Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇವಾಲಯಕ್ಕೆ 10 ಕೆ.ಜಿ ಬೆಳ್ಳಿ ಪೆಟ್ರೋಲ್ ಪಂಪ್ ನೀಡಿದ ಭಕ್ತ..! ಏಕೆ ಗೊತ್ತಾ?
ಭಾರತದಲ್ಲಿ ದೇವರಿಗೆ ಹರಕೆ ಕಟ್ಟಿಕೊಳ್ಳುವ ಸಂದ್ರದಾಯ ಹಿಂದಿನಿಂದಿಲೂ ನಡೆದುಕೊಂಡು ಬಂದಿದೆ. ಅದ್ರಲ್ಲೂ ವಿಶೇಷವಾಗಿ ಹಿರಿಯರು ದಶಕಗಳ ಹಿಂದೆ ಕಟ್ಟಿಕೊಂಡ ಹರಕೆಗಳನ್ನು ಈಗ ತೀರುಸುವುದು ನೋಡಬಹುದು. ನೀವು ಹಳ್ಳಿಯಿಂದ ಹಿಡಿದು ನಗರಗಳ ದೇವಾಲಯಕ್ಕೆ ಹೋದರು ಅಲ್ಲಿ ಹರಕೆ ತೀರಿಸಲೆಂದೇ ದೇವಾಲಯಗಳಿಗೆ ಭಕ್ತರು ಬರುವುದು ನೋಡಬಹುದು. ಈ ಸಂಪ್ರದಾಯ ಹಿರಿಯರಿಂದ ಮಕ್ಕಳ ಕಾಲಕ್ಕೂ ನಡೆದುಕೊಂಡು ಬಂದಿದೆ.
ಇನ್ನು ಹಲವು ಹರಕೆಗಳು ವಿಚಿತ್ರವಾಗಿ ಇರುವುದು ಕೂಡ ನೋಡಬಹುದು. ನೀವು ಊಹಿಸದ ರೀತಿಯಲ್ಲಿ ರಕೆ ಕಟ್ಟಿಕೊಂಡು ಅದನ್ನು ತೀರಿಸಲೆಂದು ದೇವಾಲಯಗಳಿಗೆ ಬರುವುದು ನೋಡಬಹುದು. ಈಗ ಇಲ್ಲೊಬ್ಬ ಭಕ್ತನ ವಿಚಿತ್ರ ಹರಕೆಯನ್ನು ತೀರಿಸಿಕೊಂಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆತ ದೇವಾಲಯಕ್ಕೆ ಪೆಟ್ರೋಲ್ ಪಂಪ್ ಮೆಷಿನ್ ನೀಡಿ ಹರಕೆ ತೀರಿಸಿದ್ದಾನೆ.

ರಾಜಸ್ಥಾನದ ಚಿತ್ತೋರಗಢ ಜಿಲ್ಲೆಯ ಶ್ರೀ ನಲ್ವಾಲಿಯಾ ಸೇಠ್ ದೇವಾಲಯಕ್ಕೆ ಭಕ್ತನೊಬ್ಬ ಬೆಳ್ಳಿಯಿಂದ ಮಾಡಲಾದ ಪೆಟ್ರೋಲ್ ಪಂಪ್ ಮೆಷಿನ್ ನೀಡಿ ಎಲ್ಲರ ಗಮನ ಸೆಳೆದಿದ್ದಾನೆ. ಅದ್ರಲ್ಲೂ ಈ ಪೆಟ್ರೋಲ್ ಪಂಪ್ ಮಷಿನ್ ಬರೋಬ್ಬರಿ 10 ಕೆ.ಜಿ ತೂಕವಿದೆ. ಈ ಹರಕೆ ತೀರಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರು ಅಚ್ಚರಿಗೊಳಗಾಗಿದ್ದಾರೆ.
ಚಿತ್ತೋರಗಢದ ಡಂಗ್ಲಾದ ಉದ್ಯಮಿ ಮಂಗಿಲಾಲ್ ಜರೋಲಿ, 10 ಕೆ.ಜಿ ಬೆಳ್ಳಿಯಿಂದ ತಯಾರಿಸಿದ ಪೆಟ್ರೋಲ್ ಪಂಪ್ ಅನ್ನು ದೇವಾಲಯಕ್ಕೆ ನೀಡುವ ಮೂಲಕ ದೀರ್ಘಕಾಲದ ಹರಕೆ ತಿರಿಸಿದರು. ಮಕ್ಕಳು ಈ ಹಿಂದೆ ಪೆಟ್ರೋಲ್ ಪಂಪ್ ನಿರ್ಮಾಣಕ್ಕಾಗಿ ಅರ್ಜಿಸಲ್ಲಿಸಿದ್ದರಂತೆ. ಆದ್ರೆ ಹಲವು ತಿಂಗಳು ಅದರ ಓಡಾಟದಲ್ಲಿ ಕಳೆಯಬೇಕಾಗಿತ್ತು. ಈ ವೇಳೆ ಉದ್ಯಮಿ ದೇವರಿಗೆ ಹರಕೆ ಕಟ್ಟಿಕೊಂಡರಂತೆ. ಮಕ್ಕಳ ಪೆಟ್ರೋಲ್ ಪಂಪ್ ಕನಸು ನನಸಾದರೆ 10. ಕೆ.ಜಿ ಬೆಳ್ಳಿ ಪೆಟ್ರೋಲ್ ಪಂಪ್ ಮಷಿನ್ ಅನ್ನು ದೇವಾಲಯಕ್ಕೆ ನೀಡುವುದಾಗಿ ಅವರು ಹರಕೆ ಕಟ್ಟಿಕೊಂಡರಂತೆ. ಈಗ ಅವರ ಮಕ್ಕಳ ಹೆಸರಿನ ಪೆಟ್ರೋಲ್ ಪಂಪ್ ಅರ್ಜಿ ಪುರಸ್ಕೃತಗೊಂಡಿದೆ. ಹೀಗಾಗಿ ಉದ್ಯಮಿ ತಮ್ಮ ಹರಕೆ ತೀರಿಸಿದ್ದಾರೆ ಎಂದು ತಿಳಿದುಬಂದಿದೆ.
ಪೆಟ್ರೋಲ್ ಪಂಪ್ ಜೊತೆಗೆ 56 ಕಾಣಿಕೆಗಳ ಟ್ಯಾಬ್ಲೋವನ್ನು ದೇವಾಲಯದಲ್ಲಿ ಇರಿಸಲಾಗಿದೆ. ಇನ್ನು ಇಡೀ ಕುಟುಂಬ ಈ ಬೆಳ್ಳಿ ಪೆಟ್ರೋಲ್ ಪಂಪ್ ಅನ್ನು ತೆರೆದ ವಾಹನದಲ್ಲಿ ಹೂವಿನ ಅಲಂಕಾರದೊಂದಿಗೆ ಮೆರವಣಿಗೆಯ ಮೂಲಕ ದೇವಾಲಯಕ್ಕೆ ತರಲಾಗಿತ್ತು. ಇದನ್ನು ಕಂಡು ಜನರು ಅಚ್ಚರಿಯ ಜೊತೆಗೆ ಕುತೂಹಲ ನೋಡಲು ದೇವಾಲಯಕ್ಕೆ ಹರಿದುಬಂದಿದ್ದರು. ಉದ್ಯಮಿ ಮಂಗಿಲಾಲ್ ತಲೆಯ ಮೇಲೆ ಈ ಪಂಪ್ ಅನ್ನು ಹೊತ್ತು ದೇವಾಲಯಕ್ಕೆ ಅರ್ಪಿಸಿದರು.
ಸನ್ವಾಲಿಯಾ ಸೇಠ್ ದೇವಾಲಯದ ವಿಶೇಷವೇನು?
ಚಿತ್ತೋರ್‌ಗಢದ ಮಂಡ್ಫಿಯಾದಲ್ಲಿರುವ ಶ್ರೀ ಸನ್ವಾಲಿಯಾ ಸೇಠ್ ದೇವಾಲಯವು ಶ್ರೀಕೃಷ್ಣನ ಪೂಜ್ಯ ದೇವಾಲಯವಾಗಿದೆ. ಭಕ್ತರು ಸನ್ವಾಲಿಯಾ ಸೇಠ್ ಅವರನ್ನು ತಮ್ಮ ವ್ಯವಹಾರಗಳಲ್ಲಿ ಪಾಲುದಾರರೆಂದು ಪರಿಗಣಿಸುತ್ತಾರೆ, ತಮ್ಮ ಲಾಭದ ಒಂದು ಭಾಗವನ್ನು ದೇವಾಲಯಕ್ಕೆ ನೀಡುವಂತಹ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ದೇವಾಲಯಕ್ಕೆ ಚಿನ್ನ, ಬೆಳ್ಳಿ, ಹಣ, ವಿದೇಶಿ ಕರೆನ್ಸಿ, ಸೇರಿ ಹಲವು ರೀತಿಯ ಕಾಣಿಕೆ ಬರುವುದು ನೋಡಬಹುದು. ವಾರ್ಷಿಕವಾಗಿ 29 ಕೋಟಿಯಷ್ಟು ಕಾಣಿಗೆ ಸಂಗ್ರಹವಾಗಲಿದೆ.
ಈ ಹಿಂದೆ ಕೂಡ ದೇವಾಲಯಕ್ಕೆ ಬೆಳ್ಳಿ ಹೆಲಿಕಾಪ್ಟರ್, ಸೇರಿ ಹಲವು ಮೂರ್ತಿಗಳು ಕಾಣಿಗೆಯಾಗಿ ಬಂದಿದ್ದವು. ಸದ್ಯ ಈಗ ಬಂದಿರುವ ಈ ಕಾಣಿಗೆ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ್ದು ಎನ್ನಲಾಗಿದೆ. ದೇವಾಲಯದ ಆಡಳಿತವು ಮಂಗಿಲಾಲ್ ಅವರ ಕಾಣಿಕೆಯನ್ನು ಸ್ವೀಕರಿಸಿದೆ, ಅವರ ನಂಬಿಕೆಯನ್ನು ಶ್ಲಾಘಿಸಿದೆ ಮತ್ತು ಅದನ್ನು ದೇವಾಲಯದ ದೀರ್ಘಕಾಲದ ಸಂಪ್ರದಾಯಗಳ ಭಾಗವೆಂದು ಗುರುತಿಸಿದೆ.



Click it and Unblock the Notifications











