Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪೂರ್ವಜನರಿಗೆ ಗ್ರಹಣಗಳು ಹೇಗೆ ತಿಳಿಯುತ್ತಿತ್ತು..? ಅವರು ಏನೆಲ್ಲಾ ಕಥೆ ನಂಬಿದ್ದರು ಗೊತ್ತೆ.?
ನಾವು ಇದೇ ವರ್ಷ ನಾಲ್ಕು ಗ್ರಹಣಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಇದೇ ಮಾರ್ಚ್ 25ರಂದು ಚಂದ್ರಗ್ರಹಣ ಹಾಗೂ ಏಪ್ರಿಲ್ 8ರಂದು ಸೂರ್ಯಗ್ರಹಣ ಸಂಭವಿಸಲಿದೆ. ಆದರೆ ಈ ಎರಡೂ ಗ್ರಹಣಗಳು ಭಾರತದಲ್ಲಿ ಗೋಚರವಿಲ್ಲ ಎಂದು ಸಹ ತಿಳಿದುಬಂದಿದೆ. ಆದರೆ ನಾವು ಈಗ ಆಧುನಿಕ ಯುಗದಲ್ಲಿದ್ದೇವೆ. ನಮಗೆ ಸೂರ್ಯ, ಚಂದ್ರ, ನಕ್ಷತ್ರ, ಗ್ರಹಣ ಎಲ್ಲಾ ದಿನಾಂಕಗಳು ಮೊದಲೇ ತಿಳಿಯುತ್ತವೆ.
ಆದರೆ ಹಿಂದೆ ಪುರಾತನ ಕಾಲದಲ್ಲಿ ಕ್ಯಾಲೆಂಡರ್, ಗಡಿಯಾರ ಯಾವುದೂ ಇಲ್ಲದ ಸಮಯದಲ್ಲಿ ಗ್ರಹಣವನ್ನು ಹೇಗೆ ಗುರುತಿಸುತ್ತಿದ್ದರು. ಗ್ರಹಣ ಕಾಲವನ್ನು ಅವರು ಹೇಗೆ ಲೆಕ್ಕ ಹಾಕುತ್ತಿದ್ದರು ಎಂಬುದು ಬಹಳ ವಿಚಿತ್ರವಾಗಿದೆ. ನಾವಿಂದು ಹಳೆಯ ಕಾಲದಲ್ಲಿ ಅಂದರೆ ಕ್ರಿ.ಪೂದಲ್ಲಿ ಜನರು ಗ್ರಹಣವನ್ನು ಹೇಗೆಲ್ಲಾ ನೋಡಿದ್ದಾರೆ. ಅದನ್ನು ಏನೆಂದು ಅರ್ಥೈಸಿದ್ದರು ಎಂಬುದನ್ನು ನೋಡೋಣ.

ನಾವು ಒಬ್ಬ ರೈತ ಎಂದುಕೊಳ್ಳಿ. ನೀವು ನಿಮ್ಮ ಜಮೀನಿನಲ್ಲಿ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ನಿಮ್ಮ ಸುತ್ತಲು ಕತ್ತಲು ಆವರಿಸಿ ಬಿಟ್ಟರೆ ಏನಾಗುತ್ತದೆ. ನಾವು ಯೋಚಿಸಲು ಸಹ ಸಾಧ್ಯವಿಲ್ಲ. ಏಕೆಂದರೆ ಈ ರೀತಿ ನಮಗೆ ತಿಳಿಯದೆ ಇಂದು ಏನು ನಡೆಯುತ್ತಿಲ್ಲ. ಇಲ್ಲಿ ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಮುಂದಿನ 100 ವರ್ಷದಲ್ಲಿ ಏನೆಲ್ಲಾ ಸಂಭವಿಸಲಿದೆ ಎಂಬುದನ್ನು ನಾವು ಇಂದೇ ಕುಳಿತಲ್ಲೇ ಹೇಳುವಷ್ಟು ಮುಂದುವರೆದಿದ್ದೇವೆ.
ಆದ್ರೆ ಹಿಂದೆ ಈ ರೀತಿ ಇರಲಿಲ್ಲ. ಅವರ ಸುತ್ತ ಕತ್ತಲು ಕವಿದಾಗ, ಗ್ರಹಣದಲ್ಲಿ ಸೂರ್ಯ ಮರೆಯಾಗುವಾಗ ಇಡೀ ವಿಶ್ವ ನಿಬ್ಬೆರಗಾಗುತ್ತಿತ್ತು. ಜನರೆಲ್ಲ ಹೆದರಿ ಮನೆ ಸೇರುತ್ತಿದ್ದರು. ಈ ಗ್ರಹಣದ ಸುತ್ತ ಹತ್ತಾರು ಕಥೆಗಳು ಹುಟ್ಟಿಕೊಂಡವು. ಇಂತಹ ಕೆಲವು ಅಚ್ಚರಿಯ ಘಟನೆಗಳನ್ನು ಇಲ್ಲಿ ಹೇಳಿದ್ದೇವೆ ನೋಡಿ.
ಚೀನಾದಲ್ಲಿ ಸೂರ್ಯನನ್ನೇ ನುಂಗಿತ್ತು ಡ್ರ್ಯಾಗನ್
ಚೀನಾ ಈಗ ತುಂಬಾ ಮುಂದುವರೆದ ರಾಷ್ಟ್ರ ಎನಿಸಿಕೊಂಡಿದೆ. ಆದರೆ ಹಿಂದೆ ಗ್ರಹಣ ನಡೆಯವಾಗ ಅಲ್ಲಿನ ಜನ ಡ್ರ್ಯಾಗನ್ ಪ್ರಾಣಿ ಸೂರ್ಯನನ್ನು ನುಂಗುತ್ತಿದೆ ಎಂದು ಭಾವಿಸುತ್ತಿದ್ದರಂತೆ. ಹೀಗಾಗಿ ಗ್ರಹಣದ ಸಮಯ ಅವರು ಹೊರಗೆ ಬರುತ್ತಿರಲಿಲ್ಲವಂತೆ. ಜೊತೆಗೆ ಯಾವಾಗ ಗ್ರಹಣ ಎಂಬ ಸಮಯ ತಿಳಿಯದ ಕಾರಣ ಗ್ರಹಣ ಆರಂಭವಾದ ಕೆಲ ಹೊತ್ತಿನಲ್ಲಿ ಅವರು ಎಲ್ಲಿಯೇ ಇದ್ದರೂ ಮನೆಗೆ ಓಡಿ ಬರುತ್ತಿದ್ದರಂತೆ. ಚೀನಾದ ಹಳೆಯ ಶಾಸನಗಳ ಮೇಲೆ ಡ್ರ್ಯಾಗನ್ ಪ್ರಾಣಿಯು ಸೂರ್ಯನನ್ನು ನುಂಗುತ್ತಿರುವ ಕೆತ್ತನೆಗಳು ಸಿಗುತ್ತವೆ. ಇದು ಗ್ರಹಣ ಕಾಲದಲ್ಲಿ ಜನರು ಭಾವಿಸಿದಂತೆ ಅವರೇ ಮಾಡಿದ್ದ ಕೆತ್ತನೆಗಳಾಗಿವೆ.
ಮುನಿಸಿಕೊಂಡ ಸೂರ್ಯ
ಹಿಂದೆ ಗ್ರಹಣ ಸಂಭವಿಸುವಾಗ ಸೂರ್ಯ ದೇವ ಮುನಿಸಿಕೊಂಡಿದ್ದಾನೆ ಎಂದು ಜನರು ನಂಬುತ್ತಿದ್ದರಂತೆ. ಆತ ಕೋದಲ್ಲಿ ಕೆಂಪಗಾಗಿದ್ದಾನೆ. ಹೀಗಾಗಿ ತಾನು ಬೆಳಕು ನೀಡುವುದನ್ನು ನಿಲ್ಲಿಸುತ್ತಾನೆ ಎಂದು ಆತನಿಗೆ ಬಲಿ ನೀಡುತ್ತಿದ್ದರಂತೆ. ಗ್ರಹಣ ಕೆಲಸ ಹೊತ್ತಿನ ಬಳಿಕ ಮುಕ್ತಾಯಗೊಂಡಾಗ ಸೂರ್ಯ ದೇವ ಸಂಪನ್ನನಾಗಿದ್ದಾನೆ ಎಂದು ಜನರು ಭಾವಿಸುತ್ತಿದ್ದರಂತೆ. ಜೊತೆಗೆ ಗ್ರಹಣದ ಬೇಳೆ ಡೋಲುಗಳ ಬಡಿದು ಸೂರ್ಯ ದೇವನ ಪೂಜೆ ನಡೆಯುತ್ತಿತ್ತಂತೆ.
ಟ್ರಾನ್ಸಿಲ್ವೇನಿಯಾದಲ್ಲಿ ಜನರ ಕೆಟ್ಟ ಕೆಲಸಗಳನ್ನು ನೋಡಿದ ಸೂರ್ಯನು ವಿಷಕಾರಿಯಾದ ಮಳೆ ಸುರಿಸುತ್ತಾನೆ. ಇದರಿಂದ ಗ್ರಹಣ ಸಂಭವಿಸುತ್ತದೆ ಎಂದು ನಂಬಿದ್ದರಂತೆ. ಸೂರ್ಯನು ಕೋಪಗೊಂಡ ಪರಿಣಾಮ ಇಡೀ ಊರನ್ನು ಕತ್ತಲೆ ಮಾಡುತ್ತಾನೆ ಎಂದು ಅಲ್ಲಿನ ಬುಡಕಟ್ಟು ಮಂದಿ ನಂಬಿದ್ದರಂತೆ.
ಗ್ರೀಕ್‌ನಲ್ಲಿ ಮನುಷ್ಯರ ಬಲಿ
ಗ್ರಹಣದಲ್ಲಿ ಸೂರ್ಯ ಮುನಿಸಿಕೊಂಡು ರಾಜನ ಮೇಲೆ ಪ್ರತಿಕಾರ ತೀರಿಸಿಕೊಳ್ಳುತ್ತಾನೆ ಎಂದು ಗ್ರೀಕ್‌ನಲ್ಲಿ ನಂಬಲಾಗಿತ್ತಂತೆ. ಹೀಗಾಗಿ ರಾಜನನ್ನು ಉಳಿಸಲು ಅಲ್ಲಿ ರಾಜನ ಪ್ರತಿಯಾಗಿ ವ್ಯಕ್ತಿಯೊಬ್ಬನನ್ನು ಸೂರ್ಯನಿಗೆ ಬಲಿ ನೀಡುತ್ತಿದ್ದರಂತೆ. ಬಲಿ ನೀಡಿದ ಬಳಿಕ ಸೂರ್ಯ ಮತ್ತೆ ಬೆಳಕು ನೀಡುತ್ತಿದ್ದ ಎಂದು ಅವರು ಬಲವಾಗಿ ನಂಬಿದ್ದರಂತೆ.



Click it and Unblock the Notifications
