Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
Dasara Wishes in Kannada: ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು: ಆಪ್ತರಿಗೆ, ಸ್ನೇಹಿತರಿಗೆ ಕಳುಹಿಸಲು ಇಲ್ಲಿವೆ ಶುಭ ಸಂದೇಶಗಳು!
Dasara Wishes in Kannada: ಅಕ್ಟೋಬರ್ 2ರಂದು ನಾಡಿನೆಲ್ಲೆಡೆ ಅದ್ದೂರಿಯ ವಿಜಯದಶಮಿ ಆಚರಿಸಲಾಗುತ್ತಿದೆ. ಮಹಿಷಾಸುರ ಎಂಬ ರಾಕ್ಷಸನ ಜೊತೆಗೆ ಯುದ್ಧ ಮಾಡಿ, ಜಯ ಗಳಿಸಿದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಹಂ ಮತ್ತು ದುಷ್ಟ ತನದ ಮೇಲೆ ಶಾಂತಿ ಮತ್ತು ವಿಜಯವನ್ನು ಪ್ರತಿನಿಧಿಸುವ ಹಬ್ಬ. ಹಾಗೆ ಅಧರ್ಮದ ವಿರುದ್ಧ ಧರ್ಮದ ವಿಜಯದ ಸಂಕೇತವಾಗಿಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ.
ನವರಾತ್ರಿಯ ದುರ್ಗಾ ಆರಾಧನೆಯ ನಡುವೆ ಆಯುಧ ಪೂಜೆ ವಿಜಯದಶಮಿಯ ಹಬ್ಬದ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿಯು ನಿಮಗೂ ನಿಮ್ಮ ಮನೆಯ ಎಲ್ಲ ಸದಸ್ಯರಿಗೂ ಸನ್ಮಂಗಲವನ್ನು ಉಂಟುಮಾಡಲಿ. ಮನುಕುಲದ ಅಭಿವೃದ್ಧಿ ಹಾಗೂ ಪೋಷಣೆಯ ಕೆಲಸವನ್ನು ದುರ್ಗಾ ದೇವಿ ಮಾಡುತ್ತಾಳೆ. ಹಾಗೆ ದುರ್ಗೆಯ ಆಶೀರ್ವಾದದಿಂದ ಉತ್ತರೋತ್ತರ ಶ್ರೇಯೋಭಿವೃದ್ಧಿ ನಿಮ್ಮದಾಗಲಿ. ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.

ಮೈಸೂರನ್ನು ಮೊದಲಿಗೆ ಮಹಿಷೂರು ಎಂದು ಕರೆಯಲಾಗುತ್ತಿತ್ತು. ರಕ್ಕಸ ಮಹಿಷಾಸುರನನ್ನು ಚಾಮುಂಡಿ ಸಂಹಾರ ಮಾಡಿದ ದಿನವನ್ನಾಗಿ ಆಚರಿಸಲಾಗುತ್ತದೆ. ಆದ್ರೆ ಉತ್ತರ ಭಾರತದಲ್ಲಿ ಸ್ವಲ್ಪ ಭಿನ್ನವಾಗಿ ಅಯೋಧ್ಯೆಯಲ್ಲಿ ವಿಜಯ ದಿವಸ ಎಂದು ಆಚರಣೆ ಮಾಡಲಾಗುತ್ತದೆ. ಇದೇ ದಿನ ರಾಮನು ರಾವನ ಮೇಲೆ ಯುದ್ಧ ಮಾಡಿ ಗೆದ್ದು ಸೀತೆಯೊಂದಿಗೆ ಅರಮನೆಗೆ ಬಂದ ದಿನ ಎಂದು ನಂಬಲಾಗಿದೆ.
ಧರ್ಮ, ಸತ್ಯಕ್ಕೆ ಎಂದಿಗೂ ಗೆಲುವಿದೆ. ಅದರ ಸಂಕೇತವೇ ವಿಜಯದಶಮಿ. ಶ್ರೀರಾಮ ರಾವಣನನ್ನು ಸಂಹಾರ ಮಾಡಿದ ಹಾಗೆ, ತಾಯಿ ಚಾಮುಂಡೇಶ್ವರಿ ಮಹಿಷಾಸುರನ ಸೋಲಿಸಿದಂತೆ, ನಿಮ್ಮೊಳಗಿನ ದುಷ್ಟಭಾವ ನಾಶವಾಗಿ ಎಲ್ಲರಿಗೂ ಒಳಿತಾಗಲಿ. ನಿಮಗೂ ನಿಮ್ಮ ಕುಟುಂಬ ಸದಸ್ಯರಿಗೆಲ್ಲರಿಗೂ ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.
ದಸರಾ ನಿಮ್ಮಾ ಎಲ್ಲಾ ಚಿಂತೆಗಳನ್ನು ಸುಟ್ಟು ಮನೆಯಲ್ಲಿ ಸಂತೋಷ-ಸಡಗರ ತುಂಬುವಂತೆ ಮಾಡಲಿ- ದಸರಾ ಹಬ್ಬದ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿ ದೇವಿಯು ನಿಮ್ಮೆಲ್ಲ ಕಷ್ಟಗಳನ್ನು ಕರಗಿಸಲಿ, ಜೀವನದಲ್ಲಿ ಆರೋಗ್ಯ, ಸುಖ, ಶಾಂತಿ, ಸಂಪತ್ತು ಸಮೃದ್ಧಿಯನ್ನು ಕರುಣಿಸಲಿ. ನಿಮಗೆಲ್ಲರಿಗೂ ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.
ದುರ್ಗಾ ಮಾತೆ ನಿಮ್ಮ ಬದುಕಿನ ಹಾದಿಯಲ್ಲಿ ನಗುವನ್ನು ತುಂಬಿರಲಿ, ನಿಮ್ಮ ಆಸೆಗಳ ಈಡೇರಿಸಿಕೊಳ್ಳುವ ಶಕ್ತಿ ನಿಮಗೆ ನೀಡಲಿ ನಾಡ ಹಬ್ಬ ದಸರಾದ ಶುಭಾಶಯಗಳು.
ನಿಮ್ಮ ಬದುಕಿನಲ್ಲಿರುವ ಎಲ್ಲಾ ಚಿಂತೆಗಳು ದೂರವಾಗಲಿ, ಯಶಸ್ಸು ನಿಮ್ಮದಾಗಲಿ, ನಿಮ್ಮ ಕೆಲಸಗಳು ಯಶಸ್ಸಿನಿಂದ ಕೂಡಿರಲಿ ನಿಮಗೂ ನಿಮ್ಮ ಕುಟುಂಬದವರಿಗೂ ದಸರಾ ಹಬ್ಬದ ಶುಭಾಶಯಗಳು.
ಜೀವನದ ಸಂಕಷ್ಟಗಳು, ತಾಪತ್ರಯಗಳೆಲ್ಲವೂ ದೂರಾಗಲಿ. ಮನೆ ಮನಗಳಲ್ಲಿ ಸಂತೋಷ, ನೆಮ್ಮದಿ ನೆಲೆಸಲಿ. ದುರ್ಗಾ ದೇವಿ ಸದಾ ಒಳಿತನ್ನೇ ಕರುಣಿಸಲಿ. ನಿಮ್ಮೆಲ್ಲರಿಗೂ ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.



Click it and Unblock the Notifications






