Horoscope Today 4 May 2023: ಗುರುವಾರ: ಈ ದಿನ 12 ರಾಶಿಗಳಿಗೆ ಹೇಗಿರಲಿದೆ?

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮೇ‌ 4ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ವೈಶಾಖ
ಪಕ್ಷ: ಶುಕ್ಲಪಕ್ಷ
ತಿಥಿ:ಚತುರ್ದಶಿ
ನಕ್ಷತ್ರ: ರಾತ್ರಿ 09:35ರವರೆಗೆ ಸ್ವಾತಿ
ರಾಹುಕಾಲ: ಬೆಳಗ್ಗೆ 01:58ರವರೆಗೆ 03:38ರವರೆಗೆ

ಮೇಷ ರಾಶಿ
ಕೆಲಸದ ಹೊರತಾಗಿ, ಕೆಲಸದ ಸ್ಥಳದಲ್ಲಿ ನೀವು ಇತರ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಒಳ್ಳೆಯದು. ಗಾಸಿಪ್ ಮಾಡಲು ಹೋಗಬೇಡಿ. ಉದ್ಯಮಿಗಳು ಇಂದು ಉತ್ತಮ ಆರ್ಥಿಕ ಲಾಭಗಳನ್ನು ಪಡೆಯಬಹುದು, ಆದರೆ ಯಾವುದೇ ಪ್ರಮುಖ ವ್ಯವಹಾರ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಲು ಹೋಗಬೇಡಿ. ನಿಮ್ಮ ಸಂಗಾತಿಯ ಆರೋಗ್ಯದ ಕುಸಿತ ಉಂಟಾಗುವುದರಿಂದ ಆತಂಕ ಹೆಚ್ಚಾಗುವುದು. ಹಣದ ವಿಷಯದಲ್ಲಿ ದುಬಾರಿಯಾಗಲಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಬಿಡುವಿಲ್ಲದೆ ಓಡಾಡುವುದರಿಂದ ಆಯಾಸ ಹೆಚ್ಚಾಗುವುದು.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ

Dina Bhavishya -May 4 2023 Today Rashi Bhavishya, Daily Horoscope in Kannada

ವೃಷಭ ರಾಶಿ
ಇಂದು ನಿಮಗೆ ತುಂಬಾ ಅದೃಷ್ಟದ ದಿನ. ಈ ದಿನ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯಬಹುದು. ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದರೆ, ನೀವು ಉತ್ತಮ ಅವಕಾಶವನ್ನು ಪಡೆಯುವ ಸಾಧ್ಯತೆಯಿದೆ. ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ಆರೋಗ್ಯ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 8:20 ರವರೆಗೆ

ಮಿಥುನ ರಾಶಿ
ಕೆಲಸದ ವಿಷಯದಲ್ಲಿ ಹೇಳುವುದಾದರೆ ಕೆಲವು ಅಡೆತಡೆಗಳಿರಬಹುದು. ಕಚೇರಿಯಲ್ಲಿ ಜವಾಬ್ದಾರಿಗಳ ಹೊರೆ ಹೆಚ್ಚು ಇರುತ್ತದೆ. ಯಾವುದೇ ಇತರ ಕೆಲಸವನ್ನು ಪ್ರಾರಂಭಿಸುವ ಮೊದಲು ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಉದ್ಯಮಿಗಳಿಗೆ ಸಲಹೆ ನೀಡಲಾಗಿದೆ. ಕೆಲಸದ ಜೊತೆಗೆ ಕುಟುಂಬದ ಕಡೆಗೂ ಗಮನ ಹರಿಸುವುದು ಒಳ್ಳೆಯದು. ನಿಮ್ಮ ಅಸಡ್ಡೆ ವರ್ತನೆ ನಿಮ್ಮ ಮನಸ್ಸಿಗೆ ನೋವುಂಟು ಮಾಡಬಹುದು. ಹಣದ ಕೊರತೆಯಿಂದಾಗಿ ನಿಮ್ಮ ದೈನಂದಿನ ಖರ್ಚುಗಳನ್ನು ಪೂರೈಸಲು ನಿಮಗೆ ತುಂಬಾ ಕಷ್ಟವಾಗಬಹುದು. ಆರೋಗ್ಯ ಇಂದು ದುರ್ಬಲವಾಗಲಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ 1:25 ರವರೆಗೆ

ಕರ್ಕ ರಾಶಿ
ಇಂದು ನಿಮ್ಮ ಸಹೋದರ ಅಥವಾ ಸಹೋದರಿಯೊಂದಿಗೆ ಬಿರುಕು ಉಂಟಾಗಬಹುದು, ಆದ್ದರಿಂದ ನಿಮ್ಮ ಮಾತಿಗಳ ಕಡೆ ಗಮನಹರಿಸುವುದು ಒಳ್ಳೆಯದು. ಕೋಪ ಮತ್ತು ಆತುರದಿಂದ ಏನನ್ನೂ ಮಾಡಬೇಡಿ, ನಂತರ ನೀವು ವಿಷಾದಿಸಬೇಕಾಗುವುದು. ಕಚೇರಿಯಲ್ಲಿ ಮೇಲಧಿಕಾರಿಗಳು ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಕೆಲವು ಉತ್ತಮ ಸಲಹೆಗಳನ್ನು ಪಡೆಯಬಹುದು. ವ್ಯಾಪಾರಸ್ಥರಿಗೆ ಮಿಶ್ರ ಲಾಭ ದೊರೆಯಲಿದೆ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ಇಂದು ನೀವು ಅಪಾಯಕಾರಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗಬಹುದು. ನಿರ್ಲಕ್ಷ್ಯ ಮಾಡದೆ ಉತ್ತಮ ವೈದ್ಯರನ್ನು ಭೇಟಿಯಾಗಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 26
ಅದೃಷ್ಟದ ಸಮಯ: ಸಂಜೆ 4:45 ರಿಂದ ಸಂಜೆ 7 ರವರೆಗೆ

ಸಿಂಹ ರಾಶಿ
ದಿನದ ಆರಂಭ ಸ್ವಲ್ಪ ನಿಧಾನವಾಗಬಹುದು. ಇಂದು, ಯಾವುದೇ ಕಾರಣವಿಲ್ಲದೆ, ಮನಸ್ಸು ಸ್ವಲ್ಪ ವಿಚಲಿತಗೊಳ್ಳಬಹುದು. ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದು ಒಳ್ಳೆಯದು. ಬೇಡದ ಆಲೋಚನೆ ಮಾಡಿ ಸಮಯ ಹಾಗೂ ಮನಸ್ಸು ಎರಡೂ ಹಾಳು ಮಾಡಬೇಡಿ. ಉದ್ಯಮಿಗಳು ಇಂದು ಹೊಸ ವ್ಯವಹಾರ ಪ್ರಸ್ತಾಪವನ್ನು ಪಡೆಯಬಹುದು. ನೀವು ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ, ನೀವು ಯಶಸ್ಸನ್ನು ಪಡೆಯಬಹುದು. ಸಂಗಾತಿಯ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು. ಆರೋಗ್ಯದ ವಿಷಯದಲ್ಲಿ ಇಂದು ಮಿಶ್ರಫಲ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಬೆಳಿಗ್ಗೆ 7:15 ರಿಂದ 9:25 ರವರೆಗೆ

ಕನ್ಯಾ ರಾಶಿ
ಮಕ್ಕಳ ಕಡೆಯಿಂದ ಸಂತೋಷ ಸಿಗಲಿದೆ. ಹಣದ ವಿಷಯದಲ್ಲಿ ಇಂದು ತುಂಬಾ ಅದೃಷ್ಟದ ದಿನ. ನಿಮ್ಮ ಆರ್ಥಿಕ ಪ್ರಯತ್ನ ಯಶಸ್ವಿಯಾಗಲಿದೆ. ಕೆಲಸದ ಸ್ಥಳದಲ್ಲಿ, ಆಲಸ್ಯ ಮತ್ತು ಸೋಮಾರಿತನವನ್ನು ತಪ್ಪಿ, ನೀವು ನಿಮ್ಮ ಪ್ರಮುಖ ಕಾರ್ಯಗಳ ಮೇಲೆ ಕೇಂದ್ರೀಕರಿಸಲು ಸಲಹೆ ನೀಡಲಾಗಿದೆ. ತೆರಿಗೆಗೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚು ಜಾಗರೂಕರಾಗಿರಲು ಉದ್ಯಮಿಗಳಿಗೆ ಸಲಹೆ ನೀಡಲಾಗಿದೆ. ಸ್ವಲ್ಪ ಅಜಾಗರೂಕತೆಯು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 8:20 ರವರೆಗೆ

ತುಲಾ ರಾಶಿ
ನೀವು ಉದ್ಯಮಿಯಾಗಿದ್ದರೆ ಮತ್ತು ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಯೋಜಿಸುತ್ತಿದ್ದರೆ, ಇಂದು ನಿಮಗೆ ಬಹಳ ಮುಖ್ಯವಾಗಿರಲಿದೆ. ಉದ್ಯೋಗಸ್ಥರು ಕಚೇರಿಯಲ್ಲಿನ ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ಕೆಲಸದ ಸ್ಥಳದಲ್ಲಿ ನೀವು ಅನಗ್ಯತ ವಿಷಯಗಳಿಗೆ ತಲೆ ಹಾಕದಿರುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಆಹ್ಲಾದಕರವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ದಿನವು ಸಾಮಾನ್ಯವಾಗಿರಲಿದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಬೆಳಿಗ್ಗೆ 6:45 ರಿಂದ 10 ರವರೆಗೆ

ವೃಶ್ಚಿಕ ರಾಶಿ
ಪ್ರೀತಿಯ ವಿಷಯದಲ್ಲಿ ಈ ದಿನವು ತುಂಬಾ ವಿಶೇಷವಾಗಿರುತ್ತದೆ. ನೀವು ಇತ್ತೀಚೆಗೆ ಪ್ರಪೋಸ್ ಮಾಡಿದ್ದರೆ ನೀವು ಸಕಾರಾತ್ಮಕ ಉತ್ತರವನ್ನು ಪಡೆಯಬಹುದು. ಕೆಲಸದ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬೇಡಿ. ಅದು ಉದ್ಯೋಗ ಅಥವಾ ವ್ಯವಹಾರವಾಗಿರಲಿ, ಇಂದು ನೀವು ತುಂಬಾ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಈ ದಿನ ನೀವು ಆರೋಗ್ಯದ ಕಡೆ ಗಮನ ನೀಡಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 32
ಅದೃಷ್ಟದ ಸಮಯ: ಸಂಜೆ 6 ರಿಂದ ರಾತ್ರಿ 8 ರವರೆಗೆ

ಧನು ರಾಶಿ
ಈ ದಿನ ಏರಿಳಿತಗಳು ತುಂಬಿರುತ್ತವೆ. ಕಠಿಣ ಪರಿಶ್ರಮದ ಹೊರತಾಗಿಯೂ, ನೀವು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದಿದ್ದರೆ, ನೀವು ನಿರಾಶೆಗೊಳ್ಳುವ ಅಗತ್ಯವಿಲ್ಲ. ನಿಮ್ಮ ಶ್ರಮದ ಮೇಲೆ ನಂಬಿಕೆ ಇಡಿ. ಶೀಘ್ರದಲ್ಲೇ ನೀವು ಉತ್ತಮ ಫಲ ಪಡೆಯುವಿರಿ. ಮನೆಯಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸಿದರೆ ಅನೇಕ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದು. ಹಣದ ವಿಷಯದಲ್ಲಿ ದಿನವು ಸರಾಸರಿಯಾಗಲಿದೆ. ಆರೋಗ್ಯವಾಗಿರಲು, ನೀವು ನಿಮ್ಮ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು, ಯೋಗವನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಬೆಳಿಗ್ಗೆ 10:20 ರಿಂದ ಮಧ್ಯಾಹ್ನ 1 ರವರೆಗೆ

ಮಕರ ರಾಶಿ
ಈ ಸಮಯದಲ್ಲಿ ವಿರೋಧಿಗಳು ಸಕ್ರಿಯರಾಗಿರುತ್ತಾರೆ, ಅವರು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಬಹುದು ಆದ್ದರಿಂದ ನೀವು ಎಚ್ಚರಿಕೆಯಿಂದ ಇರುವುದು ಉತ್ತಮ. ಕಚೇರಿಯಲ್ಲಿಯೂ ನಿಮ್ಮ ಕೆಲಸದ ಕಡೆ ಗಮನಹರಿಸುವುದು ಒಳ್ಳೆಯದು. ವ್ಯಾಪಾರಸ್ಥರಿಗೆ ಲಾಭ ಸಿಗಲಿದೆ, ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬ ಜೀವನದಲ್ಲಿ ಖುಷಿ ಇರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಒಂದೇ ಕಡೆ ಕೂರುವುದನ್ನು ತಪ್ಪಿಸಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 8 ರವರೆಗೆ

ಕುಂಭ ರಾಶಿ
ಆರೋಗ್ಯವು ಸುಧಾರಿಸುತ್ತದೆ, ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಮೊದಲು ನೀವು ಖರ್ಚು ನಿಯಂತ್ರಿಸಬೇಕಾಗಿದೆ. ಅಲ್ಲದೆ ಯಾವುದೇ ಹಣಕಾಸಿನ ವ್ಯವಹಾರವನ್ನು ಯೋಚಿಸದೆ ಮಾಡಬೇಡಿ. ಬೇರೆಯವರ ಬಣ್ಣದ ಮಾತುಗಳುಗೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಬೆಳಿಗ್ಗೆ 8:20 ರಿಂದ ಮಧ್ಯಾಹ್ನ 1 ರವರೆಗೆ

ಮೀನ ರಾಶಿ
ಸಣ್ಣ ವಿಷಯಗಳಿಗೆ ಕೋಪಗೊಳ್ಳುವ ನಿಮ್ಮ ಅಭ್ಯಾಸದಿಂದಾಗಿ, ಇಂದು ನೀವು ತಿಳಿದೋ ಅಥವಾ ತಿಳಿಯದೆಯೋ ಇನ್ನೊಬ್ಬರ ಮನಸ್ಸು ನೋಯಿಸಬಹುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಿ. ದಿನದ ಎರಡನೇ ಭಾಗ ಉತ್ತಮವಾಗಿರಲಿದೆ.
ಸಾಕಷ್ಟು ನೀರು ಕುಡಿಯಿರಿ, ಆಹಾರಕ್ರಮದ ಕಡೆ ಗಮನ ಹರಿಸಿ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 22
ಅದೃಷ್ಟದ ಸಮಯ: ಸಂಜೆ 5 ರಿಂದ 9:15 ರವರೆಗೆ

English summary

Dina Bhavishya -May 4 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 4 May 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
X
Desktop Bottom Promotion