Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೃದಯ ಆರೋಗ್ಯ ದಿನ: ಹೃದಯಾಘಾತದಿಂದ ಮೃತಪಟ್ಟ ನಟರು ಇವರೇ..!
ಇಂದು ವಿಶ್ವ ಹೃದಯ ಆರೋಗ್ಯ ದಿನ. ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಒಂದು ಹೆಜ್ಜೆ ಮುಂದಿಡುವ ದಿನವಿದು. ಮಾನವನಿಗೆ ಹೃದಯದ ಆರೋಗ್ಯ ಸುಸ್ಥಿತಿಯಲ್ಲಿದ್ದರೆ ಇಡೀ ದೇಹ ಆರೋಗ್ಯವಾಗಿರುತ್ತದೆ. ಪ್ರತಿಯೊಬ್ಬರಿಗೂ ಈಗ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಆದರೆ ಇತ್ತೀಚಿಗೆ ಹೃದಯಾಘಾತ ಹೃದಯ ಸ್ತಂಭನದಂತಹ ಪ್ರಕರಣ ಹೆಚ್ಚಾಗಿ ನಾವು ನೋಡುತ್ತಿದ್ದೇವೆ. ಅದರಲ್ಲೂ ಯುವ ಸಮುದಾಯದಲ್ಲಿ ಆರೋಗ್ಯವಂತರಲ್ಲಿಯೂ ಈ ರೀತಿಯ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಕೆಲವರು ವ್ಯಾಯಾಮ ಮಾಡುವಾಗ, ಕ್ರೀಡೆಯಲ್ಲಿ ತೊಡಗಿದ್ದಾಗ, ಹೋಟೆಲ್‌ನಲ್ಲಿದ್ದಾಗ, ಕುಳಿತಿದ್ದಾಗ, ಹೀಗೆ ಚಟುವಟಿಕೆಯಲ್ಲಿ ಇದ್ದಾಗಲೇ ಕುಸಿದು ಬಿದ್ದು ಮೃತಪಡುತ್ತಿರುವುದನ್ನು ನಾವು ನೋಡಿದ್ದೇವೆ.

ಇನ್ನು ಭಾರತದ ಚಿತ್ರರಂಗದಲ್ಲಿ ಹಲವರು ಹೃದಯಾಘಾತದಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಕುಟುಂಬದವರನ್ನ, ಸ್ನೇಹಿತರನ್ನು, ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಅಗಲಿದ್ದಾರೆ. ಹಾಗಾದ್ರೆ ಯಾವೆಲ್ಲಾ ತಾರೆಯರು ಹೃದಯ ಸಂಬಂಧಿ ಸಮಸ್ಯೆಯಿಂದ ಅಗಲಿದ್ದಾರೆ ಎಂಬುದನ್ನು ನೋಡಿ.
ಪುನೀತ್ ರಾಜ್ ಕುಮಾರ್
ಕನ್ನಡ ಚಿತ್ರರಂಗದ ಜನಪ್ರಿಯ ನಟ ಅಪ್ಪು ಎಂದೇ ಖ್ಯಾತಿ ಗಳಿಸಿದ್ದ ಅವರು, ಅಕ್ಟೋಬರ್ 29, 2021ರಂದು ನಿಧನರಾಗಿದ್ದರು. ವ್ಯಾಯಾಮ ಮುಗಿಸಿದ್ದ ಅವರು ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದರು. ದಿಢೀರ್ ಆಸ್ಪತ್ರೆಗೆ ದಾಖಲಾದ ಹೊರತಾಗಿಯೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅವರು ತಮ್ಮ 46ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಅವರ ಈ ಹಠಾತ್ ನಿಧನದ ಸುದ್ದಿ ಕೋಟಿ ಕೋಟಿ ಮಂದಿ ಅಭಿಮಾನಿಗಳಲ್ಲಿ ಆಘಾತಕ್ಕೆ ಕಾರಣವಾಗಿತ್ತು.
ಚಿರಂಜೀವಿ ಸರ್ಜಾ
ಕನ್ನಡದ ಮತ್ತೋರ್ವ ನಟ ಚಿರಂಜೀವಿ ಸರ್ಜಾ ಅವರು ಕೇವಲ ತಮ್ಮ 39ನೇ ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. | ಜೂನ್ 7, 2020 ರಂದು ಹೃದಯಾಘಾತಕ್ಕೆ ಒಳಗಾಗಿದ್ದರು. ಅವರ ಅಕಾಲಿಕ ಮರಣವು ಕನ್ನಡ ಸಿನಿ ಪ್ರೇಮಿಗಳು, ಅವರ ಕುಟುಂಬದವರಿಗೆ ಸಿಡಿಲು ಬಡಿದಂತಾಗಿತ್ತು. ಅವರು ಸಹ ಆರೋಗ್ಯವಾಗಿದ್ದವರು, ಆದರೆ ಏಕಾಏಕಿ ಕಾಣಿಸಿಕೊಂಡ ಎದೆನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಕೂಡ ಬದುಕುಳಿಯಲಿಲ್ಲ.
ಕೆಕೆ (ಕೃಷ್ಣಕುಮಾರ್ ಕುನ್ನತ್)
ಬಾಲಿವುಡ್ ಸೇರಿ ಹಲವು ಭಾಷೆಯ ಹಾಡುಗಳನ್ನು ಹಾಡಿರುವ ಕೆಕೆ ಮೆ 31 2022ರಂದು ಹೃದಯಾಘಾತದಿಂದ ನಿಧನರಾದರು. ಕೋಲ್ಕತ್ತಾದಲ್ಲಿ ಅವರು ಕಾರ್ಯಕ್ರಮ ನಡೆಸಿಕೊಡುವಾಗಲೇ ಕುಸಿದು ಬಿದ್ದಿದ್ದರು. ಅಲ್ಲಿಂದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದರು.
ಪ್ರದೀಪ್ ಪಟವರ್ಧನ್
ಮರಾಠಿ ಸಿನಿಮಾದಲ್ಲಿ ತಮ್ಮದೇ ಹೆಸರಿನ ಛಾಪು ಮೂಡಿಸಿ ಲಕ್ಷ ಲಕ್ಷ ಅಭಿಮಾನಿಗಳ ಹೊಂದಿರುವ ನಟ ಪ್ರದೀಪ್ ಪಟವರ್ಧನ್. ಆಗಸ್ಟ್ 9, 2022 ರಂದು ಅವರು ತಮ್ಮ ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. 64ನೇ ವಯಸ್ಸಿನಲ್ಲಿ ಅವರು ನಿಧನರಾದರು.
ಸಿದ್ಧಾರ್ಥ್ ಶುಕ್ಲಾ
ಹಿಂದಿ ಬಿಗ್‌ಬಾಸ್‌ನ ಸ್ಪರ್ಧಿ ಹಾಗೂ ಸಿನಿಮಾದಲ್ಲು ನಟಿಸಿದ್ದ ಅವರು ದಿಢೀರ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟು ಅಭಿಮಾನಿಗಳಲ್ಲಿ ಆಘಾತ ಉಂಟು ಮಾಡಿದ್ದರು. ಸೆ. 2 2021ರಲ್ಲಿ ಹೃದಯಾಘಾತಕ್ಕೆ ಒಳಗಾದರು. ಅವರಿಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆ ಇರಲಿಲ್ಲ. ಆದ್ರೆ ಹಠಾತ್ ಹೃದಯಾಘಾತಕ್ಕೆ ಅವರು ಬಲಿಯಾದರು.
ಬ್ರಹ್ಮ ಸ್ವರೂಪ ಮಿಶ್ರಾ
ಮಿರ್ಜಾಪುರದ ನಟ ಬ್ರಹ್ಮ ಮಿಶ್ರಾ 36 ನೇ ವಯಸ್ಸಿನಲ್ಲಿ ನಿಧನರಾದರು. ಡಿಸೆಂಬರ್ 2, 2021 ರಂದು ತಮ್ಮ ಮುಂಬೈ ನಿವಾಸದಲ್ಲಿ ನಿಧನರಾದರು. ಅವರು ಕೆಲವು ದಿನಗಳ ಹಿಂದೆ ಎದೆನೋವಿನ ಬಗ್ಗೆ ದೂರು ನೀಡಿದ್ದರು ಆದರೆ ಗ್ಯಾಸ್ಟ್ರಿಕ್ ನೋವಿಗೆ ಚಿಕಿತ್ಸೆ ನೀಡಿದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಮನೆಯಲ್ಲಿ ಸ್ನಾನ ಮಾಡುವಾಗ ಬಾತ್ ರೂಮ್‌ನಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದರು.



Click it and Unblock the Notifications