Horoscope Today 31 March 2023: ಶುಕ್ರವಾರ: ಮೇಷ ರಾಶಿಯವರಿಗೆ ಅದೃಷ್ಟದ ದಿನ, ಉಳಿದವರ ರಾಶಿಫಲ ಹೇಗಿದೆ?

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್‌ 31ರ ರಾಶಿಫಲ ನೋಡೋಣ:

ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಚೈತ್ರ
ಪಕ್ಷ: ಶುಕ್ಲಪಕ್ಷ
ತಿಥಿ: ನವಮಿ
ನಕ್ಷತ್ರ: ಪುನರ್ವಸು
ರಾಹುಕಾಲ: ಮಧ್ಯಾಹ್ನ 01:56ರಿಂದ 03:28ರವರೆಗೆ

Dina Bhavishya -March 31 2023 Today Rashi Bhavishya, Daily Horoscope in Kannada

ಮೇಷ ರಾಶಿ

ಇಂದು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಶಿಕ್ಷಣದಲ್ಲಿ ಯಾವುದೇ ಪ್ರಮುಖ ಅಡಚಣೆಗಳು ನಿವಾರಣೆಯಾಗುತ್ತವೆ. ಇಂದು ನೀವು ಕಚೇರಿಯಲ್ಲಿ ಬಾಸ್ ಜೊತೆ ಪ್ರಮುಖ ಚರ್ಚೆ ನಡೆಸಬಹುದು. ನಿಮ್ಮ ಆತ್ಮವಿಶ್ವಾಸ ಇಂದು ಅವರನ್ನು ತುಂಬಾ ಪ್ರಭಾವಿಸುತ್ತದೆ. ವ್ಯಾಪಾರಸ್ಥರು ಇಂದು ಯಾವುದೇ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಸಲಹೆ ನೀಡಲಾಗಿದೆ. ಹೂಡಿಕೆ ಮಾಡಲು ಬಯಸಿದರೆ ಈ ಸಮಯ ಸೂಕ್ತವಲ್ಲ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕೆಲಸದ ಜೊತೆಗೆ ವಿಶ್ರಾಂತಿ ತೆಗೆದುಕೊಳ್ಳಿ.

ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ

ವೃಷಭ ರಾಶಿ

ವೃಷಭ ರಾಶಿಯವರೇ ಮನೆಯ ಹಿರಿಯರೊಂದಿಗೆ ಸೌಜನ್ಯದಿಂದ ವರ್ತಿಸಿ. ಈ ಸಮಯದಲ್ಲಿ ನಿಮ್ಮ ನಡವಳಿಕೆಯಿಂದ ಇತರರ ಮನಸ್ಸನ್ನು ನೋಯಿಸಬೇಡಿ. ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮವಾಗಿದೆ. ಇಂದು ನೀವು ಯಾವುದೇ ಪ್ರಮುಖ ಮತ್ತು ಕಷ್ಟಕರವಾದ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇತರರನ್ನು ಮೆಚ್ಚಿಸಲು ನಿಮ್ಮ ಬಜೆಟ್‌ಗಿಂತ ಹೆಚ್ಚು ಖರ್ಚು ಮಾಡಬೇಡಿ. ನಿಮ್ಮ ಆರೋಗ್ಯದ ಬಗ್ಗೆ ನೀವು ಸ್ವಲ್ಪ ನಿರ್ಲಕ್ಷ್ಯ ವಹಿಸಿದರೆ, ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು.

ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಸಂಜೆ 6 ರಿಂದ ರಾತ್ರಿ 9 ರವರೆಗೆ

ಮಿಥುನ ರಾಶಿ

ವ್ಯಾಪಾರಸ್ಥರು ಚರ್ಚೆಯಿಂದ ದೂರವಿರಲು ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು. ಮತ್ತೊಂದೆಡೆ, ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಸರಿಯಾಗಿ ವರ್ತಿಸಲು ಸಲಹೆ ನೀಡಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ನೀವು ಮಹಿಳಾ ಸಹೋದ್ಯೋಗಿಗಳೊಂದಿಗೆ ಚೆನ್ನಾಗಿ ವರ್ತಿಸಬೇಕು, ಇಲ್ಲದಿದ್ದರೆ ಇಂದು ಅನಗತ್ಯ ಮಾತುಗಳಿಂದ ಗಲಾಟೆಯಾಗಬಹುದು. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ನಿಮ್ಮ ಬಜೆಟ್ ಅಸಮತೋಲಿತವಾಗಿರಬಹುದು. ಆರೋಗ್ಯದ ವಿಷಯದಲ್ಲಿ, ದಿನವು ಮಿಶ್ರವಾಗಿರುತ್ತದೆ.

ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 23
ಅದೃಷ್ಟದ ಸಮಯ: ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ

ಕರ್ಕ ರಾಶಿ

ಕಛೇರಿಯಲ್ಲಿ ನಿಮಗೆ ಒಂದು ಪ್ರಮುಖ ಕೆಲಸವನ್ನು ನೀಡಿದ್ದರೆ, ನಿಮ್ಮ ಕೆಲಸವನ್ನು ತಪ್ಪುಗಳಾಗದಂತೆ ಎಚ್ಚರವಹಿಸಿ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಇಂದು ಬಯಸಿದ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಪರಿಸ್ಥಿತಿಗಳು ಸ್ವಲ್ಪ ಒತ್ತಡದಿಂದ ಕೂಡಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ತುಂಬಾ ಸಮತೋಲಿತವಾಗಿ ವರ್ತಿಸುವಂತೆ ಸಲಹೆ ನೀಡಲಾಗಿದೆ. ಇಂದು ಭಾರವಾದ ವಸ್ತುಗಳನ್ನು ಎತ್ತುವುದನ್ನು ತಪ್ಪಿಸಿ.

ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಬೆಳಿಗ್ಗೆ 4:15 ರಿಂದ ಮಧ್ಯಾಹ್ನ 2:30 ರವರೆಗೆ

ಸಿಂಹ ರಾಶಿ

ನಿಮ್ಮ ಪೂರ್ವಿಕರ ಆಸ್ತಿಯನ್ನು ಮಾರಾಟ ಮಾಡಲು ನೀವು ಬಹಳ ಸಮಯದಿಂದ ಯೋಚಿಸುತ್ತಿದ್ದರೆ, ಇಂದು ನಿಮಗೆ ಉತ್ತಮ ಅವಕಾಶವನ್ನು ಪಡೆಯಬಹುದು. ಆರ್ಥಿಕ ರಂಗದಲ್ಲಿ ಇಂದು ನಿಮಗೆ ಅದೃಷ್ಟವಾಗಲಿದೆ. ನಿಮ್ಮ ಸರಿಯಾದ ನಿರ್ಧಾರಗಳಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸದ ಬಗ್ಗೆ ಹೇಳುವುದಾದರೆ, ಕಚೇರಿಯ ವಾತಾವರಣವು ಅಷ್ಟು ಸರಿಯಿರಲ್ಲ, ತಪ್ಪುಗಳಾಗದಂತೆ ಎಚ್ಚರವಹಿಸಿ. ಆಹಾರಕ್ರಮದ ಕಡೆ ಗಮನಹರಿಸಿ.

ಅದೃಷ್ಟದ ಬಣ್ಣ: ಗಾಢ ಕೆಂಪು
ಅದೃಷ್ಟದ ಸಂಖ್ಯೆ: 30
ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ

ಕನ್ಯಾ ರಾಶಿ

ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಇಂದು ಬಹಳ ಮುಖ್ಯವಾದ ದಿನವಾಗಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಲಾಭ ಗಳಿಸಲು ಇಂದು ಕಷ್ಟಪಡಬೇಕಾಗಬಹುದು. ನೀವು ಧನಾತ್ಮಕವಾಗಿ ಉಳಿಯಬೇಕು. ಇಂದು ಕುಟುಂಬದಲ್ಲಿ ಸಮಸ್ಯೆಗಳು ಉಂಟಾಗಬಹುದು. ಆರೋಗ್ಯದ ಕ್ಷೀಣತೆಯಿಂದಾಗಿ, ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ

ತುಲಾ ರಾಶಿ

ಈ ದಿನ ನೀವು ತುಂಬಾ ಜಾಗರೂಕರಾಗಿರಬೇಕು. ಕಛೇರಿಯಲ್ಲಿ ಕೆಲಸ ಮಾಡುವಲ್ಲಿ ಹೆಚ್ಚು ನಿರ್ಲಕ್ಷ್ಯ ವಹಿಸಬೇಡಿ, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ನೀವು ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸಿ ಉದ್ಯೋಗವನ್ನು ಹುಡುಕುತ್ತಿದ್ದರೆ, ಇಂದು ನೀವು ಉತ್ತಮ ಅವಕಾಶವನ್ನು ಪಡೆಯಬಹುದು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ. ಇಂದು ಆರೋಗ್ಯದ ವಿಷಯದಲ್ಲಿ ಏರಿಳಿತಗಳು ತುಂಬಿರುತ್ತವೆ.

ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ

ವೃಶ್ಚಿಕ ರಾಶಿ

ನೀವು ಉದ್ಯಮಿಯಾಗಿದ್ದರೆ ಮತ್ತು ದೀರ್ಘಕಾಲದವರೆಗೆ ನೀವು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದಿದ್ದರೆ, ತಾಳ್ಮೆಯಿಂದಿರಿ. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಮೇಲಧಿಕಾರಿಗಳ ಬೆಂಬಲ ಸಿಗಲಿದೆ. ಇಂದು ನೀವು ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಡುವ ಲಕ್ಷಣಗಳಿವೆ. ನೀವು ಇತ್ತೀಚೆಗೆ ಯಾವುದೇ ಹಣಕಾಸಿನ ವಹಿವಾಟು ನಡೆಸಿದ್ದರೆ ಆಗ ನಷ್ಟವಾಗಬಹುದು. ಜೀವನ ಸಂಗಾತಿಯ ಪ್ರೀತಿ ಮತ್ತು ಬೆಂಬಲ ಸಿಗಲಿದೆ. ಆರೋಗ್ಯ ಸಂಬಂಧಿತ ಚಿಂತೆ ಹೆಚ್ಚಬಹುದು.

ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 22
ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 8:55 ರವರೆಗೆ

ಧನು ರಾಶಿ

ನಿಮ್ಮ ಸಮಯವನ್ನು ನೀವು ಸದುಪಯೋಗಪಡಿಸಿಕೊಳ್ಳಬೇಕು. ಅನಾವಶ್ಯಕವಾಗಿ ಅಲ್ಲಿ ಇಲ್ಲಿ ಕುಳಿತು ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಉದ್ಯೋಗಿಗಳು ಕೋಪವನ್ನು ನಿಯಂತ್ರಿಸಿ. ಉದ್ಯಮಿಗಳ ಆರ್ಥಿಕ ಸ್ಥಿತಿ ಸುಧಾರಿಸುವ ಬಲವಾದ ಸಾಧ್ಯತೆಯಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ದೈನಂದಿನ ದಿನಚರಿಯಲ್ಲಿ ನೀವು ವ್ಯಾಯಾಮವನ್ನು ಸೇರಿಸಿಕೊಳ್ಳಬೇಕು.

ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 26
ಅದೃಷ್ಟದ ಸಮಯ: ಬೆಳಗ್ಗೆ 8:55 ರಿಂದ ಮಧ್ಯಾಹ್ನ 12

ಮಕರ ರಾಶಿ

ಕೆಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿದ್ದರೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಆದರೆ, ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತಪ್ಪಿಸಿ. ಇಂದು ನಿಮ್ಮ ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡಬೇಡಿ. ವ್ಯಾಪಾರಸ್ಥರಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ವೈಯಕ್ತಿಕ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ.

ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಸಂಜೆ 5:10 ರಿಂದ ರಾತ್ರಿ 8:50 ರವರೆಗೆ

ಕುಂಭ ರಾಶಿ

ಹಣದ ವಿಷಯದಲ್ಲಿ ಅಂದು ಮಿಶ್ರಫಲ. ನಿಮ್ಮ ಹಣಕಾಸಿನ ಪ್ರಯತ್ನಗಳ ವೈಫಲ್ಯದಿಂದಾಗಿ ಇಂದು ನೀವು ತುಂಬಾ ನಿರಾಶೆಗೊಳ್ಳುವಿರಿ. ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ, ಇಂದು ನೀವು ಅದಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಉದ್ಯೋಗಸ್ಥರಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ಇಂದು ಕೆಲಸದ ಹೊರೆ ಕಡಿಮೆಯಾಗುವ ನಿರೀಕ್ಷೆಯಿದೆ. ಉದ್ಯಮಿಗಳ ಮೇಲೆ ದೂರ ಪ್ರಯಾಣ ಮಾಡುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಆರೋಗ್ಯದ ಕಡೆ ಗಮನಹರಿಸಿ.

ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಸಂಜೆ 4:15 ರಿಂದ ರಾತ್ರಿ 8 ರವರೆಗೆ

ಮೀನ ರಾಶಿ

ಇಂದು ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ವಿಶೇಷ ಕಾಳಜಿ ವಹಿಸಲು ಸಲಹೆ ನೀಡಲಾಗಿದೆ. ಯಾರೊಂದಿಗಾದರೂ ಮಾತನಾಡುವಾಗ ತಪ್ಪು ಪದಗಳನ್ನು ಬಳಸಬೇಡಿ, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಉದ್ಯೋಗಿಗಳ ಆದಾಯ ಹೆಚ್ಚಾಗುತ್ತದೆ. ಇದೇ ವೇಳೆ ಉದ್ಯಮಿಗಳ ಆರ್ಥಿಕ ಸಮಸ್ಯೆಯೂ ಬಗೆಹರಿಯಲಿದೆ. ಇಂದು, ನಿಮ್ಮ ಯಾವುದೇ ಪ್ರಮುಖ ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸುವುದರಿಮದ ನಿಮಗೆ ಆರ್ಥಿಕ ಲಾಭ ಸಿಗಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ತಂಗಳು ಹಾಗೂ ತಣ್ಣನೆಯ ಆಹಾರ ಸೇವಿಸಬೇಡಿ.

ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 18
ಅದೃಷ್ಟದ ಸಮಯ: 9:20 ರಿಂದ 11 ರವರೆಗೆ

English summary

Dina Bhavishya -March 31 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 30 March 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
X
Desktop Bottom Promotion