Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಾ. 25ಕ್ಕೆ ಚೈತ್ರ ವಿನಾಯಕ ಚತುರ್ಥಿ: ಈ ಪರಿಹಾರ ಮಾಡಿ ಸಕಲ ಕಷ್ಟ ನಿವಾರಣೆಯಾಗುವುದು
ಶ್ರೀ ವಿನಾಯಕನ ಧ್ಯಾನ ಮಾಡಿದವರಿಗೆ ಬದುಕಿನಲ್ಲಿ ಯಾವ ಕಷ್ಟವೂ ಬರಲ್ಲ, ಅವನ ಕೃಪೆಯಿದ್ದರೆ ಎಲ್ಲಾ ಕಷ್ಟಗಳು ದೂರಾಗಿ ಕಾರ್ಯಸಿದ್ದಿಯಾಗುವುದು.
ಹಿಂದೂ ಧರ್ಮದಲ್ಲಿ ಯಾವುದೇ ದೇವರಿಗೆ ಪೂಜೆ ಮಾಡುವ ಶ್ರೀ ವಿನಾಯಕನಿಗೆ ಪೂಜೆ ಸಲ್ಲಿಸಿದ ಬಳಿಕವಷ್ಟೇ ಪೂಜೆ ಕಾರ್ಯವನ್ನು ಪ್ರಾರಂಭಿಸಲಾಗುವುದು.

ತಿಂಗಳಿನಲ್ಲಿ ಸಂಕಷ್ಠಿ ಹಾಗೂ ವಿನಾಯಕ ಚತುರ್ಥಿಯಲ್ಲಿ ಗಣೇಶನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು.
ಈ ತಿಂಗಳಿನಲ್ಲಿ ಚೈತ್ರ ವಿನಾಯಕ ಚತುರ್ಥಿ ಇದೆ. ಚೈತ್ರ ವಿನಾಯಕ ಚತುರ್ಥಿ ಯಾವಾಗ, ಪೂಜಾ ವಿಧಿಗಳೇನು, ಈ ಪೂಜೆಯಿಂದ ಪಡೆಯುವ ಫಲವೇನು ಎಂದು ನೋಡೋಣ ಬನ್ನಿ:
ವಿನಾಯಕ ಚತುರ್ಥಿ ದಿನಾಂಕ ಮತ್ತು ಸಮಯ
ವಿನಾಯಕ ಚತುರ್ಥಿ 2023: ಚೈತ್ರ ಶುಕ್ಲ ಚತುರ್ಥಿ
ವಿನಾಯಕ ಚತುರ್ಥಿ ಪ್ರಾರಂಭ: ಮಾರ್ಚ್ 24 ಸಂಜೆ 04:59ಕ್ಕೆ
ವಿನಾಯಕ ಚತುರ್ಥಿ ತಿಥಿ ಮುಕ್ತಾಯ: ಮಾರ್ಚ್ 25, ಸಂಜೆ 04:23ರವರೆಗೆ
ಪೂಜೆಗೆ ಶುಭ ಮುಹೂರ್ತ: ಮಾರ್ಚ್ 25 ಶನಿವಾರ ಬೆಳಗ್ಗೆ 11:14ರಿಂದ ಮಧ್ಯಾಹ್ನ 01:41ರವರೆಗೆ
ವಿನಾಯಕ ಚತುರ್ಥಿ ಮಹತ್ವ
ಯಾರು ವಿನಾಯಕನನ್ನು ಭಕ್ತಿಯಿಂದ ಪ್ರಾರ್ಥಿಸುತ್ತಾರೋ ಗಣಪತಿ ಅವರ ಭಕ್ತಿಗೆ ಬೇಗನೆ ಒಲಿಯುತ್ತಾನೆ, ತನ್ನ ಭಕ್ತರ ಬದುಕಿನಲ್ಲಿರುವ ಎಲ್ಲಾ ಸಂಕಷ್ಟಗಳನ್ನು ನಿವಾರಿಸುತ್ತಾನೆ. ನಂಬಿದವರನ್ನು ಎಂದಿಗೂ ಕೈ ಬಿಡಲ್ಲ ಎಂಬುವುದು ಅವನ ಭಕ್ತರ ಅಚಲ ನಂಬಿಕೆ.
ನೀವು ಚತುರ್ಥಿಯಂದು ಗಣೇಶನನ್ನು ಪೂಜಿಸಿದರೆ ಅದರ ಫಲ ಅಧಿಕವಿರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ಕಾರಣಕ್ಕೆ ವಿನಾಯಕ ಚತುರ್ಥಿ ದಿನ ಉಪವಾಸ ನಿಯಮಗಳನ್ನು ಪಾಲಿಸಿ ತುಂಬಾ ಶ್ರದ್ಧಾ ಭಕ್ತಿಯಿಂದ ಈ ವ್ರತವನ್ನು ಆಚರಿಸುತ್ತಾರೆ.
ವಿನಾಯಕ ಚತುರ್ಥಿ ಪೂಜಾ ವಿಧಾನ:
* ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ಗಣೇಶನನ್ನು ಪೂಜಿಸಬೇಕು.
* ಗಣೇಶನನ್ನು ಆರಾಧಿಸುವಾಗ ಗರಿಕೆಯನ್ನು ಕಡ್ಡಾಯವಾಗಿ ಅರ್ಪಿಸಿ.
* ಗಣೇಶನಿಗೆ ಬೂಂದಿ, ಲಡ್ಡುಗಳೆಂದರೆ ಅವುಗಳನ್ನು ಪ್ರಸಾದವನ್ನಾಗಿ ಅರ್ಪಿಸಿ.
* ಗಣೇಶ ಮಂತ್ರಗಳನ್ನು ಹೇಳುತ್ತಾ ಗಣೇಶನನ್ನು ಆರಾಧಿಸಿ.
ಈ ದಿನ 'ಓಂ ಗಂ ಗೌಂ ಗಣಪತಯೇ ವಿಘ್ನ ವಿನಾಶಿನೇ ಸ್ವಾಹಾ' ಎಂಬ ಮಂತ್ರವನ್ನು ಧ್ಯಾನಸ್ಥ ಮನಸ್ಥಿತಿಯಲ್ಲಿ 21 ಬಾರಿ ಪಠಿಸಿ. ಈ ಮಂತ್ರ ಪಠಣೆ ಮಾಡುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಉಂಟಾದ ವಿಘ್ನಗಳು ದೂರಾಗಲಿದೆ.
ಈ ದಿನ ಈ ಪರಿಹಾರಗಳನ್ನು ಮಾಡಬಹುದು
* ದಾಂಪತ್ಯದಲ್ಲಿ ಏನಾದರೂ ಸಮಸ್ಯೆಯಿದ್ದರೆ ಪತಿ ಪತ್ನಿ ಜೊತೆಯಾಗಿ 11 ಅಥವಾ 21 ಜೋಡಿ ದೂರ್ವ ಗಣಪತಿಗೆ ಅರ್ಪಿಸಿ.
* ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲು 4 ತೆಂಗಿನಕಾಯಿಯನ್ನು ಗಣೇಶನಿಗೆ ಅರ್ಪಿಸಿ.
* ಈ ದಿನ ಗಣೇಶನ ದೇವಾಲಯಕ್ಕೆ ಹೋಗಿ ಪಗರಿಕೆಯನ್ನು ಅರ್ಪಿಸಿ ಪ್ರಾರ್ಥಿಸಿ.
ಗಣೇಶ ಮಂತ್ರಗಳು
ಓಂ ಗಮ್ ಗಣಪತಯೇ ನಮಃ
ಓಂ ಶ್ರೀ ಗಣೇಶಾಯ ನಮಃ
ಓಂ ಏಕದಂತಾಯ ನಮಃ
ಓಂ ಸುಮುಖಾಯ ನಮಃ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಓಂ ಬಾಲಚಂದ್ರಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿನಾಯಕಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಕಪಿಲಾಯ ನಮಃ
ಓಂ ವಿಕ್‌ತ್ರಾಯ ನಮಃ



Click it and Unblock the Notifications

