Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
25 ವರ್ಷ ವಯಸ್ಸಿನ ಯುವಕರು ಮಾಡುವ 15 ಮುಜುಗರಗೊಳಿಸುವ ಸಂಗತಿಗಳು
ನಿಮ್ಮ ಓದು ಬರಹ ಮುಗಿದಿರುವ ಸಮಯಕ್ಕೆ ನಿಮಗೆ 25 ವರ್ಷಗಳಾಗಿರುತ್ತದೆ ಮತ್ತು ಕೆಲಸ ಮಾಡುತ್ತಿಲ್ಲವಾದಲ್ಲಿ ಕೆಲಸ ಹುಡುಕುತ್ತಿರುತ್ತೀರಿ. ನಿಮ್ಮ ಮುಂದಿನ ಜೀವನ ಚಕ್ರದಲ್ಲಿ ಬರಬಹುದಾದ ನಿರ್ಧಾರಗಳಲ್ಲಿ ಮದುವೆಯ ಬಗ್ಗೆಯೂ ಪರಿಗಣಿಸುತ್ತೀರಿ. ಆದರೆ ನಿಮ್ಮ ಸ್ನೇಹಿತರ ಜೊತೆ ಇನ್ನೂ ಒಂದಿಷ್ಟು ಮೋಜಿನ ಸಮಯ ಕಳೆಯಲೂ ಯೋಚಿಸುತಿರುತ್ತೀರಿ.
ಮಹಿಳೆಯರಿಗೆ 25 ವರ್ಷವಾಯಿತೆಂದರೆ ಅವರು ಪರಿಪಕ್ವತೆ ಹೊಂದಿರುವವರಾದರೆ ಪುರುಷರಿಗೆ ಹಾಗೆ ಆಗುವುದು ಅಗತ್ಯವಾಗಿರಬೇಕಿಲ್ಲ. ಅನೇಕ ಪುರುಷರು ಈ ವಯಸ್ಸಿನಲ್ಲಿ ಯಾವುದೇ ಕಲ್ಪನೆಯಿಲ್ಲದೆ ಮುಂದಿನ ಜೀವನದ ಯಾವ ಗುರಿಯೂ ಇಲ್ಲದೆ ಓಡಾಡಿಕೊಂಡು ಸಮಯ ಕಳೆಯುತ್ತಾರೆ.
ಬಹುಪಾಲಿನ ಪುರುಷರಿಗೆ ಇದು ಅನ್ವಯಿಸಿದ್ದರೂ, ಕೆಲವು ಪುರುಷರು ಈ ವಯಸ್ಸಿನಲ್ಲಿಯೇ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಅವರಿಗೆ ಮೋಜಿಗೆ ಸಮಯವೇ ಇರುವುದಿಲ್ಲ. ಮಹಿಳೆಯರು ಈ ವಯಸ್ಸಿಗೆ ಸಾಕಷ್ಟು ಪರಿಪಕ್ವವಾಗಿದ್ದು ತಾಯಿಯಾಗುವುದಕ್ಕೆ ಹಾಗೂ ಮಗುವನ್ನು ಬೆಳೆಸುವ ಪ್ರಮುಖ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ತಯಾರಾಗಿರುತ್ತಾರೆ.
25 ವರ್ಷ ವಯಸ್ಸಾದರೆ ಬೇಕಾದಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಅವುಗಳಲ್ಲಿ ನಾವು ಅತಿ ಮುಖ್ಯವಾದ 15 ಮುಜುಗರವಾಗುವ ಕಾರ್ಯಗಳನ್ನು ಇಲ್ಲಿ ಕೊಟ್ಟಿದ್ದೇವೆ.
ಹುಡುಗರೇ ಮಹಿಳೆಯರಿಗಿಂತ ಬೀರ್ ಬೊಂಬಾಟ್ ಗೊತ್ತೇನ್ರಿ?

ತಲೆಕೆಳಗಾಗಿ ನಿಲ್ಲುವುದು
ಸಾರ್ವಜನಿಕ ಸ್ಥಳದಲ್ಲಿ ಪ್ರೇಕ್ಷಕರು ವೀಕ್ಷಿಸುವಂತೆ ಏನೂ ಕಾರಣವಿಲ್ಲದೆ ತಲೆಕೆಳಗಾಗಿ ನಿಲ್ಲುವುದು ನಿಜಕ್ಕೂ ಅತ್ಯಂತ ಮುಜುಗರದ ಕೆಲಸ.

ಅಪಸ್ವರದಲ್ಲಿ ಹಾಡುವುದು
ಸಾಮಾನ್ಯವಾಗಿ ಎಲ್ಲರೂ ಹಾಡುತ್ತಾರೆ. ಆದರೆ ಸರಿಯಾಗೆ ಹಾಡಲು ಬರದೇ ಸಾರ್ವಜನಿಕರ ಮುಂದೆ ಅಪಸ್ವರದಲ್ಲಿ ಹಾಡುವುದಂತೂ ಅತ್ಯಂತ ಮುಜುಗರದ ಕೆಲಸ.

ಮನೆಯ ಮೇಲಿನ ಮೇಲ್ಚಾವಣಿ ಮೇಲೆ ಮೋಜು ಮಾಡುವುದು
ನಾವು ಮಾಡುವ ಅನೇಕ ಕಾರ್ಯಗಳಲ್ಲಿ, 25 ವರ್ಷ ವಯಸ್ಸಾದನಂತರ ಮನೆಯ ಮೇಲ್ಚಾವಣಿಯ ಮೇಲೆ ಸ್ನೇಹಿತರೊಡಗೂಡಿ ಮೋಜು ಮಾಡುವುದು ಬಹಳ ಮುಜುಗರವಾಗುವಂತಹ ಒಂದು ಘಟನೆ.

ಸಾರ್ವಜನಿಕ ಸ್ಥಳದಲ್ಲಿ ತೇಗುವುದು
ಸಾರ್ವಜನಿಕ ಸ್ಥಳದಲ್ಲಿ ಮಾಡುವ ಅತ್ಯಂತ ಮುಜುಗರದ ನಡೆವಳಿಕೆಯೆಂದರೆ ಇತರರಿಗೆ ಕೇಳಿಸುವ ಹಾಗೆ ತೇಗಿ ಎಲ್ಲರೂ ನಿಮ್ಮನ್ನು ನೋಡುತ್ತಿರುವಂತೆಯೇ ಹೋಗಿಬಿಡುವುದು.

ಮದ್ಯ ಕುಡಿತ
25 ವರ್ಷ ವಯಸ್ಸಾದ ಮೇಲೆ ಮದ್ಯಪಾನಮಾಡುವುದು ಅನೇಕ ವಿಷಯಗಳಲ್ಲಿ ಒಂದಾದರೆ, ಸಾರ್ವಜನಿಕ ಸ್ಥಳದಲ್ಲಿ ಹೆಚ್ಚಾಗಿ ಕುಡಿದು ನಿಮ್ಮ ಪಾನಮತ್ತವರ್ತನೆ ನಿಮಗೇ ಮುಜುಗರಕ್ಕೀಡುಮಾಡುವ ಹಾಗೆ ಕಾಣುವುದು.

ವಿಚಿತ್ರವಾಗಿ ಡ್ರೆಸ್ ಮಾಡಿಕೊಳ್ಳುವುದು
25 ವಷವಾದ ನಂತರವೂ ಮತ್ತೆ 17 ವರ್ಷವಾದಂತಿರಬೇಕೆಂದು ಪ್ರಯತ್ನಿಸುತ್ತೀರಾ? ನೀವು ಕೆಲಸ ಮಾಡುವ ಆಫೀಸಿಗೆ ಅಥವಾ ಆಫೀಸ್ ಪಾರ್ಟಿಗೆ ವಿಚಿತ್ರವಾಗಿಯೋ, ವಿಲಕ್ಷಣವಾಗಿಯೋ ಪೋಷಾಕನ್ನು ಧರಿಸಿ ಹೋದರೆ ಅದು ನಿಮ್ಮ ಅತ್ಯಂತ ಮುಜುಗರದ ವರ್ತನೆಯಾಗುವುದು.

ಟೇಬಲ್ ಮ್ಯಾನರ್ಸ್
ನಿಮ್ಮ ಸ್ನೇಹಿತರ ಜೊತೆ ಊಟಮಾಡುತ್ತಿರುವ ಸಮಯದಲ್ಲಿ ನೀವು ಮಗುವಾಗಿದ್ದಾಗ ಇಷ್ಟ ಪಟ್ಟಿದ್ದ ಆಹಾರವನ್ನೇ ಬೇಕೆಂದು ಬಯಸಿದರೆ ಸಂಪೂರ್ಣವಾಗಿ ಮುಜುಗರವಾಗುತ್ತದೆ.

ನಿಮ್ಮ ವರ್ತನೆಗಳು
ನೀವು ಏನಾದರೂ ಗಳಿಸಿದ್ದಲ್ಲಿ ಆ ಸಂತೋಷವನ್ನು ವ್ಯಕ್ತಪಡಿಸಲು ಆಫೀಸಿನಲ್ಲಿ ನಿಮ್ಮ ಸೊಂಟವನ್ನು ಅಲ್ಲಾಡಿಸಿಕೊಂಡು ಕುಣಿದು ಡ್ಯಾನ್ಸ್ ಮಾಡಿದರೆ ಅದು ಅತ್ಯಂತ ಮುಜುಗರದ ಸಾರ್ವಜನಿಕ ಸ್ಥಳದ ವರ್ತನೆಯಾಗುತ್ತದೆ.

ಶೌಚಾಲಯಗಳಲ್ಲಿ ಹಾಡುವುದು
ಸಾರ್ವಜನಿಕ ಶೌಚಾಲಯಗಳಲ್ಲಿ ವಿಶೇಷವಾಗಿ ಒಂದು ಗುಂಪು ಪ್ರೇಕ್ಷಕರು ಇದ್ದಾಗ ಜೋರಾಗಿ ಹಾಡುತ್ತಿದ್ದರೆ ಅದು ಇನ್ನೊಂದು ಮುಜುಗರದ ವರ್ತನೆಯಾಗುತ್ತದೆ.

ಹತಾಶೆಯ ವರ್ತನೆ
ಕೆಲವು ಪುರುಷರು ಹತಾಶರಾಗಿದ್ದಾಗ ಅಪಕ್ವದ ವರ್ತನೆಗೊಳ್ಳುತ್ತಾರೆ. ಆ ಸಮಯದಲ್ಲಿ ಅವರು ಶಾಂತತೆಯಿಂದ ಯೋಚಿಸುವುದಿಲ್ಲ ಮತ್ತು ಲಿಪ್ಟ್ ಒಳಗೆ ಹೋದರೆ ಎಲ್ಲಾ ಬಟನ್‌ಗಳನ್ನು ಒತ್ತಿಬಿಡುತ್ತಾರೆ. ಇಂತಹ ವರ್ತನೆ ಕೂಡ ಮುಜುಗರ ಬರಿಸವಂತಹುದು.

ಚೂಯಿಂಗ್ ಗಮ್
25 ವರ್ಷ ವಯಸ್ಸಾದರೆ ಚೂಯಿಂಗ್ ಗಮ್ಮನ್ನು ಅಗಿಯುತ್ತಿರುವುದು ಅನೇಕ ವರ್ತನೆಗಳಲ್ಲೊಂದು. ಚೂಯಿಂಗ್ ಗಮ್ ಅಗಿಯುವುದು ಸಾಮಾನ್ಯವಾಗಿದ್ದರೂ ಸಹ ಸಾರ್ವಜನಿಕವಾಗಿ ಬಾಯಿಯಿಂದ ಗಮ್ಮನ್ನು ಪದೇಪದೇ ತೆಗೆದು ಹಾಕಿಕೊಳ್ಳುವುದು ಅತ್ಯಂತ ಮುಜುಗರದ ವರ್ತನೆ.

ಕುಡಿಯುವಾಗ ಶಭ್ದಮಾಡುವುದು
ನೀವು ನಿಮ್ಮ ನೆಚ್ಚಿನ ಪಾನೀಯವನ್ನು ರೆಸ್ಟೋರೆಂಟಿನಲ್ಲಿ ಸವಿಯುತ್ತಿದ್ದಾಗ ಸಾರ್ವಜನಿಕರ ಮಧ್ಯೆ ಶಬ್ಧ ಮಾಡಿ ಸವೆಯುವುದು ಮತ್ತೊಂದು ಅತ್ಯಂತ ಮುಜುಗರದ ವರ್ತನೆ.

ತರುಣರು ಉಪಯೋಗಿಸುವ ಭಾಷೆ(Slang)
ನಿಮ್ಮ ಆಫೀಸ್ ವಾತಾವರಣದಲ್ಲಿ ನಿಮ್ಮ ಕೆಲವು ತಾರುಣ್ಯಕ್ಕೆ ಸಂಭಂದಿಸಿದ ಭಾಷೆಯನ್ನು, - ಉದಾಹರಣೆಗೆ: 'ಯೋ ಮ್ಯಾನ್', 'ವಾಸ್ ಅಪ್ ಡ್ಯೂಡ್', ಇತ್ಯಾದಿ - ಜೋರಾಗಿ ಬಳಸಿದರೆ ಅತ್ಯಂತ ಮುಜುಗರದ ವಾತವರಣ ಕಲ್ಪಿಸಿದಂತಾಗುವುದು.

ಫೋನ್ ಬಳಸುವ ವರ್ತನೆ
ನೀವು ಫೋನ್ ಬಳಸುವ ವರ್ತನೆ, ಏನೋ ನಿರೀಕ್ಷಣೆಯಲ್ಲಿರುವಂತೆಯೋ ಅಥವಾ ನಿಮ್ಮ ಪ್ರೇಯಸಿಯ ಕರೆಗಾಗಿಯೋ ಆಗಾಗ್ಗೆ ಪ್ರತಿ ನಿಮಿಷಕ್ಕೂ ಫೋನ್ ಪರೀಕ್ಷಿಸುವುದು ಒಂದು ಅತ್ಯಂತ ಮುಜುಗರದ ಸಂಗತಿಯೇ ಸರಿ.

ವಾದಿಸುವುದು
ಸಾರ್ವಜನಿಕ ಸ್ಥಳಗಳಲ್ಲಿ ಅರ್ಥವಾಗದ ಮಾತುಗಳನ್ನಾಡುವುದು ಮತ್ತು ವಾದ ಮಾಡುವುದು ಮಗುವಿನ ಹಾಗೆ ನಂಬಲು ಅರ್ಹರಲ್ಲದವರಂತೆ ವರ್ತನೆ ಮಾಡುವುದು ನಿಮಗೇ ಇವೆಲ್ಲ ಮುಜುಗರದ ನಡೆವಳಿಕೆಯಂತಿರುತ್ತದೆ.



Click it and Unblock the Notifications