Latest Updates
-
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ!
ಶ್ರೀಮಂತರು ಬೆಳಗ್ಗೆ ಈ 5 ಕೆಲಸ ಮಾಡುವುದೇ ಇಲ್ಲ! ಚಾಣಕ್ಯ ಹೇಳಿದ ರಹಸ್ಯ
ವಾವ್.. ಶ್ರೀಮಂತ ಮತ್ತು ಯಶಸ್ವಿ ಜನರು ಬೆಳಗ್ಗೆ ಈ 5 ದೊಡ್ಡ ತಪ್ಪುವುದೇ ಇಲ್ಲವೇ? ತುಂಬಾ ಕಡಿಮೆ ಜನರಿಗೆ ಮಾತ್ರ ತಿಳಿದಿರುವ ಚಾಣಕ್ಯ ನೀತಿ. ಹೌದು, ಶ್ರೀಮಂತರು (Rich people) ಮತ್ತು ಯಶಸ್ವಿ ವ್ಯಕ್ತಿಗಳು (successful people) ಬೆಳಗ್ಗೆ ಕೆಲವು ವಿಷಯಗಳನ್ನು ಏಕೆ ಮಾಡುವುದಿಲ್ಲ ಎಂಬುದರ ಕುರಿತು ಚಾಣಕ್ಯ ನೀತಿಯು (Chanakya Niti) ಮಹತ್ವದ ವಿಚಾರಗಳನ್ನು ತಿಳಿಸುತ್ತದೆ. ಯಶಸ್ಸು ಮತ್ತು ಸಂತೋಷದ ಹಾದಿಯು ನಮ್ಮ ಬೆಳಗಿನ ಅಭ್ಯಾಸಗಳಿಂದಲೇ ಪ್ರಾರಂಭವಾಗುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ನಾವು ಈ ಐದು ಪ್ರಮುಖ ತಪ್ಪುಗಳನ್ನು ತಪ್ಪಿಸುವುದರ ಮೂಲಕ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು.
ಪ್ರತಿ ದಿನವೂ ಹೊಸ ಭರವಸೆ, ಉತ್ಸಾಹ ಮತ್ತು ಶಕ್ತಿಯನ್ನು ತರುತ್ತದೆ. ಪ್ರತಿಯೊಬ್ಬರೂ ತಮ್ಮ ದಿನವು ಉತ್ತಮವಾಗಿರಬೇಕು, ಶುಭ ಸುದ್ದಿಗಳನ್ನು ತರಬೇಕು ಮತ್ತು ಯಶಸ್ಸನ್ನು ನೀಡಬೇಕು ಅಂಯ ಬಯಸುತ್ತಾರೆ. ಚಾಣಕ್ಯ ನೀತಿಯ ಪ್ರಕಾರ, ಬೆಳಗಿನ ಕೆಲವು ಅಭ್ಯಾಸಗಳು ದಿನ ಮತ್ತು ಜೀವನವನ್ನೇ ರೂಪಿಸುತ್ತವೆ. ಹಾಗಾಗಿ, ಕೆಲವು ತಪ್ಪುಗಳನ್ನು ಮಾಡದೆ ಇರುವುದು ಯಶಸ್ಸು ಮತ್ತು ಸಂತೋಷವನ್ನು ತರಲು ಸಹಕಾರಿ. ಈ ತಪ್ಪುಗಳು ಸಣ್ಣವೆಂದು ತೋರಬಹುದು. ಆದರೆ, ಅವು ದೀರ್ಘಾವಧಿಯ ಪರಿಣಾಮಗಳನ್ನು ಹೊಂದಿರುತ್ತವೆ.

ನಮಗೆಲ್ಲ ತಿಳಿದಿರುವಂತೆ ಚಾಣಕ್ಯನು (Chanakya) ಪ್ರಾಚೀನ ಭಾರತದ ಪ್ರಮುಖ ಚಿಂತಕರಲ್ಲಿ ಒಬ್ಬ. ಅವನು ಅರ್ಥಶಾಸ್ತ್ರಜ್ಞ, ಶಿಕ್ಷಕ ಮತ್ತು ರಾಜಕೀಯ ತಂತ್ರಜ್ಞನಾಗಿದ್ದನು. ಅವರ 'ಚಾಣಕ್ಯ ನೀತಿ' ಇಂದಿಗೂ ಜೀವನದ ಪ್ರತಿಯೊಂದು ಅಂಶಕ್ಕೂ ಮಾರ್ಗದರ್ಶನ ನೀಡುತ್ತದೆ. ಚಾಣಕ್ಯರು ಬೆಳಗಿನ ಅಭ್ಯಾಸಗಳ ಮಹತ್ವವನ್ನು ಒತ್ತಿಹೇಳಿದ್ದಾರೆ. ನಾವು ಎಂದಿಗೂ ಮಾಡಬಾರದ ಕೆಲವು ತಪ್ಪುಗಳನ್ನು ಅವರು ವಿವರಿಸಿದ್ದು, ಅವುಗಳನ್ನು ಮಾಡಿದರೆ ಯಶಸ್ಸು ಅಸಾಧ್ಯ (Never Do 5 Things In Morning) ಎಂದು ತಿಳಿಸಿದ್ದಾರೆ. ಯಶಸ್ಸು ಮತ್ತು ಸಂತೋಷದ ಹಾದಿ ಸರಿಯಾದ ಬೆಳಗಿನ (Morning Habits) ಅಭ್ಯಾಸಗಳಿಂದಲೇ ಪ್ರಾರಂಭವಾಗುತ್ತದೆ ಎಂದು ಅವರು ಹೇಳುತ್ತಾರೆ.
ಬೆಳಗ್ಗೆ ಎದ್ದ ತಕ್ಷಣ ಈ 5 ತಪ್ಪುಗಳನ್ನು ಎಂದಿಗೂ ಮಾಡಬೇಡಿ!
ಆಲಸ್ಯ
ಚಾಣಕ್ಯರ ಪ್ರಕಾರ, ಬೆಳಗ್ಗೆ ಆಲಸ್ಯವು ಯಶಸ್ಸಿಗೆ ದೊಡ್ಡ ಅಡಚಣೆಯಾಗಿದೆ. ಹಾಸಿಗೆಯಲ್ಲಿ ಹೆಚ್ಚು ಹೊತ್ತು ಮಲಗುವುದು ಅಥವಾ ಸೋಮಾರಿತನ ಮಾಡುವುದು ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ನಾಶಪಡಿಸುತ್ತದೆ. ಸೂರ್ಯೋದಯಕ್ಕೆ ಮುನ್ನ ಏಳುವುದು ಉತ್ತಮ. ಎದ್ದ ತಕ್ಷಣ ಲಘು ವ್ಯಾಯಾಮ ಅಥವಾ ಸ್ಟ್ರೆಚಿಂಗ್ ಮಾಡುವುದರಿಂದ ಮನಸ್ಸು ಮತ್ತು ದೇಹ ಎರಡೂ ಸಕ್ರಿಯವಾಗುತ್ತವೆ.
ನಕಾರಾತ್ಮಕ ಆಲೋಚನೆಗಳು
ಚಾಣಕ್ಯ ನೀತಿಯ ಪ್ರಕಾರ, ಬೆಳಗ್ಗೆ ನಕಾರಾತ್ಮಕ ಆಲೋಚನೆಗಳು ನಿಮ್ಮ ದಿನವನ್ನು ಹಾಳುಮಾಡಬಹುದು. ಚಿಂತೆ, ಭಯ ಮತ್ತು ಅಪೂರ್ಣ ಕೆಲಸಗಳ ಆಲೋಚನೆಗಳು ಮನಸ್ಸನ್ನು ಆಕ್ರಮಿಸಬಹುದು. ಸಕಾರಾತ್ಮಕ ಆಲೋಚನೆಗಳೊಂದಿಗೆ ದಿನವನ್ನು ಪ್ರಾರಂಭಿಸಬೇಕು ಎಂದು ಚಾಣಕ್ಯರು ಸಲಹೆ ನೀಡುತ್ತಾರೆ. ಕೆಲವು ನಿಮಿಷಗಳ ಧ್ಯಾನ, ಪ್ರಾರ್ಥನೆ ಅಥವಾ ಕೃತಜ್ಞತೆ ಸಲ್ಲಿಸುವುದು ನಿಮ್ಮ ಮಾನಸಿಕ ಸ್ಥಿತಿಯನ್ನು ಬಲಪಡಿಸುತ್ತದೆ.
ದಿನದ ಯೋಜನೆ ಇಲ್ಲದಿರುವುದು
ಯೋಜನೆಯಿಲ್ಲದೆ ದಿನವನ್ನು ಪ್ರಾರಂಭಿಸುವುದು ಸಮಯದ ವ್ಯರ್ಥ ಎಂದು ಚಾಣಕ್ಯ ನೀತಿ ಹೇಳುತ್ತದೆ. ಎದ್ದ ತಕ್ಷಣ ದಿನದ ಗುರಿಗಳನ್ನು ನಿರ್ಧರಿಸಬೇಕು. ಏನು ಮಾಡಬೇಕು ಮತ್ತು ಯಾವ ಕ್ರಮದಲ್ಲಿ ಮಾಡಬೇಕು ಎಂದು ಯೋಚಿಸಿ. ಮಾಡಬೇಕಾದ ಕೆಲಸಗಳ ಸಣ್ಣ ಪಟ್ಟಿಯನ್ನು ಮಾಡಿಕೊಳ್ಳುವುದರಿಂದ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.
ಕೆಟ್ಟ ಮಾತು ಅಥವಾ ಗಾಸಿಪ್
ಬೆಳಗ್ಗೆ ಎದ್ದ ತಕ್ಷಣ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಅಥವಾ ಗಾಸಿಪ್ ಮಾಡುವುದು ನಿಮ್ಮ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಈ ಅಭ್ಯಾಸವು ಮನಸ್ಸನ್ನು ದುರ್ಬಲಗೊಳಿಸುತ್ತದೆ ಮತ್ತು ತೊಂದರೆ ನೀಡುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ. ಸಕಾರಾತ್ಮಕ ಸಂಭಾಷಣೆಗಳಲ್ಲಿ ಅಥವಾ ಪ್ರೇರಣೆಯ ಮಾತುಗಳಲ್ಲಿ ತೊಡಗಿಕೊಳ್ಳುವುದು ದಿನವಿಡೀ ಮನಸ್ಸನ್ನು ಶಾಂತವಾಗಿ ಮತ್ತು ತಾಜಾವಾಗಿಡಲು ಸಹಾಯ ಮಾಡುತ್ತದೆ.
ಮೊಬೈಲ್ ಫೋನ್, ಸೋಶಿಯಲ್ ಮೀಡಿಯಾ
ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಮತ್ತು ಸಾಮಾಜಿಕ ಮಾಧ್ಯಮಗಳು (ಸೋಶಿಯಲ್ ಮೀಡಿಯಾ) ಬೆಳಗಿನ ದಿನಚರಿಯ ಭಾಗವಾಗಿವೆ. ಚಾಣಕ್ಯರ ಕಾಲದಲ್ಲಿ ಇವು ಇರಲಿಲ್ಲವಾದರೂ, ತತ್ವ ಒಂದೇ! ಬೆಳಗಿನ ಸಮಯವನ್ನು ನಿಮಗಾಗಿ ಇಟ್ಟುಕೊಳ್ಳಿ. ತಕ್ಷಣವೇ ಫೋನ್ ನೋಡದೆ, ಮೊದಲು ಮಾನಸಿಕವಾಗಿ ಮತ್ತು ದೈಹಿಕವಾಗಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ. ಇದು ದಿನವಿಡೀ ನಿಮ್ಮ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.



Click it and Unblock the Notifications











