Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಈ ನಕ್ಷತ್ರದಲ್ಲಿ ಜನಿಸಿದವರಿಗೆ ಲಕ್ಷ್ಮೀ ದೇವಿ ಅನುಗ್ರಹ: ಯಾರಿಗೆ ಆರ್ಥಿಕ ಸಂಕಷ್ಟ ಇರಲ್ಲ?
ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಮ್ಮ ಜನ್ಮ ನಕ್ಷತ್ರ ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಪ್ರತಿಯೊಂದು ಜನ್ಮ ನಕ್ಷತ್ರಕ್ಕೂ ನಿಮ್ಮ ಗ್ರಹಗತಿಗೂ, ಜಾತಕಕ್ಕೂ ಒಂದಕ್ಕೊಂದು ಸಂಬಂಧವಿರಲಿದೆ. ಹಾಗೆ ನೀವು ಯಾವ ರಾಶಿಯಲ್ಲಿ ಜನಿಸಿದ್ದೀರಿ ಎಂಬುದರ ಮೇಲೆ ನಿಮ್ಮ ಗುಣಗಳು, ನಿಮ್ಮ ಮುಂದಿನ ಜೀವನ ನಿರ್ಧರಿತವಾಗುತ್ತದೆ. ಹಾಗೆ ಜನ್ಮ ನಕ್ಷತ್ರವು ನಿಮ್ಮ ಹಲವು ರೀತಿಯ ಆಗು ಹೋಗುಗಳಿಗೂ ಕಾರಣವಾಗುತ್ತದೆ.
ಸಮಯ ಉರುಳಿದಂತೆಲ್ಲಾ ನಿಮ್ಮ ಕೆಲಸಗಳು, ಜೀವನ, ಎಲ್ಲದಕ್ಕೂ ಈ ಜನ್ಮ ನಕ್ಷತ್ರದ ನಂಟು ಇರಲಿದೆ. ಹೀಗಾಗಿ ನೀವು ಪ್ರತಿಯೊಂದು ಕೆಲಸ ಮಾಡುವಾಗಲು ನಿಮ್ಮ ಜಾತಕದ ಪ್ರಕಾರವಾಗಿ ಗಳಿಗೆ, ಸಮಯ, ಮುಹೂರ್ತ ನೋಡಲಾಗುತ್ತದೆ. ಹಾಗೆ ಕೆಲವೊಂದು ಜನ್ಮ ನಕ್ಷತ್ರಕ್ಕೆ ನಿಗಧಿತ ಸಮಯ, ನಿಗಧಿತ ಕಾಲಾವಧಿಯಲ್ಲಿ ಒಳಿತಾಗಲಿದೆ ಎಂಬುದನ್ನು ಕೂಡ ನಂಬಲಾಗಿದೆ.

ಅದರಲ್ಲೂ ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿ ಯಾವ ಜನ್ಮ ನಕ್ಷತ್ರದವರ ಮೇಲೆ ತನ್ನ ಅನುಗ್ರಹ, ಆರ್ಶೀವಾದ ಇಡುತ್ತಾಳೆ ಎಂಬುದು ಕೂಡ ನಾವು ತಿಳಿಯಬಹುದು. ಯಾರು ಲಕ್ಷ್ಮೀ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಅನ್ನೋದನ್ನು ಕೂಡ ನಾವು ನೋಡಬಹುದು. ಹಾಗಾಧ್ರೆ ನಾವಿಂದು ಇಲ್ಲಿ ಯಾವ ಜನ್ಮ ನಕ್ಷತ್ರದವರು ಲಕ್ಷ್ಮೀ ದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.
ರೋಹಿಣಿ
ರೋಹಿಣಿ ನಕ್ಷತ್ರವು ಲಕ್ಷ್ಮೀ ದೇವಿಯ ಪ್ರಿಯವಾದ ಜನ್ಮ ನಕ್ಷತ್ರ ಎಂದು ನಂಬಲಾಗಿದೆ. ಈ ನಕ್ಷತ್ರವನ್ನು ಶುಕ್ರನು ಆಳುತ್ತಿರುತ್ತಾನೆ. ಇದು ಸಂಪತ್ತು, ಐಶ್ವರ್ಯ, ಧನದ ಸಂಕೇತವಾಗಿದೆ. ಈ ನಕ್ಷತ್ರದವರಲ್ಲಿ ಎಂದಿಗೂ ಹಣಕಾಸು ವಿಚಾರದಲ್ಲಿ ಸಮಸ್ಯೆಗಳ ಎದುರಿಸುವುದಿಲ್ಲ. ಆದರೆ ಕೆಲವು ಅಡೆತಡೆಗಳು ಮಾತ್ರ ಎದುರಾಗುತ್ತದೆ. ಹಾಗೆ ನಿಮ್ಮ ಕೈ ಸೇರುವ ಹಣವನ್ನು ನೀವೆ ಹಾಳು ಮಾಡುತ್ತೀರೆ ವಿನಃ ಹಣವಿಲ್ಲದೆ ಕೈ ಬರಿದಾಗುವುದಿಲ್ಲ. ಪುರುಷರು ಮಾತ್ರವಲ್ಲ ಮಹಿಳೆರಿಗೂ ಕೂಡ ಈ ಜನ್ಮ ನಕ್ಷತ್ರ ಅತ್ಯಂತ ಫಲಪ್ರದವಾಗಿದೆ. ನಿಮ್ಮ ಶ್ರಮ ಜೀವನದಿಂದ ಎಲ್ಲಾ ಕಡೆಗಳಲ್ಲಿ ಹಣ ಗಳಿಕೆ ಇರಲಿದೆ. ಶುಕ್ರನ ಆಳ್ವಿಕೆಯ ಕಾರಣ ನಿಮ್ಮ ವ್ಯಾಪಾರ ವ್ಯವಹಾರದ ಮೂಲಕ ಗಳಿಸುವ ಹಣವು ನಿಮ್ಮ ಸಂತೋಷದ ಜೀವನಕ್ಕೆ ಕಾರಣವಾಗುತ್ತದೆ.
ನಿಮ್ಮಿಂದ ಇತರರು ಹಣಕಾಸಿನ ವಿಚಾರದಲ್ಲಿ ಲಾಭ ಪಡೆಯುವುದು ಹೆಚ್ಚು. ನಿಮ್ಮಲ್ಲಿ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಉಳಿತಾಯ, ಹೂಡಿಕೆಯಂತಹ ಪ್ರಕ್ರಿಯೆ ನೋಡಬಹುದು.
ಅನುರಾಧಾ
ಅನುರಾಧಾ ನಕ್ಷತ್ರದಲ್ಲಿ ಜನಿಸಿದ ಮಂದಿ ಬಹಳ ಆತ್ಮವಿಶ್ವಾಸ ಹೊಂದಿರುವವರು. ಹೀಗಾಗಿ ಅವರ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಗಳಿಸುತ್ತಾರೆ. ಇದರಿಂದ ನಿಮ್ಮಲ್ಲಿ ಎಂದಿಗೂ ಹಣಕಾಸು ಕೊರತೆ ಆಗುವುದಿಲ್ಲ. ನಿಮ್ಮ ಹಣ ಕೂಡಿಡುವ ಮನೋಭಾವದವರಾಗಿದ್ದು, ಇದರಿಂದ ಲಕ್ಷ್ಮೀ ದೇವಿಯ ಕೃಪೆಗೆ ನೀವು ಪಾತ್ರರಾಗುತ್ತೀರಿ. ಈ ನಕ್ಷತ್ರದಲ್ಲಿ ಜನಿಸಿದವರು ಮಂಗಳ ಮತ್ತು ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಹೊಂದಿರುತ್ತಾರೆ. ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲೂ ಅವರಲ್ಲಿ ಹಣ ಸಂಗ್ರಹವಾಗುವುದು ನೋಡಬಹುದು. ಐಷಾರಾಮಿ ವಸ್ತುಗಳು ನಿಮ್ಮನ್ನು ಹುಡುಕಿ ಬರುವುದು ನೋಡಬಹುದು.
ಮಾಘ
ಈ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರಿಗೆ ಸೂರ್ಯ ದೇವನ ಆಶೀರ್ವಾದ ಇರುವುದರಿಂದ ಆರ್ಥಿಕ ಸಮಸ್ಯೆಗಳು ನಿಮ್ಮ ಬಳಿ ಸುಳಿಯುವುದಿಲ್ಲ. ಲಕ್ಷ್ಮೀ ದೇವಿಯ ಆಶೀರ್ವಾದವು ಅವರನ್ನು ಉತ್ತಮ ಆರ್ಥಿಕ ಸ್ಥಿತಿಯಲ್ಲಿರಿಸುತ್ತದೆ ಮತ್ತು ಅವರು ಯಾವಾಗಲೂ ಆರ್ಥಿಕವಾಗಿ ಸಮೃದ್ಧರಾಗಿರುತ್ತಾರೆ. ಸಾಲ ಮತ್ತಿತರ ವಿಚಾರದಲ್ಲಿ ನೀವು ಹಿಂದೆ ಇರುತ್ತೀರಿ. ಹಾಗೆ ಹಣಕ್ಕೆ ಸಂಬಂಧಿಸಿದ ಕೆಲವು ವಿಚಾರಗಳಲ್ಲಿ ಎಚ್ಚರಿಕೆ ವಹಿಸುವುದರಿಂದ ಹಣಕಾಸು ವಿಚಾರದಲ್ಲಿ ನಿಮ್ಮ ಜೀನವ ಉತ್ತಮವಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications