Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬುಧವಾರದ ದಿನ ಗಣೇಶನ ಈ ಮಂತ್ರಗಳನ್ನು ಪಠಿಸಿದ್ರೆ ಸಕಲ ಸಂಕಷ್ಟಗಳು ದೂರ!
ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ. ನಾವು ಯಾವುದೇ ಶುಭ ಕಾರ್ಯಗಳನ್ನು ಮಾಡಬೇಕಾದರೂ ಕೂಡ ಮೊದಲ ಪೂಜೆಯನ್ನು ವಿನಾಯಕನಿಗೆ ಅರ್ಪಣೆ ಮಾಡಲಾಗುತ್ತದೆ. ಗಣೇಶನಿಗೆ ಪೂಜೆಯನ್ನು ಅರ್ಪಿಸಿ ಮುನ್ನಡೆದರೆ ಎಲ್ಲವೂ ಶುಭವಾಗುತ್ತೆ ಅನ್ನೋ ನಂಬಿಕೆ ಇದೆ. ಅದ್ರಲ್ಲೂ ಬುಧವಾರದ ದಿನವನ್ನು ಗಣೇಶನಿಗೆ ಅರ್ಪಿಸಿರೋದ್ರಿಂದ ಈ ದಿನ ಗಣೇಶನನ್ನು ಭಕ್ತಿಯಿಂದ ಪೂಜೆ ಮಾಡೋದ್ರಿಂದ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತಂತೆ.
ಇದಿಷ್ಟೇ ಅಲ್ಲ, ನಾವು ಅಪೇಕ್ಷಿತ ಫಲವನ್ನು ಪಡೆಯಬೇಕಾದರೆ ಬುಧವಾರದ ದಿನ ಗಣೇಶನಿಗೆ ವಿಶೇಷ ಪೂಜೆಯನ್ನು ಸಲ್ಲಿಸಬೇಕಂತೆ. ಇದರ ಜೊತೆಗೆ ಬುಧವಾರದ ದಿನ ಈ ಮಂತ್ರಗಳನ್ನು ಪಠಿಸಿದ್ರೆ ಗಣೇಶನ ಆಶೀರ್ವಾದ ಸದಾ ನಮ್ಮ ಮೇಲೆ ಇರುತ್ತಂತೆ. ಅಷ್ಟಕ್ಕು ಗಣೇಶನನ್ನು ಒಲಿಸಿಕೊಳ್ಳೋದಕ್ಕೆ ಬುಧವಾರದ ದಿನ ಯಾವ ಮಂತ್ರಗಳನ್ನು ಪಠಿಸಬೇಕು ಅನ್ನೋದನ್ನು ತಿಳಿಯೋಣ.

'ಓಂ ಗಣಗಣಪತೇ ನಮಃ'
ಗಣೇಶನ ಈ ಏಕಾಕ್ಷರ ಮಂತ್ರವು ಗಣೇಶನನ್ನು ಒಲಿಸಿಕೊಳ್ಳಲು ಇರುವ ಅತ್ಯಂತ ಸರಳ ಮತ್ತು ಪರಿಣಾಮಕಾರಿ ಮಂತ್ರಗಳಲ್ಲಿ ಒಂದಾಗಿದೆ. ಬುಧವಾರದಂದು ಈ ಮಂತ್ರವನ್ನು ಪಠಿಸುವುದರಿಂದ ಭಕ್ತರ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಬುಧವಾರದಂದು ಕನಿಷ್ಠ 108 ಬಾರಿ ಈ ಮಂತ್ರವನ್ನು ಪಠಿಸಿ. ಇದರಿಂದ ನಿಮ್ಮ ದಾರಿಯಲ್ಲಿ ಬರುವ ಅಡೆತಡೆಗಳೆಲ್ಲಾ ನಿವಾರಣೆಯಾಗಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.
"ಓಂ ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ".
ನಿರ್ವಿಘ್ನಂ ಕುರು ಮೇ ದೇವ್, ಸರ್ವ ಕಾರ್ಯೇಷು ಸರ್ವದಾ.
ಗಣೇಶನ ಎಲ್ಲಾ ಪೂಜೆಗಳಲ್ಲಿ ಈ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಪಠಿಸುವುದರಿಂದ ವಿನಾಯಕನು ಸಂತುಷ್ಟನಾಗುತ್ತಾನೆ. ಮತ್ತು ಭಕ್ತರಿಗೆ ಮನಸ್ಸ್ ಪೂರ್ತಿಯಾಗಿ ಆಶೀರ್ವದಿಸುತ್ತಾನೆ ಎಂದು ನಂಬಲಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ಹಣ ಗಳಿಸುವ ದಾರಿ ತೆರೆಯುತ್ತಂತೆ. ನೀವು ಅಂದುಕೊಂಡ ಕೆಲಸವನ್ನು ಪೂರ್ತಿ ಮಾಡೋದಕ್ಕೆ ಸಾಧ್ಯವಾಗುತ್ತಂತೆ. ಯಾವುದೇ ಅಡೆತಡೆಗಳು ಎದುರಾಗೋದಿಲ್ವಂತೆ.
'ಓಂ ಏಕದಂತಾಯ ವಿಹೇ ವಕ್ರತುಂಡಯ ಧೀಮಹಿ ತನ್ನೋ ದಾಂತಿ: ಪ್ರಚೋದಯಾತ್.'
ಇದನ್ನು ಶ್ರೀ ಗಣೇಶನ ಗಾಯತ್ರಿ ಮಂತ್ರ ಎಂದು ಕರೆಯಲಾಗುತ್ತದೆ. ಇದನ್ನು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಬುಧವಾರದ ದಿನ ವಿನಾಯಕನನ್ನು ಆರಾಧನೆ ಮಾಡುವಾಗ ಈ ಮಂತ್ರವನ್ನು 108 ಬಾರಿ ಜಪಿಸುವುದರಿಂದ ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತಂತೆ. ಈ ಮಂತ್ರವನ್ನು ಪಠಿಸುವುದರಿಂದ ಎಲ್ಲಾ ಕಾರ್ಯಗಳು ನಿರ್ವಿಘ್ನದಿಂದ ನೆರವೇರುತ್ತಂತೆ. ಮತ್ತು ಗಣೇಶನ ವಿಶೇಷ ಕೃಪೆಯೂ ನಿಮ್ಮ ಮೇಲೆ ಇರುತ್ತಂತೆ.
'ಓಂ ಐಂ ಹ್ವೀಂ ಕ್ಲೀಂ ಚಾಮುಂಡಾಯೈ ವಿಚ್ಛೇ'
ಈ ಮಂತ್ರದ ಪಠಣವು ಜಾತಕದಲ್ಲಿ ಬುಧ ಗ್ರಹಕ್ಕೆ ಸಂಬಂಧಿಸಿದ ದೋಷಗಳನ್ನು ತೆಗೆದುಹಾಕಲು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ನಿಮ್ಮ ಜಾತಕದಲ್ಲಿ ಏನಾದರೂ ಬುಧಗ್ರಹದ ಧೋಷವಿದ್ದರೆ ನಿತ್ಯ ಈ ಮಂತ್ರವನ್ನು ಪಠಿಸೋದನ್ನು ಮರೀಬೇಡಿ.
'ಓಂ ನಮೋ ಗಣಪತಯೇ ಕುಬೇರ ಯೇಕಾದ್ರಿಕೋ ಫಟ್ ಸ್ವಾಹಾ.'
ಪ್ರತಿದಿನ ಅಥವಾ ಬುಧವಾರದ ದಿನದ ಪೂಜೆಯಲ್ಲಿ ಗಣೇಶ ಕುಬೇರ ಮಂತ್ರವನ್ನು ಒಂದು ಜಪಮಾಲೆ ಹಿಡಿದು 108 ಬಾರಿ ಪಠಿಸಿ. ಇದು ಹಣಕಾಸಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಮತ್ತು ಸಾಲದಿಂದ ಮುಕ್ತಿಯನ್ನು ನೀಡುತ್ತದೆ. ಬುಧ ಗ್ರಹವನ್ನು ಮೆಚ್ಚಿಸಲು ಬುಧವಾರದ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು 'ಓಂ ಬಂ ಬುಧಾಯ ನಮಃ' ಮತ್ತು 'ಓಂ ಐಂ ಶ್ರೀ ಶ್ರೀ ಬುಧಾಯ ನಮಃ!' ಜಪ ಮಾಡುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತಂತೆ.
ಬುಧವಾರದ ದಿನ ವಿನಾಯಕನ ಕುರಿತಂತೆ ಶುಭ ದಿನ ಆಗಿರೋದ್ರಿಂದ ಈ ದಿನ ಈ ವಿಶೇಷ ಮಂತ್ರಗಳನ್ನು ಪಠಿಸೋದ್ರ ಮೂಲಕ ಗಣೇಶನ ಕೃಪೆಗೆ ಪಾತ್ರರಾಗಿ.



Click it and Unblock the Notifications


