ಗಜಕೇಸರಿ ಯೋಗ 2023 : ಈ 4 ರಾಶಿಯವರು ಜಾಗ್ರತೆ!

ಚಂದ್ರ ಮತ್ತು ಗುರುವಿನ ಸಂಯೋಜನೆಯಿಂದ ಗಜಕೇಸರಿ ಯೋಗ ಸೃಷ್ಟಿಯಾಗಲಿದೆ. ಈ ಬಾರಿ ಚಂದ್ರನು ಮಂಗಳ ರಾಶಿಗೆ ಸಾಗುತ್ತಿದ್ದಾನೆ. ಗುರುವು ಈಗಾಗಲೇ ಮೇಷ ರಾಶಿಯಲ್ಲಿ ಇರೋದ್ರಿಂದ ಇವುಗಳ ಸಂಯೋಜನೆಯಿಂದ ಗಜಕೇಸರಿ ಯೋಗ ಸೃಷ್ಟಿಯಾಗಲಿದೆ.

 Gaj Kesari Yoga 2023: Jupiter-Moon Under Rahu-Saturn’s Inlfuence in Kannada.

ವೈದಿಕ ಜ್ಯೋತಿಷ್ಯದ ಪ್ರಕಾರ ಗಜಕೇಸರಿ ಯೋಗವು ಅತ್ಯಂತ ಶಕ್ತಿಶಾಲಿ ಯೋಗವಾಗಿದೆ. ಚಂದ್ರನಿಂದ ಕೇಂದ್ರದ ಮನೆಯನ್ನು (1, 4, 7 ಮತ್ತು 10 ನೇ) ಗುರುವು ಆಕ್ರಮಿಸಿಕೊಂಡಾಗ ಅಥವಾ ಗುರು ಮತ್ತು ಚಂದ್ರರು ಒಂದೇ ಮನೆಯಲ್ಲಿ ನೆಲೆಗೊಂಡಾಗ ಈ ಯೋಗವು ರೂಪುಗೊಳ್ಳುತ್ತದೆ. ಗುರುವನ್ನು ಸಮೃದ್ಧಿ ಮತ್ತು ಆಸೆ ಈಡೇರಿಸುವ ಗ್ರಹ ಎಂದು ಕರೆಯಲಾಗುತ್ತದೆ.

ಗುರು ಅಥವಾ ಬೃಹಸ್ಪತಿ ಎಂದೂ ಕರೆಯಲ್ಪಡುವ ಈ ಗ್ರಹವು ಭಕ್ತಿ, ಧರ್ಮ, ಮಕ್ಕಳು ಮತ್ತು ಸಂಪತ್ತನ್ನು ಪ್ರತಿನಿಧಿಸುತ್ತದೆ. ಮತ್ತೊಂದೆಡೆ ಚಂದ್ರನು ದಯೆ, ಸಮೃದ್ಧಿ ಮತ್ತು ಭಾವನಾತ್ಮಕ ಸ್ಥಿರತೆಯನ್ನು ಸೂಚಿಸುತ್ತದೆ.
ಗುರುವು ಶತ್ರುವಿನ ಮನೆಯಲ್ಲಿದ್ದರೆ ಈ ಯೋಗವು ಮಂಗಳಕ್ಕೂ ಸವಾಲು ಉಂಟು ಮಾಡುತ್ತದೆ.

ರಾಹುವು ಪ್ರಸ್ತುತ ಮೇಷ ರಾಶಿಯಲ್ಲಿ ನೆಲೆಸಿದ್ದಾನೆ ಮತ್ತು ಶನಿಯು ಕುಂಭದಿಂದ ಈ ಗ್ರಹಗಳನ್ನು ನೋಡುತ್ತಾನೆ. ಆದ್ದರಿಂದ ಈ ಯೋಗವು ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ಈ ಯೋಗದ ಪರಿಣಾಮದಿಂದ ಯಾವೆಲ್ಲಾ ರಾಶಿಯವರು ಹುಷಾರಾಗಿರಬೇಕು ಅನ್ನೋದನ್ನು ತಿಳಿಯೋಣ.

ಮೇಷ ರಾಶಿ

ಗುರು, ಚಂದ್ರ ಮತ್ತು ರಾಹುವಿನ ಈ ಯೋಗವು ಮೇಷ ರಾಶಿಯವರ 1 ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಆದ್ದರಿಂದ ನಿಮ್ಮನ್ನು ಆಶೀರ್ವದಿಸಬೇಕಿದ್ದ ಗಜಕೇಸರಿ ಯೋಗವು ನಿಮಗೆ ವಿವಿಧ ಕ್ಷೇತ್ರಗಳಲ್ಲಿ ವಿಭಿನ್ನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಜೀವನದಲ್ಲಿ ಅನಿರೀಕ್ಷಿತ ಘಟನೆಗಳಿಗೆ ನೀವು ಬಲಿಯಾಗಬಹುದು. ಇದು ನಿಮ್ಮ ತಾಯಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುವ ಸಾಧ್ಯತೆಯೂ ಹೆಚ್ಚಾಗಿದೆ.

ಇಷ್ಟೇ ಅಲ್ಲದೇ, ಚಂದ್ರ, ಗುರು ಮತ್ತು ನೆರಳು ಗ್ರಹವಾದ ರಾಹುವಿನ ಸಂಯೋಗವು ನಿಮಗೆ ಹಣಕಾಸಿನ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆಯಿದೆ. ಮತ್ತು ಇದು ನಿಮ್ಮ ಕುಟುಂಬ ಅಥವಾ ವೈವಾಹಿಕ ಜೀವನದಲ್ಲಿ ಮತ್ತಷ್ಟು ಅಡಚಣೆಯನ್ನು ಉಂಟುಮಾಡುತ್ತದೆ. ಈ ಸಂಯೋಗದಿಂದ ನಿಮ್ಮ ಜೀವನದಲ್ಲಿ ಎಲ್ಲಾ ಕೆಲಸಗಳು ವಿಳಂಬ ಆಗಬಹುದು. ನೀವು ಎಲ್ಲಾ ವಿಚಾರಗಳಲ್ಲಿಯೂ ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರ 10 ನೇ ಮನೆಯಲ್ಲಿ ಗುರು, ಚಂದ್ರ ಮತ್ತು ರಾಹುವಿನ ಈ ಯೋಗವು ರೂಪುಗೊಳ್ಳುತ್ತದೆ. ಈ ಯೋಗವು ನಿಮ್ಮ ವೃತ್ತಿಪರ ಜೀವನದಲ್ಲಿ ನಿಮಗೆ ತೊಂದರೆ ಉಂಟುಮಾಡಬಹುದು. ಮತ್ತು ನಿಮಗೆ ಅಸ್ಥಿರತೆಯನ್ನು ನೀಡುತ್ತದೆ. ಸರಕಾರಿ ಕೆಲಸದಲ್ಲಿ ವರ್ಗಾವಣೆಯ ಸಾಧ್ಯತೆಗಳು ಇರಬಹುದು. ಅಥವಾ ಅಲ್ಪಾವಧಿಯಲ್ಲಿ ಬಹಳಷ್ಟು ಉದ್ಯೋಗ ಬದಲಾವಣೆಗಳ ಸಾಧ್ಯತೆಯೂ ಹೆಚ್ಚಿದೆ. ಮೇಲಧಿಕಾರಿಗಳೊಂದಿಗೆ ಕಿರಿ ಕಿರಿ ಉಂಟಾಗಬಹುದು.

ತುಲಾ ರಾಶಿ

ತುಲಾ ರಾಶಿಯವರ 7 ನೇ ಮನೆಯಲ್ಲಿ ರಾಹು, ಗುರು ಮತ್ತು ಚಂದ್ರರು ಸಂಯೋಗವಾಗುತ್ತಿದ್ದಾರೆ. ಈ ಅವಧಿಯು ನಿಮ್ಮ ಮದುವೆಯಂತಹ ಶುಭ ಕಾರ್ಯಕ್ಕೆ ತುಂಬಾನೇ ಕಠಿಣವಾಗಿರುತ್ತದೆ. ನೀವು ಉತ್ತಮ ಸಂಗಾತಿಯನ್ನು ಹೊಂದುತ್ತೀರಿ. ಆದರೆ ನಿಮ್ಮ ದಾಂಪತ್ಯದಲ್ಲಿ ನೀವು ಹೆಚ್ಚು ನಕಾರಾತ್ಮಕತೆ ಮತ್ತು ಸಂಘರ್ಷವನ್ನು ಅನುಭವಿಸುತ್ತೀರಿ.

ನಿಮ್ಮ ಸಂಗಾತಿ ಮತ್ತು ಕುಟುಂಬವನ್ನು ಒಳಗೊಂಡ ಕಾನೂನು ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ನೀವು ಎದುರಿಸಬೇಕಾಗಬಹುದು. ನೀವು ಆಗಾಗ್ಗೆ ಮನೆ ಬದಲಾಯಿಸಬೇಕಾಗಬಹುದು. 7 ನೇ ಮನೆಯಲ್ಲಿ ಈ ಸಂಯೋಗವು ನಿಮ್ಮು ಖಾಸಗಿ ದೇಹದ ಭಾಗಗಳಿಗೆ ಸಂಬಂಧಿಸಿದ ಕಾಯಿಲೆ ಉಂಟಾಗಬಹುದು. ಇದರೊಂದಿಗೆ ಹಾರ್ಮೋನ್ ಸಮಸ್ಯೆಗಳು ಕೂಡ ಉಂಟಾಗಬಹುದು.

ಮಕರ ರಾಶಿ

ಮಕರ ರಾಶಿಯ 4 ನೇ ಮನೆಯಲ್ಲಿ ಗುರು, ರಾಹು ಮತ್ತು ಚಂದ್ರನೊಂದಿಗೆ, ಶನಿಯ ನೇರ ಅಂಶದೊಂದಿಗೆ ಮಕರ ರಾಶಿಯವರು ಚಂಚಲತೆಯನ್ನು ಅನುಭವಿಸಬಹುದು. ಸ್ಪಷ್ಟ ಆಲೋಚನೆಗಳು ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೊಂದರೆಯಾಗಬಹುದು. ನೀವು ನಿಮ್ಮ ಆಲೋಚನಾ ಶಕ್ತಿಯನ್ನು ಬುದ್ಧಿವಂತಿಕೆಯಿಂದ ಬಳಸದಿದ್ದರೆ ನಿಮ್ಮ ಜೀವನ ಮತ್ತು ವೃತ್ತಿಜೀವನದಲ್ಲಿ ತಪ್ಪು ದಿಕ್ಕಿನಲ್ಲಿ ನಡೆಯುವ ಸಾಧ್ಯತೆಯಿದೆ.

ನಿಮ್ಮ ಜೀವನದಲ್ಲಿ ಏನಿದೆ ಅನ್ನೋದನ್ನು ನೋಡಿ ನೀವು ಖುಷಿಯಾಗಿ ಇರೋದಿಲ್ಲ. ಬದಲಾಗಿ ಬೇರೆಯದು ಏನನ್ನೋ ಹುಡುಕಾಡುತ್ತಾ ಅತೃಪ್ತಿಯಿಂದಿರುತ್ತೀರಿ. ಮ್ಮ ಆಸೆಗಳನ್ನು ಪೂರೈಸಲು ನೀವು ಕೆಲವು ತಪ್ಪು ಕಾರ್ಯಗಳಲ್ಲಿ ಭಾಗಿಯಾಗಬಹುದು. ನಿಮ್ಮ ತಾಯಿಯೊಂದಿಗೆ ನೀವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಅಥವಾ ಅವರ ಆರೋಗ್ಯದ ಬಗ್ಗೆ ನಿಮಗೆ ಚಿಂತೆ ಉಂಟಾಗಬಹುದು.

ಈ ಪರಿಹಾರಗಳನ್ನು ಮಾಡಿ:
* ಶಿವನನ್ನು ಆರಾಧಿಸಿ ಮತ್ತು ರುದ್ರಾಭಿಷೇಕ ಮಾಡಿ
* ಬೀದಿ ನಾಯಿಗಳು ಮತ್ತು ಹಸುಗಳಿಗೆ ಆಹಾರ ನೀಡಿ
* ಬಡವರಿಗೆ ಹೊದಿಕೆ ಮತ್ತು ಬಟ್ಟೆಗಳನ್ನು ದಾನ ಮಾಡಿ
* ವಿಷ್ಣು ಸಹಸ್ರನಾಮವನ್ನು ಪಠಿಸಿ

English summary

Gaj Kesari Yoga 2023: Jupiter-Moon Under Rahu-Saturn’s Inlfuence in Kannada.

Gaj Kesari Yoga 2023: Jupiter-Moon Under Rahu-Saturn’s Inlfuence. Read more.
Story first published: Friday, August 25, 2023, 10:50 [IST]
X
Desktop Bottom Promotion