Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮಧುರೈನಲ್ಲಿ ಕಾರ್ತಿಕ ದೀಪ ವಿವಾದ: ಏನಿದು ಘಟನೆ? ಜಾಗದ ವಿಚಾರದಲ್ಲಿ ಗಲಾಟೆ ಏಕೆ?
ದೇವಾಲಯ, ಹಿಂದೂ ಸಂಪ್ರದಾಯಗಳು ಸೇರಿದಂತೆ ಹಲವು ರೀತಿಯ ವಿವಾದಗಳು ಆಗಾಗ ಮುನ್ನಲೆಗೆ ಬರುತ್ತಲೇ ಇರುತ್ತದೆ. ಈ ಸಾಲಿಗೆ ಈಗ ಹೊಸದಾಗಿ ತಮಿಳುನಾಡಿನ ಮಧುರೈ ದೇವಸ್ಥಾನದ ಕಾರ್ತಿಕ ದೀಪ ಬೆಳಗುವ ವಿಚಾರ ಈಗ ಚರ್ಚೆಗಳಿಗೆ ಕಾರಣವಾಗುತ್ತಿದೆ. ಅದ್ರಲ್ಲೂ ತಿರುಪರಂಕುಂದ್ರಂನಲ್ಲಿರುವ ದೀಪಥೂನ್ ಕಂಬದ ಮೇಲೆ ಕಾರ್ತಿಕ ದೀಪ ಬೆಳಗುವುದನ್ನು ನಿಷೇಧಿಸಲು ಮುಂದಾಗಿರುವುದು ಹೊಸ ವಿವಾದ ಸೃಷ್ಟಿಸಿದೆ.
ಈ ಸಂಬಂಧ ಬಲಪಂಥೀಯ ಕಾರ್ಯಕರ್ತರು ದೀಪ ಬೆಳಗುವ ಸಂಬಂಧ ಗಲಾಟೆ ಮಾಡಿಕೊಂಡಿದ್ದು ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು, ಕೋರ್ಟ್ ಈ ಘಟನೆ ಕುರಿತು ವಿಚಾರಣೆ ನಡೆಸಿ ವಿವಾದಿತ ಬೆಟ್ಟದ ತುದಿಯಲ್ಲಿರುವ ದೇವಸ್ಥಾನದಲ್ಲಿಯೇ ದೀಪ ಬೆಳಗಿಸಬೇಕೆಂದು ಮದ್ರಾಸ್ ಹೈಕೋರ್ಟ್ ತೀರ್ಪು ಸಹ ನೀಡಿತ್ತು.

ಆದ್ರೆ ಈ ತೀರ್ಪಿಗೆ ತಮಿಳುನಾಡು ಸರ್ಕಾರ ಸಹಮತ ಸೂಚಿಸದೆ ಕೋರ್ಟ್ ಆದೇಶದ ವಿರುದ್ಧ ನಿಂತಿದೆ. ಹಾಗೆ ಹಿರಿಯ ನ್ಯಾಯಾಧೀಶರ ಪದಚ್ಯುತಿಗೊಳಿಸುವ ಹಕ್ಕು ಮಂಡಿಸಲು ಮುಂದಾಗಿದೆ. ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರನ್ನು ಪದಚ್ಯುತಿಗೊಳಿಸಬೇಕು ಎಂದು ಸಂಸದರ ಸಹಿ ಪಡೆಯಲಾಗಿದೆ.
ಏನಿದು ವಿವಾದ? ದೀಪ ಬೆಳಗಲು ಅಡ್ಡಿ ಏಕೆ?
ಈ ಜಾಗದ ವಿವಾದ ಹಲವು ವರ್ಷಗಳಿಂದ ನಡೆಯುತ್ತಿದೆ. ಬೆಟ್ಟದ ಮೇಲಿನ ದೇವಸ್ಥಾನಕ್ಕೆ ದಶಕಗಳ ಇತಿಹಾಸವಿದೆ. ನಂಬಿಕೆ ಮತ್ತು ಶಾಂತಿಯ ತಾಣವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಸುಬ್ರಮಣ್ಯಸ್ವಾಮಿ ದೇವಾಲಯ, ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ ಹಾಗೂ ಸಿಖಂದರ್ ಬಾದ್‌ಷಾ ದರ್ಗಾಗಳು ಒಟ್ಟಿಗೆ ನೆಲೆಸಿವೆ. ಆದ್ರೆ ಈ ಬೆಟ್ಟದಲ್ಲಿ ಮಾಂಸಾಹಾರ ಸೇವನೆ ಮಾಡಲಾಗುತ್ತದೆ ಎಂಬುದು ವಾದ ಹಾಗೂ ವಿವಾದದ ಕೇಂದ್ರಬಿಂದುವಾಗಿದೆ. ಬೆಟ್ಟದ ಮೇಲಿರುವ ಸುಬ್ರಮಣಿಯ ಸ್ವಾಮಿ ದೇವಾಲಯವು 1920 ರ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಬಹುತೇಕ ಬೆಟ್ಟದ ಮಾಲೀಕತ್ವವನ್ನು ಹೊಂದಿದೆ. ಹೀಗಾಗಿ ಬೆಟ್ಟದ ಮೇಲಿನ ದರ್ಗಾದ ಬಳಿ ಇರುವ ದೀಪ ಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಿಸಲು ಮುಂದಾಗಿರುವುದು ವಿವಾದ ಹುಟ್ಟುಹಾಕಿದೆ.
ಸಿಖಂದರ್ ಬಾದ್‌ಷಾ ದರ್ಗಾದ ಸಮೀಪದಲ್ಲಿರುವ ಮತ್ತು ಬಹಳ ಹಿಂದಿನಿಂದಲೂ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾದ ತಿರುಪರಂಕುಂದ್ರಂನಲ್ಲಿರುವ ದೀಪಥೂನ್ ಕಂಬದ ಮೇಲೆ ಕಾರ್ತಿಗೈ ದೀಪವನ್ನು ಬೆಳಗಿಸಬೇಕೆಂದು ನ್ಯಾಯಾಧೀಶರು ನೀಡಿದ ಆದೇಶದ ನಂತರ ವಿವಾದ ಮತ್ತಷ್ಟು ದೊಡ್ಡದಾಗಿದೆ. ಈ ಆದೇಶದ ನಂತರ ದೀಪ ಬೆಳಗದೆ ಇದ್ದಾಗ ಬಲಪಂಥೀಯ ಕಾರ್ಯಕರ್ತರು ಜಮಾಯಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಸದ್ಯ ಈ ತೀರ್ಪು 2017ರಲ್ಲಿ ಬಂದಿರುವ ವಿಭಾಗೀಯ ಪೀಠದ ತೀರ್ಪಿಗೆ ವಿರುದ್ಧ ಎಂದು ಆರೋಪಿಸಲಾಗಿದೆ.
ಸದ್ಯ ಈಗ ದೇವಾಲಯ ಸಿಬ್ಬಂದಿ ವಿರುದ್ಧ ಅಲ್ಲಿನ ಬಲಪಂಥೀಯ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಹಾಗೆ ಸುಬ್ರಮಣಿಯ ಸ್ವಾಮಿ ದೇವಸ್ಥಾನದ ಭಕ್ತರಿಗೆ ಅನುಮತಿ ನೀಡುವ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿಸಿದೆ. ರಾಜ್ಯ ಸರಕಾರದ ಪರ ವಕೀಲರೊಬ್ಬರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಸ್ವೀಕರಿಸಿದೆ.
ದೀಪ ಬೆಳಗುವುದರಿಂದ ದರ್ಗಾ ಅಥವಾ ಮುಸ್ಲಿಮರ ಹಕ್ಕುಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲವಾದರೂ, ಹಾಗೆ ಮಾಡದಿರುವುದು ಬೆಟ್ಟದ ಖಾಲಿ ಭಾಗಗಳ ಮೇಲಿನ ಸುಬ್ರಮಣ್ಯ ಸ್ವಾಮಿ ದೇವಾಲಯದ ಹಕ್ಕುಗಳಿಗೆ ಧಕ್ಕೆ ತರಬಹುದು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸದ್ಯ ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈ ಹಿನ್ನೆಲೆ ಈ ಪ್ರಕರಣ ಈಗ ರಾಜಕೀಯ ರೂಪ ಪಡೆದುಕೊಂಡಿದೆ.



Click it and Unblock the Notifications
