Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಈ ಶ್ರಾವಣದ ಕೊನೆಯ ಮಂಗಳ ಗೌರಿ ವ್ರತ: ವಿವಾಹ ತಡವಾಗುತ್ತಿದ್ದರೆ ಗೌರಿಯನ್ನು ಈ ರೀತಿ ಆರಾಧಿಸಿ
ಶ್ರಾವಣ ಮಾಸದ ಮಂಗಳಗೌರಿ ವ್ರತಕ್ಕೆ ತುಂಬಾನೇ ಮಹತ್ವವಿದೆ. ವಿವಾಹಿತ ಮಹಿಳೆಯರು, ಅವಾಹಿತ ಮಹಿಳೆಯರು ಬಹಳ ಶ್ರದ್ಧೆಯಿಂದ ಮಂಗಳ ಗೌರಿ ವ್ರತವನ್ನು ಮಾಡುತ್ತಾರೆ. ಮದುವೆಯಾದ 5 ವರ್ಷದೊಳಗೆ ಮಹಿಳೆಯರು ಮಂಗಳಗೌರಿ ವ್ರತವನ್ನು ಮಾಡಿದರೆ ಮದುವೆಯಾಗದ ಹುಡುಗಿಯರು ಒಳ್ಳೆಯ ಪುರುಷ ಸಿಗಲಿ ಎಂದು ಬಯಸಿ ಈ ಮಂಗಳಗೌರಿ ವ್ರತವನ್ನು ಮಾಡಲಾಗುವುದು.
ಸೆಪ್ಟೆಂಬರ್ 12ಕ್ಕೆ ಈ ವರ್ಷದ ಶ್ರಾವಣ ಮಾಸದ ಕೊನೆಯ ಮಂಗಳಗೌರಿ ವ್ರತವನ್ನು ಆಚರಿಸಲಾಗುವುದು. ವಿವಾಹ ಭಾಗ್ಯಕ್ಕಾಗಿ ಮಂಗಳಗೌರಿ ವ್ರತದಂದು ಹೆಣ್ಮಕ್ಕಳು ಈ ರೀತಿ ಮಾಡಿದರೆ ಶಿವ--ಪಾರ್ವತಿ ಕೃಪೆಯಿಂದಾಗಿ ಕಂಕಣ ಭಾಗ್ಯ ದೊರೆಯುವುದು ಎಂದು ಹೇಳಲಾಗುವುದು:

* ಮಂಗಳ ಗೌರಿ ವ್ರತದಂದು ಉಪವಾಸ ಮಾಡಿ: ಮಂಗಳಗೌರಿ ವ್ರತದಂದು ಉಪವಾಸ ಮಾಡಿ. ಈ ರೀತಿ ಉಪವಾಸವಿದ್ದು ವ್ರತ ಮಾಡುವುದರಿಂದ ಸೌಭಾಗ್ಯ ಹೆಚ್ಚಾಗುವುದು.
* ಈ ದಿನ ಕೆಂಪು ವಸ್ತ್ರ ಧರಿಸಿ ಪೂಜೆ ಮಾಡಿ: ಈ ದಿನ ಕೆಂಪು ವಸ್ತ್ರ ಧರಿಸಿ ನೀವು ಗೌರಿಯನ್ನು ಆರಾಧಿಸಿ. ಪಾರ್ವತಿಯನ್ನು ನೀವು ಶ್ರದ್ಧೆ-ಭಕ್ತಿಯಿಂದ ಆರಾಧಿಸಿ.
* ದೇವಿಗೆ ತುಪ್ಪದ ದೀಪವನ್ನು ಹಚ್ಚಿ: ಹಿಟ್ಟಿನಿಂದ ಮಾಡಿದ ದೀಪಕ್ಕೆ 16 ಬತ್ತಿ ಹಾಕಿ ದೀಪ ಹಚ್ಚಿ.
ಷೋಡಶೋಪಚಾರ ಪೂಜೆ ಮಾಡಿ
ಪೂಜೆಗೆ ಬೇಕಾಗುವ ಸಾಮಗ್ರಿ: ಶುದ್ಧ ನೀರು, ಗಂಗಾಜಲ, ಧೂಪ, ದೀಪ, ಸಿಂಧೂರ, ಕುಂಕುಮ, ಚಂದನ, ಮಣೆ, ಯಜ್ಞೋಪವೀತ, ವಸ್ತ್ರ, ಅಕ್ಷತೆ, ಧಾನ್ಯಗಳು, ಕರ್ಪೂರ, ತುಪ್ಪ, ಮೊಸರು, ಸಕ್ಕರೆ, ಹೂವುಗಳು, ವೀಳ್ಯದೆಲೆಗಳು, ವೀಳ್ಯದೆಲೆ, ಸುಗಂಧ ದ್ರವ್ಯ ಇತ್ಯಾದಿಗಳನ್ನು ಭಕ್ತಿಯಿಂದ ಅರ್ಪಿಸಿ.
ಇನ್ನು ಪ್ರೀತಿಸಿ ಮದುವೆಯಾಗ ಬಯಸುವವರು ಈ ರೀತಿ ಮಾಡಿ
* ಮೊದಲಿಗೆ ನೀವು ಒಂದು ಕಡೆ ಕೂತು ಮನಸ್ಸನ್ನು ಧ್ಯಾನದ ಕಡೆಗೆ ಗಮನಹರಿಸಿ
* ನಂತರ ಓಂ ಹನ್ ಗನ್ ಜೂನ್ ವಶ್ಯ ವಶ್ಯ ಸ್ವಾಹಾ । ಈ ಮಂತ್ರ ಪಠಿಸಿ
* ಈ ಮಂತ್ರವನ್ನು ಪಠಣೆ ಮಾಡುವಾಗ ನೀವು ಪ್ರೀತಿಸುತ್ತಿರುವ ವ್ಯಕ್ತಿಯ ಫೋಟೋವನ್ನು ಇರಿಸಿ ಮಂತ್ರ ಪಠಿಸಿ.
* ಈ ಮಂತ್ರವನ್ನು ಹೇಳಲು ಪ್ರಾರಂಭಿಸಿದರೆ 21 ದಿನ ಪ್ರತಿದಿನ 108 ಬಾರಿ ಪಠಿಸಬೇಕು.
ಹೀಗೆ ಪೂಜಿಸಿದರೆ ನೀವು ಇಷ್ಟಪಡುವವರನ್ನು ಶೀಘ್ರದಲ್ಲಿಯೇ ಮದುವೆಯಾಗಬಹುದು.
ಮಂಗಳ ದೋಷವಿದ್ದರೆ
* ಸೋಮವಾರ ಉಪವಾಸವಿದ್ದು ಶಿವನನ್ನು ಆರಾಧಿಸಿ
* ಮಂಗಳವಾರ ಉಪವಾಸವಿದ್ದು ಮಂಗಳಗೌರಿಯನ್ನು ಆರಾಧಿಸಿ
* ಮಂಗಳವಾರ ಶಿವ-ಪಾರ್ವತಿಯನ್ನು ಆರಾಧಿಸಿ
* ಶಿವ ಮಂತ್ರ ಪಠಿಸುತ್ತಾ ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ.
ಕೆಲವರಿಗೆ ಮಂಗಳ ದೋಷವಿರುತ್ತದೆ, ಮಂಗಳ ದೋಷವಿದ್ದರೆ ವಿವಾಹ ತಡವಾಗುವುದು ಅಥವಾ ವಿವಾಹವಾದರೂ ಅನೇಕ ಸಮಸ್ಯೆಗಳು ಬರುವುದು ಎಂದು ಹೇಳಲಾಗುವುದು. ಮಂಗಳದೋಷವಿರುವವರು ಮಂಗಳ ಗೌರಿ ವ್ರತದಂದು ಈ ಪರಿಹಾರ ಮಾಡಿ
* ಮಂಗಳ ಗೌರಿಗೆ ಪೂಜೆ ಸಲ್ಲಿಸಿದ ಬಳಿದ ಬಡವರಿಗೆ ಕೆಂಪು ಬಟ್ಟೆಗಳನ್ನು ದಾನ ಮಾಡಿ. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಮಂಗಳನ ಸ್ಥಾನವು ಬಲಗೊಳ್ಳುತ್ತದೆ.
* ಮಂಗಳವಾರದಂದು ರಾಮಚರಿತಮಾನಸದ ಸುಂದರಕಾಂಡವನ್ನು ಪಠಿಸಿ. ಹೀಗೆ ಮಾಡುವುದರಿಂದ ನೀವು ಹನುಮಂತನ ಆಶೀರ್ವಾದವನ್ನು ಪಡೆಯುತ್ತೀರಿ, ಹಾಗೂ ಜಾತಕದಲ್ಲಿನ ಮಂಗಳ ದೋಷ ದೂರಾಗುವುದು.
* "ಓಂ ಗೌರಿ ಶಂಕರಾಯ ನಮಃ" ಪಠಿಸಿ. ಇದರಿಂದ ಮಾತೆ ಮಂಗಳ ಗೌರಿಯ ಆಶೀರ್ವಾದ ದೊರೆಯುತ್ತದೆ, ಮದುವೆಗೆ ಇರುವ ಅಡೆತಡೆಗಳು ದೂರಾಗಲಿದೆ.



Click it and Unblock the Notifications