Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Happy Birthday Ramya: ನಟಿ ರಮ್ಯಾ ಬಗ್ಗೆ ಯಾರಿಗೂ ಗೊತ್ತಿಲ್ಲದ ಅಚ್ಚರಿ ವಿಷಯಗಳಿವು!
ಗೋಲ್ಡನ್ ಗರ್ಲ್ ರಮ್ಯಾ! ಫ್ಯಾಮಿಲಿ, ರಾಜಕೀಯ, ಸಿನಿಮಾ - ಅವರ ಲೈಫ್ ಸ್ಟೈಲ್ ಹೇಗಿದೆ? ಹೌದು, ಸ್ಯಾಂಡಲ್‌ವುಡ್ ಕ್ವೀನ್ (sandalwood queen), ನಟಿ ಹಾಗೂ ರಾಜಕಾರಣಿ ರಮ್ಯಾ (actress ramya), ಇಂದು 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ 2003ರಲ್ಲಿ ಕಾಲಿಟ್ಟ ಇವರು, ನಂತರ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ.
ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವಧಿಯಲ್ಲಿ ರಮ್ಯಾ ನಂಬರ್ ಒನ್ ನಟಿಯಾಗಿ ಮಿಂಚಿದ್ದರು. ಸುದೀಪ್, ದರ್ಶನ್, ಪುನೀತ್ ರಾಜ್‌ಕುಮಾರ್ ಮತ್ತು ಯಶ್ ಸೇರಿದಂತೆ ಕನ್ನಡದ ಅನೇಕ ಸ್ಟಾರ್ ನಟರೊಂದಿಗೆ ಅವರು ತೆರೆ ಹಂಚಿಕೊಂಡಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ರಮ್ಯಾ, ಕಳೆದ ಆರೇಳು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಅವರ ಬಗ್ಗೆ ಇಲ್ಲಿ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ತಿಳಿಸಲಾಗಿದೆ.

ದಿವ್ಯ ಸ್ಪಂದನ 'ರಮ್ಯಾ' ಆಗಿದ್ದು ಹೇಗೆ?
ಮೂಲತಃ ಬೆಂಗಳೂರಿನವರಾದ ನಟಿ ರಮ್ಯಾ ಅವರ ಮೊದಲ ಹೆಸರು ದಿವ್ಯ ಸ್ಪಂದನ (Divya spandana). ಕನ್ನಡದ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರು 'ಅಭಿ' ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿ, ಅವರ ಹೆಸರನ್ನು ರಮ್ಯಾ ಎಂದು ಬದಲಾಯಿಸಿದರು.
ಅಪ್ಪು ಜೊತೆಗೆ ಚೊಚ್ಚಲ ಸಿನಿಮಾ
ಮೋಹಕ ತಾರೆ ರಮ್ಯಾ ಅವರ ಚೊಚ್ಚಲ ಸಿನಿಮಾ 'ಅಭಿ' 2003ರಲ್ಲಿ ತೆರೆಕಂಡಿತು. ಈ ಚಿತ್ರದ ಮೂಲಕ ರಮ್ಯಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಪುನೀತ್ ರಾಜ್‌ಕುಮಾರ್ ಮತ್ತು ರಮ್ಯಾ ನಟನೆಯ ಈ ಸಿನಿಮಾ 150 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತು.
ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದರು. ಈ ಸಿನಿಮಾ ಪುನೀತ್ ಮತ್ತು ರಮ್ಯಾ ಜೋಡಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. 'ಅಭಿ' ಚಿತ್ರದ ನಂತರ ರಮ್ಯಾ ಅನೇಕ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದರು. ಅವರು ಕೇವಲ ಗ್ಲಾಮರಸ್ ನಟಿಯಾಗಿರದೆ, ಯಾವುದೇ ಪಾತ್ರಕ್ಕೆ ಜೀವ ತುಂಬುವ ಸಾಮರ್ಥ್ಯ ಹೊಂದಿದ್ದರು.
ರಮ್ಯಾ ನಟನೆಯ ಯಶಸ್ವಿ ಚಿತ್ರಗಳು
'ಆಕಾಶ್', 'ಎಕ್ಸ್‌ಕ್ಯೂಸ್ ಮಿ', 'ಅಮೃತಧಾರೆ', 'ಗೌರಮ್ಮ', 'ಜೊತೆ ಜೊತೆಯಲಿ', 'ಸಂಜು ವೆಡ್ಸ್ ಗೀತಾ', 'ಮುಸ್ಸಂಜೆ ಮಾತು', 'ಸಿದ್ಲಿಂಗು', 'ಸೇವಂತಿ ಸೇವಂತಿ', ದತ್ತ, 'ಅರಸು' ರಮ್ಯಾ ನಟನೆಯ ಯಶಸ್ವಿ ಚಿತ್ರಗಳಲ್ಲಿ ಸೇರಿವೆ.
ಚಿತ್ರರಂಗಕ್ಕೆ ಕಾಲಿಟ್ಟ ಆರಂಭಿಕ ದಿನಗಳಲ್ಲೇ ರಮ್ಯಾ ತಮಿಳು ಚಿತ್ರರಂಗಕ್ಕೂ ಪ್ರವೇಶಿಸಿದರು. ಅಲ್ಲಿ 'ಕುತ್ತು' ಮತ್ತು 'ಗಿರಿ' ಎಂಬ ಎರಡು ಹಿಟ್ ಸಿನಿಮಾಗಳನ್ನು ನೀಡಿದರು. ನಂತರ ಧನುಷ್ ಜೊತೆ 'ಪೊಲ್ಲಾದವನ್' ಹಾಗೂ ಸೂರ್ಯ ಜೊತೆ 'ವಾರಣಂ ಆಯಿರಂ' ಚಿತ್ರಗಳಲ್ಲಿ ನಟಿಸಿ ಯಶಸ್ಸು ಕಂಡರು. ತೆಲುಗಿನಲ್ಲಿ 'ಅಭಿಮನ್ಯು' ಎಂಬ ಚಿತ್ರವನ್ನೂ ಮಾಡಿದ್ದಾರೆ.
ಉತ್ತುಂಗದಲ್ಲಿದ್ದಾಗಲೇ ರಾಜಕೀಯ
ನಟಿಯಾಗಿ ಉತ್ತುಂಗದಲ್ಲಿದ್ದಾಗಲೇ ರಮ್ಯಾ ರಾಜಕೀಯಕ್ಕೆ ಸೇರಿದರು. 2012ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಅವರು, 2013ರಲ್ಲಿ ನಡೆದ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಆದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಅವರು ಮತ್ತೆ ಸ್ಪರ್ಧಿಸಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. 2017ರಲ್ಲಿ ಅವರನ್ನು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ರಾಷ್ಟ್ರೀಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. 2018ರಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಸಾಮಾಜಿಕ ಜಾಲತಾಣಗಳಿಂದಲೂ ದೂರ
ನಂತರ ರಮ್ಯಾ ರಾಜಕೀಯದಿಂದ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣಗಳಿಂದಲೂ ದೂರ ಉಳಿದಿದ್ದರು. ಆ ಬಳಿಕ ಅವರು ಮತ್ತೆ ಸಾಮಾಜಿಕ ಜಾಲತಾಣಕ್ಕೆ ಮರಳಿದರು.
ಶ್ವಾನ ಪ್ರಿಯೆ ಮೋಹಕ ತಾರೆ
ಮೋಹಕ ತಾರೆ ರಮ್ಯಾ ಶ್ವಾನ ಪ್ರಿಯೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆಗಾಗ ಅವರು ತಮ್ಮ ಪ್ರೀತಿಯ ನಾಯಿಯೊಂದಿಗೆ ತೆಗೆಸಿಕೊಂಡ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ. ಈ ಹಿಂದೆ ಬೆಂಗಳೂರಿನಲ್ಲಿ ಬೀದಿ ನಾಯಿಯೊಂದನ್ನು ಹತ್ಯೆ ಮಾಡಲಾಗಿತ್ತು. ಇದನ್ನು ಖಂಡಿಸಿದ ರಮ್ಯಾ, ಪ್ರತಿಭಟನೆಯಲ್ಲಿಯೂ ಭಾಗವಹಿಸಿದ್ದರು. ಈಗಲೂ ಇಂತಹ ಘಟನೆಗಳು ಬೆಳಕಿಗೆ ಬಂದಾಗ, ಅದನ್ನು ವಿರೋಧಿಸಿ ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ.
ನಟ ದರ್ಶನ್ ವಿಚಾರದಲ್ಲಿ ಭಾರೀ ಸದ್ದು
ನಟ ದರ್ಶನ್ (Darshan) ಸಂಬಂಧಿತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಟಿ ರಮ್ಯಾ ಧ್ವನಿ ಎತ್ತಿದ ನಂತರ, ದರ್ಶನ್ ಅವರ ಕೆಲವು ಅಭಿಮಾನಿಗಳು (Darshan Fans) ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ. ಅಲ್ಲದೆ, ಕೊಲೆ ಬೆದರಿಕೆಗಳು ಮತ್ತು ಅತ್ಯಾಚಾರದ ಬೆದರಿಕೆಗಳನ್ನು ಒಡ್ಡಿದ್ದಾರೆ. ಈ ಘಟನೆಗಳಿಗೆ ಪ್ರತಿಕ್ರಿಯೆಯಾಗಿ, ರಮ್ಯಾ ಅವರು ಬೆಂಗಳೂರು ಪೊಲೀಸ್ ಕಮಿಷನರ್‌ಗೆ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸಿ ಹಲವು ಕಿಡಿಗೇಡಿಗಳನ್ನು ಬಂಧಿಸಿದ್ದಾರೆ.



Click it and Unblock the Notifications









