Latest Updates
-
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು
ಗುರುವಾರ ರಾಯರ ಈ ಮಂತ್ರ ಪಠಣೆ ಮಾಡಿದರೆ ಕಷ್ಟಗಳು ದೂರಾಗುವುದು
ಗುರು ರಾಘವೇಂದ್ರ ಸ್ವಾಮಿಯನ್ನು ನಂಬಿದರೆ ಸ್ವಾಮಿ ಎಂದಿಗೂ ಕೈ ಬಿಡಲ್ಲ ಎಂಬುವುದನ್ನು ರಾಯರ ಭಕ್ತರ ಅಚಲ ನಂಬಿಕೆ. ಭಕ್ತರ ನಂಬಿಕೆಗೆ ತಕ್ಕಂತೆ ಅನೇಕ ಪವಾಡಗಳು ನಡೆದಿವೆ ಕೂಡ. ಗುರು ರಾಘವೇಂದ್ರ ಸ್ವಾಮಿಯ ಆರಾಧನೆಗೆ ಗುರುವಾರ ತುಂಬಾನೇ ಶ್ರೇಷ್ಠ ದಿನ ಎಂದು ಹೇಳಲಾಗುವುದು.
ಕಷ್ಟ ಬಂದಾಗ ರಾಯರನ್ನು ಮನಸ್ಸಿನಲ್ಲಿ ನೆನೆದರೆ ಸಾಕು ಕಷ್ಟಗಳು ಮಂಜಿನಂತೆ ಕರಗುವುದು, ರಾಯರನ್ನು ಪೂಜಿಸಲು ಕಠಿಣ ನಿಯಮಗಳೇನೂ ಇಲ್ಲ, ಶುದ್ಧ ಮನಸ್ಸಿನಿಂದ ರಾಯರನ್ನು ಪೂಜಿಸಿದರೆ ಸಾಕು ರಾಯರು ಅವರೆಲ್ಲಾ ಕಷ್ಟಗಳನ್ನು ನಿವಾರಿಸುತ್ತಾರೆ. ಗುರು ರಾಯರನ್ನು ನೀವು ಮಂತ್ರಗಳನ್ನು ಪಠಿಸುವ ಮೂಲಕ ಪೂಜಿಸಿದರೆ ತುಂಬಾ ಒಳ್ಳೆಯದು. ಅದರಲ್ಲೂ ಗುರುವಾರ ಈ ಮಂತ್ರಗಳನ್ನು ಪಠಿಸುವುದರಿಂದ ಹೆಚ್ಚಿನ ಫಲ ಪಡೆಯಬಹುದು. ನಾವಿಲ್ಲಿ ಗುರು ರಾಘವೇಂದ್ರ ಸ್ವಾಮಿಯ ಮೂಲ ಮಂತ್ರ ಹಾಗೂ ಗಾಯತ್ರಿ ಮಂತ್ರ, ಅದನ್ನು ಪಠಿಸುವ ರೀತಿ ಹಾಗೂ ಪ್ರಯೋಜನಗಳ ಬಗ್ಗೆ ಹೇಳಲಾಗಿದೆ ನೋಡಿ:

ರಾಘವೇಂದ್ರ ಸ್ವಾಮಿಯ ಮೂಲಮಂತ್ರ
"ಓಂ ಶ್ರೀ ರಾಘವೇಂದ್ರಾಯ ನಮಃ"
ಈ ಮಂತ್ರವನ್ನು ಗುರುವಾರನೇ ಅಂತಲ್ಲ ಯಾವಾಗ ಬೇಕಾದರೂ ಪಠಿಸಬಹುದು. ಈ ಮಂತ್ರವನ್ನು ಪಠಿಸುವುದರಿಂದ ದೇವರ ಕೃಪೆಗೆ ಪಾತ್ರರಾಗುವುದು ಮಾತ್ರವಲ್ಲ, ಮನಸ್ಸಿನಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು, ಋಣಾತ್ಮಕ ಆಲೋಚನೆಗಳು ದೂರಾಗಿ ಮನಸ್ಸಿನಲ್ಲಿ ಧನಾತ್ಮಕ ಆಲೋಚನೆಗಳು ಹೆಚ್ಚಾಗುವುದು.
ರಾಘವೇಂದ್ರ ಸ್ವಾಮಿ ಗಾಯತ್ರಿ ಮಂತ್ರ
ಓಂ ವೆಂಕಟನಾಥಯ ವಿದ್ಮಹೆ ಸಚ್ಚಿದಾನಂದಾಯ ಧೀಮಹೀ ತನ್ನೋ ರಾಘವೇಂದ್ರಃ ಪ್ರಚೋದಯಾತ್"
ಓಂ ವೆಂಕಟನಾಥಯ ವಿದ್ಮಹೆ
ತಿಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್ ಓಂ ಪ್ರಹಲಾದಾಯ ವಿದ್ಮಹೇ ವ್ಯಾಸರಾಜಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್"
ಈ ಮಂತ್ರವನ್ನು ತುಂಬಾ ಪವರ್‌ಫುಲ್ ಮಂತ್ರ ಎಂದು ಹೇಳಲಾಗುವುದು. ಈ ಮಂತ್ರವನ್ನು ಪ್ರತಿದಿನ ಬೆಳಗ್ಗೆ ದಿನಾ ಪಠಿಸಿದರೆ ತುಂಬಾ ಒಳ್ಳೆಯದು. ಇದನ್ನು ದಿನಾ ಪಠಿಸಲು ಸಾಧ್ಯವಾಗದಿದ್ದರೆ ಗುರುವಾರ ಹಾಗೂ ಶುಕ್ಲಪಕ್ಷದ ದಿನಗಳಲ್ಲಿ ಪಠಿಸುವುದರಿಂದ ಒಳಿತಾಗುವುದು.
ಈ ಮಂತ್ರ ಪಠಣೆ ಮಾಡುವಾಗ ಗಮನಿಸಬೇಕಾದ ಸಂಗತಿಗಳು
- ಗಾಯತ್ರಿ ಮಂತ್ರ ಪಠಿಸುವಾಗ ಉಚ್ಛಾರಣೆ ದೋಷವಿರಬಾರದು.
- ಈ ಮಂತ್ರವನ್ನು ಪ್ರತಿದಿನ ಪಠಿಸಬಹುದು ಅಥವಾ ಗುರುವಾರದಂದು ಮಾತ್ರ ಪಠಿಸಬಹುದು
- ಈ ಮಂತ್ರವನ್ನು ದಿನದಲ್ಲಿ ಒಂದು ಬಾರಿ, 3 ಬಾರಿ, 5 ಬಾರಿ, 9 ಬಾರಿ, 21ಬಾರಿ ಹಾಗೂ 1008 ಬಾರಿ ಜಪಿಸಿದರೆ ಒಳ್ಳೆಯದು.
ನಲವತ್ತೆಂಟು ದಿನಗಳವರೆಗೆ ಪಠಿಸಿದರೆ ತುಂಬಾ ಒಳ್ಳೆಯದು
- ನೀವು ಗಾಯತ್ರಿ ಮಂತ್ರವನ್ನು 48 ದಿನಗಳವರೆಗೆ ಪಠಿಸುವುದಾದರೆ ಗುರುವಾರ ಅಥವಾ ಶುಕ್ಲ ಪಕ್ಷದ ಪುಷ್ಯಾ ನಕ್ಷತ್ರದಂದು ಪಠಿಸಿದರೆ ಒಳ್ಳೆಯದು.
- ಏನಾದರೂ ಸಂಕಲ್ಪ ನೆರವೇರಲು ನೀವು ಈ ಮಂತ್ರ ಪಠಿಸುವುದಾದರೆ ದಿನದಲ್ಲಿ 1008 ಬಾರಿ ಜಪಿಸಿ
ಈ ರೀತಿ ಮಂತ್ರ ಪಠಣೆ ಮಾಡುವುದರಿಂದ ಲಾಭವೇನು?
- ಯಾರು ಈ ಮಂತ್ರವನ್ನು 48 ದಿನಗಳವರೆಗೆ ಪಠಿಸುತ್ತಾರೋ ಅವರ ಕನಸ್ಸಿನಲ್ಲಿ ಗುರು ರಾಘವೇಂದ್ರ ಸ್ವಾಮಿ ಕಾಣಿಸಿಕೊಳ್ಳುತ್ತಾರೆ ಎಂದು ಭಕ್ತರು ತಮ್ಮ ಸ್ವಅನುಭವದಿಂದ ಹೇಳುತ್ತಾರೆ.
- ಗುರು ರಾಯರ ಭಕ್ತರಿಗೆ ಸ್ವಾಮಿಯ ಶಕ್ತಿಯ ಅರಿವು ಖಂಡಿತವಾಗಿರುತ್ತದೆ.
- ಯಾವಾಗ ಸ್ವಾಮಿ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೋ ಕನಸುಗಳೆಲ್ಲಾ ಪರಿಹಾರವಾಗುವುದು ಎಂಬ ನಂಬಿಕೆ ಇದೆ.



Click it and Unblock the Notifications