Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೇದಾರನಾಥ-ಬದ್ರಿನಾಥ ದೇವಾಲಯಕ್ಕೆ ಹಿಂದೂಯೇತರರಿಗೆ ನಿಷೇಧ: ಯಾವೆಲ್ಲಾ ದೇವಾಲಯದಲ್ಲಿ ಈ ನಿಯಮವಿದೆ?
ಹಿಂದೂ ದೇವಾಲಯಗಳಿಗೆ ನಿತ್ಯ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಹಲವು ದೇವಾಲಯಗಳು ಜಾತಿ, ಧರ್ಮ, ಮತ, ಪಂಥದ ಯಾವುದೇ ಅಡ್ಡಿಯಿಲ್ಲದೆ ಎಲ್ಲರಿಗೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿವೆ. ಆದ್ರೆ ಹಿಂದೂಗಳಿಗೆ ಬಹಳ ಮುಖ್ಯ ಯಾತ್ರಾ ಸ್ಥಳವಾಗಿರುವ ಕೇದಾರನಾಥ ಹಾಗೂ ಬದ್ರಿನಾಥ ದೇವಾಲಯವು ಈಗ ಹಿಂದೂಯೇತರರಿಗೆ ದೇವಾಲದಲ್ಲಿ ಪ್ರವೇಶ ನಿರಾಕರಿಸಿದೆ.
ಗಂಗೋತ್ರಿ ದೇವಾಲಯ ಸಮಿತಿಯು ಭಾನುವಾರ ಸರ್ವಾನುಮತದ ನಿರ್ಧಾರ ತೆಗೆದುಕೊಂಡಿದ್ದು, ಹಿಂದೂಯೇತರರು ಇನ್ನು ಮುಂದೆ ಉತ್ತರಾಖಂಡದ ಗಂಗೋತ್ರಿ ದಾಮ, ಕೇದಾರನಾಥ, ಬದರಿನಾಥ ದೇವಾಲಯಕ್ಕೆ ಪ್ರವೇಶ ಇರುವುದಿಲ್ಲ ಎಂದು ತಿಳಿಸಿದೆ. ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷರು ಖುದ್ದು ಈ ಕುರಿರು ಮಾಹಿತಿ ಹಂಚಿಕೊಂಡಿದ್ದಾರೆ.

ಬದರಿನಾಥ, ಕೇದಾರನಾಥ ಮತ್ತು ಬಿಕೆಟಿಸಿ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಾಲಯಗಳಿಗೆ ಹಿಂದೂಯೇತರರು ಪ್ರವೇಶಿಸುವುದನ್ನು ನಿಷೇಧಿಸುವ ಪ್ರಸ್ತಾಪವನ್ನು ಸಮಿತಿಯ ಮುಂಬರುವ ಮಂಡಳಿಯ ಸಭೆಯಲ್ಲಿ ಮಂಡಿಸಲಾಗುವುದು ಎಂದು ಬಿಜೆಪಿ ನಾಯಕ ಮತ್ತು ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಅಧ್ಯಕ್ಷ ಹೇಮಂತ್ ದ್ವಿವೇದಿ ಘೋಷಿಸಿದ್ದಾರೆ.
ಉತ್ತರಾಖಂಡದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಸಂರಕ್ಷಿಸುವುದು ಮುಖ್ಯ. ಹೀಗಾಗಿ ದೇವಾಲಯ ಪ್ರವೇಶ ಅಧಿಕಾರವು ಹಿಂದೂಗಳಿಗೆ ಸೀಮಿತ ಮಾಡಲು ನಿರ್ಧರಿಸಲಾಗಿದೆ. ಹಿಂದೂಯೇತರರ ಪ್ರವೇಶದಿಂದ ಸಂಪ್ರದಾಯಗಳು, ಆಚರಣೆಗಳ ಕಡೆಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಹಿಂದೂಗಳ ಎರಡು ಪ್ರಮುಖ ಯಾತ್ರಾ ಸ್ಥಳಕ್ಕೆ ಹಿಂದೂಗಳಲ್ಲದವರಿಗೆ ದರ್ಶನ ಭಾಗ್ಯ ಹಾಗೆ ಪ್ರವೇಶ ನಿಷೇಧವಾಗಲಿದೆ.
ದೇವಾಲಯ ಮಂಡಳಿಯು ತನ್ನ ಆಡಳಿತದಲ್ಲಿರುವ ಎಲ್ಲಾ ದೇವಾಲಯದಲ್ಲಿಯೂ ಈ ನಿಯಮ ಜಾರಿಗೆ ಮುಂದಾಗಲಿದೆ. ಹಾಗೆ ಎಲ್ಲಾ ಕಡೆಗಳಲ್ಲಿಯೂ ಕಠಿಣ ನಿಮಯ ಜಾರಿಗೆ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.
ಯಾವೆಲ್ಲಾ ದೇವಾಲಯದಲ್ಲಿ ಹಿಂದೂಯೇತರರಿಗೆ ಎಂಟ್ರಿ ಇಲ್ಲ!
ದೇಶದ ಬಹಳಷ್ಟು ದೇವಾಲಯದಲ್ಲಿ ಈ ರೀತಿಯ ನಿಯಮವಿದೆ. ಕೆಲವೊಂದು ದೇವಾಲಯದಲ್ಲಿ ಬಹಳ ಹಿಂದಿನ ಕಾಲದಿಂದಲೂ ಹಿಂದೂಯೇತರರಿಗೆ ನಿಷೇಧವಿದೆ. ಮತ್ತೆ ಕೆಲವೊಂದು ದೇವಾಲಯವು ಇತ್ತೀಚಿಗೆ ಈ ನಿಯಮಗಳ ಜಾರಿ ಮಾಡುತ್ತಿವೆ.
2025ರಲ್ಲೇ ಕೇಳಿಬಂದಿತ್ತು ಕೂಗು
ಉತ್ತರಾಖಂಡದ ಚಾರ್ ದಾಮ್ ಕ್ಷೇತ್ರದಲ್ಲಿ ಹಿಂದೂಯೇತರರಿಗೆ ನಿಷೇಧ ಹೇರುವಂತೆ 2025ರ ಮಾರ್ಚ್‌ನಲ್ಲೇ ಬಿಜೆಪಿ ಶಾಸಕರೊಬ್ಬರು ಬೇಡಿಕೆ ಇಟ್ಟಿದ್ದರು. ದೇವಾಲಯದ ಆವರಣದಲ್ಲಿ ಹಿಂದೂಯೇತರರು ಸಂಪ್ರದಾಯ ಮುರಿಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಾದ ಬಳಿಕ ನಿಷೇಧದ ಕೂಗು ಮತ್ತಷ್ಟು ಹೆಚ್ಚಾಗಿತ್ತು.
ಉತ್ತರಾಖಂಡದ ಮುಖ್ಬಾ ದೇವಾಲಯಕ್ಕೂ ಕೂಡ ಹಿಂದೂಯೇತರರಿಗೆ ನಿಷೇಧ ಹೇರಲಾಗಿದೆ. ಗಂಗಾ ಮಾತೆಯ ಚಳಿಗಾಲದ ನಿವಾಸ ಎಂದು ನಂಬಲಾಗಿದ್ದು, ಇಲ್ಲಿಗೆ ಹಿಂದೂಯೇತರರ ನಿಷೇಧವಿದೆ. ಹಾಗೆ ಪುರಿ ಜಗನ್ನಾಥ ದೇವಾಲಯಕ್ಕೂ ಹಿಂದೂಯೇತರರಿಗೆ ನಿಷೇಧವಿದೆ. ಆದ್ರೆ ಭೌದ್ದರು, ಸಿಖ್ಖರು, ಜೈನರಿಗೆ ದರ್ಶನ ಅವಕಾಶವಿದೆ. ಕೇರಳದ ಗುರುವಾಯೂರ್ ದೇವಾಲಯದಲ್ಲಿಯೂ ಸಹ ಹಿಂದೂಯೇತರರಿಗೆ ಅವಕಾಶವಿಲ್ಲ. ಅಸ್ಸಾಂನ ಕಾಮಾಖ್ಯ ದೇವಾಲಯವು ಸಂಪೂರ್ಣವಾಗಿ ನಿಷೇಧ ಹೇರಿಲ್ಲದಿದ್ದರೂ ಹಲವು ಕಠಿಣ ನಿಯಮಗಳ ಜಾರಿ ಮಾಡಿದೆ. ಹಾಗೆ ತಮಿಳುನಾಡಿನ ಮೀನಾಕ್ಷಿ ದೇವಾಲಯ ಸಹ ಹಿಂದೂಯೇತರರು ದೇವಾಲಯ ಆವರಣಕ್ಕೆ ಪ್ರವೇಶಿಸಬಹುದು ಆದರೆ ಗರ್ಭಗುಡಿ ಪ್ರವೇಶ ನಿರ್ಬಂಧಿಸಿದೆ.
ಸದ್ಯ ಈಗ ಚಾರ್ ದಾಮ್ ಕ್ಷೇತ್ರಗಳಲ್ಲಿ ಹಿಂದೂಯೇತರರಿಗೆ ನಿಷೇಧ ಹೇರಿರುವುದು ಹಲವರು ಸ್ವಾಗತಿಸಿದರೆ ಮತ್ತೆ ಕೆಲವರು ಈ ನಿರ್ಧಾರ ಕುರಿತು ಹೊಸ ಚರ್ಚೆಗಳು ಸಹ ಹುಟ್ಟಿಕೊಂಡಿವೆ.



Click it and Unblock the Notifications


