕು.

ಗುಲಾಬಿ ಬಣ್ಣದ ಸರಳ ವಿನ್ಯಾಸದ ಉಡುಗೆ

ಗುಲಾಬಿ ಬಣ್ಣದ ಸರಳ ವಿನ್ಯಾಸದ ಉಡುಗೆ

ಒಂದು ಸರಳವಾದ ಉಡುಗೆ ಅದ್ಭುತವಾಗಿ ಕಾಣಬೇಕಾದರೆ ಏನು ಮಾಡಬೇಕು? ಗರ್ಗ್ ರವರ ಪ್ರಕಾರ ಅದೇ ಬಣ್ಣದ ದಾವಣಿಯಲ್ಲಿ ಕುಶಲದ ಕೆಲಸವಿರುವಂತೆ ನೋಡಿಕೊಳ್ಳಬೇಕು ಅಷ್ಟೇ. ಪ್ರಖರ ಗುಲಾಬಿ ಬಣ್ಣದ ಸರಳ ವಿನ್ಯಾಸದ ಉಡುಗೆ ತೊಟ್ಟ ಈ ರೂಪದರ್ಶಿಯ ದಾವಣಿಯೇ ಅತಿ ಹೆಚ್ಚಿನ ಆಕರ್ಷಣೆ ಪಡೆಯುತ್ತದೆ. ಮುಂಭಾಗದಲ್ಲಿ ವಸ್ತ್ರದ ಬಣ್ಣದ ಆದರೆ ಹಿಂಭಾಗದಲ್ಲಿ ಕೊಂಚವೇ ನಸುವಾಗಿರುವ ಬಣ್ಣದ ದಾವಣಿ ಇದ್ದರೆ ಇತರ ವಸ್ತುಗಳ ಕಡೆಗೆ ಗಮನ ಹರಿಯುವುದೇ ಇಲ್ಲ. ರೂಪದರ್ಶಿ ಧರಿಸಿರುವ ಅತಿ ಸಾದಾ ಕಪ್ಪು ಬಣ್ಣದ ಪಾದರಕ್ಷೆ ಮತ್ತು ವಿರಳವಾಗಿರುವ ಆಭರಣಗಳೇ ಇದಕ್ಕೆ ಸಾಕ್ಷಿ.

ಕಣ್ಮನ ಸೆಳೆದ ಸೀರೆಯ ಝಲಕ್

ಕಣ್ಮನ ಸೆಳೆದ ಸೀರೆಯ ಝಲಕ್

ಭಾರತೀಯ ನಾರಿಯರ ಅಚ್ಚುಮೆಚ್ಚಿನ ಸೀರೆಯನ್ನು ಎಷ್ಟು ತರಹ ಉಡಬಹುದು ಎಂಬುದಕ್ಕೆ ಇದುವರೆಗೆ ಸ್ಪಷ್ಟವಾದ ಉತ್ತರವಿಲ್ಲ. ಏಕೆಂದರೆ ಪ್ರತಿ ಬಾರಿಯೂ ಈ ಒಂಭತ್ತು ಗಜದ ವಸ್ತ್ರ ಗರ್ಗ್ ರ ವಿನ್ಯಾಸದಲ್ಲಿ ಹೊಸರೂಪವನ್ನು ಪಡೆಯುತ್ತಾ ಬರುತ್ತದೆ. ಇಂದು ಕೆಂಪು ಬಣ್ಣ ಧರಿಸಿ ಬಂದಿರುವ ಈ ರೂಪದರ್ಶಿಯ ರವಿಕೆಯನ್ನು ಗಮನಿಸಿ. ಸಾಮಾನ್ಯವಾಗಿ ಕೈಗಳು ಬಿಗಿಯಾಗಿರುವಂತೆ ಹೊಲಿಸುವ ಕುಪ್ಪುಸ ಇಲ್ಲಿ ದೊಗಲೆಯಾಗಿದೆ. ಸೆರಗು ಮತ್ತು ಅಂಚುಗಳಲ್ಲಿ ಅಪ್ಪಟ ಹಸಿರು ಬಣ್ಣದ ಪಟ್ಟಿಯನ್ನು ಒದಗಿಸಿರುವುದು ಗರ್ಗ್ ರ ಜಾಣ್ಮೆಗೆ ಹಿಡಿದ ಕೈಗನ್ನಡಿಯಾಗಿದೆ. ಕುತ್ತಿಗೆಯವರೆಗೂ ಇರುವ ರವಿಗೆ ವಿಶಿಷ್ಟ ಆಕರ್ಷಣೆ ನೀಡುತ್ತದೆ.

ರೂಪದರ್ಶಿಯ ಝಲಕ್

ರೂಪದರ್ಶಿಯ ಝಲಕ್

ಈ ರೂಪದರ್ಶಿಯನ್ನು ನೋಡುತ್ತಿದ್ದಂತೆ ಗಗನದಿಂದ ಬಿಸಿಗಾಳಿಯ ಬಲೂನೊಂದು ನಿಧಾನವಾಗಿ ಇಳಿಯಿತೇ ಎಂಬ ಅನುಮಾನ ಮೂಡುತ್ತಿದೆಯೇ? ನಿಮ್ಮ ಗಮನ ಸೆಳೆದ ಈ ಪೀಪಾಯಿಯಾಕಾರದ ವಸ್ತ್ರವನ್ನು ತೊಟ್ಟ ರೂಪದರ್ಶಿಯೂ ತನ್ನನ್ನು ಗಮನಿಸಿದರೆಂಬ ಹರ್ಷದಲ್ಲಿರಬಹುದು. ಏಕೆಂದರೆ ಮುಂಭಾಗದಲ್ಲಿ ಮೇಲಿನಿಂದ ಕೆಳಗಿನವರೆಗೆ ಒಂದೇ ಒಂದು ಅಗಲವಾದ ಮತ್ತು ಗುಲಾಬಿ ಬಣ್ಣದ ವಿರುದ್ಧ ಬಣ್ಣವಾದ ಗಾಢಹಸಿರು ಬಣ್ಣದ ಪಟ್ಟಿ ಪ್ರಮುಖವಾಗಿ ಗಮನ ಸೆಳೆಯುತ್ತದೆ. ಪೀಪಾಯಿಯಾಕಾರದಂತೆ ವಿನ್ಯಾಸಗೊಳಿಸಿದ ಗರ್ಗ್ ರ ತಂತ್ರ ಯಾವುದೇ ಗಾತ್ರದ, ವಿಶೇಷವಾಗಿ ಸ್ಥೂಲಕಾಯದ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಿರುವ ಈ ಉಡುಗೆ ಸರಳವಾಗಿದ್ದರೂ ಆಕರ್ಷಕವಾಗಿದೆ.

ರೂಪದರ್ಶಿಯ ಝಲಕ್

ರೂಪದರ್ಶಿಯ ಝಲಕ್

ಈ ರೂಪದರ್ಶಿಯನ್ನು ನೋಡುತ್ತಿದ್ದಂತೆಯೇ ಚಿಕ್ಕಂದಿನಲ್ಲಿ ಆಟವಾಡಿದ್ದ ಬೊಂಬೆಯೊಂದು ನಿಜರೂಪ ತಳೆದು ಆಕಾಶದಿಂದ ನೆಲಕ್ಕಿಳಿಯಿತೇ ಎಂಬ ಅನುಮಾನ ಮೂಡುವುದು ಸಹಜ. ಏಕೆಂದರೆ ಅತ್ಯಂತ ಆಕರ್ಷಕ ವೃತ್ತಾಕಾರದ ವಿನ್ಯಾಸಗಳಿರುವ ಲೆಹೆಂಗಾ ತೊಟ್ಟ ಈ ರೂಪದರ್ಶಿಯ ನಿಜವಾದ ಆಕರ್ಷಣೆ ಆಕೆಯ ದಾವಣಿಯಲ್ಲಿದೆ. ಅತಿ ಸಾದಾ ದಾವಣಿಯ ಅಂಚುಗಳಲ್ಲಿ ಅತಿ ಸೂಕ್ಷ್ಮವಾದ ಕುಸುರಿ ಕೆಲಸವನ್ನು ಮಾಡಲಾಗಿದ್ದು ಭಾರತದ ಹಳ್ಳಿಗಳಲ್ಲಿ ಇಂದಿಗೂ ಜೀವಂತವಾಗಿರುವ ಕಲೆಗೆ ಪ್ರೋತ್ಸಾಹ ನೀಡಿರುವುದನ್ನು ಪ್ರಚುರಪಡಿಸುತ್ತದೆ. ಲೆಹೆಂಗಾದ ಚಿನ್ನದ ಬಣ್ಣದ ವಿನ್ಯಾಸ ಇನ್ನೊಂದು ಆಕರ್ಷಣೆಯ ಕೇಂದ್ರವಾಗಿದೆ. ಯಾವುದೇ ಶುಭ ಸಮಾರಂಭದಲ್ಲಿ ತೊಡಬಹುದಾದ ಈ ವಸ್ತ್ರ ಗರ್ಗ್ ರವರ ಅತ್ಯುತ್ತಮ ವಿನ್ಯಾಸಗಳಲ್ಲೊಂದಾಗಿದೆ.

X
Desktop Bottom Promotion