Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಾಂಬೋಡಿಯಾದ ವಿಷ್ಣು ದೇವಾಲಯ ಧ್ವಂಸ: ಈ ದೇವಾಲಯದ ಇತಿಹಾಸ ಗೊತ್ತಾ?
ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಸಂಘರ್ಷ ಮುಂದುವರೆದಂತೆ, ವಿವಾದಿತ ಗಡಿ ಪ್ರದೇಶದಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಹಾಗೆ ಈಗ ಬ್ಯಾಂಕಾಕ್‌ನಲ್ಲಿನ ವಿಷ್ಣುವಿನ ಪ್ರತಿಮೆಯನ್ನು ನೆಲಸಮ ಮಾಡಲಾಗಿದೆ ಎಂದು ಕಾಂಬೋಡಿಯಾ ಅಧಿಕಾರಿಗಳು ಹೇಳಿದ್ದಾರೆ. 2014 ರಲ್ಲಿ ನಿರ್ಮಿಸಲಾದ ವಿಷ್ಣು ಪ್ರತಿಮೆಯ ಧ್ವಂಸವು ಸೋಮವಾರ ಥೈಲ್ಯಾಂಡ್ ಗಡಿಯಿಂದ ಸುಮಾರು 100 ಮೀಟರ್ ದೂರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಬೌದ್ಧ ಮತ್ತು ಹಿಂದೂ ಅನುಯಾಯಿಗಳು ಪೂಜಿಸುವ ಪ್ರಾಚೀನ ದೇವಾಲಯಗಳು ಮತ್ತು ಪ್ರತಿಮೆಗಳ ನಾಶವನ್ನು ನಾವು ಖಂಡಿಸುತ್ತೇವೆ ಎಂದು ಕಾಂಬೋಡಿಯಾ ಅಧಿಕಾರಿಗಳು ಹೇಳಿದ್ದಾರೆ. ಈ ವಿಷ್ಣುವಿನ ದೊಡ್ಡ ಪ್ರತಿಮೆಯನ್ನು ಉರುಳಿಸುತ್ತಿರುವ ವಿಡಿಯೋಗಳು ಹರಿದಾಡಿವೆ. ಈ ಹಿಂದೂ ದೇವಾಲಯ ಈಗ ಗಡಿ ಪ್ರದೇಶದಲ್ಲಿನ ಬಿಕ್ಕಟ್ಟು ಹೆಚ್ಚಿಸಿದೆ.

ಘರ್ಷಣೆಯ ಇತ್ತೀಚಿನ ಸುದ್ದಿಗಳಲ್ಲಿ ಥೈಲ್ಯಾಂಡ್ ಮತ್ತು ಕಾಂಬೋಡಿಯಾದ ಮಿಲಿಟರಿ ಅಧಿಕಾರಿಗಳು ಕದನ ವಿರಾಮವನ್ನು ಪುನರಾರಂಭಿಸುವ ಕುರಿತು ಮಾತುಕತೆ ನಡೆಸಲು ಪ್ರಾರಂಭಿಸಿವೆ. ಹಾಗೆ ಎರಡು ದೇಶಗಳ ಗಡಿ ಪ್ರದೇಶದಲ್ಲಿನ ಹಲವು ಹಿಂದೂ ದೇವಾಲಯಗಳು ಈಗ ಸಂಕಷ್ಟಕ್ಕೆ ಸಿಲುಕಿವೆ.
ಈ ವಿಷ್ಣು ದೇವಾಲಯದ ಇತಿಹಾಸವೇನು?
ಕಾಂಬೋಡಿಯಾ ಹಾಗೂ ಥೈಲ್ಯಾಂಡ್ ಸುಮಾರು 800 ಕಿ.ಮೀ ಉದ್ದದ ಗಡಿ ಭಾಗವು ಹಿಂದಿನಿಂದಲೂ ಉದ್ವಿಗ್ನತೆಗೆ ಕಾರಣವಾಗಿದೆ. ಈ ಪ್ರದೇಶಗಳಿಗೆ ಎರಡೂ ದೇಶಗಳು ನಮಗೆ ಸೇರಬೇಕು ಎಂದು ಹಿಂದಿನಿಂದಲೂ ಬಿಕ್ಕಟ್ಟು ಏರ್ಪಟ್ಟಿದೆ. ಪ್ರಿಯಾ ವಿಹಾರ್ ದೇವಾಲಯವು ಶಿವನಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಎರಡು ದೇಶಗಳ ನಡುವಿನ ಗಡಿ ಭಾಗವಾದ ಡಾಂಗ್ರೆಕ್ ಪರ್ವತ ಶ್ರೇಣಿಯಲ್ಲಿದೆ. ಆದ್ರೆ ಈ ಪ್ರದೇಶವನ್ನು ಎರಡೂ ದೇಶಗಳು ತಮ್ಮದೆಂದು ಘೋಷಿಸಿಕೊಳ್ಳುತ್ತಿವೆ. 1907ಕ್ಕಿಂತಲೂ ಮೊದಲೇ ಈ ವಿಚಾರವಾಗಿ ಎರಡೂ ದೇಶಗಳ ನಡುವೆ ವಿವಾದ ಏರ್ಪಟ್ಟಿದೆ.
2025ರ ಫೆಬ್ರವರಿಯಲ್ಲಿ ಕಾಂಬೋಡಿಯಾ ಸೈನಿಕರು ಈ ದೇವಾಲಯ ಹಾಗೂ ಗಡಿ ಪ್ರದೇಶದ ಭಾಗದಲ್ಲಿ ತೆರಳಿ ತಮ್ಮ ರಾಷ್ಟ್ರಗೀತೆ ಹಾಡಿದ್ದರು. ಇದು ಈ ಗಡಿ ಭಾಗದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಬೌದ್ಧ ದೇಶವಾದರೂ ಅಲ್ಲಿನ ಹಿಂದೂ ದೇವಾಲಯವೇ ದೇಶದ ಹೆಗ್ಗುರುತಾಗಿದೆ. ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವ ಮೂಲಕ ಆ ದೇವಾಲಯವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಗುರಿ ಹೊಂದಲಾಗಿದೆ.
ಸದ್ಯ ಈಗ ಈ ನಾಶ ಮಾಡಲಾದ ವಿಷ್ಣು ಪ್ರತಿಮೆ ಕೂಡ ಇತಿಹಾಸ ಪ್ರಸಿದ್ದ ದೇವಾಲಯಕ್ಕೆ ಸೇರಿದೆ. ಈ ದೇವಾಲಯವು 9ನೇ ಶತಮಾನದ ರಚನೆಯಂತೆ ಕಾಣಿಸುತ್ತದೆ, ಆದ್ರೆ 11 ನೇ ಶತಮಾನದಲ್ಲಿ ಖಮೇರ್ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ನಿರ್ಮಿಲಸಾಗಿತ್ತು ಎಂದು ಹೇಳಲಾಗಿದೆ. ಅಲ್ಲಿನ ರಾಜ ಮೊದಲನೇ ಸೂರ್ಯವರ್ಮನ್ ಅಡಿಪಾಯ ಹಾಕಿದ್ದನು ಹಾಗೆ ಎರಡನೇ ಸೂರ್ಯವರ್ಮನ್ ಈ ದೇವಾಲಯವನ್ನು ಪೂರ್ಣಗೊಳಿಸಿದನು ಎಂದು ಇತಿಹಾಸ ಹೇಳುತ್ತದೆ.
ಈ ದೇವಾಲಯದ ಇತಿಹಾಸವು ಬೌದ್ಧ ಹಾಗೂ ಹಿಂದೂ ಸಮುದಾಯಕ್ಕೆ ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ. ಆದರೂ ಈ ದೇವಾಲಯವನ್ನು ಈಗ ನಾಶ ಮಾಡಿರುವುದು ಹಿಂದೂಗಳ ಭಾವನೆಗೆ ದಕ್ಕೆ ತಂದಂತಾಗಿದೆ.
ಥೈಲ್ಯಾಂಡ್ ವಿರೋಧಿಸಲು ಕರೆ
ಹಿಂದೂಗಳ ದೇವಾಲಯ ನಾಶಕ್ಕೆ ಮುಂದಾದ ಕಾರಣ ಥೈಲ್ಯಾಂಡ್ ದೇಶಕ್ಕೆ ಪ್ರವಾಸ ತೆರಳಬೇಡಿ ಎಂಬ ಅಭಿಯಾನ ಆರಂಭಗೊಂಡಿದೆ. ಹಾಗೆ ಥೈಲ್ಯಾಂಡ್ ವಿರೋಧಿ ಕರೆಗಳು ಕೇಳಿಬಂದಿವೆ. ಅಲ್ಲದೆ ಗಡಿ ಪ್ರದೇಶದಲ್ಲಿನ ಜನರು ಥೈಲ್ಯಾಂಡ್ ನಡೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಥೈಲ್ಯಾಂಡ್‌ಗೆ ಯಾರು ಸಹ ಪ್ರವಾಸಕ್ಕೆ ತೆರಳಬೇಡಿ. ಇದರಿಂದ ಬುದ್ದಿ ಕಲಿಸಬೇಕು ಎಂಬ ಕೂಗುಗಳು ಕೇಳಿಬರುತ್ತಿದೆ.



Click it and Unblock the Notifications


