Latest Updates
-
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು
ಕಿತ್ತಳೆ ಬಣ್ಣದ ದಿರಿಸಿನಲ್ಲಿ ಕಣ್ಮನ ಸೆಳೆದ ಕರಿಶ್ಮಾ ಕಪೂರ್
ಹಿಂದಿನ ದಿನಗಳಲ್ಲಿ ಎಲ್ಲಾ ಬಾಲಿವುಡ್ ತಾರೆಯರು ಕಪ್ಪುಬಣ್ಣಕ್ಕೆ ಮನಸೋತಿದ್ದು ನೆನಪಿದೆಯೇ? ಎಲ್ಲರೂ ಕಪ್ಪುಬಣ್ಣದ ಉಡುಪುಗಳನ್ನೇ ತೊಟ್ಟು ಬರುತ್ತಿದ್ದರು. ಆದರೆ ಇಂದು ಈ ವಿದ್ಯಮಾನಕ್ಕೆ ಕೊಂಚ ವಿರಾಮ ದೊರಕಿದೆ. ಈಗ ಪ್ರಖರ ಬಣ್ಣಗಳಿಗೆ ಮರುಜೀವ ಬಂದಿದೆ. ಹೆಚ್ಚಿನ ತಾರೆಯರೆಲ್ಲಾ ವಿವಿಧ ಪ್ರಖರ ಬಣ್ಣಗಳ ಉಡುಪುಗಳನ್ನು ತೊಡುತ್ತಿದ್ದಾರೆ. ಅದರಲ್ಲೂ ಕಿತ್ತಳೆ ಅಥವಾ ಕೇಸರಿ ಬಣ್ಣಕ್ಕೆ ಹೆಚ್ಚಿನ ಆದ್ಯತೆ!. ಏಕೆಂದರೆ ಈ ಪ್ರಖರ ಬಣ್ಣ ಥಟ್ಟನೇ ಎಲ್ಲರ ಗಮನ ಸೆಳೆಯುತ್ತಿದೆ.
ಈ ಚಳಿಗಾಲದ ಸಮಯದಲ್ಲಿ ಕೇಸರಿಯ ಪ್ರಖರತೆ ಮತ್ತು ಕಣ್ಣಿಗೆ ತಂಪು ನೀಡುವ ಗುಣವನ್ನು ಎಲ್ಲರೂ ಬಯಸುತ್ತಿದ್ದಾರೆ. ಇದರೊಂದಿಗೆ ಸ್ವಲ್ಪ ಲೋಹಗಳ ಬಣ್ಣಗಳ ನೆರವಿದ್ದರಂತೂ ಆ ಉಡುಗೆ ಅತ್ಯಾಕರ್ಷಕವಾಗುತ್ತದೆ. ಇಂತಹ ಅತಿರಂಜಿತ ಉಡುಗೆಯನ್ನು ತೊಟ್ಟು ಮಿಂಚಿದ ತಾರೆ ಯಾರು ಗೊತ್ತೇ? ಅವರೇ ಕೆಲವರ್ಷಗಳ ಹಿಂದೆ ಬಾಲಿವುಡ್ ನಲ್ಲಿ ನಂ 1 ತಾರೆಯಾಗಿದ್ದ ಕರಿಶ್ಮಾ ಕಪೂರ್.

ಪ್ರಖರ ಕಿತ್ತಳೆ ಬಣ್ಣದ ಅನಾರ್ಕಲಿ ಉಡುಗೆ ತೊಟ್ಟು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಸಲು ಆಗಮಿಸಿದಾಕ್ಷಣ ಎಲ್ಲರ ಗಮನ ಅತ್ತ ಸೆಳೆಯಿತು. ಈ ಸಂದರ್ಭದಲ್ಲಿ ಸಾವಿರಾರು ಜನರು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದುದು ಅವರ ಪ್ರವೇಶವಾದ ತಕ್ಷಣ ವಾತಾವರಣ ಸ್ಥಬ್ಧವಾಯಿತು. ಶೃತಿ ಸೇಠ್ ರವರು ವಿನ್ಯಾಸಗೊಳಿಸಿದ ಈ ಉಡುಪು ಆ ಕ್ಷಣದ ಗಮನಕ್ಕೆ ಸಾಕ್ಷಿಯಾಯಿತು. ಸಾಂಪ್ರಾದಾಯಿಕ ಅನಾರ್ಕಲಿ ಉಡುಗೆಯಲ್ಲಿ ಎದೆಯ ಭಾಗದಲ್ಲಿ ಹೆಬ್ಬಾಗಿಲಿನ ಮಾದರಿಯಲ್ಲಿ ಕುಸುರಿ ಮಾಡಲಾದ ಸೂಕ್ಷ್ಮ ಕೆಲಸ ಪ್ರಮುಖವಾದ ಆಕರ್ಷಣೆಯಾಗಿದೆ. ಹೊಳೆಯುವ ಮೇಲುಡುಗೆಯಲ್ಲಿ ಕಣ್ಮನ ಸೆಳೆದ ರೂಪವತಿ ಶಿಲ್ಪಾ
ಕರಿಶ್ಮಾರವರ ಮೈಮಾಟಕ್ಕೆ ಅತ್ಯಂತ ಸೂಕ್ತವಾಗಿ ಒಪ್ಪುವ ಈ ಉಡುಗೆಯ ಜೊತೆ ಅವರು ಧರಿಸಿದ್ದ ಕ್ಯೂರಿಯೋ ಕಾಟೇಜ್ ನವರ ಆಭರಣಗಳು ಇನ್ನಷ್ಟು ಮೆರುಗು ನೀಡಿತ್ತು. ಇದರ ಜೊತೆ ಅವರು ಕೈಯಲ್ಲಿ ಹಿಡಿದಿದ್ದ ಮಿನೆರಾಲಿ ಮಹಿಳೆಯರ ಕ್ಲಚ್ ಬ್ಯಾಗ್ ಸಹಾ ಈ ಉಡುಗೆಗೆ ಪೂರಕವಾಗಿತ್ತು. ಈ ಕಾರ್ಯಕ್ರಮ ರಾತ್ರಿಯಲ್ಲಿ ಸಂಭವಿಸಿದ ಕಾರಣ ಅವರು ತಮ್ಮ ಮುಖದ ಮೇಕಪ್ ಕೊಂಚ ಪ್ರಖರ ಬಣ್ಣಗಳಿಂದ ಮಾಡಿಕೊಂಡಿದ್ದರು.
ಅವರು ಧರಿಸಿದ್ದ ದೊಡ್ಡ ವೃತ್ತಾಕಾರದ ಕಿವಿಯೋಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಅವರು ತಮ್ಮ ತಲೆಗೂದಲನ್ನು ತುರುಬು ಕಟ್ಟಿಕೊಂಡಿದ್ದು ಎದ್ದು ಕಾಣುತ್ತಿದ್ದು ಅವರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿತ್ತು. ಕಾಲಿಗೆ ತೊಟ್ಟಿದ್ದ ಹೊಂಬಣ್ಣದ ಪಾದರಕ್ಷೆಗಳು ಈ ಉಡುಪಿನೊಂದಿಗೆ ಹೊಂದುವಂತಿದ್ದು ಕಾರ್ಯಕ್ರಮದಲ್ಲಿ ತಮ್ಮ ಇರುವಿಕೆಯಿಂದ ಕಾರ್ಯಕ್ರಮದ ಸೊಗಸನ್ನು ಇನ್ನಷ್ಟು ಹೆಚ್ಚಿಸಿದರು.



Click it and Unblock the Notifications
