ವೃಷಭ ರಾಶಿಯಲ್ಲಿ ಬುಧ ಗೋಚರ 2023 : ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮ ಹೇಗಿರಲಿದೆ?

ಬುಧ ಗ್ರಹವು ನಿರ್ಧಾರ ತೆಗೆದುಕೊಳ್ಳುವುದು, ಮಾನಸಿಕ ಸ್ಪಷ್ಟತೆ ಮತ್ತು ಸಂವಹನ ಮತ್ತು ಹೊಸತರ ಆರಂಭಕ್ಕೆ ಸಂಬಂಧಿಸಿದೆ. ಬುಧ ಗ್ರಹವು ಜೂನ್ 07, 2023 ರಂದು ಸಂಜೆ 07:58 ಕ್ಕೆ ವೃಷಭ ರಾಶಿಯಲ್ಲಿ ಸಾಗಲಿದ್ದಾನೆ. ಮತ್ತು ಜೂನ್ 24, 2023 ರಂದು ಮಧ್ಯಾಹ್ನ 12:48ಕ್ಕೆ ತನ್ನ ಸಂಚಾರವನ್ನು ಕೊನೆಗೊಳಿಸಲಿದ್ದಾರೆ.

ಬುಧ ಗ್ರಹವು ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಿರೋದ್ರಿಂದ ಕೆಲವು ರಾಶಿಯವರಿಗೆ ಉತ್ತಮ ಫಲಿತಾಂಶ ಲಭಿಸಿದ್ರೆ, ಇನ್ನೂ ಕೆಲವು ರಾಶಿಗೆ ಇದರಿಂದ ಕೆಟ್ಟದಾಗಲಿದೆ. ಅಷ್ಟಕ್ಕು ವೃಷಭ ರಾಶಿಯಲ್ಲಿ ಬುಧ ಸಂಚಾರ ಮಾಡುತ್ತಿರೋದ್ರಿಂದ ದ್ವಾದಶ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀಳಲಿದೆ ಅನ್ನೋದನ್ನು ತಿಳಿಯೋಣ.

Budha Gochar 2023: Impact of Mercury Transit in Taurus On All Zodiac Signs in Kannada

ಮೇಷ ರಾಶಿ
ಬುಧ ಗ್ರಹವು ವೃಷಭ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ಮೇಷ ರಾಶಿಯವರ ಆತ್ಮ ವಿಶ್ವಾಸ ಹೆಚ್ಚಾಗಲಿದೆ. ತಮ್ಮ ಮಹತ್ವಾಕಾಂಕ್ಷೆಗಳು ಮತ್ತು ಪ್ರಗತಿಯ ಕಡೆಗೆ ಒಂದು ಹೆಜ್ಜೆ ಮುಂದಿಡುತ್ತಾರೆ. ಆದರೆ ಜಗಳವಾಡದಂತೆ ಅಥವಾ ಉದ್ವೇಗಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಿ.

ಪರಿಹಾರಗಳು
* ನಿಮ್ಮ ಕಿರುಬೆರಳಿನಲ್ಲಿ ಬೆಳ್ಳಿಯ ಉಂಗುರವನ್ನು ಧರಿಸಿ
* ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ.
* ಬುಧವಾರದಂದು ಪಾಲಕ್ ಅಥವಾ ಹಸಿರು ಕಾಳನ್ನು ದಾನವಾಗಿ ನೀಡಿ

ವೃಷಭ ರಾಶಿ
ಬುಧ ಗ್ರಹವು ವೃಷಭ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ವೃಷಭ ರಾಶಿಯವರ ಮಾನಸಿಕ ಶಕ್ತಿಯು ಹೆಚ್ಚಾಗಬಹುದು. ನಿಮ್ಮ ದೈನಂದಿನ ದಿನಚರಿ ಮತ್ತು ಕೆಲಸದ ಮೇಲೆ ನೀವು ಹೆಚ್ಚು ಗಮನಹರಿಸಬೇಕು. ಆತಂಕ ಹಾಗೂ ಒತ್ತಡವನ್ನು ಮೀರಿ ಕೆಲಸ ಮಾಡುತ್ತೀರಿ.

ಪರಿಹಾರಗಳು
* ನಿಮ್ಮ ಕಿಸೆಯಲ್ಲಿ ಅಥವಾ ಪರ್ಸ್ ನಲ್ಲಿ ಬೆಳ್ಳಿಯ ತುಂಡನ್ನು ಇಟ್ಟುಕೊಳ್ಳಿ
* ಪ್ರತಿ ನಿತ್ಯ ಶಿವನಿಗೆ ನೀರನ್ನು ಅರ್ಪಿಸಿ
* ಹಸುಗಳಿಗೆ ಮೇವು ನೀಡಿ

ಮಿಥುನ ರಾಶಿ
ಬುಧ ಗ್ರಹವು ವೃಷಭ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ಮಿಥುನ ರಾಶಿಯ ಮೇಲೆ ಋಣಾತ್ಮಕ ಪರಿಣಾಮ ಬೀಳಲಿದೆ. ನೀವು ಸಾಮಾಜಿಕವಾಗಿ ಬೆರೆತರೂ, ಅಭಿವ್ಯಕ್ತಿಶೀಲರಾದರೂ, ನವೀನವಾಗಿದ್ದರೂ ಕೂಡ ವಿವಾದಗಳು, ಗೊಂದಲಗಳು ಸದಾ ನಿಮ್ಮ ಬೆನ್ನ ಹಿಂದೆ ಇರುತ್ತದೆ. ಈ ಸಮಯದಲ್ಲಿ ನಿಮ್ಮ ಸಂಬಂಧಗಳನ್ನು ನಿರ್ಲಕ್ಷ್ಯ ಮಾಡಬೇಡಿ.

ಪರಿಹಾರಗಳು
* ವಿಷ್ಣುವಿಗೆ ನೀರಿನೊಂದಿಗೆ ಅರ್ಘ್ಯವನ್ನು ಅರ್ಪಿಸಿ
* ನಿಮ್ಮೊಂದಿಗೆ ಚೌಕಾಕಾರದ ಬೆಳ್ಳಿಯ ತುಂಡನ್ನು ಇಟ್ಟುಕೊಳ್ಳಬೇಕು
* ಪ್ರತಿದಿನ ಗಾಯತ್ರಿ ಮಂತ್ರವನ್ನು ಪಠಿಸಿ

ಕರ್ಕಾಟಕ ರಾಶಿ
ಬುಧ ಗ್ರಹವು ವೃಷಭ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ಕರ್ಕಾಟಕ ರಾಶಿಯವರು ಈ ಸಂದರ್ಭದಲ್ಲಿ ತಮ್ಮ ಕುಟುಂಬದ ಬಗ್ಗೆ ಹೆಚ್ಚಿನ ಕಾಳಜಿ ಮಾಡುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ಬೇಡಿಕೆಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಉತ್ಸುಕರಾಗಿರುತ್ತೀರಿ. ಇನ್ನೂ ಭಿನ್ನಾಭಿಪ್ರಾಯಗಳು ಮತ್ತು ಟೀಕೆಗಳಿಗೆ ಹೆಚ್ಚು ಸಂವೇದನಾಶೀಲರಾಗಿರುತ್ತೀರಿ. ಮನೆ ಮತ್ತು ಕೆಲಸದ ಸ್ಥಳದಲ್ಲಿ ನಿಮ್ಮ ಜವಾಬ್ದಾರಿಗಳ ನಡುವೆ ಸರಿಯಾದ ಸಮತೋಲನವನ್ನು ಸಾಧಿಸಲು ಪ್ರಯತ್ನಿಸಿ.

ಪರಿಹಾರಗಳು
* ಪ್ರತಿದಿನ ಶಿವನಿಗೆ ಅರ್ಘ್ಯವನ್ನು ಅರ್ಪಿಸಿ
* ನಿಮ್ಮ ಕಿರುಬೆರಳಿಗೆ ಬೆಳ್ಳಿಯ ಉಂಗುರವನ್ನು ಧರಿಸಿ
* ಬುಧವಾರದಂದು ದೇವಸ್ಥಾನಕ್ಕೆ ಹಾಲು ಅಥವಾ ಅಕ್ಕಿಯಿಂದ ಮಾಡಿದ ಪಾಯಸವನ್ನು ದಾನ ಮಾಡಿ

ಸಿಂಹ
ಬುಧ ಗ್ರಹವು ವೃಷಭ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ಇದರ ಪ್ರಭಾವವಾಗಿ ಸಿಂಹ ರಾಶಿಯವರು ಹೆಚ್ಚು ಕುತೂಹಲ, ಸೃಜನಶೀಲ ಮತ್ತು ಸಂವಹನಶೀಲರಾಗಬಹುದು. ಈ ಸಮಯದಲ್ಲಿ ಇವರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವಾಗ ಸಾಕಷ್ಟು ಆತ್ಮವಿಶ್ವಾಸ ಮತ್ತು ನಿರ್ಣಾಯಕ ಧ್ವನಿಯನ್ನು ಹೊಂದಿರುತ್ತಾರೆ.

ಪರಿಹಾರಗಳು
* ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ನೀರಿನೊಂದಿಗೆ ಅರ್ಘವನ್ನು ಅರ್ಪಿಸಿ
* ಬೆಳ್ಳಿಯ ಸಣ್ಣ ತುಂಡನ್ನು ಇಟ್ಟುಕೊಳ್ಳಿ
* ಬುಧವಾರ ಯಾವುದಾದರೂ ದೇವಸ್ಥಾನಕ್ಕೆ ಜೇನು ತುಪ್ಪ ಅಥವಾ ಬೆಲ್ಲವನ್ನು ದಾನ ಮಾಡಿ

ಕನ್ಯಾರಾಶಿ
ಬುಧ ಗ್ರಹವು ವೃಷಭ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ಕನ್ಯಾರಾಶಿಯವರು ಹಣಕಾಸು ಮತ್ತು ಇತರ ಆಸ್ತಿಗಳ ವಿಚಾರದಲ್ಲಿ ತುಂಬಾನೇ ಹುಷಾರಾಗಿರಬೇಕು. ಈ ಸಮಯದಲ್ಲಿ ಕನ್ಯಾ ರಾಶಿಯವರು ಹಣ ಉಳಿಸಲು ಬಜೆಟ್ ಸಿದ್ಧ ಪಡಿಸುತ್ತಾರೆ, ಹೂಡಿಕೆ ಮಾಡಲು ಮತ್ತು ಉಳಿಸಲು ಪ್ರಯತ್ನಿಸುತ್ತಾರೆ. ಆದರೆ ಹಠಾತ್ ಖರ್ಚುಗಳು ಬರುತ್ತವೆ. ಅಲ್ಪಾವಧಿ ಮತ್ತು ದೀರ್ಘಾವಧಿಯ ಆರ್ಥಿಕ ಗುರಿಗಳ ನಡುವೆ ಸಮತೋಲನವನ್ನು ಸಾಧಿಸುವುದು ಉತ್ತಮ.

ಪರಿಹಾರಗಳು
* ನಿಮ್ಮ ಕಿರುಬೆರಳಿನಲ್ಲಿ ಬೆಳ್ಳಿಯ ಉಂಗುರವನ್ನು ಧರಿಸಿ
* ವಿಷ್ಣುವಿಗೆ ಪ್ರತಿದಿನ ನೀರನ್ನು ಅರ್ಪಿಸಿ
* ಬುಧವಾರದಂದು ಉದ್ದಿನ ಬೇಳೆ ಅಥವಾ ಸಾಸಿವೆ ಎಣ್ಣೆಯನ್ನು ದಾನವಾಗಿ ನೀಡಿ

ತುಲಾ ರಾಶಿ
ಬುಧ ಗ್ರಹವು ವೃಷಭ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ತುಲಾ ರಾಶಿಯವರು ಈ ಸಮಯದಲ್ಲಿ ಮಾತುಕತೆ ನಡೆಸಲು ಮತ್ತು ಇತರರೊಂದಿಗೆ ಚರ್ಚಿಸಲು ಹೆಚ್ಚು ಉತ್ಸುಕರಾಗಬಹುದು. ನೀವು ಇತರರ ಅಭಿಪ್ರಾಯಗಳು ಮತ್ತು ಬಯಕೆಗಳಿಗೆ ಹೆಚ್ಚು ಸಂವೇದನಾಶೀಲರಾಗಿರುತ್ತೀರಿ. ಆದರೆ ನಿಮ್ಮ ತನವನ್ನು ನೀವು ಕಳೆದುಕೊಳ್ಳಬೇಡಿ.

ಪರಿಹಾರಗಳು
* ಚೌಕಾಕಾರದ ಬೆಳ್ಳಿಯ ಆಭರಣಗಳನ್ನು ಧರಿಸಿ
* ಶಿವನಿಗೆ ಪ್ರತಿದಿನ ನೀರಿನೊಂದಿಗೆ ಅರ್ಘ್ಯವನ್ನು ಅರ್ಪಿಸಿ.
* ಬುಧವಾರದಂದು ತೆಂಗಿನಕಾಯಿ ದಾನ ಮಾಡುವುದು ಒಳ್ಳೆಯದು

ವೃಶ್ಚಿಕ ರಾಶಿ
ಬುಧ ಗ್ರಹವು ವೃಷಭ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ವೃಶ್ಚಿಕ ರಾಶಿಯವರು ಜಗಳಗಳು ಅಥವಾ ಅಧಿಕಾರದ ಹೋರಾಟಗಳಿಗೆ ಹೆಚ್ಚು ಒಲವು ತೋರುವ ಸಾಧ್ಯತೆಯಿದೆ. ಹೀಗಾಗಿ ನಿಮ್ಮ ಮೇಲೆ ನಿಮಗೆ ಹಿಡಿತವಿರಲಿ.ಜಗಳ ಆಕ್ರಮಣಕಾರಿ ಅಥವಾ ರಕ್ಷಣಾತ್ಮಕವಾಗದಂತೆ ಜಾಗರೂಕರಾಗಿರಿ.

ಪರಿಹಾರಗಳು
* ಪ್ರತಿದಿನ ವಿಷ್ಣುವಿಗೆ ಅರ್ಘ್ಯವನ್ನು ಅರ್ಪಿಸಿ
* ಕಿರುಬೆರಳಿಗೆ ಬೆಳ್ಳಿಯ ಉಂಗುರವನ್ನು ಧರಿಸಿ
* ಸಾಸಿವೆ ಎಣ್ಣೆ ಅಥವಾ ಕಪ್ಪು ಎಳ್ಳನ್ನು ದಾನವಾಗಿ ನೀಡಿ

ಧನು ರಾಶಿ
ಬುಧ ಗ್ರಹವು ವೃಷಭ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ಧನು ರಾಶಿಯವರು ತಮ್ಮ ಗುರಿ ಮತ್ತು ಕಾರ್ಯಯೋಜನೆಗಳ ಮೇಲೆ ಹೆಚ್ಚು ಗಮನಹರಿಸಬೇಕು. ಈ ಸಮಯದಲ್ಲಿ ನೀವು ಹೊಸ ವಿಷಯಗಳನ್ನು ಅಧ್ಯಯನ ಮಾಡಲು, ಕಲಿಸಲು ಅಥವಾ ಸಂಶೋಧನೆ ಮಾಡಲು ನೀವು ಹೆಚ್ಚು ಪ್ರೇರಿತರಾಗಬಹುದು.

ಪರಿಹಾರಗಳು
* ಪ್ರತಿದಿನ ಬೆಳಿಗ್ಗೆ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ
* ಚೌಕಾಕಾರದ ಬೆಳ್ಳಿಯ ತುಂಡನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ
* ಬುಧವಾರ ಬೇಳೆಯನ್ನು ದಾನ ಮಾಡಿ

ಮಕರ ರಾಶಿ
ಬುಧ ಗ್ರಹವು ವೃಷಭ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ಮಕರ ರಾಶಿಯವರ ಪ್ರತಿಷ್ಠೆಗೆ ಧಕ್ಕೆಯುಂಟಾಗುವ ಸಾಧ್ಯತೆಯಿದೆ. ಕೆಲಸದ ಜಾಗದಲ್ಲಿ ಜಾಗರೂಕತೆ ವಹಿಸಿ ನಿಮ್ಮ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಇಲ್ಲದಿದ್ದರೆ ಅವರು ಒತ್ತಡ ಅಥವಾ ಆತಂಕಕ್ಕೆ ಒಳಗಾಗಬಹುದು. ಅಷ್ಟೇ ಅಲ್ಲ, ಮೌಲ್ಯಗಳು ಮತ್ತು ಮಹತ್ವಾಕಾಂಕ್ಷೆಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ.

ಪರಿಹಾರಗಳು
* ನಿಮ್ಮ ಕಿರುಬೆರಳಿಗೆ ಬೆಳ್ಳಿಯ ಉಂಗುರವನ್ನು ಧರಿಸಿ
* ಬುಧವಾರ ಎಳ್ಳು ಅಥವಾ ಕರಿಬೇವನ್ನು ದಾನ ಮಾಡಿ
* ಪ್ರತಿದಿನ ವಿಷ್ಣುವಿಗೆ ಅರ್ಘ್ಯವನ್ನು ಅರ್ಪಿಸಿ

ಕುಂಭ ರಾಶಿ
ಬುಧ ಗ್ರಹವು ವೃಷಭ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ಕುಂಭ ರಾಶಿಯವರು ಯಾವುದೇ ರೀತಿ ಭಿನ್ನಾಬಿಪ್ರಾಯಗಳು ಬರದಂತೆ ಜಾಗೃತೆ ವಹಿಸಿ. ಯಾರೊಂದಿಗೂ ವಾದ ಮಾಡೋದಕ್ಕೆ ಹೋಗಬೇಡಿ. ಇದರಿಂದ ನಿಮಗೆ ಸಮಸ್ಯೆ ಎದುರಾಗುವ ಸಾಧ್ಯತೆಗಳಿದೆ.

ಪರಿಹಾರಗಳು
* ಪ್ರತಿದಿನ ಶಿವನಿಗೆ ನೀರನ್ನು ಅರ್ಪಿಸಿ
* ಒಂದು ಚೌಕಾಕಾರದ ಬೆಳ್ಳಿಯ ತುಂಡನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ
* ಬುಧವಾರ ಪಾಲಕ್ ಅಥವಾ ಹಸಿರು ಸೊಪ್ಪನ್ನು ದಾನ ಮಾಡಿ

ಮೀನ ರಾಶಿ
ಬುಧ ಗ್ರಹವು ವೃಷಭ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಈ ಸಮಯದಲ್ಲಿ ನೀವು ಆಧ್ಯಾತ್ಮಿಕತೆಯ ಹೆಚ್ಚು ಮನಸ್ಸನ್ನು ಕೇಂದ್ರೀಕರಿಸುತ್ತೀರಿ. ಯಾವುದೇ ಕಾರಣಕ್ಕಾಗಿ, ಯಾವುದೇ ವಿಚಾರಕ್ಕಾಗಲಿ ಗೊಂದಲ ಬೇಡ. ಕನಸುಗಳು ಮತ್ತು ವಾಸ್ತವದ ನಡುವಿನ ಸಮತೋಲನವನ್ನು ಸಾಧಿಸಿ

ಪರಿಹಾರಗಳು
* ವಿಷ್ಣುವಿಗೆ ಪ್ರತಿದಿನ ಅರ್ಘ್ಯವನ್ನು ಅರ್ಪಿಸಿ
* ಸಣ್ಣ ಬೆರಳಿಗೆ ಬೆಳ್ಳಿಯ ಉಂಗುರವನ್ನು ಧರಿಸಿ
* ಬುಧವಾರ ತೆಂಗಿನಕಾಯಿ ದಾನ ಮಾಡಿ

English summary

Budha Gochar 2023: Impact of Mercury Transit in Taurus On All Zodiac Signs in Kannada

Budha Gochar 2023: Impact of Mercury Transit in Taurus On All Zodiac Signs. Read More.
X
Desktop Bottom Promotion