Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬುಧಗೋಚರ ಮತ್ತು ಗಜಕೇಸರಿ ಯೋಗ : ಈ 6 ರಾಶಿಯವರಿಗೆ ಅದೃಷ್ಟ
ಬುಧ ಗ್ರಹವು ಮೇಷ ರಾಶಿಯನ್ನು ತೊರೆದು ಜೂನ್ 7 ರ ಬುಧವಾರದಂದು ವೃಷಭ ರಾಶಿಗೆ ಪ್ರವೇಶಿಸಲಿದೆ. ಇನ್ನೊಂದೆಡೆ ಗುರು ಮತ್ತು ಚಂದ್ರ ಮಕರ ರಾಶಿಯಲ್ಲಿ ಇರುವುದರಿಂದ ಗಜಕೇಸರಿ ಯೋಗ ನಿರ್ಮಾಣವಾಗುತ್ತಿದೆ. ಜ್ಯೋತಿಷ್ಯದಲ್ಲಿ ಶಾಸ್ತ್ರದ ಪ್ರಕಾರ ಗಜಕೇಸರಿ ಯೋಗ ತುಂಬಾ ಒಳ್ಳೆಯದು ಮತ್ತು ಮಂಗಳಕರವೆಂದು ಹೇಳಲಾಗುತ್ತದೆ.
ಬುಧ ಗ್ರಹದ ರಾಶಿ ಬದಲಾವಣೆ ಮತ್ತು ಗಜಕೇಸರಿ ರಾಜಯೋಗ ನಿರ್ಮಾಣವಾಗುತ್ತಿರೋದ್ರಿಂದ 6 ರಾಶಿಯವರಿಗೆ ಅದೃಷ್ಟ ಒಲಿಯಲಿದೆ. ಅಷ್ಟಕ್ಕು ಆ ಆರು ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ವೃಷಭ ರಾಶಿ
ಈ ಸಮಯದಲ್ಲಿ ನೀವು ಉತ್ತಮ ಉದ್ಯೊಗವಕಾಶಗಳನ್ನು ಪಡೆಯಲಿದ್ದೀರಿ. ನೀವು ವಿದೇಶದಲ್ಲಿ ಉದ್ಯೋಗ ಪಡೆಯಲು ಅಥವಾ ಓದಲು ಬಯಸಿದರೆ ನಿಮ್ಮ ಆಸೆ ಈಡೇರುತ್ತದೆ. ನೀವು ನಿಮ್ಮ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಕುಟುಂಬದ ಸದಸ್ಯರ ಸಂಪೂರ್ಣ ಬೆಂಬಲವಿರುತ್ತದೆ. ಮತ್ತು ಕುಟುಂಬ ಸದಸ್ಯರ ಇಷ್ಟಾರ್ಥಗಳು ಈಡೇರುತ್ತವೆ. ಕೆಲಸದ ಸ್ಥಳದಲ್ಲಿ ಬುದ್ಧಿವಂತಿಕೆಯೊಂದಿಗೆ ಅತ್ಯುತ್ತಮವಾದ ಕೆಲಸವನ್ನು ಮಾಡುತ್ತೀರಿ ಮತ್ತು ಪ್ರತಿ ಕೆಲಸವನ್ನು ಉತ್ತಮವಾಗಿ ಪೂರ್ಣಗೊಳಿಸುತ್ತೀರಿ.
ಈ ಸಮಯದಲ್ಲಿ ನೀವು ಯಾವುದಾದರೂ ಕಾಯಿಲೆಯಿಂದ ತೊಂದರೆಗೊಳಗಾಗಿದ್ದರೆ ನೀವು ಅದರಿಂದ ಮುಕ್ತರಾಗುತ್ತೀರಿ. ಮತ್ತು ಕ್ರಮೇಣ ನಿಮ್ಮ ಆರೋಗ್ಯವು ಸುಧಾರಿಸುತ್ತದೆ. ನಿಮ್ಮ ಗಮನ ಗರಿಷ್ಠ ಹಣ ಗಳಿಸುವ ಕಡೆಗಿರಲಿ. ಸನ್ಮಾರ್ಗದಿಂದಲೇ ದುಡ್ಡು ಸಂಪಾದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ.
ಕರ್ಕಾಟಕ ರಾಶಿ
ಬಂಧುಗಳಿಂದ ಶುಭ ಸುದ್ದಿ ಸಿಗಲಿದೆ. ಈ ಅವಧಿಯಲ್ಲಿ ಹಣ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳಿವೆ. ಉದ್ಯೋಗಿಗಳು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾರೆ. ಮತ್ತು ತಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತಾರೆ. ನೀವು ಈ ಸಮಯದಲ್ಲಿ ಆರ್ಥಿಕ ಲಾಭ ಪಡೆಯುವ ಸಾಧ್ಯತೆಯಿದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಇದು ಉತ್ತಮ ಸಮಯ. ಇದರಿಂದ ನೀವು ಉತ್ತಮ ಲಾಭ ಗಳಿಸುತ್ತೀರಿ.
ಈ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಉತ್ತಮ ಸಾಮರಸ್ಯವನ್ನು ಕಾಣಬಹುದು. ಒಬ್ಬರಿಗೊಬ್ಬರು ಪರಸ್ಪರ ಗೌರವಿಸೋದ್ರಿಂದ ಇದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ಮತ್ತು ಗೌರವವೂ ಹೆಚ್ಚಾಗುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಬುಧ ಸಂಕ್ರಮಣ ಆರ್ಥಿಕವಾಗಿ ಲಾಭದಾಯಕವಾಗಲಿದೆ. ಈ ಸಮಯದಲ್ಲಿ ಉದ್ಯೋಗದಲ್ಲಿ ಹೊಸ ಮತ್ತು ಉತ್ತಮ ಅವಕಾಶಗಳು ದೊರೆಯುತ್ತದೆ. ಕೌಟುಂಬಿಕ ವಾತಾವರಣ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರ ಪ್ರೀತಿ ಪಡೆಯುತ್ತೀರಿ. ನಿಮ್ಮ ಸ್ಥಗಿತಗೊಂಡ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಮತ್ತು ಸರ್ಕಾರಿ ಯೋಜನೆಗಳು ಸಹ ಉತ್ತಮ ಪ್ರಯೋಜನಗಳನ್ನು ಪಡೆಯುತ್ತವೆ. ಈ ಅವಧಿಯಲ್ಲಿ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ.
ಹಣದ ವಿಚಾರದಲ್ಲಿ ಭಯ ಪಡೋ ಹಾಗಿಲ್ಲ. ಆರ್ಥಿಕವಾಗಿ ಸದೃಢರಾಗಿರುತ್ತೀರಿ. ವ್ಯವಹಾರದಲ್ಲಿ ಲಾಭ ಪಡೆಯಲು ನಿಮ್ಮ ಕಾರ್ಯತಂತ್ರದಲ್ಲಿ ಬದಲಾವಣೆಯ ಅಗತ್ಯವಿದೆ. ಈ ಅವಧಿಯಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿರುವವರಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ವಿವಾಹಿತರ ಪ್ರೀತಿ, ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ.
ತುಲಾ ರಾಶಿ
ಬುಧ ಮತ್ತು ಗಜಕೇಸರಿ ರಾಜಯೋಗವು ತುಲಾ ರಾಶಿಯವರಿಗೆ ಬಹಳ ಪ್ರಯೋಜನಕಾರಿಯಾಗಿದೆ. ವೃತ್ತಿಪರ ಮತ್ತು ವೈಯಕ್ತಿಕ ವಿಷಯಗಳಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆಯಲಿದ್ದೀರಿ. ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತೀರಿ. ಮತ್ತು ಪ್ರಗತಿಯ ಅವಕಾಶಗಳು ಸಹ ಲಭ್ಯವಾಗುತ್ತವೆ. ತುಲಾ ರಾಶಿಯವರು ಈ ಅವಧಿಯಲ್ಲಿ ತಮ್ಮ ಪ್ರತಿಸ್ಪರ್ಧಿಗಳೊಂದಿಗೆ ಕಠಿಣ ಹೋರಾಟವನ್ನು ಮಾಡಲು ಸಾಧ್ಯವಾಗುತ್ತದೆ.
ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ಮತ್ತು ಕುಟುಂಬದೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಮತ್ತು ನೀವು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಈ ಅವಧಿಯಲ್ಲಿ ನೀವು ಹೂಡಿಕೆ ಮಾಡಿದರೆ ಉತ್ತಮ ಲಾಭವನ್ನು ಪಡೆಯುತ್ತೀರಿ. ಮಗುವಿನ ಪ್ರಗತಿಯನ್ನು ಕಂಡು ಸಂತೋಷ ಪಡುತ್ತೀರಿ. ಆರ್ಥಿಕ ಲಾಭ ಗಳಿಸುವ ಸಾಧ್ಯತೆಗಳಿದೆ.
ಮಕರ ರಾಶಿ
ಮಕರ ರಾಶಿಯಲ್ಲಿ ರಾಶಿಯಲ್ಲಿ ಗುರು ಮತ್ತು ಚಂದ್ರನ ಸಂಯೋಜನೆಯಿಂದ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ಮಕರ ರಾಶಿಯವರಿಗೆ ಬುಧ ಸಂಕ್ರಮಣವು ಶುಭಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಉದ್ಯೋಗಿಗಳಿಗೆ ಸಂಬಳ ಹೆಚ್ಚಳವಾಗುವ ಸಾಧ್ಯತೆಗಳಿದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ನಿಮ್ಮ ಸಂಬಂಧಗಳು ಬಲವಾಗಿರುತ್ತವೆ. ಮತ್ತು ವೃತ್ತಿ ಕ್ಷೇತ್ರದಲ್ಲಿ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ಸರ್ಕಾರಿ ಪರೀಕ್ಷೇಯಲ್ಲಿ ಯಶಸ್ಸು ಪಡೆಯುತ್ತೀರಿ.
ನಿಮ್ಮ ಕುಟುಂಬದೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯಬಹುದು. ಈ ರಾಶಿಯ ವಿವಾಹಿತರಿಗೆ ಈ ಸಂಚಾರವು ತುಂಬಾನೇ ಪ್ರಯೋಜನಕಾರಿಯಾಗಲಿದೆ. ನಿಮ್ಮ ಮನಸ್ಸು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿರುತ್ತದೆ. ನಿಮ್ಮಲ್ಲಿ ಸೇವಾ ಮನೋಭಾವ ಹೆಚ್ಚಾಗುತ್ತದೆ. ದತ್ತಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ.
ಮೀನ ರಾಶಿ
ಮೀನ ರಾಶಿಯವರಿಗೆ ಬುಧ ಸಂಕ್ರಮಣ ಮತ್ತು ಗಜಕೇಸರಿ ಯೋಗದಿಂದ ಅದೃಷ್ಟ ಒಲಿದು ಬರಲಿದೆ. ವೃತ್ತಿಜೀವನದಲ್ಲಿ ಉತ್ತಮ ಪ್ರಗತಿ ಕಾಣುವ ಸಾಧ್ಯತೆಯಿದೆ. ವಿದೇಶದಲ್ಲಿ ಉತ್ತಮ ಉದ್ಯೋಗಾವಕಾಶಗಳು ದೊರೆಯುತ್ತವೆ. ಈ ಸಮಯದಲ್ಲಿ ಹೂಡಿಕೆಯು ಉತ್ತಮ ಆದಾಯವನ್ನು ನೀಡುತ್ತದೆ. ಮತ್ತು ಲಾಭ ಗಳಿಸಲು ನಿಮಗೆ ಉತ್ತಮ ಅವಕಾಶಗಳಿವೆ. ಮಕ್ಕಳ ವಿಚಾರದಲ್ಲಿ ಖುಷಿಯಾಗಿರುತ್ತೀರಿ.
ಪ್ರೀತಿಯಲ್ಲಿರುವವರು ಉತ್ತಮ ಫಲಗಳನ್ನೇ ನಿರೀಕ್ಷೇ ಮಾಡಬಹುದು. ನೀವು ಆಸ್ತಿ ಅಥವಾ ಭೂಮಿಯನ್ನು ಖರೀದಿಸಲು ಬಯಸಿದರೆ ನಿಮ್ಮ ಆಸೆ ಈಡೇರುತ್ತದೆ. ಹಿರಿಯ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಈ ಸಮಯದಲ್ಲಿ ನಿಮಗೆ ಎಲ್ಲಾ ವಿಚಾರದಲ್ಲೂ ಸಹಾಯ ದೊರೆಯುತ್ತದೆ.



Click it and Unblock the Notifications
