Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಗೌರವ್ ಗುಪ್ತಾ ವಿನ್ಯಾಸದ ಉಡುಗೆಗೆ ಹೆಜ್ಜೆ ಹಾಕಿದ ಶ್ರದ್ಧಾ
ಪ್ರತಿಯೊಬ್ಬ ಬಾಲಿವುಡ್ ಬೆಡಗಿಯ ಹೆಚ್ಚು ಮೆಚ್ಚಿನ ಫ್ಯಾಶನ್ ಡಿಸೈನರ್ ಎಂದೇ ಗೌರವ್ ಗುಪ್ತಾರನ್ನು ಗುರುತಿಸಲಾಗಿದೆ. ಐಸಿಡಬ್ಲ್ಯೂನ ನಾಲ್ಕನೇ ದಿನದಂದು, ಹೆಚ್ಚು ಪ್ರತಿಭಾವಂತ ಮತ್ತು ನಟನಾ ಸಮಾರ್ಥ್ಯವುಳ್ಳ ಬಾಲಿವುಡ್‌ನ ಬೆಡಗಿಯೊಬ್ಬರನ್ನು ತನ್ನ ವಸ್ತ್ರಗಳ ಶೋಸ್ಟಾಪರ್ ಆಗಿ ಗೌರವ್ ಗುಪ್ತಾ ಆರಿಸಿದ್ದಾರೆ. ಆಕೆ ಮತ್ತಾರು ಅಲ್ಲ ಗೌರವ್ ಗುಪ್ತಾ ವಿನ್ಯಾಸದ ನಿಲುವಂಗಿಗೆ ಹೆಜ್ಜೆ ಹಾಕಿದ ರಾಂಪ್ ಮೇಲೆ ಅತ್ಯಾಕರ್ಷಕವಾಗಿ ಪ್ರದರ್ಶನ ತೋರಿದ ಶ್ರದ್ಧಾ ಕಪೂರ್ ಆಗಿದ್ದಾರೆ.
ಐಸಿಡಬ್ಲ್ಯೂ 2014: ರೋಹಿತ್ ಬಾಲಾ ಅವರ ಮನಸೆಳೆಯುವ ಸಂಗ್ರಹ

ಗೌರವ್ ಗುಪ್ತಾ ಸಂಗ್ರಹದ ಥೀಮ್ 'ವಿಕ್ ಆಫ್ NYX' ಎಂದಾಗಿತ್ತು. ಗೌರವ್ ಗುಪ್ತಾರ ಪ್ರತಿಯೊಂದು ಉಡುಗೆಯು ಕೂಡ ಮನಸ್ಸನ್ನು ಕದಿಯುವಂತಿದ್ದು ಅತ್ಯಂತ ಮನಮೋಹಕವಾಗಿತ್ತು. ತಮ್ಮ ಸಂಗ್ರಹದಲ್ಲಿ ಈ ವಿನ್ಯಾಸಕಾರರು ಅತ್ಯಾಕರ್ಷಕ ಜಾಕೆಟ್‌ಗಳು, ಸೀರೆಗಳು, ಗೌನ್‌ಗಳು ಸಿಲಾಪ್ಸೋ ಲೆಹೆಂಗಾ ಹೀಗೆ ಒಂದು ಒಂದೇ ವಿನ್ಯಾಸವನ್ನು ಪ್ರದರ್ಶಿಸಿದರು. ಅವರ ಪ್ರತಿಯೊಂದು ವಿನ್ಯಾಸವೂ ಅತ್ಯಂತ ಸೊಗಸಾಗಿತ್ತು ಮತ್ತು ಮನಸೆಳೆಯುವಂತಿತ್ತು.
ಶ್ರದ್ಧಾ ಕಪೂರ್ ಐಸಿಡಬ್ಲ್ಯೂ 2014 ರಲ್ಲಿ ಗೌರವ್ ಗುಪ್ತಾ ಶೋಸ್ಟಾಪರ್ ಆಗಿ ಕಂಡುಬಂದಿದ್ದಾರೆ. ರಾಜಕುಮಾರಿಯಂತೆ ನಿಲುವಂಗಿಯನ್ನು ಧರಿಸಿ, ಹೆಚ್ಚು ಆಕರ್ಷಕ ಮತ್ತು ಮನಸೆಳೆಯುವ ರೀತಿಯಲ್ಲಿ ಅವರು ರಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ರಾಂಪ್‌ನಲ್ಲಿದ್ದ ಆಕರ್ಷಕ ಬೆಳಕಿನ ಪ್ರಹಾರಕ್ಕೆ ಇನ್ನಷ್ಟು ಹೊಳೆಯುತ್ತಿರುವ ನಿಲುವಂಗಿಯನ್ನು ಧರಿಸಿ ಶ್ರದ್ಧಾ ಅಪ್ಸರೆಯೇ ಭೂಮಿಗೆ ಬಂದಂತೆ ಕಂಡುಬರುತ್ತಿದ್ದರು.
ಐಸಿಡಬ್ಲ್ಯೂ 2014:ಮನೀಶ್ ಅರೋರಾ ವಸ್ತ್ರ ವಿನ್ಯಾಸದ ಮೋಡಿ
ತಮ್ಮ ಸುಂದರ ವಿನ್ಯಾಸ ಮತ್ತು ಮನಮೋಹಕಗೊಳಿಸುವ ವಸ್ತ್ರ ಸಂಗ್ರಹದಿಂದ ನೆರೆದವರ ಮನವನ್ನು ಕದ್ದಿರುವ ಗೌರವ್ ಗುಪ್ತಾ ಐಸಿಡಬ್ಲ್ಯೂ 2014 ರಲ್ಲಿ ಮಿಂಚಿನ ಸಂಚಾರವನ್ನೇ ಉಂಟುಮಾಡಿದ್ದಾರೆ. ಅವರ ರೆಡ್ ಕಾರ್ಪೆಟ್ ಗೌನ್‌ಗಳು ಅತ್ಯಂತ ಅಮೂಲಾಗ್ರವಾಗಿದ್ದವು. ಗೌನ್‌ನಲ್ಲಿದ ಕಟ್‌ಗಳು ಮತ್ತು ವಿನ್ಯಾಸಗಳು ಒಂದಕ್ಕಿಂತ ಉತ್ತಮವಾಗಿದ್ದವು. ಇತರ ವಿನ್ಯಾಸಗಾರರಿಗೆ ಹೋಲಿಸಿದಾಗ ಗೌರವ್ ಗುಪ್ತಾರ ವಿನ್ಯಾಸಗಳಲ್ಲಿ ಪರಿಪೂರ್ಣತೆಯನ್ನು ನಮಗೆ ಗಮನಿಸಬಹುದಾಗಿದೆ.
ಐಸಿಡಬ್ಲ್ಯೂ 2014ರಲ್ಲಿ, ವಿವಿಧ ಬಣ್ಣಗಳಿಂದ ಕೂಡಿದ ವಸ್ತ್ರಗಳನ್ನು ಕೂಡ ಅವರು ಪ್ರದರ್ಶಿಸಿದ್ದಾರೆ. ನೀಲಿ, ಕೆಂಪು, ಬಿಳಿ ಮತ್ತು ಚಿನ್ನದ ಲೇಪನವಿರುವ ಇತರ ಉಡುಗೆಗಳೂ ಕೂಡ ಮನವನ್ನು ಕದ್ದಂತೆ ಇದ್ದವು. ಶ್ರದ್ಧಾ ಕಪೂರ್ ಧರಿಸಿದ್ದ ಉಡುಗೆ ಕೂಡ ಆರ್ಷಕವಾಗಿದ್ದು ಗೌರವ್ ಗುಪ್ತಾ ಪ್ರತಿಭೆಗ ಹಿಡಿದ ಕೈಗನ್ನಡಿಯಾಗಿದೆ.



Click it and Unblock the Notifications