Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಚಿರತೆಯನ್ನೇ ಹೆದರಿಸಿ ಓಡಿಸಿದ ಮಂಗಗಳು: ವೀಡಿಯೋ ಆಯ್ತು ವೈರಲ್
ಚಿರತೆಯನ್ನು ನೋಡಿದರೆ ಸಾಕು ಉಳಿದ ಚಿಕ್ಕ ಪ್ರಾಣಿಗಳು ಅದರಿಂದ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗುತ್ತವೆ, ಚಿರತೆ ಗುರಿಯಿಂದ ತಪ್ಪಿಸಿಕೊಳ್ಳುವುದು ಕಷ್ಟ ಎಂಬುವುದು ಕಾಡಿನಲ್ಲಿರುವ ಪ್ರಾಣಿಗಳಿಗೆ ಗೊತ್ತಿರುತ್ತದೆ, ಆದ್ದರಿಂದ ಚಿರತೆ ಕಂಡರೆ ಪ್ರಾಣಿಗಳು ಚೆಲ್ಲಾಪಿಲ್ಲಿಗಳಾಗಿ ಓಡಲಾರಂಭಿಸುತ್ತದೆ, ಆದರೆ ಕಾಡಿನ ಪ್ರಾಣಿಗಳು ಎಲ್ಲಾ ಸಂದರ್ಭದಲ್ಲಿಯೂ ಈ ರೀತಿ ವರ್ತಿಸುತ್ತದೆ ಎಂದು ಹೇಳಲಾಗುವುದಿಲ್ಲ ಎಂಬುವುದಕ್ಕೆ ಈ ವೀಡಿಯೋನೇ ಸಾಕ್ಷಿ.

ಈ ವೀಡಿಯೋವನ್ನು ದಕ್ಷಿಣ ಆಫ್ರಿಕಾದಲ್ಲಿ ತೆಗೆದಿದ್ದು ಎಂದು ಹೇಳಲಾಗುತ್ತಿದೆ, ಇದೀಗ ಈ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಬಬೂನ್ಸ್ ಅಂದರೆ ದಕ್ಷಿಣ ಆಫ್ರಿಕದಲ್ಲಿ ಕಂಡು ಬರುವ ದೊಡ್ಡ ಜಾತಿಯ ಮಂಗಗಳು, ಈ ಬಬೂನ್ಸ್ ಬಲಿಷ್ಠವಾದ ಚಿರತೆಯನ್ನು ಕಚ್ಚಿ ಓಡಿಸುತ್ತಿರುವ ದೃಶ್ಯ ಇದಾಗಿದೆ.
ಒಗ್ಗಟ್ಟಿನಲ್ಲಿ ಬಲವಿದೆ
ತಮ್ಮ ಶತ್ರು ಎಷ್ಟೋ ಬಲಿಷ್ಠನಾಗಿರಲಿ ನಾವೆಲ್ಲಾ ಒಟ್ಟಾಗಿ ನಿಂತರೆ ಸೋಲಿಸುವುದು ಸುಲಭ ಎಂಬುವುದಕ್ಕೆ ಈ ವೀಡಿಯೋ ಒಂದು ಉದಾಹರಣೆ, ಈ ಕಾರಣಕ್ಕೆ ಇರಬಹುದು ನೆಟ್ಟಿಗರಿಗೆ ಈ ವೀಡಿಯೋ ತುಂಬಾನೇ ಇಷ್ಟವಾಗಿದ್ದು ವೀಡಿಯೋ ವೈರಲ್ ಆಗುತ್ತಿದೆ.
ಬಬೂನ್ಸ್ ಗುಂಪುವೊಂದು ತಮ್ಮ ಪಾಡಿಗೆ ತಾವು ರಸ್ತೆ ಮಧ್ಯದಲ್ಲಿ ಆಟ ಆಡುತ್ತಿತ್ತು, ಆ ರಸ್ತೆಯಲ್ಲಿ ಗಾಡಿಗಳು ಓಡಾಡುತ್ತಿದ್ದೆವು, ಇವುಗಳು ತಮ್ಮ ಪಾಡಿಗೆ ತಾವು ಇದ್ದೆವು, ಆಗ ಇದ್ದಕ್ಕಿದ್ದಂತೆ ಚಿರತೆಯೊಂದು ಆ ಮಂಗಗಳ ಮೇಲೆ ದಾಳಿ ಮಾಡುತ್ತದೆ, ಪ್ರಾಣ ಭಯದಿಂದ ಆ ಮಂಗಳು ಓಡಲು ಪ್ರಾರಂಭಿಸುತ್ತವೆ, ಆವಾಗ ಅವಕ್ಕೆ ನಾವು ಒಟ್ಟಾಗಿ ನಿಂತರೆ ಗೆಲ್ಲಬಹುದು ಎಂದನಿಸಿರಬಹುದು, ಕೂಡಲೇ ಎಲ್ಲಾ ಸೇರಿ ಚಿರತೆ ವಿರುದ್ಧ ಮುಗಿ ಬೀಳುತ್ತವೆ.
ಪಾಪ! ಆ ಚಿರತೆಗೆ ತನ್ನ ಮೇಲೆ ಈ ರೀತಿ ದಾಳಿ ಆಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ, ಇವುಗಳು ನನ್ನನ್ನು ಸುಮ್ಮನೆ ಬಿಡಲ್ಲ ಎಂದರಿತ ಚಿರತೆ ತನ್ನ ಪ್ರಾಣ ಉಳಿಸಲು ಅಲ್ಲಿಂದ ಓಡುತ್ತಿರುವ ದೃಶ್ಯ ತುಂಬಾನೇ ವಿಚಿತ್ರ ಅನಿಸಿದೆ ಇರಲ್ಲ.
ಈ ವೀಡಿಯೋ ನೋಡಿ ತಮ್ಮ ಬದುಕಿನ ಜೊತೆ ಹೋಲಿಕೆ ಮಾಡುತ್ತಿದ್ದಾರೆ ಕೆಲವರು
ಸಮಸ್ಯೆ ಅಂತ ಹೆದರಿ ಓಡುವ ಬದಲಿಗೆ ದಿಟ್ಟವಾಗಿ ಎದುರಿಸಿದರೆ ಸಮಸ್ಯೆಯನ್ನು ಸುಲಭವಾಗಿ ಜಯಿಸಬಹುದು ಎಂಬ ಸ್ಪೂರ್ತಿ ತುಂಬುವಂತಿದೆ ಈ ವೀಡಿಯೋ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಮಾತೇ ಇದೆ, ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದು ಎಂಬ ಮಾತಿದೆ, ಅದು ನಿಜ ಕೂಡ ಅಲ್ಲವೇ?



Click it and Unblock the Notifications
