Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾ. 28-ಏಪ್ರಿಲ್ 27ರವರೆಗೆ ಗುರು ಅಸ್ತಂಗತ: ಎರಡು ರಾಶಿಯವರು ಬಿಟ್ಟರೆ ಉಳಿದವರೆಲ್ಲರೂ ಈ ಅವಧಿಯಲ್ಲಿ ಜಾಗ್ರತೆ
ಗುರುದೆಸೆಯಿದ್ದರೆ ನಮ್ಮ ಬದುಕು ಬಂಗಾರವಾಗುವುದು. ಅವನ ಕೃಪೆಯಿದ್ದಾಗ ಉಳಿದಾಯ ಹೆಚ್ಚಾಗುತ್ತದೆ, ಸೌಕರ್ಯಗಳು ಹೆಚ್ಚಾಗುತ್ತದೆ, ಗುರು ಅದೃಷ್ಟದ ಬೆಂಬಲವನ್ನು ನೀಡುತ್ತದೆ. ಇದೀಗ ಗುರು ಮಾರ್ಚ್ 28ಕ್ಕೆ ಮೀನರಾಶಿಯಲ್ಲಿ ಅಸ್ತಂಗತವಾಗಲಿದೆ.
ಯಾವುದೇ ಗ್ರಹ ಅಸ್ತಂಗತವಾದಾಗ ಅದು ಹೆಚ್ಚಿನವರಿಗೆ ಶುಭ ಫಲ ನೀಡುವುದಿಲ್ಲ, ಕೆಲವರಷ್ಟೇ ಈ ಸಮಯದಲ್ಲಿ ಗುರುವಿನ ಒಳ್ಳೆಯ ಫಲ ಪಡೆಯುತ್ತಾರೆ, ಉಳಿದವರು ಈ ಸಮಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಾರೆ.

ಗುರು ಮೀನ ರಾಶಿಯಲ್ಲಿ ಏಪ್ರಿಲ್ 22 ರವರೆಗ ಅಸ್ತಂಗತವಾಗಿರಲಿದೆ, ನಂತರ ಗುರು ಮೇಷ ರಾಶಿಯನ್ನು ಪ್ರವೇಶಿಸುವುದು, ಏಪ್ರಿಲ್ 27ಕ್ಕೆ ಗುರು ಉದಯವಾಗಲಿದೆ. ಈ ಅವಧಿಯಲ್ಲಿ ಗುರು ಅಸ್ತಂಗತವಾಗಿದ್ದಾಗ ಎದುರಿಸಿದ ಸಮಸ್ಯೆ ದೂರಾಗುವುದು.
ಈ ಗುರು ಅಸ್ತಂಗತ ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ:
ಮೇಷ ರಾಶಿ
ರಾಹು ಮೀನ ರಾಶಿಯಲ್ಲಿ ಅಸ್ತಂಗತವಾದಾಗ ಹಲವು ಬದಲಾವಣೆಗಳಾಗಬಹುದು. ಈ ಸಮಯದಲ್ಲಿ ನೀವು ಅನಗತ್ಯವಾಗಿ ಖರ್ಚು ಮಾಡಬಹುದು.ಈ ಅವಧಿಯಲ್ಲಿ ಅಧಿಕ ಪ್ರಯಾಣ ಮಾಡುವುದರಿಂದ ಖರ್ಚು ಹೆಚ್ಚಲಿದೆ. ಗುರು ಮೀನದಿಂದ ಮೇಷ ರಾಶಿಗೆ ಪ್ರವೇಶಿಸಿದಾಗ ಪರಿಸ್ಥಿತಿ ಸರಿಯಾಗುವುದು. ಏಪ್ರಿಲ್ 22ಕ್ಕೆ ಗುರು ಮೇಷ ರಾಶಿಯನ್ನು ಪ್ರವೇಶಿಸುತ್ತದೆ. ಅಲ್ಲಿಯವರೆಗೆ ಕಾಯಬೇಕು.
ಪರಿಹಾರ: ಗುರುವಾರ ಉಪವಾಸವಿದ್ದು ರಾಯರ ಆರಾಧನೆ ಮಾಡಿ.
ವೃಷಭ ರಾಶಿ
ಗುರು ಮೀನ ರಾಶಿಯಲ್ಲಿ ಅಸ್ತಂಗತವಾದಾಗ ವೃಷಭರಾಶಿಯ ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಿಸುತ್ತಾನೆ. ಈ ಅವಧಿಯಲ್ಲಿ ಖರ್ಚು ಹೆಚ್ಚಾಗಬಹುದು. ಇದರಿಂದಾಗಿ ನೀವು ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ. ಈ ಅವಧಿಯಲ್ಲಿ ಮಾಡಿದ ಹೂಡಿಕೆಯಿಂದ ನೀವು ಬಯಸಿದ ಫಲಿತಾಂಶಗಳನ್ನು ಪಡೆಯದಿರುವ ಸಾಧ್ಯತೆಯೂ ಇದೆ. ನೀವು ಆಸ್ತಿ ಅಥವಾ ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದರೆ ಇದು ಸರಿಯಾದ ಸಮಯವಲ್ಲ. ಇನ್ನೂ ಸ್ವಲ್ಪ ಸಮಯ ಕಾಯುವಂತೆ ಸಲಹೆ ನೀಡಲಾಗಿದೆ.
ಪರಿಹಾರ: ಬಾದಾಮಿ, ತೆಂಗಿನಕಾಯಿಯನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ಹರಿಯುವ ನೀರಿಗೆ ಬಿಡಿ.
ಮೀನ ರಾಶಿ
ಮಿಥುನ ರಾಶಿಯವರಿಗೆ ಈ ಸಮಯವು ಏರಿಳಿತಗಳಿಂದ ಕೂಡಿರಬಹುದು. ವಿರೋಧಿಗಳು ನಿಮ್ಮ ಹೆಸರು ಹಾಳು ಮಾಡಲು ಪ್ರಯತ್ನಿಸಬಹುದು. ಕಚೇರಿಯಲ್ಲಿ ನೀವು ಜಾಗರೂಕರಾಗಿರಬೇಕು, ಇಲ್ಲದಿದ್ದರೆ ನಿಮಗೆ ತೊಂದರೆಯಾಗಬಹುದು. ವೈವಾಹಿಕ ಜೀವನದಲ್ಲಿ ಹೊಂದಾಣಿಕೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ, ಸಂಗಾತಿಗೆ ಸಮಯ ಕೊಡಿ.
ಪರಿಹಾರ: ಆಲದ ಮರಕ್ಕೆ ನೀರು ಹಾಕಿ
ಕರ್ಕ ರಾಶಿ
ಈ ಅವಧಿ ನಿಮಗೆ ಉತ್ತಮವಾಗಿದೆ. ಕೆಲಸದ ಸ್ಥಳದಲ್ಲಿ ಪರಿಸ್ಥಿತಿಗಳು ನಿಮಗೆ ಅನುಕೂಲಕರವಾಗಿರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಅದೃಷ್ಟದ ಬೆಂಬಲ ನಿಮ್ಮ ಜೊತೆಗಿರಲಿದೆ. ತಂದೆಯೊಂದಿಗಿನ ಭಿನ್ನಾಭಿಪ್ರಾಯ ಮಾತನಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸುವುದು ಉತ್ತಮ. ಉಳಿದಂತೆ ಈ ಅವಧಿ ನಿಮಗೆ ಅನುಕೂಲಕರವಾಗಿದೆ.
ಪರಿಹಾರ: ಪ್ರತಿದಿನ ವಿಷ್ಣು ಸಹಸ್ರನಾಮ ಪಠಿಸಿ.
ಸಿಂಹ ರಾಶಿ
ಸಿಂಹ ರಾಶಿ ಈ ಅವಧಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೆಲಸದ ಜಾಗದಲ್ಲಿ ಸಮಸ್ಯೆಗಳು ಉಂಟಾಗಬಹುದು. ಈ ಸಮಯದಲ್ಲಿ ನೀವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಮಕ್ಕಳ ಆರೋಗ್ಯ ಚಿಂತೆ ಕೂಡ ಕಾಡುವುದು. ಅವಾಹಿತರ ವಿವಾಹ ಪ್ರಯತ್ನ ನಡೆಯುತ್ತಿದ್ದರೆ ಅಡೆತಡೆಗಳು ಎದುರಾಗಬಹುದು. ವಿದ್ಯಾರ್ಥಿಗಳು ಅಧಿಕ ಶ್ರಮ ಹಾಕಬೇಕಾಗುವುದು.
ಪರಿಹಾರ: ಕೇಸರಿ ತಿಲಕವನ್ನು ಹಣೆಗೆ ಹಚ್ಚಿಕೊಳ್ಳಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ಅವಧಿ ಸಾಮಾನ್ಯವಾಗಿರಲಿದೆ. ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ವೈಯಕ್ತಿಕ ಜೀವನದಲ್ಲಿ ಏರುಪೇರಿನ ಪರಿಸ್ಥಿತಿ ಇರುತ್ತದೆ. ಆರ್ಥಿಕ ಸ್ಥಿತಿಯು ಅಷ್ಟು ಚೆನ್ನಾಗಿರುವುದಿಲ್ಲ. ವೈವಾಹಿಕ ಜೀವನದಲ್ಲಿ ಸಮಸ್ಯೆ ಬಗೆಹರಿಸಲು ನೀವು ವೃತ್ತಿ ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡಿ. ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ.
ಪರಿಹಾರ: ಗುರುವಾರ ದನಕ್ಕೆ ಬೆಲ್ಲ, ಹಿಟ್ಟನ್ನು ನೀಡಿ.
ತುಲಾ ರಾಶಿ
ತುಲಾ ರಾಶಿಯವರು ಈ ಸಮಯದಲ್ಲಿ ಈ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ. ಹಣಕ್ಕೆ ಸಂಬಂಧಿಸಿದಂತೆ ಕೆಲ ಸಮಸ್ಯೆಗಳು ಬರಬಹುದು. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಕೂಡ ಕಡಿಮೆಯಾಗಬಹುದು. ನೀವು ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಆರೋಗ್ಯದ ಕಡೆಯೂ ಗಮನಹರಿಸಿ.
ಪರಿಹಾರ: ವಯಸ್ಸಾದ ಬ್ರಾಹ್ಮಣನಿಗೆ ಹಳದಿ ವಸ್ತ್ರವನ್ನು ನೀಡಿ.
ವೃಶ್ಚಿಕ ರಾಶಿ
ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕೆಲ ಸಮಸ್ಯೆಗಳು ಎಉದುರಾಗಬಹುದು. ಇನ್ನು ಈ ಅವಧಿಯಲ್ಲಿ ನಿಮ್ಮ ಆರೋಗ್ಯ ಬಗ್ಗೆ ಹೇಳುವುದಾದರೆ ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು ಖುಡ ಕಾಡಬಹುದು. ಈ ಅವಧಿಯಲ್ಲಿ ವೈವಾಹಿಕ ಜೀವನದಲ್ಲಿ ತಪ್ಪು ಕಲ್ಪನೆ ಬರಬಹುದು. ತಪ್ಪು ತಿಳುವಳಿಕೆಯಿಂದ ಸಂಗಾತಿಯೊಂದಿಗೆ ಜಗಳವಾಡುವ ಬದಲಿಗೆ ಸಮಧಾನದಿಂದ ಪರಿಸ್ಥಿತಿ ನಿಭಾಯಿಸಿ.
ಪರಿಹಾರ: ಗುರುವಾರ ಬಾಳೆಗಿಡಕ್ಕೆ ನೀರು ಹಾಕಿ, ಗುರು ಬೀಜ ಮಂತ್ರ ಪಠಿಸಿ.
ಧನು ರಾಶಿ
ಧನು ರಾಶಿಯವರು ತಮ್ಮ ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಸಲಹೆ ನೀಡಲಾಗುದೆ. ಸಣ್ಣಪುಟ್ಟ ಸಮಸ್ಯೆ ಇದ್ದರೂ ವೈದ್ಯರನ್ನು ಸಂಪರ್ಕಿಸಿ. ಮನೆಯ ವಾತಾವರಣ ಅಷ್ಟು ಚೆನ್ನಾಗಿರಲ್ಲ, ಮನೆಯಲ್ಲಿ ಕೆಲ ಸಮಸ್ಯೆಗಳು ಉಂಟಾಗಬಹುದು. ಈ ಸಮಯದಲ್ಲಿ ತಾಳ್ಮೆಯಿಂದಿರಲು ನಿಮಗೆ ಸಲಹೆ ನೀಡಲಾಗಿದೆ. ಆರೋಗ್ಯದ ಕಡೆಗೆ ಗಮನಹರಿಸಿ.
ಪರಿಹಾರ: ಗುರುವಾರ ಉಪವಾಸವಿದ್ದು ಮನೆ ದೇವರನ್ನು ಆರಾಧಿಸಿ.
ಮಕರ ರಾಶಿ
ಗುರು ಮೀನ ರಾಶಿಯಲ್ಲಿ ಅಸ್ತಂಗತವಾದಾಗ ಮಕರ ರಾಶಿಯವರಿಗೂ ಶುಭ ಸೂಚನೆ ನೀಡುತ್ತಿಲ್ಲ. ಹಣದ ವಿಷಯದಲ್ಲಿ ಒಡಹುಟ್ಟಿದವರೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಕಷ್ಟದ ಸಮಯದಲ್ಲಿ, ನೀವು ಆತ್ಮವಿಶ್ವಾಸ ಮತ್ತು ಧೈರ್ಯದ ಕೊರತೆಯನ್ನು ಅನುಭವಿಸುವಿರಿ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ನಿಮಗೆ ಸಲಹೆ ನೀಡಲಾಗಿದೆ. ಅಹಂಕಾರ ದೂರವಿಟ್ಟರೆ ನಿಮಗೆ ಮನಸ್ಸಿಗೆ ನೆಮ್ಮದಿ ಸಿಗುವುದು.
ಪರಿಹಾರ: ಶನಿವಾರ ಬಡವರಿಗೆ ಬಾಳೆಹಣ್ಣು ಹಂಚಿ
ಕುಂಭ ರಾಶಿ
ಕುಂಭ ರಾಶಿಯವರು ಈ ಸಮಯದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ಹಣವನ್ನು ಹೂಡಿಕೆ ಮಾಡುವುದನ್ನು ತಪ್ಪಿಸಿ. ಈ ಸಮಯದಲ್ಲಿ ನೀವು ಗಂಟಲು ಸಂಬಂಧಿತ ಸಮಸ್ಯೆಯನ್ನು ಹೊಂದಿರಬಹುದು. ಮನೆಯ ವಾತಾವರಣ ಸರಿ ಇರುವುದಿಲ್ಲ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಜಗಳವಾಡಬಹುದು. ಪರಿಸ್ಥಿತಿಯಿಂದ ತಾಳ್ಮೆಯಿಂದ ನಿಭಾಯಿಸಿ.
ಪರಿಹಾರ: ಪ್ರತಿದಿನ ಗುರು ಬೀಜ ಮಂತ್ರ ಪಠಿಸಿ
ಮೀನ ರಾಶಿ
ಮೀನ ರಾಶಿಯವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳಿರಬಹುದು. ಕೆಲಸದ ಕ್ಷೇತ್ರದಲ್ಲಿ ಅತಿಯಾದ ಒತ್ತಡವು ನಿಮ್ಮ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಬಹುದು. ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲು ಸಲಹೆ ನೀಡಲಾಗಿದೆ. ಕೆಲವು ಹಣಕಾಸಿನ ಸಮಸ್ಯೆಗಳಿರಬಹುದು. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಲು, ನೀವು ಅತಿಯಾಗಿ ಖರ್ಚು ಮಾಡಲು ಹೋಗಬೇಡಿ.
ಪರಿಹಾರ: ಗುರುವಾರ ಹಾಗೂ ವಿಶೇಷ ಕಾರ್ಯಕ್ಕೆ ಹೋಗುವಾಗ ಸಂದರ್ಶನ, ವ್ಯವಹಾರಕ್ಕೆ ಹೋಗುವಾಗ ಹಳದಿ ಬಣ್ಣದ ಡ್ರೆಸ್ ನಿಮಗೆ ಅದೃಷ್ಟಕರ.



Click it and Unblock the Notifications
