Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
2024ರ ಬಾಬಾ ವಂಗಾ ಭವಿಷ್ಯಗಳು: ಸೈಬರ್ ದಾಳಿ...ಪುಟಿನ್ ಹತ್ಯೆ..ಇಲ್ಲಿದೆ 7 ಭಯಾನಕ ಭವಿಷ್ಯ..!
2023 ಮುಗಿದು 2024 ಅನ್ನು ಸ್ವಾಗತಿಸಲು ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. 2023ರಲ್ಲಿ ಹಲವು ಕಹಿ ಘಟನೆಗಳನ್ನು ನಾವು ನೋಡಿದ್ದೇವೆ, ಅನುಭವಿಸಿದ್ದೇವೆ. ಆದ್ರೆ 2024ರಲ್ಲೂ ಇದೇ ರೀತಿ ಮುಂದುವರೆಯಲಿದ್ಯಾ? ಈ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ ಏನು ಹೇಳುತ್ತೆ ಗೊತ್ತಾ?
ಬಾಬಾ ವಂಗಾ ಅವರ 2024ರ ಭವಿಷ್ಯವಾಣಿಗಳು ಇಲ್ಲಿವೆ ಮತ್ತು ಕೆಲವು ತುಂಬಾ ಭಯಾನಕವಾಗಿವೆ, ಬಾಬಾ ವಂಗಾ, ಅವರ ನಿಜವಾದ ಹೆಸರು ವಾಂಜೆಲಿಯಾ ಪಾಂಡೆವಾ ಗುಶ್ಟೆರೋವಾ, ಈಕೆ ಭವಿಷ್ಯದ ಘಟನೆಗಳನ್ನು ಊಹಿಸುವ ಸಾಮರ್ಥ್ಯ ಹೊಂದಿದ್ದರಿಂದ ವ್ಯಾಪಕವಾದ ಮನ್ನಣೆ ಪಡೆದರು.

ಅವರು ಜನವರಿ 31, 1911 ರಂದು ಒಟ್ಟೋಮನ್ ಸಾಮ್ರಾಜ್ಯದಲ್ಲಿ (ಈಗಿನ ಆಧುನಿಕ ಮ್ಯಾಸಿಡೋನಿಯಾ) ಜನಿಸಿದರು ಮತ್ತು ಅವರು ಆಗಸ್ಟ್ 11, 1996 ರಂದು ಬಲ್ಗೇರಿಯಾದಲ್ಲಿ ನಿಧನರಾದರು. ಜಾಗತಿಕ ಘಟನೆಗಳ ಬಗ್ಗೆ ಭವಿಷ್ಯ ನುಡಿಯುವ ಖ್ಯಾತಿಯಿಂದಾಗಿ ಬಾಬಾ ವಂಗಾ ಅವರನ್ನು "ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್" ಎಂದು ಕರೆಯಲಾಗುತ್ತದೆ.
ಅವಳು ಮಗುವಾಗಿದ್ದಾಗ ಚಂಡಮಾರುತದ ಸಮಯದಲ್ಲಿ ಅವಳು ದೃಷ್ಟಿ ಕಳೆದುಕೊಂಡಿದ್ದಳಂತೆ, ಆದರೆ ಅವಳ ಬೆಂಬಲಿಗರ ಪ್ರಕಾರ, ಈ ಘಟನೆಯು ಅವಳ ಅತೀಂದ್ರಿಯ ಸಾಮರ್ಥ್ಯಗಳನ್ನು ಹೆಚ್ಚಿಸಿತು. ಅವಳು ಅದೃಶ್ಯ ಮತ್ತು ಅಲೌಕಿಕ ಶಕ್ತಿಗಳನ್ನು ನೋಡಬಹುದು ಮತ್ತು ಅವುಗಳ ಜೊತೆ ಸಂವಹನ ಮಾಡುವ ಶಕ್ತಿ ಇದೆ ಎಂದು ಆಕೆ ಹೇಳಿಕೊಂಡಿದ್ದಳು.
ತನ್ನ ಜೀವನದುದ್ದಕ್ಕೂ, ಬಾಬಾ ವಂಗಾ ರಾಜಕೀಯ ಘಟನೆಗಳು, ನೈಸರ್ಗಿಕ ವಿಪತ್ತುಗಳು ಮತ್ತು ವೈದ್ಯಕೀಯ ಪ್ರಗತಿಗಳು ಸೇರಿ ಹಲವು ಭವಿಷ್ಯವಾಣಿಗಳ ನುಡಿದಿದ್ದಾಳೆ. ಆಕೆಯ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ ಎಂದು ಆಕೆಯ ಅನುಯಾಯಿಗಳು ನಂಬುತ್ತಾರೆ, ಆದರೆ ಸಂದೇಹವಾದಿಗಳು ಆಕೆಯ ಭವಿಷ್ಯವಾಣಿಗಳು ತುಂಬಾ ಅಸ್ಪಷ್ಟವಾಗಿದೆ ಮತ್ತು ವ್ಯಾಖ್ಯಾನಕ್ಕೆ ಮುಕ್ತವಾಗಿವೆ ಎಂದು ವಾದಿಸುತ್ತಾರೆ.
ಈಗಾಗಲೇ ವಿವಾದಗಳನ್ನು ಹುಟ್ಟುಹಾಕುತ್ತಿರುವ ವಂಗಾ ಅವರ 2024ರ ಕುರಿತು ನುಡಿದಿರುವ 7 ಭವಿಷ್ಯವಾಣಿಗಳು ಇಲ್ಲಿವೆ ನೋಡಿ.
1. ವ್ಲಾಡಿಮಿರ್ ಪುಟಿನ್ ಹತ್ಯೆ
ಬಾಬಾ ವಂಗಾ ಅವರು ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ಅವರ ಹತ್ಯೆಯ ಪ್ರಯತ್ನದ ಬಗ್ಗೆ ಸುಳಿವು ನೀಡಿದ್ದಾರೆ. ಈಗಾಗಲೇ ರಷ್ಯಾ ಹಲವು ದೇಶಗಳೊಂದಿಗೆ ಯುದ್ಧ ನಡೆಸುತ್ತಿದೆ. ಇದರ ನಡುವೆ ಬಾಬಾ ವಂಗಾ ಅವರ ಭವಿಷ್ಯ ಭಾರೀ ಆತಂಕಕ್ಕೆ ಕಾರಣವಾಗಿದೆ.
2. ಕೃತಕ ಬುದ್ಧಿಮತ್ತೆಯ ಏರಿಕೆ (AI)
ನಮ್ಮ ಮುಂದಿನ ಭವಿಷ್ಯವಾದ ಕೃತ ಬುದ್ಧಿಮತ್ತೆಯು ಈ 2024ರಲ್ಲಿ ಹೆಚ್ಚು ಮುನ್ನಲೆಗೆ ಬರಲಿದೆಯಂತೆ. ಹಲವು ಕ್ಷೇತ್ರಗಳ ಅವುಗಳನ್ನು ತಡೆದು ನಿಲ್ಲಿಸುವುದು ಕಷ್ಟವಾಗಲಿದೆಯಂತೆ. ಮೆಂಟಲ್ ಎಬಿಲಿಟಿ ಟಾಸ್ಕ್‌ಗಳಲ್ಲಿ ಮಾನವರಿಗಿಂತ ಎಐ ರೋಬೋಟ್‌ಗಳು ಮುನ್ನಡೆ ಸಾಧಿಸಲಿದ್ದು, ಅವುಗಳ ಮೇಲಿನ ಹಿಡಿತ ನಿಧಾನವಾಗಿ ಕಡಿಮೆಯಾಗಲಿದೆ ಎಂದು ವಂಗಾ ಹೇಳಿದ್ದಾರೆ.
3. ಯುರೋಪ್‌ಗೂ ಹಬ್ಬಲಿದೆ ಭಯೋತ್ಪಾದಕ ಚಟುವಟಿಕೆ
ಯುರೋಪ್ ಭಯೋತ್ಪಾದನೆಯ ಕೇಂದ್ರವಾಗಿ ಬದಲಾಗುತ್ತಿರುವುದನ್ನು ವಂಗಾ ಭವಿಷ್ಯ ನುಡಿದಿದ್ದಾರೆ. ಅದೂ ಸಹ ರಾಸಾಯನಿಕ ಅಥವಾ ಜೈವಿಕ ಆಯುಧಗಳ ದಾಳಿಯಾಗಲಿದೆ ಎಂದಿದ್ದಾರೆ. ಒಂದರ್ಥದಲ್ಲಿ ಇದು ತೈಲಗಳ ಕುರಿತ ಯುದ್ಧವಾಗಿರಬಹುದು ಇಲ್ಲವೆ ರಾಸಾಯನಿಕ ದಾಳಿಯೂ ಆಗಿರಬಹುದು ಎಂದು ಅಂದಾಜಿಸಲಾಗಿದೆ.
4. ಹವಾಮಾನ ವಿಪತ್ತುಗಳು
2024 ಹವಾಮಾನ ವೈಪರಿತ್ಯದ ವರ್ಷವಂತೆ. ತಾಪಮಾನ ಏರಿಕೆಯಿಂದ ಹಿಡಿದು ವಿಕಿರಣ ಸೋರಿಕೆ ಮಟ್ಟವು ಏರುತ್ತಿದೆಯಂತೆ. ಬರ ತೀವ್ರವಾಗಲಿದ್ದು, ಹತ್ತಾರು ಕಡೆಗಳಲ್ಲಿ ನೈಸರ್ಗಿಕ ವಿಪತ್ತು ಸಂಭವಿಸಲಿದೆಯಂತೆ.
5. ಆರ್ಥಿಕ ಬಿಕ್ಕಟ್ಟು ಮತ್ತು ಪವರ್ ಶಿಫ್ಟ್
ವಿಶ್ವದ ಹಲವು ರಾಷ್ಟ್ರಗಳು ಸಾಲದ ಸುಳಿಗೆ ಸಿಲುಕಲಿದೆಯಂತೆ. ಸಾಲದ ಪ್ರಮಾಣ ಏರುಗತಿಯಲ್ಲಿದ್ದರೆ ಅಭಿವೃದ್ಧಿ ತೀರ ಕಳಪೆಯಾಗಲಿದೆಯಂತೆ. ಇದು ಪೂರ್ವದಿಂದ ಪಶ್ಚಿಮಕ್ಕೆ ಬೀಕರವಾಗಿ ಹರಡಲಿದ್ದು, ದಿವಾಳಿತನ ಬಾಗಿಲಿಗೆ ಬರಲಿದೆಯಂತೆ.
6. ಸೈಬರ್ ದಾಳಿಗಳು
ಬರೀ ಬ್ಯಾಕಿಂಗ್, ಮೊಬೈಲ್‌ಗಳಷ್ಟೇ ಗುರಿಯಾಗಿದ್ದ ಸೈಬರ್ ಕಳ್ಳರಿಗೆ ಈ ವರ್ಷ ಮೂಲ ಸೌಕರ್ಯಗಳು ಕಣ್ಣಿಗೆ ಬೀಳಲಿದೆಯಂತೆ. ನೀರಿನ ಸೌಲಭ್ಯ, ಪವರ್ ಗ್ರಿಡ್‌ಗಳು, ರಾಷ್ಟ್ರೀಯ ಭದ್ರತೆಗೆ ಸವಾಲು ಒಡ್ಡಲಿದ್ದಾರಂತೆ. ಜೊತೆಗೆ ಈ ಕ್ರೈಮ್‌ಗಳು ಅಪಾಯ ಮೀರಿ ನಿತ್ಯವೂ ಜನರ ಕಾಡಲಿದೆಯಂತೆ.
7. ವೈದ್ಯಕೀಯ ಪ್ರಗತಿಗಳು
2024ರಲ್ಲಿ ಕ್ಯಾನ್ಸರ್ ಮತ್ತು ಆಲಜೈಮರ್ ಕಾಯಿಲೆ ಎರಡಕ್ಕೂ ಪರಿಹಾರಗಳನ್ನು ಕಂಡುಹಿಡಿಯಲಾಗುವುದು ಎಂದು ವಂಗಾ ಹೇಳಿದ್ದಾರೆ. ನಾವು ಕ್ಯಾನ್ಸರ್ ಮತ್ತು ಆಲ್ಝೈಮರ್‌ಗೆ ವಿದಾಯ ಹೇಳುವುದನ್ನು ನೋಡಬಹುದಾದ ವೈದ್ಯಕೀಯ ಅದ್ಭುತಗಳು ನಡೆಯಲಿದೆಯಂತೆ.



Click it and Unblock the Notifications












