Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ಕಾರ್ಮಿಕರ ದಿನ: ಪ್ರತಿಯೊಬ್ಬ ಉದ್ಯೋಗಿ ತಮ್ಮ ಈ ಹಕ್ಕುಗಳ ಬಗ್ಗೆ ತಿಳಿದಿರಲೇಬೇಕು
ಮೇ. 1ನ್ನು ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುವುದು. ಕಾರ್ಮಿಕರ ಶ್ರಮವನ್ನು ಗೌರವಿಸಲು ಹಾಗೂ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ನಮ್ಮಲ್ಲಿ ಸ್ವಂತ ವ್ಯವಹಾರ ಅಥವಾ ಉದ್ಯೋಗವನ್ನು ಮಾಡುತ್ತಿರುವವರು ಕೆಲವೇ ಕೆಲವು ಮಂದಿಯಷ್ಟೇ ಇರುತ್ತಾರೆ.
ಬಹುತೇಕರು ಯಾವುದೋ ಕಂಪನಿಗಳಲ್ಲಿ ಕಾರ್ಮಿಕರಾಗು ದುಡಿಯುತ್ತಿರುತ್ತೇವೆ.ಯಾವುದೇ ಚಿಕ್ಕ ಹುದ್ದೆಯಲ್ಲಿ ಇರುವವರಾಗಲಿ ಅಥವಾ ದೊಡ್ಡ ಹುದ್ದೆಯಲ್ಲಿ ಇರುವವರಾಗಲಿ ಒಂದ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುವಾಗ ಅಲ್ಲಿಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಆದರೆ ನಮ್ಮ ಹಕ್ಕುಗಳ ಬಗ್ಗೆ ಗೊತ್ತಿದ್ದರೆ ಕಂಪನಿಯಲ್ಲಿ ಉದ್ಯೋಗಿಗಳಿಗೆ ವಿರುದ್ಧವಾದ ನಿಯಮಗಳನ್ನು ಪಾಲಿಸುತ್ತಿದ್ದರೆ ಧ್ವನಿ ಎತ್ತಬಹುದು ಅಥವಾ ನಿಮ್ಮ ಹಕ್ಕುಗಳಿಗಾಗಿ ಹೋರಾಡಬಹುದು. ಆದ್ದರಿಂದ ಪ್ರತಿಯೊಂದು ಉದ್ಯೋಗಿ ಈ ಸಾಮಾನ್ಯ ಹಕ್ಕುಗಳನ್ನು ತಿಳಿದಿರುವುದು ಒಳ್ಳೆಯದು:
ಕೆಲಸವನ್ನು ಬಿಡುವ ಹಕ್ಕು: ಭಾರತದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿ ಈ ಹಕ್ಕನ್ನು ಹೊಂದಿರುತ್ತಾರೆ. ಕಂಪನಿಯು ಉದ್ಯೋಗಿಗಳಿಗೆ ಕೆಲಸ ಬಿಡುವಂತೆ ಒತ್ತಾಯ ಹಾಕಿದರೆ ನೋಟೀಸ್ ಪಿರೀಡ್ ನೀಡಬೇಕಾಗುತ್ತದೆ. ಒಂದು ವೇಳೆ ಉದ್ಯೋಗಿಯನ್ನು ಯಾವುದೇ ಕಾರಣ ನೀಡದೆ ತೆಗೆದು ಹಾಕಿದರೆ ಉದ್ಯೋಗಿ ಕಂಪನಿಯ ವಿರುದ್ಧ ಕಾನೂನು ಹೋರಾಟ ನಡೆಸುವ ಹಕ್ಕು ಹೊಂದಿರುತ್ತಾರೆ. ಈ ಮೂಲಕ ತಮಗಾದ ನಷ್ಟವನ್ನು ಸರಿದೂಗಿಸುವ ಹಕ್ಕನ್ನು ಬಾರತೀಯ ಸಂವಿಧಾನ ನೀಡಿದೆ.
ಟರ್ಮಿನೇಷನ್ ವಿಧಗಳು
ಉದ್ಯೋಗಿ ಸ್ವಇಚ್ಛೆಯಿಂದ ಕೆಲಸ ಬಿಡುವುದು
ಉದ್ಯೊಗಿ ವೈಯಕ್ತಿಕ ಕಾರಣಗಳಿಂದ ಅಥವಾ ಇತರ ಕಡೆ ಉದ್ಯೋಗ ಸಿಕ್ಕಾಗ ಕಂಪನಿಯನ್ನು ತೊರೆಯುವ ನಿರ್ಧಾರ ಮಾಡುತ್ತಾರೆ. ಉದ್ಯೋಗಿ ಈ ರೀತಿ ನಿರ್ಧಾರ ಮಾಡಿದಾಗ ಒಂದು ತಿಂಗಳ ನೋಟೀಸ್ ಮಾಡಿ ಬಿಡುವಂತೆ ಸೂಚಿಸುವ ಹಕ್ಕನ್ನು ಹೊಂದಿದೆ.
ಉದ್ಯೋಗ ಕಡಿತ
ಕೆಲವೊಮ್ಮೆ ಕಂಪನಿ ಉದ್ಯೋಗ ಕಡಿತ ಅಥವಾ ತಮ್ಮ ಕಂಪನಿಯಲ್ಲಿ ಕಡಿಮೆ ಉದ್ಯೋಗಿಗಳೊಂದಿಗೆ ತಮ್ಮ ಗುರಿ ಮುಟ್ಟಲು ಪ್ರಯತ್ನಿಸಿ ತುಂಬಾ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬಹುದು. ಆದರೆ ಉದ್ಯೋಗಿಯನ್ನು ಹೀಗೆ ಕೆಲಸದಿಂದ ತೆಗೆಯುವಾಗ ಏಕಾಏಕಿ ತೆಗೆಯುವಂತಿಲ್ಲ, ಏಕೆ ತೆಗೆಯುತ್ತಿದ್ದೇವೆ ಎಂಬ ಕಾರಣ ನೀಡಿ ತೆಗೆಯಬೇಕಾಗುತ್ತದೆ.
ತುರ್ತಾಗಿ ಉದ್ಯೋಗಿಯನ್ನು ಟರ್ಮಿನೇಷನ್ ಮಾಡುವುದು
ಉದ್ಯೋಗಿ ನಡತೆ ಸರಿಯಿಲ್ಲದಿದ್ದರೆ ಅಂದರೆ ಉದ್ಯೋಗಿ ನಡತೆಯಿಂದಾಗಿ ಕಂಪನಿಯ ಗೌರವಕ್ಕೆ ಚ್ಯತಿ ಬರುವಂತಿದ್ದರೆ ಅಂಥ ಉದ್ಯೋಗಿಯನ್ನು ಕಂಪನಿ ತಕ್ಷಣವೇ ತೆಗೆದುಹಾಕುವ ಹಕ್ಕನ್ನು ಹೊಂದಿರುತ್ತದೆ.
ಉದ್ಯೋಗಿಯನ್ನು ಕೆಲಸದಿಂದ ತೆಗೆಯುವುದರ ಬಗ್ಗೆ ಕರ್ನಾಟಕದ ರಾಜ್ಯ ಕಾರ್ಮಿಕ ಕಾನೂನು ಏನು ಹೇಳುತ್ತದೆ?
ಕರ್ನಾಟಕದ 1961ರ ಶಾಪ್ಸ್ ಅಂಡ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆ ಮತ್ತು 1947ರ ತಮಿಳುನಾಡು ಶಾಪ್ಸ್ ಅಂಡ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆ ಪ್ರಕಾರ ಒಂದು ಉದ್ಯೋಗಿ ಕಂಪನಿಯಲ್ಲಿ 6 ತಿಂಗಳಿಗಿಂತ ಅಧಿಕ ಸಮಯ ಕೆಲಸ ಮಾಡಿದರೆ ಇದ್ದಕ್ಕಿದ್ದಂಯೆ ಕೆಲಸದಿಂದ ವಜಾ ಮಾಡುವಂತಿಲ್ಲ, ಕೆಲಸದಿಂದ ವಜಾ ಮಾಡುವುದಾದರೆ ಸೂಕ್ತ ಕಾರಣಗಳನ್ನು ನೀಡಿ ತೆಗೆಯಬೇಕಾಗುತ್ತದೆ.
2. ಮಾತನಾಡುವ ಹಕ್ಕು
ಪ್ರತಿಯೊಬ್ಬ ಉದ್ಯೋಗಿ ತಮ್ಮ ಹಕ್ಕುಗಳ ಉಲ್ಲಂಘನೆಯಾದಾಗ ಈ ಕುರಿತು ಧ್ವನಿ ಎತ್ತುವ ಹಕ್ಕನ್ನು ಹೊಂದಿದೆ. ಪ್ರತಿಯೊಬ್ಬ ಉದ್ಯೋಗಿ ತಾರತಮ್ಯ, ಹಿಂಸೆ ಅನುಭವಿಸುತ್ತಿದ್ದರೆ ಅದರ ವಿರುದ್ಧ ಧ್ವನಿಯೆತ್ತುವ ಹಕ್ಕನ್ನು ಹೊಂದಿದೆ.
ವೈದ್ಯಕೀಯ ಚಿಕಿತ್ಸೆ ಪಡೆಯುವ ಹಕ್ಕು
ಪ್ರತಿಯೊಬ್ಬ ಉದ್ಯೋಗಿ ಏನಾದರೂ ಗಾಯವಾದರೆ ಅಥವಾ ಅನಾರೋಗ್ಯ ಉಂಟಾದರೆ ಕೆಲಸಕ್ಕೆ ರಜೆ ಹಾಕಿ ಚಿಕಿತ್ಸೆ ಪಡೆಯುವ ಹಕ್ಕನ್ನು ಹೊಂದಿದ್ದಾರೆ.
ತಾವು ಎಷ್ಟು ಗಂಟೆ ಕೆಲಸ ಮಾಡಿದ್ದೇವೆ ಅದಕ್ಕೆ ತಕ್ಕ ಹಣವನ್ನು ಪಡೆಯುವ ಹಕ್ಕು
ಉದ್ಯೋಗಿ ತಾನು ಎಷ್ಟು ಗಂಟೆ ಕೆಲಸ ಮಾಡಿದ್ದೇನೋ ಅದಕ್ಕೆ ತಕ್ಕಷ್ಟು ಸಂಬಳ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ರಜಾ ದಿನಗಳಲ್ಲಿ ಅಥವಾ ಕೆಲಸದ ಸಮಯ ಮೀರಿ ಅಧಿಕ ಹೊತ್ತು ಕೆಲಸ ಮಾಡಿದರೆ ಅದಕ್ಕೆ ತಕ್ಕ ಸಂಬಳ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.



Click it and Unblock the Notifications