Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಕಾರ್ಮಿಕರ ದಿನ: ಕಾರ್ಮಿಕರ ದಿನ ಹುಟ್ಟಿಕೊಂಡಿದ್ದೇಕೆ.? ಬಲಿದಾನದ ದಿನದ ಬಗ್ಗೆ ಗೊತ್ತಾ?
ಪ್ರತಿ ವರ್ಷ ಮೇ ಮೊದಲ ದಿನವನ್ನು ಮೇ ದಿನ ಅಥವಾ ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತೆ. ಕಾರ್ಮಿಕ ವರ್ಗದ ಸಾಧನೆಗಳನ್ನು ಗೌರವಿಸುವ ಸಲುವಾಗಿರುವ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ, ಮೇ 1ರ ಬುಧವಾರ ಮೇ ದಿನವನ್ನು ಆಚರಿಸಲಾಗುವುದು.
ಮೇ ದಿನ ಅಥವಾ ಕಾರ್ಮಿಕರ ದಿನವನ್ನು ಬಾಂಗ್ಲಾದೇಶ, ಕ್ಯೂಬಾ, ಭಾರತ, ಜರ್ಮನಿ, ಚೀನಾ ಮುಂತಾದ ಅನೇಕ ದೇಶಗಳಲ್ಲಿ ಸಾರ್ವಜನಿಕ ರಜಾದಿನವೆಂದು ಆಚರಿಸಲಾಗುತ್ತದೆ.

ಕಾರ್ಮಿಕರಿಗೆ ಅವರ ಹಕ್ಕುಗಳನ್ನು ನೆನಪಿಸಲು ಮತ್ತು ಸಮಾಜಕ್ಕೆ ಅವರ ಕೊಡುಗೆಗಳಿಗಾಗಿ ಅವರು ಅರ್ಹವಾದ ಮನ್ನಣೆಯನ್ನು ನೀಡಲು ಈ ದಿನವನ್ನು ಆಚರಿಸಲಾಗುತ್ತದೆ. ಇಂದು ಕಾರ್ಮಿಕರ ದಿನ ಏಕೆ ಆಚರಿಸುತ್ತಾರೆ? ಅದರ ಮಹತ್ವವೇನು ಎಂಬುದರ ಕುರಿತು ನಾವು ತಿಳಿದುಕೊಳ್ಳೋಣ.
ಕಾರ್ಮಿಕರ ದಿನಾಚರಣೆ ಹುಟ್ಟುಕೊಂಡಿದ್ದು ಹೇಗೆ?
ಕಾರ್ಮಿಕರ ದಿನದ ಆಚರಣೆ ಯಾವಾಗ ಆರಂಭಗೊಂಡಿತು ಎಂದು ಹುಡುಕುತ್ತಾ ಹೋದರೆ ಅದು 19ನೇ ಶತಮಾನದ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಾರ್ಮಿಕರ ಹಕ್ಕುಗಳ ಹೋರಾಟಕ್ಕೂ ಮುನ್ನ ಆರಂಭಗೊಂಡಿದೆ ಎಂದು ತಿಳಿಯುತ್ತದೆ. ಮೇ 1, 1886 ರಂದು, ಸುಮಾರು 200,000 ಕಾರ್ಮಿಕರು ದಿನಕ್ಕೆ 8 ಗಂಟೆಗಳ ಕೆಲಸಕ್ಕಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ ಕೈಗೊಂಡಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಈ ಕೆಲಸದ ಅವಧಿ ಕುರಿತು ಚರ್ಚೆಗಳು, ಪ್ರತಿಭಟನೆಗಳು, ಪರ ವಿರೋಧ ಚರ್ಚೆಗಳೂ ನಡೆಯುತ್ತಲೇ ಇವೆ.
ಉದ್ಯಮಿಗಳು ಕಾರ್ಮಿಕರು ಹೆಚ್ಚು ಕೆಲಸ ಮಾಡಬೇಕೆಂದು, ಕಾರ್ಮಿಕ ಪರ ಸಂಘಟನೆಗಳು ಕೆಲಸದ ಅವಧಿ ಹಾಗೂ ಕೆಲಸ ಮಾಡುವ ಪರಿಸರದ ಕುರಿತಂತೆ ಹೆಚ್ಚು ಗಮನ ನೀಡುವಂತೆ ವಾದ ಮಾಡುತ್ತಾ ಬರಲಾಗಿದೆ. ಜೊತೆಗೆ ಒಂದಿಷ್ಟು ಕೆಲಸದ ಸ್ಥಳಗಳಲ್ಲಿ ನಡೆಯುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಕೆಲಸಗಳು ಸಹ ನಡೆಯುತ್ತಿವೆ.
ಇನ್ನು ಇದೇ ಕಾರಣಕ್ಕೆ 1886ರಲ್ಲಿ ಚಿಕಾಗೋದಲ್ಲಿ ಪ್ರತಿಭಟನೆ ನಡೆಸಲಾಗಿತ್ತು, ಇಡೀ ದೇಶದ ಕಾರ್ಮಿಕರು ಅಲ್ಲಿ ಸೇರಿದ್ದರು, ಆದರೆ ಈ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿತ್ತು. ಪೊಲೀಸರು ಕಾರ್ಮಿಕರ ಮೇಲೆ ಲಾಠಿ ಬೀಸಿದ್ದರು. ಆದರೆ ಚಿಕಾಗೋದ ಹೇಮಾರ್ಕೆಟ್ ಸ್ಕ್ವೇರ್‌ನಲ್ಲಿ ನಡೆದ ಶಾಂತಿಯುತ ಸಭೆ ವೇಳೆ ಬಾಂಬ್ ಸ್ಫೋಟಗೊಂಡು ಈ ಪ್ರತಿಭಟನೆ ದುರಂತವಾಗಿ ತಿರುಗಿತು. ಹಲವರು ಪ್ರಾಣ ಕಳೆದುಕೊಂಡರು. ಈ ಘಟನೆ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಯಿತು.
ಇದಾದ ಬಳಿಕ ಈ ಕಾರ್ಮಿಕರ ಬಲಿದಾನವನ್ನು ನೆನೆಯಲೆಂದು ಈ ಅಂತಾರಾಷ್ಟ್ರೀಯ ಕಾರ್ಮಿಕರ ದಿನ ಆಚರಿಸಲು ನಿರ್ಧರಿಸಲಾಯಿತು. ಹೀಗಾಗಿ 1889ರ ಮೇ 1ರಂದು ಮೊದಲ ಕಾರ್ಮಿಕರ ದಿನ ಘೋಷಣೆಯಾಗಿತ್ತು. ಆದರೆ ಅಧಿಕೃತವಾಗಿ 1890ರ ಮೇ 1ರಂದು ಕಾರ್ಮಿಕರ ದಿನಾಚರಣೆ ಆರಂಭಗೊಂಡಿತು.
ಕಾರ್ಮಿಕರ ದಿನದ ಮಹತ್ವ
ಕಾರ್ಮಿಕರು ತಮ್ಮ ಶ್ರಮ ದಾನದ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಬಹುಮುಖ್ಯ ಕೊಡುಗೆ ನೀಡುತ್ತಾರೆ. ನೀವು ಕೆಲವು ರಾಷ್ಟ್ರಗಳ ನೋಡಬಹುದು. ಅಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆ ಇದೆ. ಹೀಗಾಗಿ ಆ ದೇಶಕ್ಕೆ ವಲಸೆ ಹೋಗುವವರು, ಹಾಗೂ ನುರಿತ ಕಾರ್ಮಿಕರ ಕೊರತೆಯ ಹಿನ್ನೆಲೆ ಆ ದೇಶದ ಅಭಿವೃದ್ಧಿ ಕುಂಠಿತವಾಗುವುದನ್ನು ಸಹ ನಾವು ನೋಡಬಹುದು.
ಈ ಕಾರ್ಮಿಕರ ದಿನವು ಕಾರ್ಮಿಕರ ಶ್ರಮವನ್ನು ಗುರುತಿಸುವುದು ಮಾತ್ರವಲ್ಲದೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ಮತ್ತು ಶೋಷಣೆಗೆ ಒಳಗಾಗದಂತೆ ಅವರನ್ನು ರಕ್ಷಿಸುವ ಗುರಿಯನ್ನು ಸಹ ಹೊಂದಿದೆ. ಇದರ ಜೊತೆಗೆ ಕಾರ್ಮಿಕರು ತಮ್ಮ ಕೆಲಸ ಸ್ಥಳದಲ್ಲಿ ಯಾವ ರೀತಿಯ ಹಕ್ಕುಗಳ ಹೊಂದಿರುತ್ತಾರೆ. ಅವರ ದುಡಿಮೆಗೆ ತಕ್ಕ ಫಲವೇನು? ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುವ ಯತ್ನ ನಡೆಯುತ್ತಿದೆ.



Click it and Unblock the Notifications
