Latest Updates
-
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ! -
ಪುಣೆಯಲ್ಲಿ ಮಳೆ ರಜೆ: ವರ್ಕ್ ಫ್ರಮ್ ಹೋಮ್ ಜೊತೆಗೆ ಮಕ್ಕಳನ್ನು ನಿಭಾಯಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಮುಂಬೈ ರೆಡ್ ಅಲರ್ಟ್: ಮಳೆಯಿಂದ ನಿಮ್ಮ ಬಾಡಿಗೆ ಮನೆ ಮತ್ತು ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಮುಂಬೈ ರೆಡ್ ಅಲರ್ಟ್: ಮಳೆಗಾಲದ ಕಾಯಿಲೆಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಮುಂಬೈ ಮಳೆ ಅಬ್ಬರ: ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಮುಂಬೈ ಮಳೆ ರಜೆ: ಮನೆಯಲ್ಲೇ ಕುಟುಂಬದೊಂದಿಗೆ ಫಿಟ್ ಆಗಿರಲು 12 ನಿಮಿಷದ ಸಿಂಪಲ್ ಯೋಗ!
ಪುರುಷರಾಗಿ ಹುಟ್ಟೋದೇ ಮಹಾ ತಪ್ಪು..! ಪತ್ನಿ ಕಿರುಕುಳಕ್ಕೆ ಬೇಸತ್ತ ಟೆಕ್ಕಿ ಮಾಡಿದ್ದೇನು?
ಬೆಂಗಳೂರಿನ ದೊಡ್ಡ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬರು ಸಾವಿಗೆ ಶರಣಾಗಿರುವ ಘಟನೆ ಬೆಂಗಳೂರು ಮಾತ್ರವಲ್ಲ ಈಗ ಇಡೀ ದೇಶದಲ್ಲಿ ಸುದ್ದಿಯಾಗುತ್ತಿದೆ. ಕೈತುಂಬ ಸಂಬಳ ಬರುತ್ತಿದ್ದರು ಆತ ಈ ರೀತಿಯ ನಿರ್ಧಾರಕ್ಕೆ ಕೈಹಾಕಿದ್ದು ಏಕೆ ಎಂಬ ಪ್ರಶ್ನೆ ಮೊದಲಿಗೆ ಮೂಡಿತ್ತು, ಆದ್ರೆ ಆತನ ಕೊನೆಯ ವಿಡಿಯೋ ಹಾಗೂ 25 ಪುಟಗಳ ಡೆತ್ ನೋಟ್ ಈಗ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದೆ.
ಉತ್ತರ ಪ್ರದೇಶ ಮೂಲದ 34 ವರ್ಷದ ಅತುಲ್ ಸುಭಾಷ್ ಬೆಂಗಳೂರಿನಲ್ಲಿ ನೆಲೆಸಿದ್ದರು. ಪತ್ನಿಯ ಕಿರುಕುಳ ತಾಳಲಾಗದೆ ಸಾವಿನ ಕದ ತಟ್ಟಿದ್ದಾರೆ. 24 ಪುಟಗಳ ಅವರ ಡೆತ್ ನೋಟ್ ಇಡೀ ಜೀವನದಲ್ಲಿ ಅವರು ಅನುಭವಿಸಿರುವ ನೋವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹಾಗೆ ಕಂಪನಿ ಕುರಿತಂತೆ ಅವರ ಆರೋಪ ಎಲ್ಲರ ಕಣ್ಣು ಕೆಂಪಾಗಿಸುವಂತೆ ಮಾಡಿದೆ.

ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ನೆಲೆಸಿದ್ದ ಅವರು ಮನೆಯಲ್ಲೇ ಕೊನೆಯ ಬಾರಿಗೆ ವಿಡಿಯೋ ಚಿತ್ರೀಕರಣ ನಡೆಸಿ, ಸಾವಿಹೊಂದು ಟೈಮ್ ಟೇಬಲ್ ಸಹ ಹಾಕಿಟ್ಟು ನೇಣು ಬಿಗಿದುಕೊಂಡಿದ್ದಾರೆ. "ಭಾರತದಲ್ಲಿ ಪುರುಷರ ಮೇಲೆ ಕಾನೂನುಬದ್ಧ ನರಮೇಧ ನಡೆಯುತ್ತಿದೆ. ಭಾರತದಲ್ಲಿ ಪುರುಷರಾಗಿ ಹುಟ್ಟುವುದು ಮಹಾ ತಪ್ಪು ಎಂದೆಲ್ಲಾ ಬರೆದುಕೊಂಡಿದ್ದಾರೆ.
ನೀವು ಈ ಪೋಸ್ಟ್ ಓದುವಾಗ ನಾನು ಸತ್ತಿರುತ್ತೇನೆ. ಪ್ರಸ್ತುತ ಭಾರತದಲ್ಲಿ ಪುರುಷರ ಕಾನೂನುಬದ್ಧ ನರಮೇಧ ನಡೆಯುತ್ತಿದೆ. ಪುರುಷರಾಗಿ ಹುಟ್ಟುವುದು ಅಪರಾಧವಾಗಿದೆ, ನನ್ನ ಮೇಲೆ ಪತ್ನಿ 9ಕ್ಕೂ ಹೆಚ್ಚು ಪ್ರಕರಣಗಳ ದಾಖಲಿಸಿದ್ದಾಳೆ. ಆರು ಪ್ರಕರಣಗಳು ಕೆಳ ನ್ಯಾಯಾಲಯದಲ್ಲಿ ಮತ್ತು ಮೂರು ಪ್ರಕರಣಗಳು ಹೈಕೋರ್ಟ್‌ನಲ್ಲಿವೆ ಎಂದು ಸುಭಾಷ್ ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ಅವರು ಆತ್ಮಹತ್ಯೆ ಪತ್ರವನ್ನು ಹಲವಾರು ಜನರಿಗೆ ಇಮೇಲ್ ಮೂಲಕ ಕಳುಹಿಸಿದ್ದರು ಮತ್ತು ಅದನ್ನು ಅವರು ಭಾಗವಾಗಿರುವ ಎನ್‌ಜಿಒಗೆ ಸಂಬಂಧಿಸಿದ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡಿದ್ದರು. ಪೊಲೀಸರ ಪ್ರಕಾರ, ಸುಭಾಷ್ ತನ್ನ ಮನೆಯಲ್ಲಿ "ನ್ಯಾಯ ಸಿಗಬೇಕು" ಎಂಬ ಫಲಕವನ್ನು ನೇತುಹಾಕಿದ್ದಾರೆ.
2022 ರಲ್ಲಿ ತಮ್ಮ ವಿರುದ್ಧ ಹಾಗೂ ತನ್ನ ಪೋಷಕರ ವಿರುದ್ಧ ಹಲವು ರೀತಿಯ ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದ್ದಾರೆ. ವರದಕ್ಷಿಣೆ ಕಿರುಕುಳ, ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಡದಂತಹ ಗಂಭೀರ ಸುಳ್ಳು ಆರೋಪ ನನ್ನ ಮೇಲಿದೆ. ಆಕೆ ದೊಡ್ಡ ಮೊತ್ತದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಳು. ಇನ್ನು ಸುಭಾಷ್ ಅವರ ಪತ್ನಿ ಕೂಡ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ.
ಹೀಗಾಗಿ ಸುಭಾಷ್ ವಿಡಿಯೋಗಳು ಪೋಸ್ಟ್‌ಗಳು ಹೊರಬೀಳತ್ತಿದ್ದಂತೆ. ಏಕ್ಸಂಚರ್ ಕಂಪನಿ ವಿರುದ್ಧ ಸಹೋದ್ಯೋಗಿಗಳು ಹಾಗೂ ಜನರು ಕಂಪನಿಯಿಂದ ಸುಭಾಷ್ ಪತ್ನಿಯ ಹೊರಹಾಕುವಂತೆ ಒತ್ತಡ ಹೇರಲಾಗಿದೆ. ಆದ್ರೆ ಇದರಿಂದ ಕಂಪನಿ ತನ್ನ ಟ್ವೀಟ್ (ಎಕ್ಸ್) ಅನ್ನು ಬಂದ್ ಮಾಡಿದೆ.
ನಿಕಿತಾ ಸಿಂಘಾನಿಯಾ ಎಂಬಾಕೆಯ ವಜಾಗೊಳಿಸಬೇಕು ಎಂಬ ಕೂಗು ಕೇಳಿಬಂದಿದೆ. ಆಕೆ ಕಂಪನಿಯಲ್ಲಿ ಇದ್ದುಕೊಂಡೇ ಹಣಕ್ಕೆ ಪತಿಯ ಮೇಲೆ ಒತ್ತಡ ಹೇರುವುದು ಸುಳ್ಳು ಆರೋಪಗಳ ಹೊರಿಸಿ ದೂರು ನೀಡಿರುವುದರಿಂದ ಹೊರಬರಲಾಗದೆ ಟೆಕ್ಕಿ ಈ ರೀತಿ ಆತ್ಮಹತ್ಯೆಯಂತಹ ನಿರ್ಧಾರ ಮಾಡಿದ್ದಾರೆ.
ಸದ್ಯ ಈಗ ಬೆಂಗಳೂರು ಪೊಲೀಸರು ಸುಭಾಷ್ ಅವರ ಪತ್ನಿ ನಿಕಿತಾ ಸಿಂಘಾನಿಯಾ, ಅವರ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಮತ್ತು ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ವಿರುದ್ಧ ಅವರ ಸಹೋದರ ಬಿಕಾಸ್ ಕುಮಾರ್ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್ 108 ಮತ್ತು 3(5) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆದ್ರೆ ಮಹಿಳೆಯರು ಮಾತ್ರ ಕಿರುಕುಳಕ್ಕೆ ಒಳಾಗಿರುವುದಿಲ್ಲ ಬದಲಿಗೆ ಪುರುಷರು ಕೂಡ ಇಂತಹ ಕಿರುಕುಳಕ್ಕೆ ಒಳಗಾಗಿ ಪ್ರಣ ಕಳೆದುಕೊಳ್ಳುತ್ತಿರುವುದು ಇತ್ತೀಚಿಗೆ ಹೆಚ್ಚಾಗುತ್ತಿದೆ.



Click it and Unblock the Notifications