Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕಣ್ಣುಕುಕ್ಕಿದ ಗೌರಿ ನೈನಿಕಾರ ಮೋನೋಕ್ರೋಮ್ ಬ್ರೈಡಲ್ ಸಂಗ್ರಹಣೆ
ಬಿಎಮ್‌ಡಬ್ಲ್ಯೂ ಭಾರತದ ವಧುವಿನ ಫ್ಯಾಶನ್ ವಾರ ಎಂದೇ ಕರೆಯಲ್ಪಡುವ ಇಂಡಿಯಾ ಬ್ರೈಡಲ್ ಫ್ಯಾಶನ್ ವೀಕ್ ಸಂಭ್ರಮದಿಂದ ಆರಂಭಗೊಂಡಿದೆ. ಮೊದಲನೇ ದಿನ ಖ್ಯಾತ ವಿನ್ಯಾಸಕಾರರಾದ ತರುಣ್ ತಹಿಲಾನಿ ಮತ್ತು ಗೌರಿ ನೈನಿಕಾ ತಾವು ವಿನ್ಯಾಸ ಮಾಡಿರುವ ಉಡುಗೆಗಳನ್ನು ಪ್ರದರ್ಶಿಸಿದ್ದಾರೆ. ವಧುವಿನ ಫ್ಯಾಶನ್ ಪ್ರದರ್ಶನ ಆಗಿರುವ, ಚಿನ್ನ, ಬೆಳ್ಳಿ ಮತ್ತು ಇನ್ನೂ ಹೆಚ್ಚಿನ ವಧುವಿನ ಬಣ್ಣಗಳುಳ್ಳ ಉಡುಗೆಗಳನ್ನು ಕಣ್ಣಿಗೆ ಹಬ್ಬವನ್ನುಂಟು ಮಾಡಿದವು.
ಆದರೆ ಈ ಬಾರಿ ಗೌರಿ ಹಾಗೂ ನೈನಿಕಾ ನಮ್ಮನ್ನು ನಿಬ್ಬೆರಗಾಗಿಸುವಂತೆ ಬೋಲ್ಡ್ ಬಣ್ಣಗಳನ್ನು ವಿನ್ಯಾಸ ಪಡಿಸಿದ ಉಡುಗೆಗಳಲ್ಲಿ ಪ್ರದರ್ಶಿಸಿದ್ದಾರೆ. ಇವರ ವಿನ್ಯಾಸ ಉಡುಗೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುವುದರ ಜೊತೆಗೆ ನಮಗೆ ಅಸದಳವಾದ ವಧುವಿನ ಸಿಂಗಾರ ಲೋಕವನ್ನೇ ನಿರ್ಮಾಣ ಮಾಡಿಕೊಟ್ಟಿತ್ತು ಎಂದೇ ಹೇಳಬಹುದಾಗಿದೆ. ಇವರ ವಿನ್ಯಾಸದ ಇನ್ನಷ್ಟು ವೈವಿಧ್ಯಮಯ ಸಂಗ್ರಹಣೆಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನೀಡಲಾಗಿದ್ದು ಇತ್ತ ನೋಟಹರಿಸಿ.
ಇಂಡಿಯಾ ಬ್ರೈಡಲ್ ಫ್ಯಾಷನ್ ಶೋದ ಝಲಕ್

ಎಲ್‌ಬಿಡಿಗಳಿಲ್ಲ
ಎಲ್‌ಬಿಡಿ ಈಗ ಹಳೆಯ ಫ್ಯಾಶನ್ ಆಗಿ ಉಳಿದುಬಿಟ್ಟಿದೆ. ಈ ಕಪ್ಪು ಬಣ್ಣದ ಆಕರ್ಷಕ ಉಡುಗೆ ಮೋಡಿ ಮಾಡಿದ್ದಂತೂ ಸುಳ್ಳಲ್ಲ ಎಂಬುದು ನಮ್ಮ ನಂಬಿಕೆಯಾಗಿದೆ.

ಬೋಲ್ಡ್ ಬಣ್ಣಗಳು
ಈ ರೂಪದರ್ಶಿ ಧರಿಸಿರುವ ಉಡುಗೆ ನಿಜಕ್ಕೂ ಅತ್ಯದ್ಭುತವಾಗಿದೆ. ದಿರಿಸಿನಲ್ಲಿರುವ ಕಪ್ಪು ಬೆಲ್ಟ್ ಮತ್ತು ದಿರಿಸಿನ ಕೈಗಳ ಆಕಾರ ನಮಗೆ ತುಂಬಾ ಇಷ್ಟವಾಗಿದೆ.

ಸಪೂರ ದೇಹದವರಿಗೆ
ಕೇವಲ ಸಪೂರ ದೇಹದ ಮತ್ತು ಧೈರ್ಯಶಾಲಿ ವಧುಗಳು ಇಂತಹ ದಿರಿಸಿನಲ್ಲಿ ಕಂಡುಬರಬಹುದು. ಈ ಟ್ಯೂಬ್ ಬಿಕಿನಿ ಟಾಪ್ ಮತ್ತು ಬಿಳಿ ಲೆಹೆಂಗಾ ನಿಜಕ್ಕೂ ಹಲವಾರ ಕಣ್ಣನ್ನು ಕುಕ್ಕಿದೆ.

ಕೆಂಪು ಗೌನ್
ಈ ವಧುವಿನ ದಿರಿಸಿನಲ್ಲಿ ಹಲವಾರು ಮಾದರಿಯ ಪದರಗಳನ್ನು ನಮಗೆ ಕಾಣಬಹುದಾಗಿದ್ದು ಗೌರಿ ಅವರು ನಿಜಕ್ಕೂ ಅದ್ಭುತ ವಿನ್ಯಾಸಕಾರರಾಗಿದ್ದಾರೆ.

ಥೀಮ್‌ನೊಂದಿಗೆ ಹೆಜ್ಜೆ ಹಾಕಿದಾಗ
ಐಬಿಎಫ್‌ಡಬ್ಲ್ಯೂನಲ್ಲಿ ಗೌರಿ ಹಾಗೂ ನೈನಿಕಾರ ಸಂಗ್ರಹಣೆ ನಿಜಕ್ಕೂ ಮನಸೆಳೆಯುವಂತಿದ್ದು ಕೆಂಪು, ಬಿಳಿ ಮತ್ತು ಕಪ್ಪು ಬಣ್ಣವನ್ನು ಅವರು ಹೆಚ್ಚಾಗಿ ಬಳಸಿದ್ದಾರೆ.

ಉದ್ದನೆಯ ಕಪ್ಪು ಗೌನ್
ಉದ್ದನೆಯ ಕಪ್ಪು ಗೌನ್ ನಿಜಕ್ಕೂ ಐಬಿಎಫ್‌ಡಬ್ಲ್ಯೂನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ ಎಂದೇ ಹೇಳಬಹುದು.

ಶ್ವೇತ ನೋಟ
ಈ ವಧುವಿನ ಉಡುಗೆ ಅತ್ಯಂತ ಆಕರ್ಷಕವಾಗಿದ್ದು ಒಂದು ರೀತಿಯ ಸುಂದರತೆಯನ್ನು ಮೂಡಿಸಿದೆ. ಐಬಿಎಫ್‌ಡಬ್ಲ್ಯೂನಲ್ಲಿ ಈ ನಿಲುವಂಗಿ ನಿಜಕ್ಕೂ ನೆರೆದವರ ಮನವನ್ನು ಕದಿಯಿತು.



Click it and Unblock the Notifications
