Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಾಸಿಕ ಕೃಷ್ಣ ಜನ್ಮಾಷ್ಟಮಿ 2023 : ದಿನಾಂಕ, ಶುಭ ಮುಹೂರ್ತ ಮತ್ತು ಆಚರಣಾ ವಿಧಾನವೇನು?
ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಸಿಕ ಕೃಷ್ಣ ಜನ್ಮಾಷ್ಟಮಿಯನ್ನು ಪ್ರತಿ ತಿಂಗಳು ಕೃಷ್ಣ ಪಕ್ಷದ ಅಷ್ಟಮಿಯ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ಜೂನ್ 10 ರಂದು 'ಮಾಸಿಕ ಕೃಷ್ಣ ಜನ್ಮಾಷ್ಟಮಿ'ಯನ್ನು ಆಚರಣೆ ಮಾಡಲಾಗುತ್ತದೆ. ಪುರಾಣಗಳ ಪ್ರಕಾರ ಭಾದ್ರಪದ ಕೃಷ್ಣ ಪಕ್ಷದ ಅಷ್ಟಮಿಯ ದಿನದಂದು ಭಗವಾನ್ ಕೃಷ್ಣನು ಜನಿಸಿದನೆಂದು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.
ಈ ದಿನ ಕೃಷ್ಣನನ್ನು ಪೂಜಿಸಿ ಭಕ್ತಿಯಿಂದ ಬೇಡಿಕೊಂಡರೆ ಆತ ನಮ್ಮನ್ನೆಲ್ಲಾ ರಕ್ಷಿಸುತ್ತಾನೆ ಎಂಬ ನಂಬಿಕೆಯಿದೆ. ಆತನ ಕೃಪೆಯಿಂದ ಭಕ್ತರ ಜೀವನದಲ್ಲಿ ಖುಷಿ, ಸಮೃದ್ಧಿ ನೆಲೆಯಾಗಲಿದೆಯಂತೆ. ಆದ್ದರಿಂದ ಮಾಸಿಕ ಕೃಷ್ಣ ಜನ್ಮಾಷ್ಟಮಿಯ ದಿನ ಮುರಳಿ ಮನೋಹರನನ್ನು ಭಕ್ತಿಯಿಂದ ಪೂಜಿಸೋದನ್ನು ಮರೀಬೇಡಿ. ಅಷ್ಟಕ್ಕು ಜೂನ್ ತಿಂಗಳಿನಲ್ಲಿ ಯಾವ ದಿನ ಮಾಸಿಕ ಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆ ಮಾಡಲಾಗುತ್ತದೆ? ಶುಭ ಮುಹೂರ್ತ ಯಾವಾಗ? ಪೂಜಾ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಮಾಸಿಕ ಕೃಷ್ಣ ಜನ್ಮಾಷ್ಟಮಿ ಸಮಯ ಮತ್ತು ಶುಭ ಮುಹೂರ್ತ :
ಮಾಸಿಕ ಕೃಷ್ಣ ಜನ್ಮಾಷ್ಟಮಿ ಆರಂಭ : ಜೂನ್ 10 ರಂದು ಮಧ್ಯಾಹ್ನ 2.01ಕ್ಕೆ
ಮಾಸಿಕ ಕೃಷ್ಣ ಜನ್ಮಾಷ್ಟಮಿ ಅಂತ್ಯ : ಜೂನ್ 11 ರಂದು ಮಧ್ಯಾಹ್ನ 12.05ಕ್ಕೆ
ಪೂಜಾ ವಿಧಾನ ಹೇಗಿರುತ್ತೆ?
ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ. ನಂತರ ಹಳದಿ ಬಟ್ಟೆಯನ್ನು ಧರಿಸಿದರೆ ಉತ್ತಮ. ಇನ್ನೂ ದೇವರ ಕೋಣೆಯಲ್ಲಿ ಶ್ರೀ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ. ಇದರ ನಂತರ ಶ್ರೀಕೃಷ್ಣನಿಗೆ ಹಣ್ಣು, ಹೂವು, ಧೂಪ, ದೀಪ, ಕುಂಕುಮ, ತುಳಸಿ ಎಲೆಗಳು, ಎಳ್ಳು, ಬಾರ್ಲಿ, ಅರಿಶಿನ ಮತ್ತು ಶ್ರೀಗಂಧವನ್ನು ಅರ್ಪಿಸಿ. ಕೊನೆಯಲ್ಲಿ ಆರತಿಯನ್ನು ಬೆಳಗಿರಿ. ಸಂತೋಷ, ಸಮೃದ್ಧಿ, ಶಾಂತಿ ಮತ್ತು ಭಕ್ತಿಗಾಗಿ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ. ಶ್ರೀಕೃಷ್ಣನ ಕೃಪೆಯಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತದೆ.
ಮಾಸಿಕ ಕೃಷ್ಣ ಜನ್ಮಾಷ್ಟಮಿಯ ಮಹತ್ವವೇನು?
ಮಾಸಿಕ ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಈ ದಿನ ಶ್ರೀಕೃಷ್ಣನ ಬಾಲ ರೂಪವನ್ನು ಪೂಜಿಸುವುದು ತುಂಬಾ ಮಂಗಳಕರವೆಂದು ನಂಬಲಾಗಿದೆ. ಮಗುವನ್ನು ಹೊಂದಲು ಬಯಸುವ ದಂಪತಿಗಳು ಬಾಲ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಬೇಕು. ಈ ವ್ರತವನ್ನು ಆಚರಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲದೇ ಅದರೊಂದಿಗೆ ನಿಮ್ಮ ಗೌರವವೂ ಹೆಚ್ಚುತ್ತಂತೆ.



Click it and Unblock the Notifications
