Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಕ್ಷತ್ರಕ್ಕೆ ಭಾರತೀಯ ರುಚಿ! ಈ 3 ಸಿಹಿ ತಿನಿಸು ಕೊಂಡೊಯ್ದ ಶುಭಾಂಶು.. ನಿಮಗೆ ಗೊತ್ತಾ?
ಮೂರು ಭಾರತೀಯ ಸಿಹಿ ತಿನಿಸುಗಳೊಂದಿಗೆ ಬಾಹ್ಯಾಕಾಶಕ್ಕೆ ಶುಭಾಂಶು. ಶುಭಾಂಶು ಶುಕ್ಲಾ (Shubhanshu Shukla) ಅವರು ತೆಗೆದುಕೊಂಡು ಹೋದ ಆಹಾರದಲ್ಲಿ ಮೈಸೂರಿನ ಮೊಸರನ್ನ ಸಹ ಇದೆ. ಹೌದು, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ ಅಂದರೆ, ಸ್ಪೇಸ್ ಎಕ್ಸ್‌ನ ಫಾಲ್ಕನ್‌ಗೆ ತಲುಪಿದ್ದಾರೆ. ರಾಕೇಶ್ ಶರ್ಮಾ ನಂತರ ಅಲ್ಲಿಗೆ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ ಪಾತ್ರರಾಗಿದ್ದಾರೆ. ಇವರು ಜೊತೆಗೆ ಇತರೆ ನಾಲ್ಕು ದೇಶಗಳ ಗಗನಯಾತ್ರಿಗಳು ಆಕ್ಸಿಯಮ್-4 ಮಿಷನ್ (Axiom-4 Mission) ನಲ್ಲಿದ್ದಾರೆ. ಇದೀಗ, ಶುಭಾಂಶು ಅವರು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಿರುವ 3 ಭಾರತೀಯ ಸಿಹಿ ತಿನಿಸುಗಳ (Indian Sweets) ಬಗ್ಗೆ ತಿಳಿಸಿದ್ದಾರೆ.
ಶುಭಾಂಶು ಶುಕ್ಲಾ ಅವರು ಭಾರತದ ಹೆಸರನ್ನು ಜಗತ್ತಿನಾದ್ಯಂತ ಬೆಳಗಿಸುವುದರ ಜೊತೆಗೆ ದೇಶದ ಸಾಂಸ್ಕೃತಿಕ ಸಿಹಿ ತಿನಿಸುಗಳನ್ನು ಸಹ ಅಂತರಿಕ್ಷಕ್ಕೆ ಕೊಂಡೊಯ್ದಿದ್ದಾರೆ. ತಮ್ಮ ಕಾರ್ಯಾಚರಣೆಯ ಸಮಯದಲ್ಲಿ, ಅವರು ಭಾರತದ ರುಚಿ ಮತ್ತು ಸಂಪ್ರದಾಯದ ಪರಿಮಳವನ್ನು ಅಲ್ಲಿಯೂ ಉಳಿಸಿಕೊಳ್ಳಲು ಮೂರು ಸಾಂಪ್ರದಾಯಿಕ ಭಾರತೀಯ ಸಿಹಿ ತಿಂಡಿಗಳನ್ನು ತಮ್ಮೊಂದಿಗೆ ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಹೌದು, ಶುಭಾಂಶು ಅವರು ತಮ್ಮೊಂದಿಗೆ ಕ್ಯಾರೆಟ್ ಹಲ್ವಾ, ಹೆಸರು ಬೇಳೆ ಹಲ್ವಾ ಮತ್ತು ಮಾವಿನ ಹಣ್ಣಿನ ರಸವನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಶುಭಾಂಶು ಅವರೇ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದಾರೆ. ಈ ಸಿಹಿತಿಂಡಿಗಳನ್ನು ತಮ್ಮ ಸಹೋದ್ಯೋಗಿಗಳೊಂದಿಗೆ ಸವಿದು ಎಲ್ಲರಿಗೂ ತುಂಬಾ ಇಷ್ಟವಾಯಿತು ಎಂದು ಶುಭಾಂಶು ಹೇಳಿದರು. ಆ ಮೂರು ಸಿಹಿತಿಂಡಿಗಳನ್ನು ತಯಾರಿಸುವ ಸುಲಭ ವಿಧಾನ ಇಲ್ಲಿದೆ.

ನಕ್ಷತ್ರಗಳಿಗೆ ತಲುಪಿದ ಸಿಹಿ ತಿನಿಸು
ಶುಕ್ಲಾ ಅವರೊಂದಿಗೆ ಪೆಗ್ಗಿ ವಿಟ್ಸನ್ (USA), ಮಿಷನ್ ಕಮಾಂಡರ್ ಸವೊಸ್ಜ್ ಉಜ್ನಾನ್ಸ್ಕಿ (ಪೋಲ್ಯಾಂಡ್), ಮಿಷನ್ ಸ್ಪೆಷಲಿಸ್ಟ್ ಟಿಬೋರ್ ಕಪು (ಹಂಗೇರಿ), ಮಿಷನ್ ಸ್ಪೆಷಲಿಸ್ಟ್ ಇದ್ದಾರೆ. ಶುಕ್ಲಾ ಅವರು ತಮ್ಮ ಸಹ ಗಗನಯಾತ್ರಿಗಳಿಗೆ ಮನೆಯಲ್ಲಿ ತಯಾರಿಸಿದ ಭಾರತೀಯ ಸಿಹಿತಿಂಡಿಗಳನ್ನು ನೀಡುವ ಮೂಲಕ, ಬಾಹ್ಯಾಕಾಶದಲ್ಲಿ ಕುಟುಂಬದ ಊಟದ ಸುವಾಸನೆಯನ್ನು ಹಬ್ಬಿಸಿದ್ದಾರೆ. ಇವು ಕೇವಲ ತಿನಿಸುಗಳಲ್ಲ. ಅವು ಮನೆಯ ರುಚಿ, ನೆನಪು ಮತ್ತು ಗುರುತನ್ನು ಹೊಂದಿರುವ ತಿನಿಸುಗಳು. ಇವುಗಳನ್ನು ಭೂಮಿಯಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ಬಾಹ್ಯಾಕಾಶಕ್ಕೆ ಕೊಂಡೊಯ್ಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವಿಶೇಷ ಸಂವಾದದಲ್ಲಿ, ಶುಕ್ಲಾ ಅವರು ಭಾರತೀಯ ಸಂಸ್ಕೃತಿಯನ್ನು ಬಾಹ್ಯಾಕಾಶದಲ್ಲಿ ಪರಿಚಯಿಸಿದ ಕ್ಷಣವನ್ನು ಹಂಚಿಕೊಂಡಿದ್ದಾರೆ.
1. ಕ್ಯಾರೆಟ್ ಹಲ್ವಾ
ಕ್ಯಾರೆಟ್ ಹಲ್ವಾ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಕ್ಯಾರೆಟ್ - 1 ಕೆಜಿ
• ಹಾಲು - 1 ಲೀಟರ್
• ಸಕ್ಕರೆ - 150 ರಿಂದ 200 ಗ್ರಾಂ
• ತುಪ್ಪ - 4 ಚಮಚ
• ಏಲಕ್ಕಿ ಪುಡಿ - ½ ಸ್ಪೂನ್
• ಗೋಡಂಬಿ, ಬಾದಾಮಿ, ಪಿಸ್ತಾ - 2 ರಿಂದ 3 ಚಮಚ
• ದ್ರಾಕ್ಷಿ - ಸ್ವಲ್ಪ
ಕ್ಯಾರೆಟ್ ಹಲ್ವಾ ಮಾಡುವ ವಿಧಾನ
ಮೊದಲು, ಕ್ಯಾರೆಟ್ ಅನ್ನು ತೊಳೆದು ಸಿಪ್ಪೆ ತೆಗೆಯಬೇಕು. ಬಳಿಕ ತುರಿದುಕೊಳ್ಳಬೇಕು. ಒಂದು ಬಾಣಲೆಯಲ್ಲಿ ಹಾಲನ್ನು ಬಿಸಿ ಮಾಡಿ, ನಂತರ ಅದರಲ್ಲಿ ತುರಿದ ಕ್ಯಾರೆಟ್ ಹಾಕಿ. ಮಧ್ಯಮ ಉರಿಯಲ್ಲಿ ನಿರಂತರವಾಗಿ ತಿರುಗಿಸುತ್ತಾ ಹಾಲು ಒಣಗುವವರೆಗೆ ಬೇಯಿಸಿ. ಹಾಲು ಬಹುತೇಕ ಒಣಗಿದ ಬಳಿಕ, ಅದಕ್ಕೆ ತುಪ್ಪವನ್ನು ಹಾಕಿ ಮತ್ತು 10 ನಿಮಿಷಗಳ ಕಾಲ ಹುರಿಯಿರಿ. ಈಗ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ. ಸಕ್ಕರೆ ಹಾಕಿದ ತಕ್ಷಣ ಹಲ್ವಾ ಸ್ವಲ್ಪ ಸಡಿಲವಾಗುತ್ತದೆ. ಆದರೆ, ಬೇಯಿಸಿದ ನಂತರ ಮತ್ತೆ ಗಟ್ಟಿಯಾಗುತ್ತದೆ. ಈಗ ಕತ್ತರಿಸಿದ ಒಣ ಹಣ್ಣುಗಳು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು 5 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ. ಹಲ್ವಾ ಹೊಳೆಯಲು ಪ್ರಾರಂಭಿಸಿಸುತ್ತದೆ. ಅದು ತಳಕ್ಕೆ ಅಂಟಿಕೊಳ್ಳದಂತೆ ನೋಡಿಕೊಳ್ಳಿ. ಇಷ್ಟು ಮಾಡಿದರೆ ಕ್ಯಾರೆಟ್ ಹಲ್ವಾ ಸಿದ್ಧ.
2. ಹೆಸರು ಬೇಳೆ ಹಲ್ವಾ
ಹೆಸರು ಬೇಳೆ ಹಲ್ವಾ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಹೆಸರು ಬೇಳೆ - 1 ಕಪ್
• ತುಪ್ಪ - ½ ಕಪ್
• ಹಾಲು - 2 ಕಪ್
• ಸಕ್ಕರೆ - ¾ ಕಪ್
• ಏಲಕ್ಕಿ ಪುಡಿ - ½ ಸ್ಪೂನ್
• ಕೇಸರಿ - ಸ್ವಲ್ಪ
• ಗೋಡಂಬಿ, ಬಾದಾಮಿ, ಪಿಸ್ತಾ (ಕತ್ತರಿಸಿದ್ದು)
ಹೆಸರು ಬೇಳೆ ಹಲ್ವಾ ಮಾಡುವ ವಿಧಾನ
ಮೊದಲಿಗೆ ಹೆಸರು ಬೇಳೆಯನ್ನು 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನಂತರ ಅದನ್ನು ರುಬ್ಬಿಕೊಳ್ಳಿ. ನೀರನ್ನು ತುಂಬಾ ಕಡಿಮೆ ಹಾಕಿ ಅಥವಾ ಹಾಕದೇ ಇದ್ದರೆ ಒಳ್ಳೆಯದು. ಈಗ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಮತ್ತು ರುಬ್ಬಿದ ಹೆಸರು ಬೇಳೆಯನ್ನು ಹಾಕಿ. ಮಧ್ಯಮ ಉರಿಯಲ್ಲಿ ಸುವಾಸನೆ ಬರುವವರೆಗೆ ನಿರಂತರವಾಗಿ ಹುರಿಯಿರಿ. ಈಗ ಅದಕ್ಕೆ ಹಾಲು ಮತ್ತು ಸಕ್ಕರೆ ಹಾಕಿ. ಗಂಟುಗಳು ಬರದಂತೆ ತಿರುಗಿಸುತ್ತಿರಿ. ಈಗ ಏಲಕ್ಕಿ ಪುಡಿ ಮತ್ತು ನೆನೆಸಿದ ಕೇಸರಿ ಸೇರಿಸಿ. ಹಲ್ವಾ ತುಪ್ಪ ಬಿಡುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ಇಷ್ಟು ಮಾಡಿದರೆ, ರುಚಿಕರವಾದ ಬಿಸಿಬಿಸಿ ಹೆಸರು ಬೇಳೆ ಹಲ್ವಾ ಸಿದ್ಧ. ಇದರ ಮೇಲೆ ಕತ್ತರಿಸಿದ ಗೋಡಂಬಿ, ಬಾದಾಮಿ, ಪಿಸ್ತಾ ಹಾಕಿ ಸವಿಯಬಹುದು.
3. ಮಾವಿನ ರಸ (ಮಾವಿನ ಹಣ್ಣಿನ ಪ್ಯೂರಿ)
ಮಾವಿನ ರಸ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಮಾವಿನ ಹಣ್ಣು - 4 ರಿಂದ 5
• ಸಕ್ಕರೆ - 2 ರಿಂದ 3 ಚಮಚ
• ಹಾಲು - ¼ ಕಪ್ (ನೀರು ಬಳಸಬಹುದು)
• ಏಲಕ್ಕಿ ಪುಡಿ - ¼ ಸ್ಪೂನ್
• ಕೇಸರಿ - 4 ರಿಂದ 5
• ಐಸ್ - ತಂಪಾಗಿಸಲು
ಮಾವಿನ ಹಣ್ಣಿನ ಪ್ಯೂರಿ ಮಾಡುವ ವಿಧಾನ
ಮೊದಲಿಗೆ, ಮಾಗಿದ ಮಾವಿನ ಹಣ್ಣುಗಳನ್ನು ತೆಗೆದುಕೊಂಡು, ಸಿಪ್ಪೆ ತೆಗೆಯಿರಿ. ಈಗ ತಿರುಳನ್ನು ಮಿಕ್ಸಿಗೆ ಹಾಕಿ. ರುಚಿಗೆ ತಕ್ಕಷ್ಟು ಸಕ್ಕರೆ, ಸ್ವಲ್ಪ ಹಾಲು ಅಥವಾ ನೀರು ಮತ್ತು ಏಲಕ್ಕಿ ಪುಡಿ ಹಾಕಿ. ಈಗ ಚೆನ್ನಾಗಿ ರುಬ್ಬಿಕೊಳ್ಳಿ. ನಿಮಗೆ ನಯವಾದ ವಿನ್ಯಾಸ ಬೇಕೆಂದರೆ, ಮಾವಿನ ರಸವನ್ನು ಸೋಸಿಕೊಳ್ಳಿ. ಮಾವಿನ ರಸವನ್ನು ಫ್ರಿಜ್‌ನಲ್ಲಿ ಇಡಿ ಅಥವಾ ಐಸ್ ಸೇರಿಸಿ ಸವಿಯಿರಿ. ಇದರ ಮೇಲೆ ಕೇಸರಿ ಅಥವಾ ಕತ್ತರಿಸಿದ ಗೋಡಂಬಿ, ಬಾದಾಮಿ, ಪಿಸ್ತಾ ಬಳಸಬಹುದು.
ಶುಭಾಂಶು ಶುಕ್ಲಾ ಹೇಳಿದ್ದೇನು?
ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಿಶೇಷ ಸಂವಾದ ನಡೆಸಿದ್ದಾರೆ. ಈ ವೇಳೆ ಶುಕ್ಲಾ ಅವರು ಭಾರತೀಯ ಸಂಸ್ಕೃತಿಯನ್ನು ಬಾಹ್ಯಾಕಾಶದಲ್ಲಿ ಪರಿಚಯಿಸಿದ ಕ್ಷಣವನ್ನು ಹಂಚಿಕೊಂಡರು. 'ನಾನು ನನ್ನೊಂದಿಗೆ ಕ್ಯಾರೆಟ್ ಹಲ್ವಾ, ಹೆಸರು ಬೇಳೆ ಹಲ್ವಾ ಮತ್ತು ಮಾವಿನ ಹಣ್ಣಿನ ರಸದಂತಹ ಆಹಾರ ಪದಾರ್ಥಗಳನ್ನು ಬಾಹ್ಯಾಕಾಶಕ್ಕೆ ತಂದಿದ್ದೇನೆ' ಎಂದು ಹೇಳಿದರು. 'ನನ್ನ ಅಂತರರಾಷ್ಟ್ರೀಯ ಸಹೋದ್ಯೋಗಿಗಳು ಭಾರತೀಯ ಸಂಪ್ರದಾಯದ ಶ್ರೀಮಂತ ಸುವಾಸನೆಯನ್ನು ಸವಿಯಲಿ ಎಂಬುದು ನನ್ನ ಆಶಯವಾಗಿತ್ತು'. ಭಾರತವು ಕೇವಲ ಒಂದು ಮಿಷನ್ ಅನ್ನು ಪ್ರಾರಂಭಿಸಲಿಲ್ಲ, ಊಟವನ್ನೂ ಹಂಚಿಕೊಂಡಿತು ಎಂದು ಹೇಳಿದ್ದಾರೆ.
ಒಟ್ಟಾರೆ, ಭಾರತವು ತನ್ನ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಹೆಸರುವಾಸಿ. ಅದರಲ್ಲೂ ಸಿಹಿ ತಿನಿಸುಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಇಂತಹ ಸಿಹಿ ತಿನಿಸುಗಳನ್ನು ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತರಿಕ್ಷಕ್ಕೆ ತೆಗೆದುಕೊಂಡು ಹೋಗುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.



Click it and Unblock the Notifications
