Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
2030ರಲ್ಲಿ ವಿಶ್ವಕ್ಕೆ ಮಹಾ ವೈರಸ್ ಕಾಟ: ಜಪಾನ್ ಬಾಬಾ ವಂಗಾ ತತ್ಸುಕಿ ಭವಿಷ್ಯ!
ನೀವು ಬಾಬಾ ವಂಗಾ ಕುರಿತು ಕೇಳಿರಬಹುದು. ಬಲ್ಗೇರಿಯಾದ ಅತೀಂದ್ರಿಯ ಶಕ್ತಿ ಹೊಂದಿದ್ದ ಮಹಿಳೆ ಆಕೆ. ಮುಂದೆ ನಡೆಯಬಹುದಾದ ಹಲವು ರೀತಿಯ ದುರಂತಗಳನ್ನು ಮೊದಲೇ ಊಹಿಸಿರುವ ಮಹಿಳೆ. ಆಕೆ ಹೇಳಿರುವ ಬಹುತೇಕ ಭವಿಷ್ಯವಾಣಿಗಳು ಇಂದಿಗೂ ನಿಜವಾಗುತ್ತಿವೆ. ಹೀಗಾಗಿ ಆಕೆಯನ್ನು ವಿಶ್ವದಾದ್ಯಂತ ಇಂದಿಗೂ ನಂಬುವವರಿದ್ದಾರೆ. ಇನ್ನು ಆಕೆಯ ಹೇಳಿದ ಹಲವು ದುರಂತಕಾರಿ ಭವಿಷ್ಯಗಳ ಕಾರಣದಿಂದಾಗಿಯೇ ಆಕೆಯ ಭವಿಷ್ಯವಾಣಿ ಎಂದರೆ ಜನತೆ ಇಂದಿಗೂ ಭಯ ಬೀಳುವುದು ನೋಡಬಹುದು.
ಆದ್ರೆ ಈ ಬಾಬಾ ವಂಗಾ ಅವರಂತೆ ಭವಿಷ್ಯ ನುಡಿಯುವ ಹಲವಾರು ಮಂದಿ ಇರುವುದು ಕೂಡ ನಾವು ನೋಡಬಹುದು. ಇನ್ನು ಜಪಾನ್‌ನಲ್ಲೂ ಕೂಡ ಆಧುನಿಕ ಬಾಬಾ ವಂಗಾ ಎಂದು ಕರೆಯಲ್ಪಡುವ ವ್ಯಕ್ತಿ ಕೂಡ ಈಗ ಮುಂದೆ ಸಂಭವಿಸಬಹುದಾದ ದೊಡ್ಡ ಘಟನೆಯ ಕುರಿತಾಗಿ ನುಡಿದಿರುವ ಭವಿಷ್ಯವು ಈಗ ಎಲ್ಲರಲ್ಲೂ ಆಘಾತ ಉಂಟು ಮಾಡಿದೆ.

ಜಪಾನ್‌ನ ಪ್ರವಾದಿ ರಿಯೊ ತತ್ಸುಕಿ, 2030ರಲ್ಲಿ ನಡೆಯಬಹುದಾದ ಬಹುದೊಡ್ಡ ಘಟನೆಯೊಂದರ ಕುರಿತು ಭವಿಷ್ಯ ನುಡಿದಿರುವುದು ಇಡೀ ವಿಶ್ವಕ್ಕೆ ಆಘಾತ ತಂದಿದೆ, ಆಕೆಯ ಪ್ರಕಾರ 2030ರಲ್ಲಿ ಇಡೀ ವಿಶ್ವದಲ್ಲಿ ಮಾರಣಾಂತಿಕ ವೈರಸ್ ಹರಡಲಿದೆ, ಇದರಿಂದ ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾಗಲಿದೆ ಎಂದು ಆಕೆ ಭವಿಷ್ಯ ನುಡಿದಿದ್ದಾಳೆ.
ಆಕೆಯ ಪ್ರಕಾರ ಕೋವಿಡ್‌ನಂತೆ ಮಾರಣಾಂತಿಕ ಪರಿಣಾಮ ಉಂಟು ಮಾಡುವಂತಹ ಮಹಾಮಾರಿ ವೈರಸ್ ಕಾಡಲಿದೆ ಎಂದು ಆಕೆ ಹೇಳಿಕೊಂಡಿದ್ದಾರೆ. ಆಕೆ ಹಿಂದಿನಿಂದಲೂ ನುಡಿದಿರುವ ಹಲವು ಭವಿಷ್ಯವಾಣಿಗಳು ನಿಜವಾಗಿವೆ. ಅದರಲ್ಲೂ ಮುಖ್ಯವಾಗಿ ಫ್ರೆಡ್ಡಿ ಮರ್ಕ್ಯುರಿ ಮತ್ತು ರಾಜಕುಮಾರಿ ಡಯಾನಾ ಅವರ ಸಾವು, 2011ರ ಕೋಬ್ ಭೂಕಂಪ ಮತ್ತು COVID-19 ಸಾಂಕ್ರಾಮಿಕ ರೋಗದಂತಹ ವಿಶ್ವಕ್ಕೆ ಕಾಡಿದ ಸಮಸ್ಯೆಯ ಕುರಿತು ಆಕೆ ಭವಿಷ್ಯ ನುಡಿದಿದ್ದಳು, ಅದು ನಿಜವಾಗಿರುವುದು ಕೂಡ ನಾವು ನೆನೆಯಬಹುದು.
ಆಕೆ ಬರೆದಿರುವ ದಿ ಫ್ಯೂಚರ್ ಆಸ್ ಐ ಸೀ ಇಟ್ ಎಂಬ ಪುಸ್ತಕದಲ್ಲಿ ದುರಂತಗಳ ಕುರಿತಾದ ಭವಿಷ್ಯವಾಣಿಗಳ ಹೇಳಲಾಗಿದೆ. 2020ರಲ್ಲಿ ವೈರಸ್‌ನಿಂದ ಸಾವು ನೋವು ಹೆಚ್ಚಾಗಲಿದೆ ಎಂಬುದನ್ನು ವಿವರಿಸಲಾಗಿತ್ತು. ಹಾಗೆ 2030ರಲ್ಲಿ ಈ ರೀತಿಯ ವೈರಸ್‌ನಿಂದ ಸಾವು ನೋವು ಮತ್ತೆ ಉತ್ತುಂಗಕ್ಕೆ ಏರಲಿದೆ ಎಂದು ಆಕೆಯ ಪುಸ್ತಕದಲ್ಲಿ ಉಲ್ಲೇಖವಿದೆ.
ಜುಲೈನಲ್ಲಿ ಕಾದಿದೆ ಮತ್ತೊಂದು ಅಪಾಯ
ಭೂಕಂಪನಗಳ ನಾಡು ಎಂದೇ ಕರೆಯಲ್ಪಡುವ ಜಪಾನ್‌ನಲ್ಲಿ ಮತ್ತೆ ಭೂಕಂಪ ಸಂಭವಿಸಲಿದೆ ಎಂದು ಆಕೆ ಹೇಳಿದ್ದಾರೆ. ಅದರಲ್ಲೂ ಜುಲೈ 2025ರಲ್ಲಿ ಜಪಾನ್‌ನಲ್ಲಿ ಭೀಕರ ಭೂಕಂಪನ ನಡೆಯಲಿದೆ ಎಂದು ಆಕೆ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ. ಹಾಗೆ ಆಕೆ 2011ರಲ್ಲಿ ಸಂಭವಿಸಿದ ಭೀಕರ ಭೂಕಂಪನ ಕುರಿತಾಗಿಯೂ ಕೂಡ ಆಕೆ ಮೊದಲೇ ಊಹಿಸಿದ್ದಳು, ಹಾಗೆ ಫುಕುಶಿಮಾ ಪರಮಾಣು ಸ್ಥಾವರಕ್ಕೆ ಹಾನಿಯಾಗುವ ಸಂಬಂಧ ರಿಯೊ ತತ್ಸುಕಿ ಮೊದಲೇ ಹೇಳಿದ್ದಳು.
ಜಾಗತಿಕವಾಗಿ ಅತೀ ಹೆಚ್ಚು ಭೂಕಂಪನಗಳು ಜಪಾನ್‌ನಲ್ಲಿ ಸಂಭವಿಸುತ್ತವೆ. 2011ರ ಭೂಕಂಪನ ಹಾಗೂ ಸುನಾಮಿಯು ಇಡೀ ಜಪಾನ್ ಅನ್ನೇ ನಡುಗಿಸಿತ್ತು. ಹಾಗೆ ಇದಾದ ಬಳಿಕ ನಿತ್ಯ ಅಲ್ಲಿ ಹತ್ತಾರು ಭಾರಿ ಭೂಕಂಪನದ ಅನುಭವವಾಗುತ್ತದೆ. ಹಾಗೆ ವರ್ಷವೊಂದಕ್ಕೆ 1500ಕ್ಕೂ ಹೆಚ್ಚು ಕಂಪನಗಳು ಸಂಭವಿಸುತ್ತವೆ. ಆದ್ರೆ ಎಲ್ಲವೂ ಹಾನಿಕಾರಕವಾಗಿರುವುದಿಲ್ಲ.
ಸದ್ಯ ಈ ತುತ್ಸುಕಿ ಬರೆದಿರುವ ಈ ಪುಸ್ತಕ ಬಹಳಷ್ಟು ಕಳವಳಕ್ಕೆ ಕಾರಣವಾಗಿದೆ. ಜಪಾನ್ ಸೇರಿದಂತೆ ಹಲವು ಕಡೆಗಳಲ್ಲಿ ಈ ಪುಸ್ತಕಕ್ಕೆ ಬೇಡಿಕೆ ಹೆಚ್ಚಾಗಿದೆ. ವಿಶ್ವದ ಹಲವು ಭಾಗದಲ್ಲಿ ಯಾವೆಲ್ಲಾ ದುರಂತಗಳು ನಡೆಯಲಿದೆ ಎಂಬುದನ್ನು ಆಕೆ ವಿವರಿಸಿರುವುದು ಈ ಪುಸ್ತಕದಲ್ಲಿ ಉಲ್ಲೇಖವಿದೆ.



Click it and Unblock the Notifications

