Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಚಾಣಕ್ಯನ ಪ್ರಕಾರ ಇಂತವರ ಬಳಿ ನೀವು ಸಹಾಯ ಕೇಳಿದರೆ ಉತ್ತಮ
ನಮ್ಮ ಜೀವನದಲ್ಲಿ ಸಹಾಯ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಅನೇಕ ಕೆಲಸಗಳನ್ನು ನಮ್ಮಿಂದ ಒಬ್ಬರಿಂದ ಮಾಡೋದಿಕ್ಕೆ ಆಗೋದಿಲ್ಲ. ಸಂಬಂಧಿಕರೋ, ಸ್ನೇಹಿತರೋ ಅಲ್ಲ ಬೇರೆ ಯಾರದ್ದೋ ಸಹಾಯ ಪಡೆಯಲೇ ಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಜಾಣ ಹೆಜ್ಜೆ ಇಡಬೇಕಾಗುತ್ತದೆ.

ಕೆಲವೊಂದು ಬಾರಿ ಒಬ್ಬರ ಸಹಾಯ ನಮಗೆ ಅಗತ್ಯವಾಗಿ ಬೇಕಾಗಿರುತ್ತದೆ. ಆದರೆ ಅಂತಹ ಸಮಯದಲ್ಲಿ ನಮಗೆ ಸಹಾಯ ಮಾಡಲು ಯಾರೂ ಮುಂದೆ ಬರುವುದಿಲ್ಲ. ಹಾಗಾದ್ರೆ ನಾವು ಒಬ್ಬರ ಬಳಿ ಯಾವ ರೀತಿ ಸಹಾಯವನ್ನು ಕೇಳಬಹುದು? ಯಾರ ಬಳಿ ಸಹಾಯ ಕೇಳಿದರೆ ಖಂಡಿತ ಅವರು ನಮಗೆ ಸಹಾಯ ಹಸ್ತ ಚಾಚುತ್ತಾರೆ. ಚಾಣಕ್ಯನ ಪ್ರಕಾರ ನಾವು ಸಹಾಯ ಪಡೆಯುವ ವ್ಯಕ್ತಿಗಳು ಹೇಗಿರಬೇಕು ಅನ್ನೋದನ್ನ ಒಂದೊಂದಾಗಿ ಹೇಳ್ತೀವಿ.
1. ಮೂರ್ಖನ ಬಳಿ ಸಹಾಯ ಪಡೆಯಬಹುದು
ಚಾಣಕ್ಯನ ಪ್ರಕಾರ ಮೂರ್ಖ ವ್ಯಕ್ತಿಯಿಂದ ಸಹಾಯ ಪಡೆಯುವುದು ತುಂಬಾನೇ ಸುಲಭ. ಮೊದಲಿಗೆ ನೀವು ಅಂತವರ ಜೊತೆ ಇದ್ದಾಗ ಮೂರ್ಖರಂತೆ ವರ್ತಿಸಬೇಕು. ಈ ರೀತಿ ಮಾಡಿದರೆ ಮಾತ್ರ ನಿಮಗೆ ಬೇಕಾದ ಸಹಾಯವನ್ನು ಮೂರ್ಖ ವ್ಯಕ್ತಿಯಿಂದ ಪಡೆದುಕೊಳ್ಳಬಹುದು. ಒಂದು ವಿಚಾರ ನೆನಪಿನಲ್ಲಿರಲಿ ಅಂತವರ ಬಳಿ ವಾದ ಅಥವಾ ಜಗಳ ಮಾಡೋದನ್ನ ಖಂಡಿತ ಮಾಡಲೇಬೇಡಿ. ಯಾಕೆಂದರೆ ಮೂರ್ಖ ವ್ಯಕ್ತಿಗಳು ಅವರ ಮನಸ್ಸು ಏನು ಹೇಳುತ್ತದೋ ಅದನ್ನು ಬಿಟ್ಟು ಬೇರೆ ಏನನ್ನೂ ಮಾಡುವುದಿಲ್ಲ. ಅಂತವರಿಗೆ ತೋರ್ಪಡಿಕೆಯ ಪ್ರೀತಿ ಅಥವಾ ನಕಲಿ ಪ್ರೀತಿಯೇ ಇಷ್ಟವಾಗುತ್ತದೆ. ಆಗ ನೀವು ಅವರ ದಾರಿಯಲ್ಲಿ ಸಾಗಿ ಸುಳ್ಳು ಹೇಳುವುರ ಮುಖಾಂತರ ನಾಜೂಕಾಗಿ ನಿಮ್ಮ ಕೆಲಸ ಮಾಡಿಸಿಕೊಳ್ಳಬಹುದು.
2. ನನ್ನ ಮಾತೆ ಸರಿ ಎಂದು ವಾದಿಸುವ ವ್ಯಕ್ತಿ
ಚಾಣಕ್ಯನ ಪ್ರಕಾರ ಕೆಲವೊಂದು ವ್ಯಕ್ತಿಗಳು ವಿಚಿತ್ರವಾದ ಗುಣವನ್ನು ಹೊಂದಿರುತ್ತಾರೆ. ಅವರ ಪ್ರಕಾರ ತಾನು ಏನನ್ನು ಹೇಳುತ್ತೇನೋ ಮತ್ತು ಏನನ್ನು ಮಾಡುತ್ತೇನೋ ಅದೇ ಸರಿ. ಬೇರೆ ಯಾವ ವ್ಯಕ್ತಿ ನನ್ನ ಸರಿಸಮಾನವಲ್ಲ ಎಂದು ಯೋಚಿಸುತ್ತಾರೆ. ನಿಮಗೇನಾದರೂ ಅಂತಹ ವ್ಯಕ್ತಿಗಳಿಂದ ಸಹಾಯವಾಗಬೇಕಾದರೆ ಅವರ ದಾರಿಯಲ್ಲೇ ಸಾಗಬೇಕು. ಆ ವ್ಯಕ್ತಿಗೆ ಸಾಧ್ಯವಾದಷ್ಟು ಗೌರವ ನೀಡಬೇಕು. ಮತ್ತು ನಾವು ಅವನ ಪರವಾಗಿದ್ದೇನೆ ಅನ್ನುವಂತೆ ಬಿಂಬಿಸಬೇಕು. ಯಾರು ನಾನು ಹೇಳಿದ್ದೆ ಸರಿ ಎಂದಿ ವಾದಿಸುತ್ತಾನೋ ಅವನು ತನ್ನ ಗಣತೆ ಬಗ್ಗೆ ತುಂಬಾನೇ ಯೋಚಿಸುತ್ತಾನೆ. ನೀವೆನಾದರೂ ಆತನ ಗಣತೆಗೆ ಅಡ್ಡಿ ಉಂಟು ಮಾಡದೇ ಹೋದರೆ ಆತನಿಂದ ಸುಲಭವಾಗಿ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳಬಹುದು.
3. ಬುದ್ಧಿವಂತ ವ್ಯಕ್ತಿ
ಚಾಣಕ್ಯನ ಪ್ರಕಾರ ಜಗತ್ತಿನಲ್ಲಿ ಎಲ್ಲಾ ತರಹದ ವ್ಯಕ್ತಿಗಳು ಇರುತ್ತಾರೆ. ಆದರೆ ನಾವು ಬುದ್ಧಿವಂತರ ಬಳಿ ವ್ಯವಹರಿಸುವಾಗ ತುಂಬಾನೇ ಜಾಗರೂಕರಾಗಬೇಕು. ನಿಮಗೇನಾದರೂ ಬುದ್ಧಿವಂತರಿಂದ ಕೆಲಸ ಆಗಬೇಕಿದ್ದರೆ ಅವರ ಬಳಿ ಸುಳ್ಳು ಹೇಳಲೇಬೇಡಿ ಆದಷ್ಟು ಸತ್ಯವನ್ನೇ ಮಾತನಾಡಿ. ಒಂದು ವೇಳೆ ಸುಳ್ಳು ಹೇಳಿ ಸಿಕ್ಕಿ ಬಿದ್ರೆ ಖಂಡಿತ ನಿಮಗೆ ಸಹಾಯ ಮಾಡುವುದಿಲ್ಲ. ಹೀಗಾಗಿ ಸತ್ಯಕ್ಕೆ ಹೆಚ್ಚಿನ ಪ್ರಶಸ್ತ್ಯ ನೀಡಿ. ಆಗ ಅವರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಹುಟ್ಟುತ್ತದೆ ಮತ್ತು ನಿಮಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ಬುದ್ಧಿವಂತ ವ್ಯಕ್ತಿಗಳ ಬಳಿ ನಿಮ್ಮ ಸಂಬಂಧ ಸತ್ಯ ಮಾರ್ಗದಲ್ಲೇ ಇರಲಿ.
ನಮ್ಮ ಕಾರ್ಯ ಸಾಧಿಸಬೇಕೆಂದರೆ ಕತ್ತೆ ಕಾಲಾದರೂ ಹಿಡಿಯಲೇಬೇಕು. ಹಾಗೇ ನಮಗೆ ಎಂತವರಿಂದ ಸಹಾಯಬೇಕೋ ಅವರ ಮಾರ್ಗದಲ್ಲೇ ಹೋಗಿ ಅವರಂತೆ ನಡೆದುಕೊಂಡು ಜಾಣತನದಿಂದಲೇ ನಮ್ಮ ಕಾರ್ಯ ಸಾಧಿಸಬೇಕು.



Click it and Unblock the Notifications



