Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಬೆಂಗಳೂರಿನ ಮೇಘನಾ ಫುಡ್ಸ್ ಮೇಲೆ ಐಟಿ ದಾಳಿ..! ಹೋಟೆಲ್ ಮಾಲೀಕರು ಯಾರು ಗೊತ್ತಾ?
ಬೆಂಗಳೂರಲ್ಲಿ ಎಷ್ಟು ಹೋಟೆಲ್, ರೆಸ್ಟೋರೆಂಟ್‌ಗಳಿವೆ ಅಂದ್ರೆ ನೀವು ಎಣಿಸಿ ಹೇಳೋದು ತುಂಬ ಕಷ್ಟ. ಯಾಕಂದ್ರೆ ಬೆಂಗಳೂರು ನಗರದಲ್ಲಿ ಬೀದಿ ಬೀದಿಯಲ್ಲೂ ಹೋಟೆಲ್ ಗಳಿವೆ. ಅದರಲ್ಲೂ ಫೇಮಸ್ ಆಗಿರುವ ಹೋಟೆಲ್‌ಗಳಲ್ಲಿ ನಿತ್ಯವು ಜನರಿಂದ ತುಂಬಿರುತ್ತದೆ.
ಅದರಲ್ಲಿ ರಾಮೇಶ್ವರಂ ಕೆಫೆ, ಮೇಘನಾ ಬಿರಿಯಾನಿ ಸಹ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಹೋಟೆಲ್‌ಗಳಾಗಿವೆ. ಮೇಘನಾ ಬಿರಿಯಾನಿ ಬೆಂಗಳೂರಿನ ಫೇಮಸ್ ಬಿರಿಯಾನಿ ಹಬ್‌ಗಳಲ್ಲಿ ಒಂದಾಗಿದೆ. ಆದರೆ ಈಗ ಈ ಮೇಘನಾ ಫುಡ್ಸ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಜನಪ್ರಿಯ ಬಿರಿಯಾನಿ ರೆಸ್ಟೋರೆಂಟ್ ಮೇಘನಾ ಫುಡ್ಸ್ ಮಳಿಗೆಗಳ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಮಂಗಳವಾರ ಬೆಳಗ್ಗೆ ದಾಳಿ ನಡೆಸಿವೆ. ಆದರೆ ಹೋಟೆಲ್ ಉದ್ಯಮ ಹೊರತು ಪಡಿಸಿ ಮೇಘನಾ ಫುಡ್ಸ್ ಬೇರೆ ಯಾವುದೇ ಉದ್ಯಮ ನಡೆಸುತ್ತಿಲ್ಲ. ಹೀಗಿದ್ದರೂ ಹೋಟೆಲ್ ಮೇಲೆ ದಾಳಿಯಾಗಿದೆ.
2006ರಲ್ಲಿ ಕೋರಮಂಗಲದಲ್ಲಿ ಆರಂಭಗೊಂಡಿದ್ದ ಮೇಘನಾ ಬಿರಿಯಾನಿ ಬಳಿಕ ಇಡೀ ಕರ್ನಾಟಕದಲ್ಲೇ ಫೇಮಸ್ ಆಗಿತ್ತು. ಇಲ್ಲಿ ಆಂಧ್ರ ಶೈಲಿಯ ಪಾಕಪದ್ಧತಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಹೈದರಾಬಾದ್ ಮೂಲದ ಬ್ಯುಸಿನೆಸ್ ಗ್ರೂಪ್ ಒಡೆತನದಲ್ಲಿ ಈ ಮೇಘನಾ ಫುಡ್ಸ್ ಕಾರ್ಯನಿರ್ವಹಿಸುತ್ತಿದೆ.
ಸದ್ಯ ಈ ಮೇಘನಾ ಬಿರಿಯಾನಿ ಬರೋಬ್ಬರಿ 9 ಶಾಖೆಗಳ ಹೊಂದಿದ್ದು ವಾರ್ಷಿಕವಾಗಿ ಉತ್ತಮ ಆದಾಯ ಗಳಿಸುತ್ತಿದೆ. ಇದೇ ಕಾರಣಕ್ಕಾಗಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಪದ್ಮಾ ಅಟ್ಲೂರಿ ಮತ್ತು ರಾಂಬಾಬು ಮಾಂಡವ ಎಂಬುವವರು ಇದರ ಮಾಲೀಕರಾಗಿದ್ದು, ತಿಂಗಳ ವರಮಾನ ಕೋಟಿ ದಾಟಲಿದೆ ಎಂದು ವರದಿಯಾಗಿದೆ. ಅದರಲ್ಲೂ ಬೆಂಗಳೂರಿನ ಹೈಟೆಕ್ ಏರಿಯಾದಲ್ಲಿ ಮೇಘನಾ ಬಿರಿಯಾನಿ ಹೌಸ್‌ಗಳ ಕಾಣಬಹುದು.
ಬರೀ ಮೇಘನಾ ಫುಡ್ಸ್ ಅಲ್ಲ ಚಟ್ನೀಸ್‌ಗೂ ಇವರೇ ಮಾಲಿಕರು
ನೀವು ಚಟ್ನೀಸ್ ಹೋಟೆಲ್‌ಗೆ ಭೇಟಿ ನೀಡಿ ಅಲ್ಲಿನ ತಿಂಡಿ ಸವಿದಿರಬಹುದು. ಬೆಂಗಳೂರು ಸೇರಿ ದಕ್ಷಿಣ ಭಾರತದ ಜನಪ್ರಿಯ ಹೋಟೆಲ್‌ಗಳಲ್ಲಿ ಇದೂ ಒಂದು ಇದೂ ಸಹ ಪದ್ಮಾ ಅಟ್ಲೂರಿ ಅವರ ಒಡೆತನದಲ್ಲಿದೆ. ಬೆಂಗಳೂರಿನಲ್ಲೂ ಇವರ ಶಾಖೆ ಇದೆ. ಈ ಶಾಖೆಯ ಮೇಲೂ ಐಟಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಮೇಘನಾ ಬಿರಿಯಾನಿ ಯಾಕೆ ಫೇಮಸ್?
ಬೆಂಗಳೂರಿನಲ್ಲಿ ಮೇಘನಾ ಬಿರಿಯಾನಿ ಸಿಕ್ಕಾಪಟ್ಟೆ ಫೇಮಸ್. ಇಲ್ಲಿ ನೀಡಲಾಗುವ ರುಚಿಗೆ ಬಿರಿಯಾನಿ ಪ್ರಿಯರು ಹುಡುಕಿಕೊಂಡು ಹೋಟೆಲ್‌ಗೆ ಆಗಮಿಸುತ್ತಾರೆ. ಬಿರಿಯಾನಿ ಮಾತ್ರವಲ್ಲ ಎಲ್ಲಾ ರೀತಿಯ ಡಿಷ್‌ಗಳು ಇಲ್ಲಿ ಲಭ್ಯವಿದೆ. ದಕ್ಷಿಣ ಭಾರತದ ಖಾದ್ಯ ಆಂಧ್ರ ಶೈಲಿಯ ಬಿರಿಯಾನಿ ಈ ಹೋಟೆಲ್‌ನ ವಿಶೇಷತೆಗಳಲ್ಲಿ ಒಂದಾಗಿದೆ.
ಯಾರು ಈ ಪದ್ಮಾ ಅಟ್ಲೂರಿ?
ಮೇಘನಾ ಫುಡ್ಸ್ ಹಾಗೂ ಚಟ್ನೀಸ್ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ. ಹೈದರಾಬಾದ್ ಹಾಗೂ ಬೆಂಗಳೂರಿನಲ್ಲೂ ಶಾಖೆ, ಕಚೇರಿ ಮೇಲೆ ದಾಳಿ ನಡೆದಿದೆ. ಹಾಗಾದರೆ ಇಷ್ಟೊಂದು ಪ್ರಮಾಣದಲ್ಲಿ ದಾಳಿ ನಡೆಸಲು ಕಾರಣವೂ ಇದೆ. ಏಕೆಂದರೆ ಎಪಿಸಿಸಿ ಅಧ್ಯಕ್ಷೆ ವೈ.ಎಸ್ ಶರ್ಮಿಳಾ ಅವರ ಅತ್ಯಂತ ಆಪ್ತ ವಲಯದಲ್ಲಿ ಈ ಪದ್ಮಾ ಅಟ್ಲೂರಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಸಹೋಧರಿಯಾಗಿರುವ ಶರ್ಮಿಳಾ ಇದೇ ವರ್ಷ ಜನವರಿಯಲ್ಲಿ ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಸೇರುತ್ತಿದ್ದಂತೆ ಆಕೆಗೆ ಅಧ್ಯಕ್ಷೆ ಪಟ್ಟ ನೀಡಲಾಗಿತ್ತು. ಈ ಶರ್ಮಿಳಾ ಅವರ ಮಗನನ್ನೇ ಪದ್ಮಾ ಅಟ್ಲೂರಿ ಅವರ ಪುತ್ರಿ ವಿವಾಹವಾಗಿದ್ದಾರೆ. ಈ ಹಿನ್ನೆಲೆ ಇಬ್ಬರೂ ಸಂಬಂಧಿಕರಾಗಿದ್ದು, ಈ ಐಟಿ ದಾಳಿ ರಾಜಕೀಯ ರೂಪ ತಳೆಯುತ್ತಿದೆ.



Click it and Unblock the Notifications
