Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೇ 17ಕ್ಕೆ ಉಂಟಾಗಲಿದೆ ಗಜಕೇಸರಿ ಯೋಗ: ಈ 3 ರಾಶಿಯವರಿಗೆ ಲಕ್ಷ್ಮಿ ಒಲಿದು ಬರಲಿದ್ದಾಳೆ, ಸಂಪತ್ತು ಹೆಚ್ಚಲಿದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಗುರು ಮತ್ತು ಚಂದ್ರ ಸಂಯೋಗವಾದಾಗ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ಈ ಯೋಗ ಗುರು ಮತ್ತು ಚಂದ್ರನ ಸಂಯೋಗದಿಂದ ಉಂಟಾಗುವುದರಿಂದ ತುಂಬಾನೇ ಅದೃಷ್ಟಕರವಾದ ಯೋಗವೆಂದು ಪರಿಗಣಿಸಲಾಗಿದೆ. ಗುರು ಹಾಗೂ ಚಂದ್ರ ಎರಡರ ಶುಭ ಫಲವನ್ನು ಈ ಸಮಯದಲ್ಲಿ ಪಡೆಯಬಹುದು. ಮುಟ್ಟಿದ್ದೆಲ್ಲಾ ಚಿನ್ನ ಎಂತಾರಲ್ಲ ಆ ರೀತಿಯ ಅದೃಷ್ಟದ ಕೊಡುವ ಯೋಗ ಇದಾಗಿದೆ.
ಈ ಗಜಕೇಸರಿ ಯೋಗವು ಶಕ್ತಿ ಮತ್ತು ಸಂಪತ್ತಿಗೆ ಸಂಬಂಧಿಸಿದೆ. ಯಾರ ಜಾತಕದಲ್ಲಿ ಗಜಕೇಸರಿ ಯೋಗವು ಸೃಷ್ಟಿಯಾಗಿದೆಯೋ ಅವರಿಗೆ ಲಕ್ಷ್ಮಿ ಕೃಪೆ ಇರುತ್ತದೆ. ಸಂಪತ್ತು ಹೆಚ್ಚಾಗಲಿದೆ, ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಲಾಭ ಪಡೆಯಲಿದ್ದಾರೆ. ಈ ಯೋಗ ಇರುವವರು ಆರ್ಥಿಕವಾಗಿ ತುಂಬಾನೇ ಬೆಳವಣಿಗೆ ಕಾಣುತ್ತಾರೆ. ಆದರೆ ಈ ಗಜಕೇಸರಿ ಯೋಗ ಎಲ್ಲಾ ರಾಶಿಯವರ ಮೇಲೆ ಇರುವುದಿಲ್ಲ.

ಯಾರ ರಾಶಿಯಲ್ಲಿ ಚಂದ್ರ ದುರ್ಬಲ ಸ್ಥಾನದಲ್ಲಿರುತ್ತಾನೋ ಅವರಿಗೆ ಈ ಯೋಗ ಸಿಗುವುದಿಲ್ಲ, ಅಲ್ಲದೆ ರಾಹು ದೋಷವಿದ್ದರೂ ಈ ಯೋಗದ ಲಾಭ ದೊರೆಯುವುದಿಲ್ಲ. ಗುರು ಮತ್ತು ಚಂದ್ರ ರಾಶಿಯಲ್ಲಿ ಬಲವಾದ ಸ್ಥಾನದಲ್ಲಿದ್ದರೆ ಮಾತ್ರ ಈ ಗಜಕೇಸರಿ ಯೋಗದ ಪ್ರಯೋಜನ ಪಡೆಯಬಹುದು.
ಮೇ 17ಕ್ಕೆ ಮೇಷ ರಾಶಿಗೆ ಮಂಗಳನ ಸಂಚಾರ
ಮೇ 17, 2023ಕ್ಕೆ ಮಂಗಳ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಮೇಷ ರಾಶಿಯಲ್ಲಿಯೇ ಗುರುವಿದೆ. ರಾಹು ಹಾಗೂ ಬುಧ ಕೂಡ ಇದೇ ರಾಶಿಯಲ್ಲಿಯೇ ಇದೆ. ಇದೀಗ ಗುರು ಮತ್ತು ಚಂದ್ರನ ಸಂಯೋಗ ಮೇಷ ರಾಶಿಯಲ್ಲಿ ಉಂಟಾದಾಗ ಗಜಕೇಸರಿ ಯೋಗ ಉಂಟಾಗಲಿದೆ. ಅಲ್ಲದೆ ಮತ್ತೊಂದು ವಿಶೇಷವೆಂದರೆ ಮೇಷದಲ್ಲಿ ಬುಧನು ಇರುವುದರಿಂದ ಚಂದ್ರ-ಬುಧ ಸಂಯೋಗದಿಂದ ಬುಧ ರಾಜ ಯೋಗ ಏರ್ಪಡುವುದು. ಚಂದ್ರ ಮೇಷದಲ್ಲಿ ಇರುವಷ್ಟು ಸಮಯ ಈ ಮೂರು ರಾಶಿಯವರಿಗೆ ಗಜಕೇಸರಿಯೋಗವಿದೆ:
ಈ 3 ರಾಶಿಯವವರಿಗೆ ಈ ಅವಧಿಯಲ್ಲಿ ಗಜಕೇಸರಿ ಯೋಗವಿದೆ:
ಮೇಷ ರಾಶಿ: ಮೇಷ ರಾಶಿಯವರಿಗೆ ಗಜಕೇಸರಿ ಯೋಗವಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಉಂಟಾಗಲಿದೆ. ಯಾವುದಾದರೂ ಕೆಲಸ ಅಪೂರ್ಣವಾಗಿದ್ದರೆ ನಿಮ್ಮ ಕೆಲಸ ಪೂರ್ಣವಾಗಲಿದೆ. ಉದ್ಯೋಗಿಗಳು ತಮ್ಮ ಕೆಲಸದಿಂದ ಗುರುತಿಸಿಕೊಳ್ಳುವಿರಿ, ಇದರಿಂದ ಆರ್ಥಿಕವಾಗಿ ನಿಮಗೆ ಲಾಭವಾಗಲಿದೆ. ಸಂಬಳದಲ್ಲಿ ಬಡ್ತಿ ಸಿಗಲಿದೆ. ಒಟ್ಟಿನಲ್ಲಿ ಈ ಅವಧಿಯಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆ ಇರುವುದಿಲ್ಲ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಗಜಕೇಸರಿ ಯೋಗವಿದೆ. ಈ ಅವಧಿಯಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಇದ್ದಕ್ಕಿದ್ದಂತೆ ಆರ್ಥಿಕ ಸ್ಥಿತಿಯಲ್ಲಿ ತುಂಬಾನೇ ಪ್ರಗತಿ ಕಾಣುವಿರಿ. ಅಲ್ಲದೆ ನಿಮ್ಮ ಕೈ ಸೇರಬೇಕಾಗಿದ್ದ ಹಣ ಈ ಅವಧಿಯಲ್ಲಿ ಕೈ ಸೇರಲಿದೆ. ಆದರೆ ಈ ಅವಧಿಯಲ್ಲಿ ಯಾವುದೇ ವಾದ-ವಿವಾದದಲ್ಲಿ ಸಿಲುಕಿಕೊಳ್ಳದಂರತೆ ಎಚ್ಚರವಹಿಸಿ. ನಿಮ್ಮ ಮಾತೊನ ಮೇಲೆ ಹಿಡಿತವಿರಲಿ.
ತುಲಾ ರಾಶಿ
ತುಲಾ ರಾಶಿಯವರು ಕೂಡ ಗಜಕೇಸರಿ ಯೋಗದ ಪ್ರಯೋಜನ ಪಡೆಯಲಿದ್ದಾರೆ. ಈ ಸಮಯದಲ್ಲಿ ನೀವು ತುಂಬಾ ಧನಾತ್ಮಕವಾಗಿರುತ್ತೀರಿ. ಮನೆಯಲ್ಲಿ ವಾತಾವರಣ ತುಂಬಾ ಚೆನ್ನಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳಿಗೆ ಬಾಸ್‌ನಿಂದ ಮೆಚ್ಚುಗೆ ಕೂಡ ದೊರೆಯಲಿದೆ. ಈ ಅವಧಿಯಲ್ಲಿ ಆರ್ಥಿಕವಾಗಿ ತುಂಬಾನೇ ಚೆನ್ನಾಗಿರಲಿದೆ. ವ್ಯಾಪಾರಸ್ಥರು ಅಧಿಕ ಲಾಭ ಗಳಿಸುವಿರಿ.
ಪರಿಹಾರ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗಜಕೇಸರಿ ಯೋಗದ ಲಾಭ ಪಡೆಯಲು ಚಂದ್ರ ಮತ್ತು ಗುರು ಬಲವಾಗಿರುವುದು ಅಗತ್ಯ. ಜ್ಯೋತಿಷ್ಯದಲ್ಲಿ, ಚಂದ್ರನನ್ನು ಬಲಪಡಿಸಲು ಶಿವನನ್ನು ಪೂಜಿಸಿ. ಅಲ್ಲದೆ ಹುಣ್ಣಿಮೆಯಂದು ಚಂದ್ರನಿಗೆ ಆರ್ಘ್ಯ ಅರ್ಪಿಸಿ. ಇದಲ್ಲದೇ ಗುರುವಾರದಂದು ಗುರು ಬೀಜ ಮಂತ್ರ ಪಠಿಸಿ.



Click it and Unblock the Notifications
