Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬೆಂಗಳೂರು ಮೆಟ್ರೋದಲ್ಲಿ ಟಿಕೆಟ್ ತೆಗೆಯದೆ ಪ್ರಯಾಣಿಸಿದ ಪ್ರಸಿದ್ಧ ಯೂಟ್ಯೂಬರ್: ನೆಟ್ಟಿಗರಿಂದ ಟೀಕೆಗಳ ಸುರಿಮಳೆ
ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣ ಮಾಡಿದವರಿಗೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ಸಾಧ್ಯನೇ ಇಲ್ಲ ಎಂಬುವುದು ಗೊತ್ತಿರುವ ವಿಷಯ, ಆದರೆ ಒಬ್ಬ ಪ್ರಸಿದ್ಧ ಯುಟ್ಯೂಬರ್ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿ ವೀಡಿಯೋ ಮಾಡಿ ಹಾಕಿರುವ ವೀಡಿಯೋ ತುಂಬಾನೇ ವೈರಲ್ ಆಗಿದೆ. ನೆಟ್ಟಿಗರು ಯೂ ಟ್ಯೂಬರ್ ಮಾಡಿರುವುದು ತಪ್ಪು ಎಂದು ಟೀಕಿಸುತ್ತಿದ್ದಾರೆ.

ಆತನ ಹೆಸರು Fidias,ತುಂಬಾನೇ ಪ್ರಸಿದ್ಧ ಯೂಟ್ಯೂಬರ್, ಎಲೆನ್ ಮಸ್ಕ್ ಅವರನ್ನು ಭೇಟಿ ಮಾಡುವ ಮೂಲಕ ತುಂಬಾನೇ ಗಮನ ಸೆಳೆದ ವ್ಯಕ್ತಿ. ಭಾರತವನ್ನು 10 ಡಾಲರ್ ಮಾತ್ರ ಇಟ್ಟು ಸುತ್ತಿ ತೋರಿಸುತ್ತೇನೆ ಎಂದು ಭಾರತಕ್ಕೆ ಪ್ರಯಾಣ ಮಾಡಿದ್ದಾರೆ. ಆ ವೀಡಿಯೋದಲ್ಲಿಯೂ ಭಾರತದ ಮ್ಯಾಪ್ ಅನ್ನು ಸರಿಯಾಗಿ ಹಾಕದೆ ಭಾರತೀಯರ ಭಾವನೆ ಧಕ್ಕೆ ಮಾಡಿದ್ದಾರೆ, ಇನ್ನೂ ಆ ವೀಡಿಯೋ ಅವರ ಖಾತೆಯಲ್ಲಿಯೇ ಇದೆ. ಇದೀಗ ಬೆಂಗಳೂರು ಮೆಟ್ರೋದಲ್ಲಿ ಟಿಕೆಟ್ ಕೊಡದೆ ಪ್ರಯಾಣಿಸಿ ತುಂಬಾನೇ ಗಮನ ಸೆಳೆದಿದ್ದಾರೆ.
ಮೆಟ್ರೋದಲ್ಲಿ ಪ್ರಯಾಣ ಮಾಡಿದವರಿಗೆ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಬೆಂಗಳೂರಿನ ಮೆಟ್ರೋದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ತುಂಬಾನೇ ಕಷ್ಟ, ಅಲ್ಲಿ ಮೆಟ್ರೋ ಕಾಯಿನ್ ಅಥವಾ ಮೆಟ್ರೋ ಕಾರ್ಡ್ ಇಟ್ಟರೆ ಫ್ಲಾಟ್ ಫಾರಂ ಹೋಗಲು ಹಾಗೂ ಎಕ್ಸಿಟ್ ಆಗಲು ಸಾಧ್ಯ. ಆದರೆ ಈ ವ್ಯಕ್ತಿ ಆ ಎಂಟ್ರಿ ಹಾಗೂ ಎಕ್ಸಿಟ್ ಗೇಟ್ ಅನ್ನು ಹಾರಿಕೊಂಡು ಹೋಗಿದ್ದೇನೆ. ಈತ ಈ ರೀತಿ ಮಾಡುವಾಗ ಮೆಟ್ರೋ ಸಿಬ್ಬಂದಿಗಳು ಏನು ಮಾಡುತ್ತಿದ್ದರು ಎಂಬುವುದೇ ಪ್ರಶ್ನೆ. ಈತ ಟಿಕೆಟ್ ತೆಗೆಯದೆ ಪ್ರಯಾಣ ಮಾಡಿದ್ದು ಮಾತ್ರವಲ್ಲ ಮೆಟ್ರೋ ಒಳಗಡೆ ಪ್ಯಾಸೆಂಜರ್ ಹಿಡಿದು ನಿಲ್ಲಲು ಇರುವ ರಾಡ್‌ಗಳಲ್ಲಿ ವರ್ಕೌಟ್ ಮಾಡಿದ್ದಾನೆ.... ಇಂಥ ಕುಚೇಷ್ಠೆಯನ್ನು ಮಾಡಿ, ನಂತರ ಎಕ್ಸಿಟ್ ಜಂಪ್ ಆಗಿ ಬಂದು ನಾನು ಟಿಕೆಟ್ ತೆಗೆಯದೆ ಬೆಂಗಳೂರು ಮೆಟ್ರೋದಲ್ಲಿ ಬಂದಿದ್ದೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾನೆ.
ಈ ವೀಡಿಯೋಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಆತನನ್ನು ಏಕೆ ಯಾವುದೇ ಸೆಕ್ಯೂರಿಟಿ ಗಾರ್ಡ್ಸ್ ತಡೆಯಲಿಲ್ಲ ಎಂಬುವುದೇ ಪ್ರಶ್ನೆ. ಕೆಲವರು ಆತನಿಗೆ GOOD JOB! STEALING from the HARD WORKING people of India! ಎಂದು ಕಮೆಂಟ್ ಮಾಡುತ್ತಿದ್ದಾರೆ. ಈತ 10 ಡಾಲರ್‌ನಲ್ಲಿ ಭಾರತ ಸುತ್ತುತ್ತೇನೆ ಎಂದು ಹೊರಟಿರುವುದು ಹಾಗಂತ ಈ ರೀತಿ ಕಳ್ಳನ ರೀತಿಯಲ್ಲಿ ಸುತ್ತುವುದು ಎಷ್ಟು ಸರಿ... ಈತ ಭಾರತದ ಬಗ್ಗೆ ಏನು ಹೇಳಲು ಹೊರಟಿದ್ದಾನೆ.
ಬೆಂಗಳೂರು ಮೆಟ್ರೋ ಕಾರ್ಯಕಾರಿ ನಿರ್ದೇಶಕ ಎಎಸ್ ಶಂಕರ್ ಪ್ರಯಾಣಿಕರ ಮೇಲೆ ಹೆಚ್ಚಿನ ಕಣ್ಗಾವಲು ಇಡಲಾಗುವುದು ಎಂದು ಹೇಳಿದ್ದಾರೆ.



Click it and Unblock the Notifications
