Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಆಸ್ಕರ್ 2014: ಮನಗೆಲ್ಲದ ಸೆಲೆಬ್ರಿಟಿಗಳ ಧಿರಿಸುಗಳು!
ಆಸ್ಕರ್ ರೆಡ್ ಕಾರ್ಪೆಟ್ ತುಂಬಾ ಮನಮೋಹಕ. ಚೆನ್ನಾಗಿ ಡ್ರೆಸ್ ಮಾಡಿ ಮನಸೂರೆಗೊಂಡ ಸೆಲೆಬ್ರಿಟಿಗಳು ಸಾಕಷ್ಟಿದ್ದರೂ ಕಾರ್ಯಕ್ರಮದ ಅಂದವನ್ನು ಕೆಡಿಸುವಂತೆ ಕೆಟ್ಟದಾಗಿ ಡ್ರೆಸ್ ಮಾಡಿಕೊಂಡವರೂ ಪಟ್ಟಿಯಲ್ಲಿದ್ದಾರೆ. ಈ ಲೇಖನ ಕೆಟ್ಟದಾಗಿ ಡ್ರೆಸ್ ಮಾಡಿಕೊಂಡವರ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದೆ. ಇಲ್ಲಿ ಕೆಟ್ಟದಾಗಿ ಡ್ರೆಸ್ ಮಡಿಕೊಂಡವರೆಂದರೆ ಅಷ್ಟೊಂದು ಅಂದಗಾಣಿಸದ ಉಡುಗೆಗಳು ಎಂದರ್ಥ.
ಇಲ್ಲಿ ನಟಿಯರು ತಮ್ಮ ಸ್ಟೈಲ್ ಸೆನ್ಸ್ ಅನ್ನು ಅಷ್ಟೊಂದು ಪ್ರದರ್ಶಿಸಿಲ್ಲ. ಒಟ್ಟಾರೆ ಡ್ರೆಸ್ ಮಾಡಿಕೊಂಡು ಕಾರ್ಯಕ್ರಮದ ಅಂದವನ್ನು ಕೆಡಿಸಿದ್ದಾರೆ ಎಂಬುದಂತೂ ನಿಜ. ಕೆಲವರ ಗೌನ್‌ಗಳು ನಿಜವಾಗಿಯೂ ಬೋರ್ ಉಂಟುಮಾಡುವಂತಿತ್ತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಸ್ಕರ್ 2014: ಸೆಕ್ಸಿಯಾಗಿ ಕಂಡುಬಂದ ಸೆಲೆಬ್ರಿಟಿಗಳು

ಲಿಝಾ ಮಿನ್ನೇಲಿ
ನಟನೆಯ ದಂತಕಥೆ ಲಿಝಾ ಅತ್ಯಂತ ಕೆಟ್ಟದಾಗಿ ಡ್ರೆಸ್ ಮಾಡಿಕೊಂಡು ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದ್ದರು. ಆಭರಣಗಳೂ ಕೂಡ ಅವರ ಉಡುಗೆಗೆ ತಾಳೆಯಾಗುತ್ತಿಲ್ಲ.

ಐರ್‌ಲ್ಯಾಂಡ್ ಬಾಲ್ಡ್‌ವಿನ್
ಐರ್‌ಲ್ಯಾಂಡ್ ಈ ಬಾರಿಯ ಆಸ್ಕರ್ ಕಾರ್ಯಕ್ರಮದಲ್ಲಿ ಅಷ್ಟೇನೂ ಮನಸೂರೆಗೊಳ್ಳುವಂತೆ ಡ್ರೆಸ್ ಮಾಡಿಕೊಂಡಿಲ್ಲ. ನಮ್ಮ ಕೆಟ್ಟದಾಗಿ ಡ್ರೆಸ್ ಮಾಡಿಕೊಂಡ ಸೆಲೆಬ್ರಿಟಿಗಳಲ್ಲಿ ಇವರೂ ಒಬ್ಬರು.

ಇಡಿನಾ ಮೆಂಜೆಲ್
ಇಡಿನಾ ಮೆಂಜಲ್ ಗೌನ್ ಕೆಳಭಾಗದಲ್ಲಿ ಮಿಶ್ರ ವಿನ್ಯಾಸವನ್ನು ಒಳಗೊಂಡಿದ್ದು ಗೌನ್‌ನ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗಿದೆ.

ಜೆನ್ನಿಫರ್ ಗಾರ್ನರ್
ಜೆನ್ನಿಫರ್ ಗಾರ್ನರ್ ಡ್ರೆಸ್ ಸೆನ್ಸ್ ತುಂಬಾ ಬೋರಿಂಗ್ ಆಗಿದೆ. ಆಸ್ಕರ್ ರಾತ್ರಿಗೆ ಈ ರೀತಿಯ ಉಡುಗೆ ಅಷ್ಟೊಂದು ಮನಮೋಹಕವಾಗಿಲ್ಲ.

ಸಾಲ್ಲಿ ಹಾಕಿನ್ಸ್
ಸಾಲ್ಲಿ ನೈಜ ಸುಂದರಿಯಾಗಿದ್ದರೂ ಆಸ್ಕರ್ ಕಾರ್ಯಕ್ರಮ ಈ ಧಿರಿಸು ಅವರ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿದೆ.

ಜಾಡಾ ಪಿಂಕೆಟ್ ಸ್ಮಿತ್
ಪೇಸ್ಟೆಲ್ ಪೀಷ್ ಕಲರ್‌ನ ಜಾಡಾ ಪಿಂಕೆಟ್ ಸ್ಮಿತ್ ಧಿರಿಸು ತುಂಬಾ ಬೋರಿಂಗ್ ಆಗಿದ್ದು ಕಣ್ಸೆಳೆಯುವಂತಿಲ್ಲ.

ಕೆಮಿಲಾ ಅಲ್ವ್ಸ್
ಫುಲ್ ಸ್ಲೀವ್ ಲುಕ್‌ನಲ್ಲಿ ಕೆಮಿಲಾ ಅಷ್ಟೊಂದು ಚೆನ್ನಾಗಿ ಕಾಣುತ್ತಿಲ್ಲ. ಈ ಪೇಸ್ಟೆಲ್ ಪಿಂಕ್ ಗೌನ್ ಭುಜದಲ್ಲಿನ ಹಾಫ್ ಕೇಪ್ ಇರದಿದ್ದರೆ ಸುಂದರವಾಗಿ ಕಾಣುತ್ತಿತ್ತೋ ಏನೋ..

ಜೇರ್ಡ್ ಲಿಟೋ
ಜೇರ್ಡ್ ಹೇರ್‌ಸ್ಟೈಲ್ ತುಂಬಾ ರಫ್ ಆಗಿದ್ದು ಆಸ್ಕರ್ ಕಾರ್ಯಕ್ರಮಕ್ಕೆ ಸರಿಕಾಣುತ್ತಿಲ್ಲ.

ಗೋಲ್ಡಿ ಹಾನ್
ಗೋಲ್ಡನ್ ಸಿಲ್ಕ್ ಡ್ರೆಸ್‌ನಲ್ಲಿ ಸ್ವಲ್ಪ ಯುವತಿಯಾಗಿ ಗೋಲ್ಡಿ ಕಾಣುತ್ತಿದ್ದಾರೆ. ಗೌನ್‌ನ ಸ್ಟ್ರೇಪಿ ಸ್ಲೀವ್ಸ್ ಅಷ್ಟೊಂದು ಸುಂದರವಾಗಿಲ್ಲ.



Click it and Unblock the Notifications
