Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ 3 ರಾಶಿಯವರಿಗೆ ಗುರು ಚಂಡಾಲ ಯೋಗ : ಮುಂಬರುವ 7 ತಿಂಗಳು ತುಂಬಾನೇ ಜಾಗ್ರತೆ
ವೈದಿಕ ಶಾಸ್ತ್ರದಲ್ಲಿ ಗುರು ಸಂಚಾರಕ್ಕೆ ತುಂಬಾನೇ ಮಹತ್ವವಿದೆ. ನಮಗೆ ಏನಾದರೂ ಶುಭ ಉಂಂಟಾಗಬೇಕಾದರೆ ಗುರುವಿನ ಕೃಪೆ ಕೂಡ ಇರಬೇಕಾಗುತ್ತದೆ. ದೇವಗುರುವಿನ ಕೃಪೆಯಿದ್ದರೆ ನಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತೇವೆ.
ಆದರೆ ನೀಚ ಸ್ಥಾನದಲ್ಲಿದ್ದರೆ ತುಂಬಾ ಸಮಸ್ಯೆಗಳು ಎದುರಾಗುತ್ತದೆ. ಗುರು ಚಂಡಾಲ ಯೋಗವಿದ್ದಾಗ ಗುರು ಶುಭ ಪ್ರಭಾವ ಬೀರುವುದು ಕಡಿಮೆಯಾಗುವುದು. ಗುರು ಮತ್ತು ರಾಹು ಒಂದೇ ರಾಶಿಯಲ್ಲಿದ್ದಾಗ ಈ ಯೋಗ ಏರ್ಪಡುತ್ತದೆ. ಈ ಯೋಗ ಶುಭ ಫಲಿತಾಂಶ ನೀಡುವುದಿಲ್ಲ.

ರಾಹು ಈಗಾಗಲೇ ಮೇಷ ರಾಶಿಯಲ್ಲಿದೆ, ಏಪ್ರಿಲ್ 22ಕ್ಕೆ ಗುರು ಮೇಷ ರಾಶಿಯನ್ನು ಪ್ರವೇಶಿಸಿದಾಗ ಕೆಲವೊಂದು ರಾಶಿಗಳಲ್ಲಿ ಗುರು ಚಂಡಾಲ ಯೋಗ ಏರ್ಪಡಲಿದೆ. ಈ ಸಮಯದಲ್ಲಿ ರಾಹು ಗುರುವಿನ ಒಳ್ಳೆಯ ಪ್ರಭಾವವನ್ನು ತಡೆ ಹಿಡಿಯುವುದರಿಂದ ಗುರು ಸಂಪೂರ್ಣ ಶುಭ ನೀಡಲು ಸಾಧ್ಯವಾಗುವುದಿಲ್ಲ.
ಗುರು ಮೇಷ ರಾಶಿಯನ್ನು ಪ್ರವೇಶಿಸಿದಾಗ ಈ ರಾಶಿಗಳ ಮೇಲೆ ಗುರು ಚಂಡಾಲ ಯೋಗದಿಂದಾಗಿ ಅಶುಭ ಫಲ ಇರಲಿದೆ:
ಮೇಷ ರಾಶಿ
ಏಪ್ರಿಲ್ 22 ರ ನಂತರ ಮೇಷ ರಾಶಿಯ ಲಗ್ನ ಮನೆಯಲ್ಲಿ ಗುರು ಚಂಡಾಲ ಯೋಗವು ರೂಪುಗೊಳ್ಳಲಿದೆ. ಇದರಿಂದ ಮುಂದಿನ 7 ತಿಂಗಳು ಮೇಷ ರಾಶಿಯವರಿಗೆ ಸವಾಲಿನ ದಿನಗಳಾಗಿರಬಹುದು. ಈ ಗುರು ಚಂಡಾಲ ಯೋಗದ ಕಾರಣದಿಂದಾಗಿ ಮೇಷ ರಾಶಿಯಯವರು ಕೆಲಸದ ಸ್ಥಳದಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಇದಲ್ಲದೇ ಹಣಕಾಸಿನ ಸಮಸ್ಯೆಯೂ ಬರಬಹುದು. ಆರೋಗ್ಯದ ವಿಷಯದಲ್ಲಿಯೂ ತೊಂದರೆಗಳನ್ನು ಎದುರಿಸಬಹುದು. ಆದ್ದರಿಂದ, ಈ ಸಮಯವು ಮೇಷ ರಾಶಿಯವರಿಗೆ ಅನುಕೂಲಕರವಾಗಿರುವುದಿಲ್ಲ.
ಮಿಥುನ ರಾಶಿ
ಮಿಥುನ ರಾಶಿಯವರ ಮೇಲೂ ಗುರು ಚಂಡಾಲ ಯೋಗವು ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಅಹಿತಕರ ಘಟನೆಗಳು ಜೀವನದಲ್ಲಿ ನಡೆಯಬಹುದು. ಆರೋಗ್ಯ ಸಮಸ್ಯೆಗಳು , ಆರ್ಥಿಕ ಸಮಸ್ಯೆಗಳಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗಲಿದೆ. ನೀವು ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳನ್ನು ಸಹ ಎದುರಿಸಬಹುದು. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ಧನು ರಾಶಿ
ಧನು ರಾಶಿಯವರಿಗೆ ಗುರು ಚಂಡಾಲ ಯೋಗದಿಂದಾಗಿ ಸಮಸ್ಯೆಗಳು ಎದುರಾಗುವುದು. ಈ ಅವಧಿಯಲ್ಲಿ ವಾಹನ ಚಲಾಯಿಸುವಾಗ ಎಚ್ಚರವಹಿಸಿ. ಈ ಕೆಟ್ಟ ಯೋಗದ ಕಾರಣದಿಂದಾಗಿ ಈ ಅವಧಿಯಲ್ಲಿ ನಿಮ್ಮ ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ನಿಮ್ಮ ಖರ್ಚುಗಳ ಹೆಚ್ಚಳದಿಂದ ಹಣಕಾಸಿನ ತೊಂದರೆಗಳು ಉಂಟಾಗಬಹುದು. ಈ ಅವಧಿಯಲ್ಲಿ ಮನಸ್ಸಿನಲ್ಲಿ ತುಂಬಾ ಗೊಂದಲಗಳಿರುತ್ತದೆ. ಇದಲ್ಲದೆ ವ್ಯಾಪಾರ, ಉದ್ಯೋಗ ಮತ್ತು ವೃತ್ತಿಯಲ್ಲಿಯೂ ಸಮಸ್ಯೆಗಳಿರಬಹುದು.
ಈ ಎರಡು ರಾಶಿಗಳ ಮೇಲೂ ಗುರು ಚಂಡಾಲ ಯೋಗದ ಸ್ವಲ್ಪ ಅಶುಭ ಪ್ರಭಾವ ಇರಲಿದೆ.
ಕನ್ಯಾ ರಾಶಿ
ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ದುರ್ಬಲವಾಗಬಹುದು. ಈ ಅವಧಿಯಲ್ಲಿ ಮನೆ, ವಾಹನ ಅಥವಾ ಇನ್ಯಾವುದೇ ಆಸ್ತಿ ಖರೀದಿಸುವಾಗ ಎಚ್ಚರಿಕೆ ಅಗತ್ಯ. ಕೌಟುಂಬಿಕ ಕಲಹಗಳು ಇರಲಿದೆ. ಕೆಲಸದ ಸ್ಥಳದಲ್ಲಿಅತ್ಯಧಿಕ ಕೆಲಸದ ಒತ್ತಡ ಇರಲಿದೆ.
ಮಕರ ರಾಶಿ
ಗುರು ಚಂಡಾಲ ಯೋಗದಿಂದ ಕುಟುಂಬ ಕಲಹಗಳು ಇರಲಿದೆ. ಏಪ್ರಿಲ್ ನಿಂದ ಅಕ್ಟೋಬರ್ ವರೆಗಿನ ಸಮಯವು ನಿಮಗೆ ಕಷ್ಟಕರವಾಗಿರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸಿಗೆ ನೀವು ತುಂಬಾ ಶ್ರಮಿಸಬೇಕಾಗುತ್ತದೆ, ಅಲ್ಲದೆ ಈ ಅವಧಿಯಲ್ಲಿ ಖರ್ಚು ಹೆಚ್ಚಿರಲಿದೆ.
ಗುರು ಚಂಡಾಲ ಯೋಗಕ್ಕೆ ಪರಿಹಾರವೇನು?
* ಗುರು ಚಂಡಾಲ ಯೋಗದ ಕೆಟ್ಟ ಪ್ರಭಾವ ತಗ್ಗಿಸಲು ಚಂಡಾಲ ಯೋಗ ನಿವಾರಣೆ ಪೂಜೆ ಮಾಡಿಸಿದರೆ ಒಳ್ಳೆಯದು.
* ಗುರು ಹಾಗೂ ರಾಹುವಿಗೆ ಪೂಜೆಯನ್ನು ಮಾಡಿ
* ಬಡವರಿಗೆ, ನಿರ್ಗತಿಕರಿಗೆ ಕೈಯಲ್ಲಾದ ಸಹಾಯ ಮಾಡಿ.
* ಗಣೇಶನಿಗೆ ಪ್ರತಿದಿನ ಪೂಜೆ ಸಲ್ಲಿಸಿ
* ಪ್ರತಿದಿನ ವಿಷ್ಣು ಸಹಸ್ರನಾಮ ಪಠಿಸಿ.
* ಗುರುವಾರ ಹಳದಿ ಬಟ್ಟೆ ಧರಿಸಿ, ಹಳದಿ ಬಣ್ಣದ ವಸ್ತ್ರಗಳನ್ನು ದಾನ ಮಾಡಿ.
* ಗುರು ಬೀಜ ಮಂತ್ರ ಪ್ರತಿದಿನ ಪಠಿಸಿ.
* ಈ ಸಮಯದಲ್ಲಿ ನೀವಾಡುವ ಮಾತಿನ ಕಡೆ ತುಂಬಾನೇ ಗಮನ ಹರಿಸಿ. ತಪ್ಪಿ ಆಡಿದ ಮಾತಿನಿಂದ ಸಮಸ್ಯೆ ಉಂಟಾಗಬಹುದು.
* ಮಂಗಳವಾರ, ಶನಿವಾರ ಹನುಮಂತನಿಗೆ ಪೂಜೆ ಸಲ್ಲಿಸಿ



Click it and Unblock the Notifications

