Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೇಷ ರಾಶಿಯಲ್ಲಿ ಗುರುವಿನ ಸಂಕ್ರಮಣ : ನಾಲ್ಕು ರಾಶಿಗೆ ಅದೃಷ್ಟದ ಬಾಗಿಲು ತೆರೆಯಲಿದೆ
ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಗ್ರಹಗಳು ಚಲಿಸುತ್ತಿರುತ್ತವೆ. ನಿರ್ದಿಷ್ಟ ಗ್ರಹ ಮತ್ತು ಅದು ಸಾಗುತ್ತಿರುವ ಚಿಹ್ನೆಯನ್ನು ಅವಲಂಬಿಸಿ ಇವುಗಳು ನಮ್ಮ ಜೀವನವನ್ನು ವಿವಿಧ ರೀತಿಯಲ್ಲಿ ಪ್ರಭಾಭ ಬೀರುತ್ತದೆ ಎಂದು ನಂಬಲಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ ಪ್ರಮುಖವಾದ ಸಂಕ್ರಮಣವು ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ. ಈ ಬಾರಿ ಮೇಷ ರಾಶಿಯಲ್ಲಿ ಗುರು ಸಂಕ್ರಮಣವಾಗಲಿದೆ.
ವೈದಿಕ ಜ್ಯೋತಿಷ್ಯದಲ್ಲಿ ಗುರುವನ್ನು ಎಲ್ಲಾ ಗ್ರಹಗಳ ಗುರು ಎಂದು ಕರೆಯಲಾಗುತ್ತದೆ. ಬೃಹಸ್ಪತಿ ಎಂದೂ ಕರೆಯಲ್ಪಡುವ ಇದು ಬುದ್ಧಿವಂತಿಕೆ, ಆಧ್ಯಾತ್ಮಿಕತೆಯೊಂದಿಗೆ ಸಂಬಂಧವನ್ನು ಹೊಂದಿದೆ. ಈ ಬಾರಿ ಮೇಷ ರಾಶಿಯಲ್ಲಿ ಗುರುವಿನ ಸಂಕ್ರಮಣ ಇರೋದ್ರಿಂದ ಕೆಲ ರಾಶಿಗಳಿಗೆ ಶುಭ ಫಲಗಳಿದೆ. ಹಾಗಾದ್ರೆ ಶುಭ ಫಲವನ್ನು ಪಡೆಯುವ ಆ ನಾಲ್ಕು ರಾಶಿಗಳು ಯಾವುದು ಅನ್ನೋದನ್ನ ತಿಳಿಯೋಣ.

ಮೇಷ ರಾಶಿಯಲ್ಲಿ ಗುರುವಿನ ಸಂಚಾರ : ದಿನಾಂಕ ಹಾಗೂ ಸಮಯ
ಗುರುವು ಮೀನ ರಾಶಿಯಿಂದ ಏಪ್ರಿಲ್ 23, 2023 ರಂದು ಬೆಳಿಗ್ಗೆ 3:33 ಕ್ಕೆ ಹನ್ನೆರಡು ರಾಶಿಚಕ್ರ ಚಿಹ್ನೆಗಳ ಮೊದಲ ಚಿಹ್ನೆಯಾದ ಮೇಷ ರಾಶಿಗೆ ಹೆಜ್ಜೆಇಡುತ್ತಾನೆ. ಗುರುವು ಈ ವರ್ಷ ಮೇಷ ರಾಶಿಯಲ್ಲಿ ತನ್ನ ಸ್ಥಾನವನ್ನು ಹಲವು ಬಾರಿ ಬದಲಾಯಿಸುತ್ತಾನೆ. ಇದಾದ ಬಳಿಕ ಗುರು ಗ್ರಹವು 2024 ರಲ್ಲಿ ಮಾತ್ರ ಮತ್ತೊಂದು ರಾಶಿಚಕ್ರಕ್ಕೆ ಸಾಗಲಿದೆ.
ಮೇಷ ರಾಶಿ
ಗುರುವಿನ ಈ ಸಂಕ್ರಮವು ಮೇಷ ರಾಶಿಯವರಿಗೆ ತುಂಬಾನೇ ಶುಭಕರವಾಗಲಿದೆ. ಈ ಸಮಯದಲ್ಲಿ ಅವರು ಆರ್ಥಿಕ ವಲಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಾರೆ. ಮತ್ತು ಉದ್ಯೋಗಿಗಳಿಗೆ ಇದು ಉತ್ತಮ ಕಾಲ. ಇನ್ನೂ ಮೇಷ ರಾಶಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಅಪಾರ ಯಶಸ್ಸು ಮತ್ತು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಇನ್ನೂ ಪ್ರೀತಿಯಲ್ಲಿರುವವರಿಗೆ ಕಂಕಣ ಭಾಗ್ಯವಿದೆ.
ಸಿಂಹ ರಾಶಿ
ಮೇಷ ರಾಶಿಯಲ್ಲಿ ಆಗುವ ಗುರುವಿನ ಸಂಕ್ರಮಣವು ಸಿಂಹ ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ. ಈ ಸಂಕ್ರಮಣದ ಸಮಯದಲ್ಲಿ ಅವರು ಸಾಕಷ್ಟು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಈ ಸಂಕ್ರಮಣದ ಸಮಯದಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಅನುಕೂಲಕರ ಮತ್ತು ಮಂಗಳಕರ ಫಲಿತಾಂಶಗಳನ್ನು ಪಡೆಯಬಹುದು. ಇದಿಷ್ಟೇ ಅಲ್ಲದೇ ಸಿಂಹ ರಾಶಿಯವರು ವೃತ್ತಿಪರ, ವೈಯಕ್ತಿಕ ಅಥವಾ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ.
ಕರ್ಕಾಟಕ ರಾಶಿ
ಗುರುಗ್ರಹದ ಈ ಸಂಕ್ರಮವು ಕರ್ಕಾಟಕ ರಾಶಿಯವರಿಗೆ ತುಂಬಾನೇ ಮಂಗಳಕರವಾಗಿರುತ್ತದೆ. ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆ ಇದೆ. ಮತ್ತು ಹೊಸ ಯೋಜನೆಗಳಲ್ಲಿ ಕೂಡ ಯಶಸ್ವಿಯಾಗುತ್ತಾರೆ. ಈ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ಕೆಲವು ರಚನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಇದರಿಂದ ನಿಮ್ಮ ಭವಿಷ್ಯಕ್ಕೆ ಒಳ್ಳೆಯದಾಗಲಿದೆ.
ತುಲಾ ರಾಶಿ
ಮೇಷ ರಾಶಿಯಲ್ಲಿ ಗುರು ಸಾಗಣೆಯ ಅನುಕೂಲಕರ ಫಲಿತಾಂಶಗಳನ್ನು ಪಡೆಯುವ ನಾಲ್ಕನೇಯ ಮತ್ತು ಕೊನೆಯ ರಾಶಿ ತುಲಾ ರಾಶಿ. ತುಲಾ ರಾಶಿಯವರು ವ್ಯಾಪಾರ ಮತ್ತು ವೃತ್ತಿ ಎರಡರಲ್ಲೂ ಯಶಸ್ವಿಯಾಗುತ್ತಾರೆ. ಆರ್ಥಿಕವಾಗಿಯೂ ಕೂಡ ಅಭಿವೃದ್ಧಿಯನ್ನು ಹೊಂದುತ್ತಾರೆ. ತುಲಾ ರಾಶಿಯ ವಿವಾಹಿತ ದಂಪತಿಗಳು ತಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ.



Click it and Unblock the Notifications




