ಸೆಪ್ಟೆಂಬರ್ 2 ದಿನ ಭವಿಷ್ಯ: ಮೇಷ ರಾಶಿಯವರೇ ಜಾಗ್ರತೆ, ಉಳಿದ ರಾಶಿಗಳಿಗೆ ಹೇಗಿರಲಿದೆ?

ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 2ರ ರಾಶಿಫಲ ನೀಡಿದ್ದು ಈ ದಿನ 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ದಿನಾಂಕ: ತೃತೀಯ
ನಕ್ಷತ್ರ: ಉತ್ತರ ಭಾದ್ರಪದ
ಪಕ್ಷ: ಕೃಷ್ಣಪಕ್ಷ
ರಾಹುಕಾಲ: ಬೆಳಗ್ಗೆ 09:14ರಿಂದ 19:47ರವರೆಗೆ

Dina Bhavishya

ಮೇಷ ರಾಶಿ
ಇಂದು ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದು ಒಳ್ಳೆಯದು. ಆತುರದ ನಿರ್ಧಾರ ನಷ್ಟವನ್ನು ಉಂಟು ಮಾಡಬಹುದು. ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ಈ ದಿನ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಆದಾಯ ಚೆನ್ನಾಗಿರಲಿದೆ. ಆರೋಗ್ಯದ ಕಡೆ ಗಮನ ನೀಡಿ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 7
ಶುಭ ಸಮಯ: ಬೆಳಗ್ಗೆ 7 ರಿಂದ 10 ರವರೆಗೆ

ವೃಷಭ ರಾಶಿ
ಹಣಕಾಸಿನ ಸ್ಥಿತಿ ಅಷ್ಟು ಚೆನ್ನಾಗಿರಲ್ಲ, ಆರ್ಥಿಕ ನಷ್ಟ ಉಂಟಾಗಬಹುದು. ಕಚೇರಿಯಲ್ಲಿ ಮಾತನಾಡುವಾಗ ಆಲೋಚಿಸಿ ಮಾತನಾಡಿ. ಉದ್ಯಮಿಗಳು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು, ವಿವಾಹಿತರ ವೈವಾಹಿಕ ಜೀವನ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 8
ಶುಭ ಸಮಯ: ಮಧ್ಯಾಹ್ನ 2:30 ರಿಂದ 6:40 ರವರೆಗೆ

ಮಿಥುನ ರಾಶಿ
ನಿಮ್ಮ ಹಣದ ಚಿಂತೆ ದೂರಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಮನೆಯವರ ಜೊತೆಗೆ ಇಂದು ಭಿನ್ನಾಭಿಪ್ರಾಯ ಉಂಟಾಗದಂತೆ ಎಚ್ಚರವಹಿಸಿ. ಉದ್ಯೋಗಿಗಳಿಗೆ ಸರಾಸರಿವಾಗಿರಲಿದೆ. ಇಂದು ಕೆಲಸಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೇಡಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 34
ಅದೃಷ್ಟದ ಸಮಯ: ಬೆಳಗ್ಗೆ 11:10 ರಿಂದ ಮಧ್ಯಾಹ್ನ 2:25 ರವರೆಗೆ

ಕರ್ಕ ರಾಶಿ
ಪ್ರೇಮಿಗಳಿಗೆ ಈ ದಿನ ಉತ್ತಮವಾಗಿರಲಿದೆ. ಈ ದಿನ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಯಾವುದೇ ಹಳೆಯ ಸಾಲವನ್ನು ಮರುಪಾವತಿ ಮಾಡುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬದೊಂದಿಗೆ ಖುಷಿಯಾಗಿ ಸಮಯ ಕಳೆಯುತ್ತೀರಿ. ಉದ್ಯೋಗಿಗಳು ತಮ್ಮ ಕೆಲಸದ ಕಡೆಗೆ ಗಮನಹರಿಸಬೇಕು.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 14
ಶುಭ ಸಮಯ: ಮಧ್ಯಾಹ್ನ 2:20 ರಿಂದ 4:30 ರವರೆಗೆ

ಸಿಂಹ ರಾಶಿ
ಈ ದಿನ ನಿಮ್ಮ ಸಂಗಾತಿಯ ಮನಸ್ಥಿತಿ ಅಷ್ಟು ಸರಿಯಿರಲ್ಲ, ನೀವು ಚಿಕ್ಕ ವಿಷಯಕ್ಕೆ ಕೋಪಗೊಳ್ಳದಿರುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಈ ದಿನ ನೀವು ಶಾಪಿಂಗ್ ಮಾಡಬಹುದು. ಕಚೇರಿಯಲ್ಲಿ ನಿಮ್ಮ ಯಾವುದೇ ಕೆಲಸವನ್ನು ನಾಳೆಗೆ ಮುಂದೂಡಬೇಡಿ, ಇಲ್ಲದಿದ್ದರೆ ಕೆಲಸದ ಒತ್ತಡ ಅಧಿಕವಾಗುವುದು.
ಅದೃಷ್ಟದ ಬಣ್ಣ: ಬೂದು
ಅದೃಷ್ಟದ ಸಂಖ್ಯೆ: 9
ಶುಭ ಸಮಯ: ಬೆಳಿಗ್ಗೆ 8 ರಿಂದ 10:15 ರವರೆಗೆ

ಕನ್ಯಾ ರಾಶಿ
ಆರೋಗ್ಯದ ದೃಷ್ಟಿಯಿಂದಈ ದಿನ ಅಷ್ಟೊಂದು ಉತ್ತಮವಾಗಿಲ್ಲ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಕೆಲಸದಲ್ಲಿ ಈ ದಿನ ಮಿಶ್ರಫಲ. ನೀವು ವಿದೇಶಕ್ಕೆ ಹೋಗಿ ಉದ್ಯೋಗ ಪಡೆಯಲು ಬಯಸಿದರೆ, ನೀವು ನಿಮ್ಮ ಪ್ರಯತ್ನಗಳನ್ನು ಮತ್ತಷ್ಟು ಚುರುಕುಗೊಳಿಸಿ. ವೈವಾಹಿಕ ಜೀವನ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ತಿಳಿ ಕೆಂಪು
ಅದೃಷ್ಟದ ಸಂಖ್ಯೆ: 15
ಶುಭ ಸಮಯ: ಬೆಳಗ್ಗೆ 7:20 ರಿಂದ ಮಧ್ಯಾಹ್ನ 3 ರವರೆಗೆ

ತುಲಾ ರಾಶಿ
ವೈವಾಹಿಕ ಜೀವನದಲ್ಲಿ ಭಿನ್ನಾಬಿಪ್ರಾಯಗಳಿರಬಹುದು, ನೀವು ಕೋಪವನ್ನು ನಿಯಂತ್ರಿಸಿ ಪರಿಸ್ಥಿತಿ ಸರಿದೂಗಿಸಿಕೊಂಡು ಹೋಗಲು ಪ್ರಯತ್ನಿಸಿ. ಹಣದ ಕುರಿತು ಅಧಿಕ ಚಿಂತೆ ಮಾಡಲು ಹೋಗಬೇಡಿ. ಸೂಕ್ತವಾದ ಸಮಯ ಬಂದಾಗ ನಿಮ್ಮ ಸಮಸ್ಯೆ ಬಗೆಹರಿಯಲಿದೆ. ನಿಮ್ಮ ಎಲ್ಲಾ ಕೆಲಸಗಳು ನಿಮ್ಮ ಯೋಜನೆಯಂತೆಯೇ ಪೂರ್ಣಗೊಳ್ಳಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 16
ಶುಭ ಸಮಯ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 12:25 ರವರೆಗೆ

ವೃಶ್ಚಿಕ ರಾಶಿ
ಈ ದಿನ ನಿಮಗೆ ಮುಖ್ಯವಾಗಿದೆ. ನಿಮ್ಮ ಜೀವನದಲ್ಲಿ ದೊಡ್ಡ ಧನಾತ್ಮಕ ಬದಲಾವಣೆ ಕಂಡು ಬರಲಿದೆ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇರಲಿದೆ. ಉದ್ಯೋಗಸ್ಥರು ಇಂದು ತುಂಬಾ ಕಷ್ಟಪಡಬೇಕಾಗಬಹುದು. ಆದರೆ ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಶೀಘ್ರದಲ್ಲೇ ಪಡೆಯಬಹುದು.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 12
ಶುಭ ಸಮಯ: ಸಂಜೆ 6:30 ರಿಂದ ರಾತ್ರಿ 8 ರವರೆಗೆ

ಧನು ರಾಶಿ
ಈ ದಿನ ನಿಮಗೆ ಮಿಶ್ರಫಲಿತಾಂಶ. ನೀವು ಅನಗ್ಯತವಾಗಿ ಚಿಂತನೆ ಮಾಡದಿರಿ. ಈ ದಿನ ಧನಾತ್ಮಕವಾಗಿರಿ. ಶೀಘ್ರದಲ್ಲೇ ವಿಷಯಗಳು ನಿಮ್ಮ ಪರವಾಗಿ ತಿರುಗಲಿದೆ. ಹಣದ ಸ್ಥಿತಿ ಸಾಮಾನ್ಯವಾಗಿರುತ್ತದೆ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವಿರಲಿದೆ. ಈ ದಿನ ಆರೋಗ್ಯ ಸಮಸ್ಯೆಗಳಿರಬಹುದು. ಆರೋಗ್ಯದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 2
ಶುಭ ಸಮಯ: 11:30 ರಿಂದ ಮಧ್ಯಾಹ್ನ 3 ರವರೆಗೆ

ಮಕರ ರಾಶಿ
ಕೆಲಸದ ಜೊತೆಗೆ ನೀವು ಕುಟುಂಬದ ಕಡೆಯೂ ಗಮನಹರಿಸಿ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಆದಾಯಕ್ಕಿಂತ ಹೆಚ್ಚಿನ ಖರ್ಚು ಇರಲಿದೆ. ನೀವು ಆರೋಗ್ಯದ ಕಡೆ ಗಮನಹರಿಸಬೇಕು. ನಿರ್ಲಕ್ಷ್ಯ ಮಾಡಿದರೆ ಸಮಸ್ಯೆ ಹೆಚ್ಚಾಗುವುದು.
ಅದೃಷ್ಟದ ಬಣ್ಣ: ಕಡು ನೀಲಿ
ಅದೃಷ್ಟದ ಸಂಖ್ಯೆ: 11
ಶುಭ ಸಮಯ: ಮಧ್ಯಾಹ್ನ 2 ರಿಂದ 5:20 ರವರೆಗೆ

ಕುಂಭ ರಾಶಿ
ಇಂದು ಅಗತ್ಯವಿರುವ ಯಾರಿಗಾದರೂ ಸಹಾಯ ಮಾಡಲು ನಿಮಗೆ ಅವಕಾಶ ಸಿಕ್ಕರೆ ಈ ದಿನ ಮಾಡಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ನೀವು ಖರ್ಚು ಮಾಡಿದರೆ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ, ಕೆಲಸದಲ್ಲಿ ಈ ದಿನ ಉತ್ತಮವಾಗಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಉತ್ತಮ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 10
ಶುಭ ಸಮಯ: ಬೆಳಗ್ಗೆ 6:25 ರಿಂದ ಮಧ್ಯಾಹ್ನ 12:20 ರವರೆಗೆ

ಮೀನ ರಾಶಿ
ದಾಂಪತ್ಯ ಜೀವನ ಚೆನ್ನಾಗಿರಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ, ಕಚೇರಿಯಲ್ಲಿ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ. ನಿಮ್ಮ ಸಕಾರಾತ್ಮಕತೆ ಮತ್ತು ಆತ್ಮವಿಶ್ವಾಸವು ನಿಮಗೆ ಉತ್ತಮ ಯಶಸ್ಸನ್ನು ತರುತ್ತದೆ. ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಸಾಲ ಅಥವಾ ಕ್ರೆಡಿಟ್ ವಹಿವಾಟುಗಳನ್ನು ಮಾಡಲು ಹೋಗಬೇಡಿ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟ ಸಂಖ್ಯೆ: 28
ಶುಭ ಸಮಯ: ಮಧ್ಯಾಹ್ನ 12 ರಿಂದ ಸಂಜೆ 4:30 ರವರೆಗೆ

English summary

Dina Bhavishya: September 2 Daily Horoscope Prediction Of 12 Zodiac Signs 2023 in Kannada

Explore Dina Rashi Bhavishya (ದಿನ ಭವಿಷ್ಯ) Today's Astrology Prediction For Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, And Pisces In Kannada
Story first published: Friday, September 1, 2023, 23:13 [IST]
X
Desktop Bottom Promotion