Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಈ ಜನ್ಮಾಷ್ಟಮಿ 3 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಿದೆ
ಜನ್ಮಾಷ್ಟಮಿ ಶ್ರೀಕೃಷ್ಣ ಪರಮಾತ್ಮನ ಆರಾಧನೆಗೆ ಮೀಸಲಾದ ದಿನ. ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಈ ವರ್ಷದಲ್ಲಿ ಅಷ್ಟಮಿ ತಿಥಿ 6 ಮತ್ತು 7ಕ್ಕೆ ಇದೆ. ಆದರೆ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6ರಂದೇ ಆಚರಿಸಲಾಗುವುದು.
ಪಂಚಾಂಗ ಪ್ರಕಾರ ಅಷ್ಟಮಿ ತಿಥಿ ಸೆಪ್ಟೆಂಬರ್ 6 ಮಧ್ಯಾಹ್ನ 3:37ಕ್ಕೆ ಪ್ರಾರಂಭ
ಸೆಪ್ಟೆಂಬರ್ 7ರಂದು ಸಂಜೆ 04:14ಕ್ಕೆ ಮುಕ್ತಾಯ.
ರೋಹಿಣಿ ನಕ್ಷತ್ರ ಸೆಪ್ಟೆಂಬರ್ 6 ಬೆಳಗ್ಗೆ 09:20ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 7 ಬೆಳಗ್ಗೆ 10:25ರವರೆಗೆ ಇರಲಿದೆ.
ಸೆಪ್ಟೆಂಬರ್ 6ರಂದು ಮಧ್ಯರಾತ್ರಿ 11:57ರಂದು 12:42ರವರೆಗೆ ಪೂಜಾ ಮುಹೂರ್ತವಿದೆ.

ಹಲವು ವರ್ಷಗಳ ಬಳಿಕ ಈ ದಿನ ಮತ್ತಷ್ಟು ವಿಶೇಷವಾಗಿದೆ
ಶ್ರೀಕೃಷ್ಣ ಮಧ್ಯರಾತ್ರಿಯಂದು ಜನಿಸಿದ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಶ್ರೀ ಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಈ ವರ್ಷ ಅಂದ್ರೆ 2023ರ ಕೃಷ್ಣ ಜನ್ಮಾಷ್ಟಮಿಯಂದು ಕೂಡ ರೋಹಿಣಿ ನಕ್ಷತ್ರವಿದೆ. ಸೆಪ್ಟೆಂಬರ್ 6ರಂದು ಮಧ್ಯರಾತ್ರಿ 11:57ರಂದು 12:42ರವರೆಗೆ ಪೂಜಾ ಮುಹೂರ್ತವಿದೆ. ಇದರಿಂದ ಕೂಡ ಈ ವರ್ಷದ ಕೃಷ್ಣ ಜನ್ಮಾಷ್ಟಮಿ ಶ್ರೀಕೃಷ್ಣ ಜನಿಸಿದ ಅದೇ ಘಳಿಗೆಯಂತೆಯೇ ಬಂದಿರುವುದು ತುಂಬಾನೇ ವಿಶೇಷವಾಗಿದೆ.
ಜನ್ಮಾಷ್ಟಮಿ ಮಹತ್ವ
ಶ್ರೀಕೃಷ್ಣನನ್ನು ವಿಷ್ಣುವಿನ 8ನೇ ಅವತಾರವೆಂದು ಹೇಳಲಾಗುವುದು. ದುಷ್ಟರ ಶಿಕ್ಷೆ ನೀಡಿ, ಶಿಷ್ಟರ ಪಾಲನೆಗಾಗಿ ಶ್ರೀಕೃಷ್ಣನ ಅವತಾರ ಎತ್ತಿದ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಶ್ರೀ ಕೃಷ್ಣ ಜನಿಸಿದ ಎಂದು ಹೇಳಲಾಗುವುದು. ಈ ವರ್ಷ ಅಧಿಕ ಶ್ರಾವಣ ಮಾಸ ಬಂದಿರುವುದರಿಂದ ದಕ್ಷಿಣ ಭಾರತದಲ್ಲಿ ಶ್ರಾವಣದ ಅಷ್ಟಮಿಯಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುವುದು (ಉತ್ತರ ಭಾರತದಲ್ಲಿ ಭಾದ್ರಪದ ಮಾಸ). ದ್ವಾಪರ ಯುಗದಲ್ಲಿ ದೈವಿಕ ರೂಪದಲ್ಲಿ ಜನಿಸಿದನು ಶ್ರೀಕೃಷ್ಣ.
ಈ ದಿನದಂದು ಬರೀ ಹಣ್ಣು ಹಾಗೂ ನೀರನ್ನು ಸೇವಿಸಿ ಉಪವಾಸವನ್ನು ಮಾಡುತ್ತಾರೆ. ಈ ದಿನ ಕೃಷ್ಣ ಪರಮಾತ್ಮನಿಗೆ ಹಾಲು, ಜೇನುತುಪ್ಪ, ಗಂಗಾಜಲದಿಂದ ಸ್ನಾನ ಮಾಡಿಸಿ, ನಂತರ ಶ್ರೀ ಕೃಷ್ಣನ ಅಲಂಕರಿಸಿ ಪೂಜಿಸಲಾಗುವುದು. ಇದರ ಜೊತೆಗೆ ಮೊಸರು ಕುಡಿಕೆ ಒಡೆಯುವುದು ಮುಂತಾದ ಆಟಗಳನ್ನು ಕೂಡ ಆಡುವುದರಿಂದ ಈ ದಿನದ ಸಂಭ್ರಮ ಮತ್ತಷ್ಟು ಹೆಚ್ಚಾಗುವುದು.
ಈ ಕೃಷ್ಣ ಜನ್ಮಾಷ್ಟಮಿಗೆ ಎಲ್ಲಾ ರಾಶಿಗಳ ಮೇಲೆ ಶ್ರೀಕೃಷ್ಣನ ಕೃಪೆ ಇರಲಿದೆ, ಆದರೆ ಈ ರಾಶಿಗಳ ಮೇಲೆ ವಿಶೇಷ ಕೃಪೆ ಇರಲಿದೆ.
ವೃಷಭ ರಾಶಿ
ವೃಷಭ ರಾಶಿಯವರ ಮೇಲೆ ಶ್ರೀಕೃಷ್ಣ ವಿಶೇಷ ಕೃಪೆ ಇರಲಿದೆ. ಈ ಜನ್ಮಾಷ್ಟಮಿ ನಿಮಗೆ ತುಂಬಾನೇ ವಿಶೇಷವಾಗಿರಲಿದೆ. ನಿಮಗೆ ಯಶಸ್ಸು ದೊರೆಯಲಿದೆ. ಈ ದಿನ ನೀವು ಏನಾದರೂ ಹೊಸ ಕಾರ್ಯ ಮಾಡಿದರೆ ಅದರಲ್ಲಿ ಯಶಸ್ಸು ಕಾಣುವಿರಿ. ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ.
ಕರ್ಕ ರಾಶಿ
ಈ ಕೃಷ್ಣ ಜನ್ಮಾಷ್ಟಮಿಯ ಬಳಿಕ ನಿಮ್ಮ ಜೀವನದಲ್ಲಿ ಅನೇಕ ಧನಾತ್ಮಕ ಬದಲಾವಣೆಗಳು ಉಂಟಾಗಲಿದೆ. ನೀವು ಬಯಸಿದಂತೆಯೇ ಫಲಿತಾಂಶ ದೊರೆಯಲಿದೆ. ಬಾಕಿಯುಳಿದಿರುವ ಕೆಲಸಗಳು ಕೂಡ ಪೂರ್ಣಗೊಳ್ಳಲಿದೆ. ವೃತ್ತಿ ಜೀವನದಲ್ಲಿ ಬೆಳವಣಿಗೆಯನ್ನು ಕಾಣುವಿರಿ.
ಸಿಂಹ ರಾಶಿ
ಸಿಂಹ ರಾಶಿಯವರ ಮೇಲೆ ಕೂಡ ಶ್ರೀಕೃಷ್ಣನ ವಿಶೇಷ ಕೃಪೆ ಇರಲಿದೆ. ನೀವು ನಿಮ್ಮ ಕೆಲಸದಲ್ಲಿ ಒಳ್ಳೆಯ ಫಲಿತಾಂಶ ಕಾಣುವಿರಿ. ನಿಮ್ಮ ಬಯಕೆ ಈಡೇರಲಿದೆ. ವೃತ್ತಿ ಜೀವನದಲ್ಲಿ ಯಶಸ್ಸು ದೊರೆಯಲಿದೆ.



Click it and Unblock the Notifications
