Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Horoscope Today 5 April 2023: ಬುಧವಾರ: ದ್ವಾದಶ ರಾಶಿಗಳಲ್ಲಿ ಯಾವ ರಾಶಿಯವರಿಗೆ ಶುಭ ದಿನ?
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 5ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಚೈತ್ರ
ಪಕ್ಷ: ಶುಕ್ಲಪಕ್ಷ
ತಿಥಿ: 09:19ರ ನಂತರ ಪೂರ್ಣಿಮೆ
ನಕ್ಷತ್ರ: 11:23ರವರೆಗೆ ಉತ್ತರಫಲ್ಗುಣಿ ನಂತರ ಹಸ್ತ
ರಾಹುಕಾಲ: ಮಧ್ಯಾಹ್ನ12:22ರಿಂದ 01:55ರವರೆಗೆ

ಮೇಷ ರಾಶಿ
ಕೆಲಸದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ. ಉದ್ಯಮಿಗಳು ಇಂದು ತಾವು ತೆಗೆದುಕೊಳ್ಳುವ ನಿರ್ದಾರದಿಂದ ಉತ್ತಮ ಫಲಿತಾಂಶ ಪಡೆಯಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಡುವ ಲಕ್ಷಣಗಳಿವೆ. ಈ ದಿನ ಹೃದಯ ಸಂಬಂಧಿ ಸಮಸ್ಯೆಯಿದ್ದರೆ ಆರೋಗ್ಯದ ಕಡೆಗೆ ಗಮನ ಹರಿಸಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ:1
ಅದೃಷ್ಟದ ಸಮಯ: ಸಂಜೆ 5:20 ರಿಂದ ರಾತ್ರಿ 8:45 ರವರೆಗೆ
ವೃಷಭ ರಾಶಿ
ವ್ಯಾಪಾರಸ್ಥರಿಗೆ ಇಂದು ಸವಾಲಿನ ದಿನ. ನಿಮ್ಮ ಯಾವು ಕೆಲಸಗಳು ಬಾಕಿ ಉಳಿದಿದ್ದರೆ, ಅದರಿಂದ ನೀವು ದೊಡ್ಡ ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಕಚೇರಿಯಲ್ಲಿ ಅಧಿಕ ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ. ಹಣದ ವಿಷಯದಲ್ಲಿ ಈ ದಿನ ಮಿಶ್ರಫಲ. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಸಂಜೆ 5:20 ರಿಂದ ರಾತ್ರಿ 9 ರವರೆಗೆ
ಮಿಥುನ ರಾಶಿ
ಇಂದು ಕೆಲಸದ ವಿಷಯದಲ್ಲಿ ಈ ದಿನ ಅನುಕೂಲಕರವಾಗಿದೆ. ನಿಮ್ಮ ಕೆಲಸ ಕಾರ್ಯಗಳಿಗೆ ಉನ್ನತ ಅಧಿಕಾರಿಗಳ ಸಲಹೆ ಪಡೆಯುವಿರಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಇಂದು ನೀವು ಮಕ್ಕಳೊಂದಿಗೆ ಬಹಳ ಮೋಜಿನ ಸಮಯವನ್ನು ಕಳೆಯುತ್ತೀರಿ. ನೀವು ಔಟಿಂಗ್, ಪಿಕ್ನಿಕ್ ಇತ್ಯಾದಿಗಳಿಗೆ ಹೋಗಬಹುದು, ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
ಅದೃಷ್ಟದ ಬಣ್ಣ: ಕಡು ಹಸಿರು
ಅದೃಷ್ಟದ ಸಂಖ್ಯೆ: 26
ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ ಮಧ್ಯಾಹ್ನ 12:20 ರವರೆಗೆ
ಕರ್ಕ ರಾಶಿ
ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಚೆನ್ನಾಗಿರಲಿದೆ. ಹಣದ ಬಗ್ಗೆ ಹೇಳುವುದಾದರೆ ಅತಿಯಾದ ಖರ್ಚು ಒಳ್ಳೆಯದಲ್ಲ, ನೀವು ಸಾಲವನ್ನು ತೆಗೆದುಕೊಂಡಿದ್ದರೆ, ಅದನ್ನು ಸಾಧ್ಯವಾದಷ್ಟು ಬೇಗ ಮರುಪಾವತಿಸಲು ಪ್ರಯತ್ನಿಸಿ. ಕಚೇರಿಯ ವಾತಾವರಣವು ಸಕಾರಾತ್ಮಕವಾಗಿರುತ್ತದೆ. ನೀವು ಉದ್ಯಮಿಯಾಗಿದ್ದರೆ ಮತ್ತು ಇಂದು ಯಾವುದೇ ಹಣಕಾಸಿನ ವ್ಯವಹಾರವನ್ನು ಮಾಡಲು ಹೊರಟಿದ್ದರೆ, ಕೆಲವು ಕಾರಣಗಳಿಂದಾಗಿ ನಿಮ್ಮ ಕೆಲಸವು ಇಂದು ಅಪೂರ್ಣವಾಗಿ ಉಳಿಯುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿರ್ಲಕ್ಷ್ಯ ಬೇಡ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 30
ಅದೃಷ್ಟದ ಸಮಯ: ಮಧ್ಯಾಹ್ನ 1:45 ರಿಂದ ರಾತ್ರಿ 8:15 ರವರೆಗೆ
ಸಿಂಹ ರಾಶಿ
ಈ ದಿನನೀವು ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ ಉತ್ತಮವಾಗಿರುತ್ತದೆ. ಕಚೇರಿಯಲ್ಲಿ ಮೇಲಾಧಿಕಾರಿಗಳ ಮಾತು ನಿರ್ಲಕ್ಷ್ಯ ಮಾಡಬೇಡಿ. ಉದ್ಯಮಿಗಳ ಆರ್ಥಿಕ ಸಮಸ್ಯೆ ಬಗೆಹರಿಯಲಿದೆ. ಕುಟುಂಬದ ವಿಚಾರಕ್ಕೆ ಬಂದಾಗ ಅಹಂಕಾರ ದೂರವಿಡಿ. ಆರೋಗ್ಯದ ದೃಷ್ಟಿಯಿಂದ ದಿನವು ಸರಾಸರಿಯಾಗಿರುತ್ತದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 33
ಅದೃಷ್ಟದ ಸಮಯ: ಬೆಳಿಗ್ಗೆ 11:15 ರಿಂದ ರಾತ್ರಿ 8:45 ರವರೆಗೆ
ಕನ್ಯಾ ರಾಶಿ
ಉದ್ಯಮಿಗಳು ಇಂದು ಹೊಸ ಅವಕಾಶವನ್ನು ಪಡೆಯಬಹುದು ಅಲ್ಲದೆ ಈ ದಿನ ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗಿಗಳಿಗೆ ಈ ದಿನವು ಸಾಮಾನ್ಯವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ. ನಿಮ್ಮ ಪ್ರಯತ್ನವು ಯಶಸ್ವಿಯಾಗುವ ಬಲವಾದ ಸಾಧ್ಯತೆಯಿದೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ವೈವಾಹಿಕ ಬದುಕಿನ ಕಡೆಗೆ ಅಧಿಕ ಗಮನಹರಿಸಿ, ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಬೆಳಗ್ಗೆ 4:20 ರಿಂದ ಮಧ್ಯಾಹ್ನ 12 ರವರೆಗೆ
ತುಲಾ ರಾಶಿ
ಇಂದು ನೀವು ಕುಟುಂಬ ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಮಗುವಿಗೆ ಸಂಬಂಧಿಸಿದ ಯಾವುದೋ ಚಿಂತೆ ನಿಮ್ಮನ್ನು ಕಾಡುತ್ತಿದ್ದರೆ ಅದು ದೂರಾಗಲಿದೆ. ಹಣದ ವಿಷಯದಲ್ಲಿ ಈ ದಿನ ಮಿಶ್ರಫಲ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ, ಆದರೆ ಖರ್ಚು ಕೂಡ ಹೆಚ್ಚಾಗಲಿದೆ. ಕಚೇರಿಯಲ್ಲಿ ನಿಮ್ಮ ಯಾವುದೇ ಕೆಲಸವು ಅಪೂರ್ಣವಾಗಿದ್ದರೆ ನಿಮ್ಮ ಕೆಲಸ ಪೂರ್ಣಗೊಳಿಸಲು ಪ್ರಯತ್ನಿಸಿ. ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಬೆಳಿಗ್ಗೆ 7:45 ರಿಂದ ಮಧ್ಯಾಹ್ನ 12 ರವರೆಗೆ
ವೃಶ್ಚಿಕ ರಾಶಿ
ನೀವು ಇಂದು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ ಇತರರ ಸಲಹೆ ಕೇಳುವ ಬದಲಿಗೆ ಸ್ವ ನಿರ್ಧಾರ ತೆಗೆದುಕೊಳ್ಳಿ, ಇಲ್ಲದಿದ್ದರೆ ನೀವು ತೊಂದರೆಗೆ ಒಳಗಾಗಬಹುದು. ನಿಮ್ಮ ಒಳ್ಳೆಯದು ಮತ್ತು ಕೆಟ್ಟದ್ದನ್ನು ನೀವೇ ನಿರ್ಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ಹಣದ ಕೊರತೆಯಿಂದ ನಿಮ್ಮ ಯಾವುದೇ ಕೆಲಸವು ಅಪೂರ್ಣವಾಗಿದ್ದರೆ ಇಂದು ಪೂರ್ಣವಾಗುವ ಸಾಧ್ಯತೆಯಿದೆ. ಹತ್ತಿರದ ವ್ಯಕ್ತಿಗಳು ಆರ್ಥಿಕ ಸಹಾಯ ನೀಡಬಹುದು. ಕೆಲಸದ ವಿಷಯದಲ್ಲಿ ಇಂದು ನಿಮಗೆ ಏರಿಳಿತಗಳಿಂದ ತುಂಬಿರುತ್ತದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಬೆಳಿಗ್ಗೆ 7:15 ರಿಂದ ಮಧ್ಯಾಹ್ನ 2:05 ರವರೆಗೆ
ಧನು ರಾಶಿ
ಈ ದಿನ ನಿಮಗೆ ಉತ್ತಮವಾಗಿದೆ. ನಿಮ್ಮ ಜೀವನಶೈಲಿಯಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡುತ್ತೀರಿ, ಅದರ ಪರಿಣಾಮವನ್ನು ನೀವು ಶೀಘ್ರದಲ್ಲೇ ನೋಡಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಬರಬೇಕಾಗಿದ್ದ ಹಣ ಕೈ ಸೇರಲಿದೆ. ವ್ಯಾಪಾರಸ್ಥರಿಗೆ ಈ ದಿನ ಲಾಭ ದೊರೆಯಲಿದೆ. ಮನೆಯ ವಾತಾವರಣ ಶಾಂತವಾಗಿರುತ್ತದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ
ಮಕರ ರಾಶಿ
ಕಚೇರಿಯಲ್ಲಿ ಸಹೋದ್ಯೋಗಿಗಳನ್ನು ಕುರುಡಾಗಿ ನಂಬಲು ಹೋಗಬೇಡಿ ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ವ್ಯಾಪಾರಸ್ಥರಿಗೆ ಇಂದು ದೀರ್ಘ ಪ್ರಯಾಣವನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ನಿಮ್ಮ ಬಹಳಷ್ಟು ಹಣವನ್ನು ಅನಗತ್ಯವಾಗಿ ಖರ್ಚು ಮಾಡಲು ಹೋಗಬೇಡಿ. ಕೆಲಸದ ಒತ್ತಡ ಹೆಚ್ಚಾಗಿರಲಿದೆ. ಇಂದು ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಬೆಳಿಗ್ಗೆ 7:20 ರಿಂದ ಮಧ್ಯಾಹ್ನ 3 ರವರೆಗೆ
ಕುಂಭ ರಾಶಿ
ಪ್ರೇಮಿಗಳ ನಡುವೆ ಮಾಧುರ್ಯ ಹೆಚ್ಚಾಗಲಿದೆ. ನೀವು ಪ್ರೇಮ ವಿವಾಹವನ್ನು ಹೊಂದಲು ಬಯಸಿದರೆ, ನಿಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ದಿನವು ಸೂಕ್ತವಾಗಿದೆ. ಹಣದ ವಿಷಯದಲ್ಲಿ ಇಂದು ದುಬಾರಿ ದಿನವಾಗಿರುತ್ತದೆ. ಹಠಾತ್ ದೊಡ್ಡ ಖರ್ಚು ಬರುವ ಸಾಧ್ಯತೆ ಇದೆ. ಸರ್ಕಾರಿ ಕೆಲಸ ಮಾಡುವವರಿಗೆ ಇಂದು ಕಷ್ಟದ ದಿನವಾಗಿರುತ್ತದೆ. ನಿಮ್ಮ ಅಜಾಗರೂಕತೆಯಿಂದ ದೊಡ್ಡ ನಷ್ಟಗಳು ಸಂಭವಿಸಬಹುದು. ವ್ಯಾಪಾರಸ್ಥರಿಗೆ ಮಿಶ್ರ ಲಾಭ. ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ದ ಸಂಖ್ಯೆ: 5
ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ ರಾತ್ರಿ 9 ರವರೆಗೆ
ಮೀನ ರಾಶಿ
ಕುಟುಂಬದಲ್ಲಿ ಪರಿಸ್ಥಿತಿ ಸಂತೋಷದಿಂದ ಕೂಡಿರಲಿದೆ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ದೈನಂದಿನ ಖರ್ಚುಗಳು ಸುಲಭವಾಗಿ ಪೂರೈಸಲ್ಪಡುತ್ತವೆ. ಕೆಲಸಕ್ಕೆ ಸಂಬಂಧಿಸಿದ ಯಾವುದೇ ಪ್ರಯತ್ನದಲ್ಲಿ ನೀವು ಯಶಸ್ಸು ಪಡೆಯುವಿರಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಸ್ನಾಯು ಸಂಬಂಧಿತ ಸಮಸ್ಯೆ ಇರಬಹುದು.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 30
ಅದೃಷ್ಟದ ಸಮಯ: ಸಂಜೆ 4:30 ರಿಂದ ರಾತ್ರಿ 8 ರವರೆಗೆ



Click it and Unblock the Notifications
