Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಮೇ 19ಕ್ಕೆ ಜ್ಯೇಷ್ಠ ಅಮವಾಸ್ಯೆ: ಶನಿ ಅಮವಾಸ್ಯೆ ದಿನ ಈ ಪರಿಹಾರ ಮಾಡಿದರೆ ಹಣದ ಸಮಸ್ಯೆಯೇ ಬರಲ್ಲ
ಮಾರ್ಚ್ 19ಕ್ಕೆ ಜ್ಯೇಷ್ಠ ಅಮವಾಸ್ಯೆ ಜ್ಯೇಷ್ಠ ಅಮವಾಸ್ಯೆಗೆ ತುಂಬಾನೇ ಮಹತ್ವವಿದೆ. ಜ್ಯೇಷ್ಠ ಅಮವಾಸ್ಯೆಯಂದೇ ಶನಿ ಜಯಂತಿ, ವಟ ಸಾವಿತ್ರಿ ವ್ರತ ಬಂದಿದೆ. ಆದ್ದರಿಂದ ಈ ದಿನ ಮತ್ತಷ್ಟು ವಿಶೇಷವಾಗಿದೆ. ಸನಾತನ ಧರ್ಮದ ಪ್ರಕಾರ ಈ ದಿನ ಭಗವದ್ಗೀತೆ ಪಠಣೆ ಮಾಡುವುದರಿಂದ ತುಂಬಾನೇ ಶುಭ ಫಲ ದೊರೆಯುವುದು.
ಈ ದಿನ ದಾನ-ಧರ್ಮದ ಕಾರ್ಯಗಳಿಗೂ ತುಂಬಾನೇ ಮಹತ್ವವಿದೆ. ಯಾರು ದಾನ-ಧರ್ಮ ಮಾಡುತ್ತಾರೋ ಅವರಿಗೆ ಹಣದ ಸಮಸ್ಯೆ ಇರಲ್ಲ, ಜೀವನದಲ್ಲಿರುವ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು. ಈ ದಿನ ಕೆಲ ಪರಿಹಾರಗಳನ್ನು ಮಾಡುವುದರಿಂದ ಒಳಿತಾಗುವುದು ಎಂದು ಹೇಳಲಾಗುವುದು.

ಜ್ಯೇಷ್ಠ ಅಮವಾಸ್ಯೆಯಂದು ಅಗೋಚರ ಶಕ್ತಿಗಳು ಪ್ರಬಲವಾಗಿರುವುದು
ಇತರ ಅಮವಾಸ್ಯೆಗಳಿಗೆ ಹೋಲಿಸಿದರೆ ಜ್ಯೇಷ್ಠ ಅಮವಾಸ್ಯೆಯಂದು ಅಗೋಚರ ಹಾಗೂ ನಕಾರಾತ್ಮಕ ಶಕ್ತಿ ಪ್ರಬಲವಾಗಿರುವುದು ಎಂದು ಹೇಳಲಾಗುವುದು, ಆದ್ದರಿಂದ ಈ ದಿನ ಪಿತೃಗಳಿಗೆ ಪೂಜೆ ಸಲ್ಲಿಸಿದರೆ ಒಳ್ಳೆಯಂದು ಹೇಳಲಾಗುವುದು. ಈ ದಿನ 'ಓಂ ಪಿತೃಭ್ಯ: ನಮಃ' ಎಂಬ ಮಂತ್ರವನ್ನು ಪಠಿಸಿ
ಜ್ಯೇಷ್ಠ ಅಮವಾಸ್ಯೆಯಂದು ಶುಭ-ಅಶುಭ ಪರಿಕಲ್ಪನೆ
ಈ ದಿನ ನಕಾರಾತ್ಮಕ ಶಕ್ತಿ ಪ್ರಬಲವಾಗಿರುವುದರಿಂದ ಈ ದಿನ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ, ಆದರೆ ಪೂಜಾ ಕಾರ್ಯಗಳಿಗೆ ಈ ದಿನ ಶ್ರೇಷ್ಠವಾಗಿದೆ. ಈ ದಿನ ಹಿರಿಯರಿಗೆ ಶ್ರಾದ್ಧಾ ಕಾರ್ಯ ಮಾಡಲಾಗುವುದು. ಕಾಳಸರ್ಪ ಪೂಜೆಗೆ ಈ ದಿನ ಒಳ್ಳೆಯದು.
ಜ್ಯೇಷ್ಠ ಅಮವಾಸ್ಯೆಯ ದಿನ ಯಾವ ಪರಿಹಾರ ಮಾಡಿದರೆ ಒಳ್ಳೆಯದು?
* ಜ್ಯೇಷ್ಠ ಅಮವಾಸ್ಯೆಯ ದಿನ ಮನೆಯ ಈಶಾನ್ಯ ದಿಕ್ಕಿನಲ್ಲಿ ತುಪ್ಪದ ದೀಪಕ್ಕೆ ಸ್ವಲ್ಪ ಕುಂಕುಮ ಮಿಶ್ರಿತ ಅಕ್ಕಿ ಹಾಕಿ ಹಚ್ಚಿಟ್ಟರೆ ಹಣದ ಸಮಸ್ಯೆ ದೂರಾಗುವುದು ಎಂಬ ನಂಬಿಕೆ ಇದೆ.
* ಈ ದಿನ ನಿಮ್ಮಿಂದಾದ ಸಹಾಯ ಮಾಡಿ. ಬಡವರಿಗೆ ಆಹಾರ ದಾನ ಮಾಡಿ, ನಿರ್ಗತಿಕರಿಗೆ ಆಹಾರ, ವಸ್ತ್ರ ದಾನ ಮಾಡುವುದರಿಂದ ನಮಗೆ ಸಂಪತ್ತಿಗೆ ಯಾವತ್ತಿಗೂ ತೊಂದರೆ ಉಂಟಾಗುವುದಿಲ್ಲ, ಲಕ್ಷ್ಮಿ ಕೃಪೆ ಸದಾ ನಮ್ಮ ಮೇಲಿರಲಿದೆ.
* ಮೀನುಗಳಿಗೆ ಹಿಟ್ಟಿನ ಉಂಡೆ ಮಾಡಿ ಆಹಾರವನ್ನಾಗಿ ನೀಡುವುದರಿಂದ ಜೀವನದಲ್ಲಿರುವ ಸಮಸ್ಯೆಗಳು ದೂರಾಗುವುದು.
ಜ್ಯೇಷ್ಠ ಅಮವಾಸ್ಯೆಯಂದು ಏನು ಮಾಡಬೇಕು?
* ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನದ ನೀರಿಗೆ ಸ್ವಲ್ಪ ಕಪ್ಪು ಎಳ್ಳು ಹಾಕಿ, ಸ್ನಾನ ಮಾಡಿ
* ಅರಳಿಮರಕ್ಕೆ ಸಾಸಿವೆಯೆಣ್ಣೆ ದೀಪಹಚ್ಚಿ, ಇದರಿಂದ ಶನಿದೇವನ ಕೃಪೆ ನಿಮ್ಮ ಮೇಲಿರಲಿದೆ
* ಬಡವರಿಗೆ ದಾನ ಮಾಡಿ.
ಜ್ಯೇಷ್ಠ ಅಮವಾಸ್ಯೆಯಂದು ಹೀಗೆ ಮಾಡುವುದು ಶುಭವಲ್ಲ ಎಂದು ಹೇಳಲಾಗುವುದು
* ಸೂರ್ಯೋದಯದ ನಂತರ ಮಲಗಬಾರದು
* ಈ ದಿನ ಎಣ್ಣೆಸ್ನಾನ ಮಾಡುವಂತಿಲ್ಲ
* ಗಡ್ಡ, ಕೂದಲು ತೆಗೆಯಬಾರದು, ಉಗುರು ಕತ್ತರಿಸಬಾರದು
* ಈ ದಿನ ಮಾಂಸ, ಮದ್ಯ ಸೇವಿಸಬಾರದು
* ಗಂಡ-ಹೆಂಡತಿ ದೈಹಿಕವಾಗಿ ಸೇರಬಾರದು
* ಮಧ್ಯಾಹ್ನ ಹಾಗೂ ಸೂರ್ಯಾಸ್ತದ ಸಮಯದಲ್ಲಿ ನಿದ್ರಿಸಬಾರದು.
ಶನಿದೋಷ ನಿವಾರಣೆಗೆ
* ಈ ದಿನ ಶನಿ ದೇವಾಲಯಕ್ಕೆ ಭೇಟಿ ನೀಡಿ
* ಶನಿ ದೇವರಿಗೆ ಎಳ್ಳೆಣ್ಣೆ ಅಥವಾ ಸಾಸಿವೆಯೆಣ್ಣೆ ದೀಪ ಹಚ್ಚಿ
* ಶನಿ ಮಂತ್ರಗಳನ್ನು ಪಠಿಸಿ
* ನಿರ್ಗತಿಕರಿಗೆ ದಾನ ಮಾಡಿ



Click it and Unblock the Notifications
