Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕಟಕ ರಾಶಿಯಲ್ಲಿ ಧನ ಯೋಗ 2023: ಈ 3 ರಾಶಿಯವರಿಗೆ ಕೈ ತುಂಬಾ ದುಡ್ಡು!
ಶುಕ್ರನು ಸಂಪತ್ತು ಹಾಗೂ ಪ್ರೇಮದ ಅಧಿಪತಿ. ಶುಕ್ರನು ಈಗಾಗಲೇ ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದ ಧನ ಯೋಗವು ರೂಪುಗೊಳ್ಳಲಿದ್ಯಂತೆ. ಇದರ ಪ್ರಯೋಜನ ಕೆಲ ರಾಶಿಗಳ ಮೇಲಾಗಲಿದೆ. ಶುಕ್ರನು ಕರ್ಕಾಟಕ ರಾಶಿ ಪ್ರವೇಶ ಮಾಡಿದ್ರಿಂದ "ಧನಯೋಗ" ಉಂಟಾಗಲಿದೆ. ಶುಕ್ರನು ಜುಲೈ 7ರವರೆಗೂ ಕರ್ಕಾಟಕ ರಾಶಿಯಲ್ಲೇ ಇರಲಿದ್ದು, ಇದರಿಂದಾಗಿ ಈ ಮೂರು ರಾಶಿಯವರಿಗೆ ಧನರಾಜ ಯೋಗವು ಒಲಿದು ಬರಲಿದೆ. ಹಾಗಾದ್ರೆ ಆ ಮೂರು ರಾಶಿಗಳು ಯಾವುದು ಅನ್ನೋದನ್ನು ತಿಳಿಯೋಣ.
ಮಿಥುನ ರಾಶಿ
ಶುಕ್ರನು ಕರ್ಕಾಟಕ ರಾಶಿಯನ್ನು ಪ್ರವೇಶ ಮಾಡಿರೋದ್ರಿಂದ ಮಿಥುನ ರಾಶಿಯವರಿಗೆ ಅದೃಷ್ಟ ಒಲಿದು ಬಂದಿದೆ. ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಹಣದ ಹೊಳೆಯೇ ಹರಿದು ಬರಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ತುಂಬಾನೇ ಉತ್ತಮವಾಗಿರುತ್ತದೆ. ಅನಿರೀಕ್ಷಿತ ಸ್ಥಳಗಳಿಂದ ಸಾಕಷ್ಟು ಹಣ ಬರಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ನಿಮ್ಮ ಜೀವನದಲ್ಲಿ ಸಂತೋಷವೇ ತುಂಬಿರುತ್ತದೆ. ಇನ್ನೂ ಅವಿವಾಹಿತರಿಗೆ ವಿವಾಹ ಭಾಗ್ಯವಿದೆ.

ಕರ್ಕಾಟಕ ರಾಶಿ
ಶುಕ್ರನು ಕರ್ಕಾಟಕ ರಾಶಿಯನ್ನು ಪ್ರವೇಶ ಮಾಡಿರೋದ್ರಿಂದ ಕರ್ಕಾಟಕ ರಾಶಿಯವರಿಗೆ ಧನರಾಜಯೋಗ ಸೃಷ್ಟಿಯಾಗುತ್ತದೆ. ಈ ಧನಯೋಗವು ಕರ್ಕಾಟಕ ರಾಶಿಯವರಿಗೆ ಬಹಳಷ್ಟು ಸಂಪತ್ತನ್ನು ಹೊತ್ತು ತರಲಿದೆ. ಐಷಾರಾಮಿ ಜೀವನ ನಿಮ್ಮದಾಗುತ್ತದೆ. ಈ ಸಮಯದಲ್ಲಿ ನೀವು ಹಣ ಸಂಪಾದಿಸಲು ಹೊಸ ಮಾರ್ಗಗಳನ್ನು ಕಂಡುಕೊಂಡರೆ ಜೀವನದಲ್ಲಿ ಯಶಸ್ವಿಯಾಗುತ್ತೀರಿ. ಇನ್ನೂ ಎಲ್ಲಾ ವಿಚಾರಗಳಲ್ಲೂ ಪ್ರಗತಿ ಕಾಣುತ್ತೀರಿ. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಕನ್ಯಾ ರಾಶಿ
ಶುಕ್ರನು ಕರ್ಕಾಟಕ ರಾಶಿಯನ್ನು ಪ್ರವೇಶ ಮಾಡಿರೋದ್ರಿಂದ ಕನ್ಯಾ ರಾಶಿಯವರಿಗೆ ಹೆಚ್ಚಿನ ಆರ್ಥಿಕ ಲಾಭವನ್ನು ಹೊತ್ತು ತರಲಿದೆ. ಈ ರಾಜಯೋಗವು ಕನ್ಯಾ ರಾಶಿಯವರಿಗೆ ಹಣಕಾಸಿನ ಒತ್ತಡ ಮತ್ತು ಹಳೆಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಕೆಲಸದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಸ್ಥಾನಮಾನ ಮತ್ತು ಗೌರವ ಹೆಚ್ಚಾಗುತ್ತದೆ. ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಖುಷಿ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಇನ್ನಷ್ಟು ಉತ್ತಮವಾಗುತ್ತದೆ.



Click it and Unblock the Notifications
